Tel: 7676775624 | Mail: info@yellowandred.in

Language: EN KAN

    Follow us :


ಕುವೆಂಪು ನಗರದ ಒಂದನೇ ತಿರುವಿನಲ್ಲಿ ವಾಹನಗಳ ದಟ್ಟಣೆ

Posted date: 24 Jul, 2023

Powered by:     Yellow and Red

ಕುವೆಂಪು ನಗರದ ಒಂದನೇ ತಿರುವಿನಲ್ಲಿ ವಾಹನಗಳ ದಟ್ಟಣೆ

ಚನ್ನಪಟ್ಟಣ: ಪಟ್ಟಣದ ಕುವೆಂಪು ನಗರದ ಒಂದನೇ ತಿರುವು ಸದಾ ಜನಜಂಗುಳಿ ಮತ್ತು ವಾಹನಗಳ ದಟ್ಟಣೆಯಿಂದ ಕೂಡಿದ್ದು ಪಾದಚಾರಿಗಳಿಗೆ ಹಾಗೂ ಆ ಭಾಗದ ನಿವಾಸಿಗಳಿಗೆ ಕಿರಿಕಿರಿಯನ್ನುಂಟು ಮಾಡಿದೆ. ಸದಾ ಜನಜಂಗುಳಿಯಿಂದ ಗಿಜಿಗುಡುವ ಕುವೆಂಪುನಗರದ ಒಂದನೇ ತಿರುವಿನಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ಸಾರ್ವಜನಿಕರಿಗೆ ಇನ್ನಿಲ್ಲದ ರೀತಿಯಲ್ಲಿ ಸಮಸ್ಯೆ ಭಾದಿಸ ತೊಡಗಿದೆ.


ನಗರದ ಪ್ರಮುಖ ಜನಸಂದಣಿ ಸ್ಥಳಗಳಲ್ಲಿ ಇದೂ ಸಹ ಒಂದಾಗಿದ್ದು, ಇಲ್ಲಿನ ರಸ್ತೆಯಲ್ಲಿ ಸಬ್ ರಿಜಿಸ್ಟಾರ್ ಕಚೇರಿ, ಕರ್ನಾಟಕ ಬ್ಯಾಂಕ್, ಬರೋಡಾ ಬ್ಯಾಂಕ್, ಉಜ್ಜೀವನ್ ಬ್ಯಾಂಕ್, ಬಿಎಸ್‍ಎನ್‍ಎಲ್ ಕಛೇರಿ, ಸೆಂಟ್ ಆನ್ಸ್ ಸ್ಕೂಲ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಕಛೇರಿ, ಶ್ರೀ ರಾಮ್ ಪೈನಾನ್ಸ್, ಮುದ್ರಣಾಲಯ, ಗ್ರಂಥಾಲಯ, ಆಸ್ಪತ್ರೆ, ಮಾಲ್ ಸೇರಿದಂತೆ ಬಹುತೇಕ ಜನಸೇರುವ ಕಚೇರಿಗಳೆ ಅಧಿಕವಾಗಿದ್ದು ಜೊತೆಗೆ ಇದೊಂದು ಲಿಂಕ್ ರಸ್ತೆ ಯಾಗಿರುವ ಕಾರಣ ಬಹುತೇಕ ವಾಹನ ಸವಾರರು ಸಂಚಾರಕ್ಕೆ ಈ ರಸ್ತೆಯನ್ನೇ ಹೆಚ್ಚು ಆಶ್ರಯಿಸಿರುವ ಕಾರಣ ಈ ರಸ್ತೆಯಲ್ಲಿ ಸಂಚಾರ ಸಹಜವಾಗೇ ಹೆಚ್ಚಾಗಿರುತ್ತದೆ.


ಪ್ರತಿನಿತ್ಯ ಸಾವಿರಾರು ಮಂದಿ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ಸಹ ಇಲ್ಲಿ ವಾಹನಗಳ ನಿಲುಗಡೆಗಾಗಲಿ, ಸಾರ್ವಜನಿಕರ ಸುಗಮ ಸಂಚಾರಕ್ಕಾಗಲಿ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಸಂಚಾರಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ.

ವಿವಿಧ ಕಚೇರಿಗಳು, ಅಂಗಡಿ ಮುಂಗಟ್ಟುಗಳ ಮಾಲೀಕರುಗಳು, ಬ್ಯಾಂಕ್ ಸಿಬ್ಬಂದಿಗಳು ವಾಹನಗಳೆ ನೂರಾರು ಸಂಖ್ಯೆಯಲ್ಲಿದ್ದು ಇವರುಗಳ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಇಲ್ಲವಾಗಿದ್ದು, ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ಮಾತು ದೂರವೇ ಸರಿ. ಬೆಳಿಗ್ಗೆ 10 ರಿಂದ ಹಿಡಿದು ಸಂಜೆ 5 ರ ವರೆಗೆ ಈ ರಸ್ತೆಯಲ್ಲಿ ಸುಗಮವಾಗಿ ನಡೆದಾಡುವುದು ಕಷ್ಟವೆನಿಸುವಷ್ಟರ ಮಟ್ಟಿಗೆ ಇಲ್ಲಿ ಸದಾ ಜನಜಂಗುಳಿ ಸೇರಿರುತ್ತದೆ.


