Tel: 7676775624 | Mail: info@yellowandred.in

Language: EN KAN

    Follow us :


ಜಾನಪದ ಲೋಕದ ತಿಂಗಳ ಅತಿಥಿ ಸೋಬಾನೆ ಪದ ಗಾಯಕ ಕೃಷ್ಣೇಗೌಡ.

Posted date: 21 May, 2018

Powered by:     Yellow and Red

ಜಾನಪದ ಲೋಕದ ತಿಂಗಳ ಅತಿಥಿ ಸೋಬಾನೆ ಪದ ಗಾಯಕ ಕೃಷ್ಣೇಗೌಡ.

ರಾಮನಗರ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅರ್ಹ ಸಂಸ್ಥೆ, ಕಲಾವಿದರಿಗೆ ಅನುದಾನ ದೊರೆಯುವುದಿಲ್ಲ ಎಂದು ಸೋಬಾನೆ ಪದ ಗಾಯಕ ಕೃಷ್ಣೇಗೌಡ ಬೇಸರ ವ್ಯಕ್ತಪಡಿಸಿದರು. 
    ಇಲ್ಲಿನ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಶನಿವಾರ ಸಂಜೆ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾನು ಕಳೆದ 45 ವರ್ಷಗಳಿಂದ ಸೋಬಾನೆ ಪದಗಳನ್ನು ಹಾಡುವ ಜತೆಗೆ, ಜನಪದ ಕಲೆಗಳ ಪ್ರದರ್ಶನವನ್ನು ಪಟ್ಟಲದಮ್ಮ ಜಾನಪದ ಕಲಾ ಬಳಗದ ಮೂಲಕ ನೀಡುತ್ತಿದ್ದೇನೆ. ಆದರೆ ಇಲಾಖೆ ವತಿಯಿಂದ ಪ್ರೋತ್ಸಾಹ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
    ನಾನು ಓದು ಬರಹ ಕಲಿತವನಲ್ಲ, 15 ವರ್ಷದವನಿದ್ದಾಗ ಸೋಬಾನೆ ಪದಗಳನ್ನು ಹಾಡುವುದನ್ನು ಕಲಿತೆ, ಮೊದಲು ಮಕ್ಕಳಿಗೆ ಕೋಲಾಟ ಕಲಿಸಿ ಕೊಡುತ್ತಿದ್ದೆ. ಸೋಬಾನೆ ಪದಗಳನ್ನು ಹಾಡುವ ಜತೆಗೆ ಗಾರುಡಿಗೊಂಬೆ, ಪಟಕುಣಿತ, ಸೋಮನ ಕುಣಿತ, ಹುಲಿ ವೇಷ, ಕೊಂಬು ಕಹಳೆ ಸೇರಿದಂತೆ ಹಲವು ಕಲೆಗಳ ಪ್ರದರ್ಶನವನ್ನು ನೀಡುತ್ತೇನೆ ಎಂದರು. 
    ಮದುವೆಗೆ ಸಂಬಂಧಿಸಿದ ಹಾಡು, ದೇವರ ಹಾಡು, ಮಳೆರಾಯ, ಗದ್ದೆನಾಟಿ ಹಾಡು, ಕಣದ ಪದಗಳು, ಬೀಗರ ಜರಿಯುವ ಪದಗಳನ್ನು ಗಂಟೆಗಟ್ಟಲೆ ನಿರರ್ಗಳವಾಗಿ ಹಾಡುತ್ತೇನೆ. ಮಧ್ಯಪ್ರದೇಶ, ಭೂಪಾಲ್, ತಂಜಾವೂರು, ಚನ್ನೈ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರದರ್ಶನವನ್ನು ನೀಡಿದ್ದೇನೆ. ನನ್ನ ಮೊದಲ ಪ್ರದರ್ಶನಕ್ಕೆ ?5 ನೀಡಿದ್ದರು ಎಂದು ನೆನಪಿಸಿಕೊಂಡರು. 
    ಪ್ರಾರಂಭದಲ್ಲಿ ನಮ್ಮ ಊರಿನ ಸುತ್ತಮುತ್ತಲ ಗ್ರಾಮಗಳಲ್ಲಿ ಹಾಡುತ್ತಿದ್ದೆ. 1986ರಲ್ಲಿ ಎಚ್.ಎಲ್. ನಾಗೇಗೌಡರು ಪರಿಚಯವಾದರು. ನಂತರ ಅವರು ನನ್ನಲ್ಲಿನ ಪ್ರತಿಭೆಯನ್ನು ಗುರುತಿಸಿ ನಾಡಿನಾದ್ಯಂತ ಪರಿಚಯಿಸಿದರು. ಈಗ ನಾನು 20 ಜನ ಕಲಾವಿದರುಗಳು ಇರುವ ತಂಡವನ್ನು ಕಟ್ಟಿಕೊಂಡು ಪ್ರದರ್ಶನ ನೀಡುತ್ತಿದ್ದೇನೆ ಎಂದು ತಿಳಿಸಿದರು. 
    ಮದುವೆ ಸಮಾರಂಭಗಳಿಗೆ ಸೋಬಾನೆ ಪದಗಳನ್ನು ಹಾಡಲು ಬೆಂಗಳೂರಿನಿಂದ ಹೆಚ್ಚಾಗಿ ಕರೆಯುತ್ತಾರೆ. 6 ಜನರು ಇರುವ ತಂಡ ಹೋಗಿ ಸೋಬಾನೆ ಪದಗಳನ್ನು ಹಾಡುತ್ತೇವೆ. ?10 ಸಾವಿರ ನೀಡುತ್ತಾರೆ. ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಸೋಬಾನೆ ಪದಗಳನ್ನು ಜನರು ಹೆಚ್ಚಾಗಿ ಇಷ್ಟಪಡುತ್ತಾರೆ. 1990ರಿಂದಲೂ ಮೈಸೂರು ಆಕಾಶವಾಣಿಯಲ್ಲಿ ನಿರಂತರವಾಗಿ ಹಾಡುತ್ತಿದ್ದೇನೆ ಎಂದರು. 
    ಸಾವಿರಾರು ಮಕ್ಕಳಿಗೆ ಸೋಬಾನೆ ಪದಗಳನ್ನು ಕಲಿಸಿದ್ದೇನೆ, ಜತೆಗೆ ಜನಪದ ಕಲೆಗಳನ್ನು ಕಲಿಸಿದ್ದೇನೆ, ಆದರೆ ಕಲಿತರವರು ಪ್ರದರ್ಶನ ನೀಡುವ ಮೂಲಕ ಮುಂದುವರಿಸಿಕೊಂಡು ಹೋಗುತ್ತಿಲ್ಲ. ಕಳೆದ 9 ವರ್ಷಗಳಿಂದ ಮಂಡ್ಯ ಜಿಲ್ಲಾ ಸೋಬಾನೆ ಉತ್ಸವವನ್ನು ನಡೆಸಿಕೊಂಡು ಬರುತ್ತಿದ್ದೇನೆ ಎಂದು ತಿಳಿಸಿದರು. 
    ಆದರೆ ಕಳೆದ ಎರಡು ವರ್ಷಗಳಿಂದೀಚೆಗೆ ಕಾರ್ಯಕ್ರಮಗಳು ಸಿಗುತ್ತಿಲ್ಲ. ಕಲೆಯನ್ನು ಪ್ರದರ್ಶಿಸುವುದನ್ನು ಬಿಟ್ಟರೆ ನನಗೆ ಬೇರೆನೂ ಗೊತ್ತಿಲ್ಲ. ರಾಮನಗರದಲ್ಲಿ ಮರಿದೇವರು ಅವರು ಆಯೋಜಿಸುತ್ತಿದ್ದ ಸೋಬಾನೆ ಪದ ಗಾಯನ ಸ್ಪರ್ಧೆಯಲ್ಲಿ ಮೂರು ಬಾರಿ ಪ್ರಥಮ ಬಹುಮಾನವನ್ನು ಗೆದ್ದುಕೊಂಡಿದ್ದೆ. ಇನ್ನು ಮುಂದಾದರೂ ಸರ್ಕಾರ ಜನಪದ ಕಲೆಗಳನ್ನು ಪ್ರದರ್ಶಿಸುವವರಿಗೆ ಪ್ರೋತ್ಸಾಹ ನೀಡಬೇಕು ಎಂದರು.
    ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ಮಾತನಾಡಿ ಸೋಬಾನೆ ಪದಗಳಲ್ಲಿ ನಮ್ಮ ರೈತ ಸಂಸ್ಕೃತಿಯನ್ನು ಕಾಣಬಹುದು. ನಮ್ಮ ಪೂರ್ವಜರ ಸಂಸ್ಕೃತಿಯಾದ ಜಾನಪದ ಕಲೆ ಯನ್ನು ಮುಂದಿ ಪೀಳಿಗೆಗೆ ಉಳಿಸಿ ಬೇಳೆಸಬೆಕು. ಹಳ್ಳಿಗರ ಬದುಕಿನಲ್ಲಿ ಹಾಸು ಹೊಕ್ಕಾಗಿದ್ದ ಜಾನಪದ ಸಂಸ್ಕೃತಿ ಇಂದು ದೃಶ್ಯ ಮಾಧ್ಯಮ ಗಳ ಹಾವಳಿಯಿಂದ ನಶಿಸುತ್ತಿದೆ ಎಂದರು. 
    ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್. ಚಂದ್ರಶೇಖರ್, ಕರ್ನಾಟಕ ಜಾನಪದ ಪರಿಷತ್ತಿನ ಮೇನೆಜಿಂಗ್ ಟ್ರಸ್ಟಿ ಆದಿತ್ಯಾನಂಜರಾಜ್, ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಶಿವಣ್ಣ, ಜಾನಪದ ಲೋಕದ ಆಡಳಿತಾಧಿಕಾರಿ ಕುರುವ ಬಸವರಾಜ್, ರಂಗ ನಿರ್ದೇಶಕ ಬೈರ್ನಳ್ಳಿ ಶಿವರಾಂ ಇದ್ದರು. 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in arts »

ಐವತ್ತೈದು ವರ್ಷಗಳ ಸಾಧನೆಗೆ ನೂರಕ್ಕೂ ಹೆಚ್ಚು ಶಿಷ್ಯರನ್ನು ತಯಾರಿಗೆ ಸಿಕ್ಕ ಪ್ರಶಸ್ತಿ: ಬ್ರಹ್ಮಣಿಪುರ ತಮಟೆ ತಿಮ್ಮಯ್ಯಗೆ ಒಲಿದ ಪ್ರಶಸ್ತಿ
ಐವತ್ತೈದು ವರ್ಷಗಳ ಸಾಧನೆಗೆ ನೂರಕ್ಕೂ ಹೆಚ್ಚು ಶಿಷ್ಯರನ್ನು ತಯಾರಿಗೆ ಸಿಕ್ಕ ಪ್ರಶಸ್ತಿ: ಬ್ರಹ್ಮಣಿಪುರ ತಮಟೆ ತಿಮ್ಮಯ್ಯಗೆ ಒಲಿದ ಪ್ರಶಸ್ತಿ

ಚನ್ನಪಟ್ಟಣ:ಜ/05/21/ಮಂಗಳವಾರ. ಹದಿನೈದು ವರ್ಷದ ಬಾಲಕನಾಗಿದ್ದಾಗಲೇ ತಮಟೆ ವಾದನದಲ್ಲಿ ಸೈ ಎನಿಸಿಕೊಂಡು, ಕಳೆದ ಐವತ್ತೈದು ವರ್ಷಗಳಿಂದ ಮೈಸೂರು ದ

ಜಿಲ್ಲೆಯ ಕಲಾವಿದರಿಗೆ ಹಣ ನೀಡದೆ ವಾಪಸ್ಸು ಕಳುಹಿಸಿದ ಕಸಂ ಇಲಾಖೆ. ಕಲಾವಿದರ ನೋವಿನ ನುಡಿ
ಜಿಲ್ಲೆಯ ಕಲಾವಿದರಿಗೆ ಹಣ ನೀಡದೆ ವಾಪಸ್ಸು ಕಳುಹಿಸಿದ ಕಸಂ ಇಲಾಖೆ. ಕಲಾವಿದರ ನೋವಿನ ನುಡಿ

ರಾಮನಗರ:ಏ/೨೫/೨೦/ಶನಿವಾರ. ಕೊರೊನಾ (ಕೋವಿಡ್-೧೯) ವೈರಸ್ ದೇಶಕ್ಕೆ ಕಾಲಿಟ್ಟ ನಂತರ ದೇಶ ಮತ್ತು ರಾಜ್ಯದ ಆರ್ಥಿಕತೆಗೆ ಪೆಟ್ಟು ಬಿದ್ದಿರುವಂತೆಯೇ,

ಅಬ್ಬೂರು ರಾಜಶೇಖರ ರವರಿಗೆ ಎಚ್ ಕೆ ವೀರಣ್ಣಗೌಡ ಪ್ರಶಸ್ತಿ*
ಅಬ್ಬೂರು ರಾಜಶೇಖರ ರವರಿಗೆ ಎಚ್ ಕೆ ವೀರಣ್ಣಗೌಡ ಪ್ರಶಸ್ತಿ*

ರಾಮನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ಎಚ್.ಕೆ.ವೀರಣ್ಣಗೌಡ ಪ್ರಶಸ್ತಿಗೆ ಹಿರಿಯ ಪರ್ತಕರ್ತರು ಆರಂಭ ಪತ್ರಿಕೆಯ ಸಂಸ್ಥಾಪಕ ಸಂ

ಬೊಂಬೆನಾಡಿನ ಡಾ.ಚಕ್ಕೆರೆ ಶಿವಶಂಕರ್ ರವರಿಗೆ ಒಲಿದು ಬಂದ ಜೀಶಂಪ ರಾಜ್ಯ ಪ್ರಶಸ್ತಿ
ಬೊಂಬೆನಾಡಿನ ಡಾ.ಚಕ್ಕೆರೆ ಶಿವಶಂಕರ್ ರವರಿಗೆ ಒಲಿದು ಬಂದ ಜೀಶಂಪ ರಾಜ್ಯ ಪ್ರಶಸ್ತಿ

ಚನ್ನಪಟ್ಟಣ: ಸಂಗ್ರಹ, ಸಂಪಾದನೆ, ವಿಚಾರ, ವಿಮರ್ಶೆ ಮತ್ತು 

ಸಂಶೋಧನೆ ಹೀಗೆ ಜಾನಪದ ಸಾಹಿತ್ಯದ ಎಲ್ಲಾ 

ಪ್ರಕಾ

ದೇವಾನಾಂಪ್ರಿಯ ಶಿವಲಿಂಗಯ್ಯನವರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ
ದೇವಾನಾಂಪ್ರಿಯ ಶಿವಲಿಂಗಯ್ಯನವರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

ಚನ್ನಪಟ್ಟಣ: ತಾಲ್ಲೂಕಿನ ನೀಲಕಂಠನಹಳ್ಳಿ ಗ್ರಾಮದ ತಿರುಮಲಮ್ಮ, ಎನ್ ಟಿ ಕುನ್ನಯ್ಯ ರವರ ಸುಪುತ್ರ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನ ನಿವೃತ್ತ ಉದ್

ಶಾಲೆಗಳಲ್ಲಿ ರಂಗ ಶಿಕ್ಷಕರ ನೇಮಿಸಿ

ಬೆಂಗಳೂರು: ರಾಜ್ಯದಲ್ಲಿರುವ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಸ್ತಕ ಸಾಲಿನಿಂದ ರಂಗ ಶಿಕ್ಷಕರನ್ನು ನೇಮಿಸಿ, ರಂಗ ಪದವೀಧರರಿಗೆ ಉದ್ಯೋಗ ಒದಗಿಸುವಂತೆ ಕರ್ನಾಟಕ ನಾಟಕ ಅಕಾಡೆಮಿ ಒತ್ತಾಯಿಸಿದೆ.

"ನಾಡೋಜ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ "

ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ವತಿಯಿಂದ ದಿನಾಂಕ 26/06/2018 ನೇ ಮಂಗಳವಾರ ಸಂಜೆ 05:00 ಗಂಟೆಗೆ ಬೆಂಗಳೂರಿನ ಜೆ ಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಖ್ಯಾತ ತೊಗಲುಗೊಂಬೆ ಕಲಾವಿದ ನಾಡೋಜ ಶ್ರೀ ಬೆಳಗಲ್ಲು ವೀರಣ್ಣ ರವರಿಗ

ಜಾನಪದ ಲೋಕದ ತಿಂಗಳ ಅತಿಥಿ ಸೋಬಾನೆ ಪದ ಗಾಯಕ ಕೃಷ್ಣೇಗೌಡ.
ಜಾನಪದ ಲೋಕದ ತಿಂಗಳ ಅತಿಥಿ ಸೋಬಾನೆ ಪದ ಗಾಯಕ ಕೃಷ್ಣೇಗೌಡ.

ರಾಮನಗರ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅರ್ಹ ಸಂಸ್ಥೆ, ಕಲಾವಿದರಿಗೆ ಅನುದಾನ ದೊರೆಯುವುದಿಲ್ಲ ಎಂದು ಸೋಬಾನೆ ಪದ ಗಾಯಕ ಕೃಷ್ಣೇಗೌಡ ಬೇಸರ ವ್ಯಕ್ತಪಡಿಸಿದರು. 
    ಇಲ್ಲಿನ ಜಾನಪದ ಲೋಕದಲ್ಲಿ ಕರ್

ಅರ್ಜಿ ಆಹ್ವಾನ

ರಾಮನಗರ :- ರಾಜ್ಯ ಜಾನಪದ ಅಕಾಡೆಮಿ ವತಿಯಿಂದ 2016-17ನೇ ಸಾಲಿನಲ್ಲಿ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ಶಿಬಿರಾರ್ಥಿಗಳಿಗೆ ಜಾನಪದ ಗಾಯನ ಕಲಿಕಾ ತರಬೇತಿ ಶಿಬಿರದಲ್ಲಿ ತರಬೇತಿ ನೀಡಲು ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗ

Top Stories »  


Top ↑