ನಮ್ಮ ನಡೆ ಮತಗಟ್ಟೆಯ ಕಡೆ ಚುನಾವಣಾಧಿಕಾರಿಗಳಿಂದ ಜಾಗೃತಿ

ಚನ್ನಪಟ್ಟಣ (ಏ.30):-- ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದ ಚುನಾವಣೆ 2023ರ ಅಂಗವಾಗಿ ಚನ್ನಪಟ್ಟಣ ತಾಲ್ಲೂಕು ಸ್ವೀಪ್ ಸಮಿತಿ ಮತ್ತು ತಾಲ್ಲೂಕು ಪಂಚಾಯಿತಿ ವತಿಯಿಂದ ರಾಂಪುರ ಗ್ರಾಮ ಪಂಚಾಯಿತಿ ಮತ್ತು ವಂದಾರಗುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿ ಚುನಾವಣಾಧಿಕಾರಿಗಳು ಹಾಗೂ ಸ್ವೀಪ್ ಕಮಿಟಿ ಅಧಿಕಾರಿಯವರ ಅಧ್ಯಕ್ಷತೆಯಲ್ಲಿ "ನಮ್ಮ ನಡೆ ಮತಗಟ್ಟೆಯ ಕಡೆ"ಎಂಬ ಕಾರ್ಯಕ್ರಮವನ್ನು ಧ್ವಜಾರೋಹಣ ನೆರವೇರಿಸಿ ಪ್ರತಿಜ್ಞಾ ವಿಧಿ ಭೋದಿಸುವ ಮೂಲಕ ಹಮ್ಮಿಕೊಳ್ಳಲಾಗಿತ್ತು.
ನಂತರ ಚನ್ನಪಟ್ಟಣ ತಾಲ್ಲೂಕಿನ ಚುನಾವಣಾಧಿಕಾರಿ ಮುನೇಗೌಡ ರವರು ಮಾತನಾಡಿ ಯಾವುದೇ ಆಸೆ ಆಮೀಷಗಳಿಗೆ ಒಳಗಾಗದೆ ಎಲ್ಲರು ಪಾರದರ್ಶಕತೆಯಿಂದ ಮತದಾನ ಮಾಡಿ ಒಬ್ಬ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಲಿ ಎಂಬ ಉದ್ದೇಶದಿಂದ ಮತದಾನ ಜಾಗೃತಿ ನಮ್ಮ ನಡೆ ಮತಗಟ್ಟೆಗಳ ಕಡೆಗೆ ಎಂಬ ಕಾರ್ಯಕ್ರಮವನ್ನು ರಾಜ್ಯದಲ್ಲಿ ಪ್ರತಿ ಮತಗಟ್ಟೆಗಳ ಬಳಿ ರಾಷ್ಟ್ರೀಯ ಹಬ್ಬದ ರೀತಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಚನ್ನಪಟ್ಟಣ ತಾಲ್ಲೂಕಿನ ಸ್ವೀಪ್ ಅಧಿಕಾರಿ ಶಿವಕುಮಾರ್ ಮಾತನಾಡಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಿಕೊಳ್ಳುವುದರ ಬಗ್ಗೆ, ಮತದಾರರ ಪಟ್ಟಿಯಲ್ಲಿ ಹೆಸರನ್ನು ಓಟರ್ ಹೆಲ್ಪ್ ಲೈನ್ ಆಪ್ ಪರಿಶೀಲಿಸಿಕೊಳ್ಳುವ ಬಗ್ಗೆ, ಯಾವುದೇ ಅಕ್ರಮ ಕಂಡುಬಂದಲ್ಲಿ cvigil app_ 1950 ಉಚಿತ ಸಹಾಯವಾಣಿಗೆ ಕರೆ ಮಾಡಿ ಅಥವಾ ದೂರು ದಾಖಲಿಸುವ ಬಗ್ಗೆ ಮಾಹಿತಿಯನ್ನು ಸರಳವಾದ ರೀತಿಯಲ್ಲಿ ವಿವರಿಸಿ ಅರ್ಥೈಸಿದರು. ಜೊತೆಗೆ ಯಾವುದೇ ಆಸೆ ಆಮೀಷಗಳಿಗೆ ಒಳಗಾಗಿ ಮತದಾನ ಮಾಡಿದರೆ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ವಂದಾರಗುಪ್ಪೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಬೈಕ್ ಜಾಥಾ ಹೋಗುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, NLRM ಶಾಖೆಯ ಸಿಬ್ಬಂದಿಗಳಾದ, ವಿ ಹರೀಶ್ ಬಾಬು, ತೇಜು, ಹೇಮಂತ ಕುಮಾರ್ ಎನ್, ಆನಂದ್ ವಿ,
ತಾಲ್ಲೂಕು IEC ಸಂಯೋಜಕಿ ಭವ್ಯ, ಸ್ವ- ಸಹಾಯ ಸಂಘದ ಮಹಿಳೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in channapatna »

ವಿದ್ಯುತ್ ವ್ಯತ್ಯಯ
ಚನ್ನಪಟ್ಟಣ, ಮೇ 23: 66/11 ಕೆವಿ ಬಿ.ವಿ. ಹಳ್ಳಿ ವಿದ್ಯುತ್ ಉಪಕೇಂದ್ರದ ಮಾರ್ಗದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಬ

ನಾನು ಸೋತಿದ್ದೇನೆ, ನನ್ನನ್ನು ಸೋಲಿಸಿದವರು ಪೂರ್ಣ ಸೋತು ಹೋಗಿದ್ದಾರೆ. ಸಿ ಪಿ ಯೋಗೇಶ್ವರ್
ಚನ್ನಪಟ್ಟಣ : ನಾನು ಸೋತಿದ್ದೇನೆ, ನನ್ನನ್ನು ಸೋಲಿಸಿದವರೂ ಸಂಪೂರ್ಣವಾಗಿ ಸೋತು ಹೋಗಿದ್ದಾರೆ. ಚುನಾವಣೆಗಳು ಸಾಲುಸಾಲಾಗಿ ಬರುತ್ತವೆ. ಮುಂದಿನ ಸರ್ಕಾರದಲ್ಲೂ

ಶೇಕಡಾ ೮೫. ೨ ೩ ರಷ್ಟು ಸುಸೂತ್ರವಾಗಿ ನಡೆದ ಮತದಾನ
ಚನ್ನಪಟ್ಟಣಃ ತಾಲೂಕಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಕೇಂದ್ರದಲ್ಲಿ ಮತದಾರರು ಶಾಂತಿಯುತವಾಗಿ ಮತಚಲಾಯಿಸಿದರು. ಸ್ಥಳೀಯ ಪೋಲಿಸರು, ಅರೆಸೇನ

ನಮ್ಮ ನಡೆ ಮತಗಟ್ಟೆಯ ಕಡೆ ಚುನಾವಣಾಧಿಕಾರಿಗಳಿಂದ ಜಾಗೃತಿ
ಚನ್ನಪಟ್ಟಣ (ಏ.30):-- ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದ ಚುನಾವಣೆ 2023ರ ಅಂಗವಾಗಿ ಚನ್ನಪಟ್ಟಣ ತಾಲ್ಲೂಕು ಸ್ವೀಪ್ ಸಮಿತಿ ಮತ್ತು ತಾಲ್ಲೂಕು ಪಂಚಾಯಿತಿ ವತಿಯಿಂದ ರಾಂಪುರ ಗ್ರಾಮ ಪಂಚಾಯಿತಿ ಮ

ಪ್ರತಿಯೊಂದು ಸಮುದಾಯಕ್ಕೂ ನ್ಯಾಯ ಒದಗಿಸುವ ವ್ಯಕ್ತಿ ಕುಮಾರಸ್ವಾಮಿ ಮಾತ್ರ. ಅನಿತಾ ಕುಮಾರಸ್ವಾಮಿ
ಚನ್ನಪಟ್ಟಣ,ಏ:30-ಯಾವ ಸಮುದಾಯದ, ಓರ್ವ ವ್ಯಕ್ತಿಗೂ ತೊಂದರೆ ಆಗಬಾರದೆಂಬ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಪ್ರತಿಯೊಂದು ಸಮುದಾಯಕ್ಕೂ ತಮ್ಮ ಚಿಂತನೆಯಿಂದ ಒಂ

ಚುನಾವಣಾ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ: ಚುನಾವಣಾಧಿಕಾರಿ ಮುನೇಗೌಡ
ಚನ್ನಪಟ್ಟಣ: ೧೮೫:ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕಿನ ನಾಲ್ಕು ಕಡೆ ಚೆಕ್ ಪೋಸ್ಟ್ ನಿರ್ಮಾಣ ಸೇರಿದಂತೆ ಎಲ್ಲಾ ರೀತಿಯಿ

ಸರಳವಾಗಿ ಸಾಮಾನ್ಯರಂತೆ ಕಲ್ಪವೃಕ್ಷ ಕುಡಿಕೆ ಲೆಮನ್ ಟೀ ಕುಡಿದ ಕುಮಾರಸ್ವಾಮಿ
ಚನ್ನಪಟ್ಟಣ: ಮಾಜಿ ಮುಖ್ಯ ಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಯವರು ಸುಣ್ಣಘಟ್ಟ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂ
ಪ್ರತಿಕ್ರಿಯೆಗಳು