*ಸಬ್ ರಿಜಿಸ್ಟಾರ್ ಕಚೇರಿಯಿಂದಲೇ ಸಮಸ್ಯೆ :*

ಈ ರಸ್ತೆಯಲ್ಲಿ ಇಷ್ಟೂಂದು ಸಂಚಾರ ವ್ಯತ್ಯಯ ಉಂಟಾಗಲು ಇಲ್ಲಿರುವ ಸಬ್ ರಿಜಿಸ್ಟಾರ್ ಕಚೆರಿಯೇ ಪ್ರಮುಖ ಕಾರಣವಾಗಿದ್ದು, ದಿನಿನಿತ್ಯ ಈ ಕಚೇರಿಗೆ ನೂರಾರು ಮಂದಿ ಆಗಮಿಸತ್ತಾ ಅವರೊಟ್ಟಿಗೆ ನಾಲ್ಕಾರು ವಾಹನಗಳು, ಹತ್ತಾರು ಸಂಬಂಧಿಕರು ಆಗಮಿಸುವ ಕಾರಣ ಅವರ ವಾಹನಗಳ ನಿಲುಗಡೆಯಿಂದ ಹೆಚ್ಚಿನ ತೊಂದರೆ ಉಂಟಾಗುತ್ತಿದೆ.


*ಶಾಲಾ ಮಕ್ಕಳಿಗೆ ಸಾಕಷ್ಟು ತೊಂದರೆ:*

ಈ ರಸ್ತೆಯ ಕೊನೆಯಲ್ಲಿ ಸೆಂಟ್ ಆನ್ಸ್ ಶಾಲೆಯಿದ್ದು ಸಾವಿರಾರು ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುತ್ತಿದ್ದು, ಶಾಲಾ ವಾಹನಗಳು, ಪೋಷಕರುಗಳು ತಮ್ಮ ಮಕ್ಕಳನ್ನು ಕರೆತರಲು ಹಾಗೂ ಶಾಲೆಗೆ ಬಿಡಲು ಇದೇ ರಸ್ತೆಯನ್ನು ಬಳಸಿಕೊಳ್ಳುತ್ತಾರೆ. ಆದರೆ ಇಲ್ಲಿನ ವಿಪರೀತ ವಾಹನದಟ್ಟನೆಯಿಂದ ಮಕ್ಕಳು ಮತ್ತು ಪೋಷಕರುಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.


*ಪೊಲೀಸ್ ಇಲಾಖೆ ಗಮನಹರಿಸಿಲಿ:*

ಕಳೆದ ಹಲವಾರು ವರ್ಷಗಳಿಂದಲೂ ಈ ರಸ್ತೆಯಲ್ಲಿ ಸಂಚಾರಿ ಸಮಸ್ಯೆ ಇದ್ದು ಇದನ್ನು ಬಗೆಹರಿಸುವಂತೆ ಸಾಕಷ್ಟು ಬಾರಿ ಪೊಲೀಸ್ ಇಲಾಖೆಗೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಮನವಿ ಮಾಡಿಕೊಂಡಿದ್ದು, ಒಂದರೆಡು ದಿನ ಈ ಬಗ್ಗೆ ಚಿತ್ತ ಹರಿಸುವ ಇಲಾಖೆ ಸಹ ನಂತರ ಅದರತ್ತ ನಿರ್ಲಕ್ಷ್ಯ ವಹಿಸಿ ಸುಮ್ಮನಾಗುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆ ಹಾಗೇ ಉಳಿದಿದ್ದು, ಇನ್ನಾದರೂ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಇದಕ್ಕೆ ಹಿತಶ್ರೀ ಹಾಡುವರೆ ಕಾದು ನೋಡಬೇಕಿದೆ.


ಕುವೆಂಪು ನಗರದ ರಸ್ತೆಯ ಸಂಚಾರದಟ್ಟಣೆ ಸಮಸ್ಯೆಯು ಗಮನಕ್ಕೆ ಬಂದಿದ್ದು, ಇಲ್ಲಿನ ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ಅಡ್ಡಾದಿಡ್ಡಿ ವಾಹನಗಳ ನಿಲುಗಡೆಗೆ ಬ್ರೇಕ್ ಹಾಕಲಾಗುವುದು ಹಾಗೂ ಸೂಚನಾಫಲಕಗಳನ್ನು ಅಳವಡಿಸುವ ಮುಖಾಂತರ ಜಾಗೃತಿ ಮೂಡಿಸಿ, ಬಿಲ್ಡಿಂಗ್ ಮಾಲೀಕರುಗಳಿಗೂ ಎಚ್ಚರಿಕೆ ಕೊಡುವ ಕೆಲಸ ಮಾಡಲಾಗುವುದು.

ನಾಳೆಯಿಂದಲೆ ರಸ್ತೆಯ ಒಂದು ