Tel: 7676775624 | Mail: info@yellowandred.in

Language: EN KAN

    Follow us :


ಶೇಕಡಾ ೮೫. ೨ ೩ ರಷ್ಟು ಸುಸೂತ್ರವಾಗಿ ನಡೆದ ಮತದಾನ

Posted date: 11 May, 2023

Powered by:     Yellow and Red

ಶೇಕಡಾ ೮೫. ೨ ೩ ರಷ್ಟು ಸುಸೂತ್ರವಾಗಿ ನಡೆದ ಮತದಾನ

ಚನ್ನಪಟ್ಟಣಃ ತಾಲೂಕಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಕೇಂದ್ರದಲ್ಲಿ ಮತದಾರರು ಶಾಂತಿಯುತವಾಗಿ ಮತಚಲಾಯಿಸಿದರು. ಸ್ಥಳೀಯ ಪೋಲಿಸರು, ಅರೆಸೇನಾ ಪಡೆ ಹಾಗೂ ಚುನಾವಣಾಧಿಕಾರಿಗಳ ಸಹಯೋಗದೊಂದಿಗೆ ಸಣ್ಣಪುಟ್ಟ ತಾಂತ್ರಿಕ ದೋಷ ಹಾಗೂ ಮಾತಿನ ಚಕಮಕಿ ಹೊರತು ಪಡಿಸಿ ಯಾವುದೇ ಅಹಿತಕರ ಘಟನೆಗಳು ಜರುಗದೆ ನಿರಾತಂಕವಾಗಿ ನಡೆದಿದೆ.ತಾಲ್ಲೂಕಿನ ಕೆಲವೊಂದು ಗ್ರಾಮಗಳಲ್ಲಿ ಮತ್ತು ನಗರದ ಕೆಲ ವಾರ್ಡ್‌ಗಳಲ್ಲಿ

ಜೆಡಿಎಸ್. ಬಿಜೆಪಿ ಕಾರ್ಯಕರ್ತರ ನಡುವೆ ಮತಗಳ ಬಗ್ಗೆ ಜಟಾ ಪಟಿ ನಡೆದ ಘಟನೆಗಳು ಸಹ ಕಂಡು ಬಂದವು.


ಮಾಜಿ ಸಚಿವ ವಿಧಾನಪರಿಷತ್ ಸದಸ್ಯ ಬಿಜೆಪಿ ಅಭ್ಯರ್ಥಿಯಾದ

ಸಿ.ಪಿ.ಯೋಗೇಶ್ವರ್ ಸ್ವಗ್ರಾಮ ಚಕ್ಕೆರೆ ಗ್ರಾಮದಲ್ಲಿ, ಮಾಜಿ ಶಾಸಕ ಎಂ.ಸಿ.ಅಶ್ವಥ್ ನಗರದಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಎಸ್ ಗಂಗಾಧರ್ ಸೋಗಾಲ ಗ್ರಾಮದಲ್ಲಿ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶರತ್ ಚಂದ್ರ ವಿರೂಪಾಕ್ಷಿಪುರ ಗ್ರಾಮದಲ್ಲಿ ತಮ್ಮ ತಮ್ಮ ಮತ

ಕೇಂದ್ರಗಳಲ್ಲಿ ಮತಚಲಾಯಿಸಿದರೆ ಹಿರಿಯ ಮುಖಂಡರು.

ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳ ಪರವಾಗಿ ಮನೆಮನೆಗೆ ತೆರಳಿ ಮತಯಾಚನೆ ಮಾಡಿ

ಈ ಬಾರಿ ನಮ್ಮ ಪಕ್ಷದ ಅಭ್ಯರ್ಥಿಗೆ ಅವಕಾಶ ನೀಡಿ ಎಂದು

ಕೇಳಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.


ಕಾಂಗ್ರೆಸ್. ಬಿಎಸ್‌ಪಿ

ಅಭ್ಯರ್ಥಿಗಳ ಪರವಾಗಿ ಕಾರ್ಯಕರ್ತರು. ಅಭಿಮಾನಿಗಳು ನಿಶಬ್ಧವಾಗಿ

ಮತಯಾಚನೆ ಮಾಡುತ್ತಿದ್ದರು.

ಗ್ರಾಮಾಂತರ ಪ್ರದೇಶ, ನಗರ ಪ್ರದೇಶದಲ್ಲಿ ಬೆಳಿಗ್ಗೆಯಿಂದ

ಸಂಜೆಯವರೆಗೂ ಮತಚಲಾಯಿಸಲು ಆಗಮಿಸುತ್ತಿದ್ದ

ವಿಶೇಷ ಚೇತನರು. ಹಿರಿಯ ಮುತ್ಸದ್ದಿಗಳು ಸೇರಿದಂತೆ ಮಹಿಳೆಯರಿಗೆ

ವಾಹನಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಹಾಗೂ ಪಕ್ಷದ

ಕಾರ್ಯಕರ್ತರು ಸಹ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತಚಲಾಯಿಸಲಿ

ಎಂಬ ಉದ್ಧೇಶದಿಂದ ಮತದಾರರ ಮನೆಗಳಿಗೆ ತೆರಳಿ ಅಲ್ಲಿಂದಲೆ ತಮ್ಮ

ವಾಹನಗಳ ಮೂಲಕ ಮತದಾರರನ್ನು ಕೇಂದ್ರಕ್ಕೆ

ಕರೆದುಕೊಂಡು ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅದರಲ್ಲೂ

ಗ್ರಾಮಾಂತರಗಳಲ್ಲಿ ಬಿಜೆಪಿ. ಜೆಡಿಎಸ್. ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ

ಸಂಖ್ಯೆಯಲ್ಲಿ ಮತ ಚೀಟಿಗಳನ್ನು ಹಂಚುವ ಮೂಲಕ ತಮ್ಮ

ಅಭ್ಯರ್ಥಿಗೆ ಮತ ನೀಡಿ ಎಂದು ಮನವಿ ಮಾಡುತ್ತಿದ್ದರು.


ರಾಷ್ಟ್ರೀಯ ಪಕ್ಷದ ಮುಖಂಡರು. ಪ್ರಾದೇಶಿಕ ಪಕ್ಷದ

ಮುಖಂಡರು ಜವಾಬ್ಧಾರಿಯುತವಾಗಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ

ಬೆಳಿಗ್ಗೆಯಿಂದ ಸಂಜೆಯವರೆಗೂ ಕಾದು ಕುಳಿತು ಮತ

ಚಲಾಯಿಸುವಂತೆ ಕೋರುತ್ತಿದ್ದ ಜೊತೆಯಲ್ಲಿ ಮುಂದೆ

ಆಗಬೇಕಾಗಿರುವ ಅಭಿವೃದ್ಧಿಗಳ ಬಗ್ಗೆ ತಿಳಿಸಿ ಈ ಬಾರಿ ನಮಗೆ ಬೇಕಾಗಿರುವ ಶಾಸಕರನ್ನು ಆಯ್ಕೆ ಮಾಡುವ ಮೂಲಕ ತಾಲೂಕಿನ ಅಭಿವೃದ್ಧಿಗೆ

ಸಹಕಾರ ನೀಡಿ ಎಂದು ಎಲ್ಲಾ ಪಕ್ಷದ ಮುಖಂಡರು ಮತಚಲಾಯಿಸಲು

ಕೇಂದ್ರಕ್ಕೆ ಹೋಗುತ್ತಿದ್ದ ಮತದರರ ಮನವೊಲಿಸಲು

ಮುಂದಾಗಿದ್ದರು. ಜೊತೆಯಲ್ಲಿ ಕೆಲ ಗ್ರಾಮಗಳಲ್ಲಿ ಪಕ್ಷ ಪಕ್ಷದ

ಕಾರ್ಯಕರ್ತರ ನಡುವೆ ಪರ-ವಿರೋಧ ಘೋಷಣೆಗಳು. ವಾದ-ವಿವಾದ ಹಾಗೂ ಜಗಳ ಕೂಗಾಟ ನಡೆಯುತಿತ್ತು. ಅದೇ ಹೊತ್ತಿನಲ್ಲಿ ಪೊಲೀಸ್

ಸಿಬ್ಬಂದಿ, ಸೈನಿಕರು ಶಾಂತಿ ವೈರುದ್ಯಗಳನ್ನು ಶಾಂತಿ ಗೊಳಿಸಿ

ಶಾಂತಿಯುತವಾಗಿ ಚುನಾವಣೆ ನಡೆಯುವಂತೆ ಮಾಡುವಲ್ಲಿ ಸಫಲರಾದರು.


*ಹತ್ತಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮತದಾನ ವಿಳಂಬ*

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಯ್ಯದ್ ವಾಡಿ, ಮೆಹದಿ ನಗರ, ಟಿಪ್ಪುನಗರ,  ಅಪ್ಪಗೆರೆ, ನೀಲಸಂದ್ರ, ನೀಲಕಂಠನಹಳ್ಳಿ, ನಾಗವಾರ, ಸೇರಿ ಸುಮಾರು ಹತ್ತಕ್ಕೂ ಹೆಚ್ಚು  ಮತಗಟ್ಟೆಗಳಲ್ಲಿ ಇವಿಎಂ ದೋಷ, ವಿವಿ ಪ್ಯಾಟ್ ಹಾಗೂ ಮತದಾರರು ಕೊನೆಗಳಿಗೆಯಲ್ಲಿ ಹೆಚ್ಚಾದ ಕಾರಣ ಬುಧವಾರ ರಾತ್ರಿ ಒಂಬತ್ತು ಗಂಟೆವರೆಗೂ ಮತದಾನವಾದ ಬಗ್ಗೆ ವರದಿಯಾಗಿದ್ದು, ಈ ಸಂಬಂಧ ತಾಲ್ಲೂಕು ಮುಖ್ಯ ಚುನಾವಣಾಧಿಕಾರಿ ‌ಮುನೇಗೌಡ ಮಾಹಿತಿ ನೀಡಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in channapatna »

ವಿದ್ಯುತ್ ವ್ಯತ್ಯಯ
ವಿದ್ಯುತ್ ವ್ಯತ್ಯಯ

ಚನ್ನಪಟ್ಟಣ, ಮೇ 23:  66/11 ಕೆವಿ ಬಿ.ವಿ. ಹಳ್ಳಿ ವಿದ್ಯುತ್ ಉಪಕೇಂದ್ರದ ಮಾರ್ಗದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಬ

ನಾನು ಸೋತಿದ್ದೇನೆ, ನನ್ನನ್ನು ಸೋಲಿಸಿದವರು ಪೂರ್ಣ ಸೋತು ಹೋಗಿದ್ದಾರೆ. ಸಿ ಪಿ ಯೋಗೇಶ್ವರ್
ನಾನು ಸೋತಿದ್ದೇನೆ, ನನ್ನನ್ನು ಸೋಲಿಸಿದವರು ಪೂರ್ಣ ಸೋತು ಹೋಗಿದ್ದಾರೆ. ಸಿ ಪಿ ಯೋಗೇಶ್ವರ್

ಚನ್ನಪಟ್ಟಣ : ನಾನು ಸೋತಿದ್ದೇನೆ, ನನ್ನನ್ನು ಸೋಲಿಸಿದವರೂ ಸಂಪೂರ್ಣವಾಗಿ ಸೋತು ಹೋಗಿದ್ದಾರೆ. ಚುನಾವಣೆಗಳು ಸಾಲುಸಾಲಾಗಿ ಬರುತ್ತವೆ. ಮುಂದಿನ ಸರ್ಕಾರದಲ್ಲೂ

ಶೇಕಡಾ ೮೫. ೨ ೩ ರಷ್ಟು ಸುಸೂತ್ರವಾಗಿ ನಡೆದ ಮತದಾನ
ಶೇಕಡಾ ೮೫. ೨ ೩ ರಷ್ಟು ಸುಸೂತ್ರವಾಗಿ ನಡೆದ ಮತದಾನ

ಚನ್ನಪಟ್ಟಣಃ ತಾಲೂಕಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಕೇಂದ್ರದಲ್ಲಿ ಮತದಾರರು ಶಾಂತಿಯುತವಾಗಿ ಮತಚಲಾಯಿಸಿದರು. ಸ್ಥಳೀಯ ಪೋಲಿಸರು, ಅರೆಸೇನ

ನಮ್ಮ ನಡೆ ಮತಗಟ್ಟೆಯ ಕಡೆ ಚುನಾವಣಾಧಿಕಾರಿಗಳಿಂದ ಜಾಗೃತಿ
ನಮ್ಮ ನಡೆ ಮತಗಟ್ಟೆಯ ಕಡೆ ಚುನಾವಣಾಧಿಕಾರಿಗಳಿಂದ ಜಾಗೃತಿ

ಚನ್ನಪಟ್ಟಣ  (ಏ.30):-- ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದ ಚುನಾವಣೆ 2023ರ ಅಂಗವಾಗಿ ಚನ್ನಪಟ್ಟಣ ತಾಲ್ಲೂಕು ಸ್ವೀಪ್ ಸಮಿತಿ ಮತ್ತು ತಾಲ್ಲೂಕು ಪಂಚಾಯಿತಿ ವತಿಯಿಂದ ರಾಂಪುರ ಗ್ರಾಮ ಪಂಚಾಯಿತಿ ಮ

ಪ್ರತಿಯೊಂದು ಸಮುದಾಯಕ್ಕೂ ನ್ಯಾಯ ಒದಗಿಸುವ ವ್ಯಕ್ತಿ ಕುಮಾರಸ್ವಾಮಿ ಮಾತ್ರ. ಅನಿತಾ ಕುಮಾರಸ್ವಾಮಿ
ಪ್ರತಿಯೊಂದು ಸಮುದಾಯಕ್ಕೂ ನ್ಯಾಯ ಒದಗಿಸುವ ವ್ಯಕ್ತಿ ಕುಮಾರಸ್ವಾಮಿ ಮಾತ್ರ. ಅನಿತಾ ಕುಮಾರಸ್ವಾಮಿ

ಚನ್ನಪಟ್ಟಣ,ಏ:30-ಯಾವ ಸಮುದಾಯದ, ಓರ್ವ ವ್ಯಕ್ತಿಗೂ ತೊಂದರೆ ಆಗಬಾರದೆಂಬ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಪ್ರತಿಯೊಂದು ಸಮುದಾಯಕ್ಕೂ ತಮ್ಮ ಚಿಂತನೆಯಿಂದ ಒಂ

ಚುನಾವಣಾ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ: ಚುನಾವಣಾಧಿಕಾರಿ ಮುನೇಗೌಡ
ಚುನಾವಣಾ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ: ಚುನಾವಣಾಧಿಕಾರಿ ಮುನೇಗೌಡ

ಚನ್ನಪಟ್ಟಣ: ೧೮೫:ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕಿನ ನಾಲ್ಕು ಕಡೆ ಚೆಕ್ ಪೋಸ್ಟ್ ನಿರ್ಮಾಣ ಸೇರಿದಂತೆ ಎಲ್ಲಾ ರೀತಿಯಿ

ಸರಳವಾಗಿ ಸಾಮಾನ್ಯರಂತೆ ಕಲ್ಪವೃಕ್ಷ ಕುಡಿಕೆ ಲೆಮನ್ ಟೀ ಕುಡಿದ ಕುಮಾರಸ್ವಾಮಿ
ಸರಳವಾಗಿ ಸಾಮಾನ್ಯರಂತೆ ಕಲ್ಪವೃಕ್ಷ ಕುಡಿಕೆ ಲೆಮನ್ ಟೀ ಕುಡಿದ ಕುಮಾರಸ್ವಾಮಿ

ಚನ್ನಪಟ್ಟಣ: ಮಾಜಿ ಮುಖ್ಯ ಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಯವರು ಸುಣ್ಣಘಟ್ಟ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂ

Top Stories »  


Top ↑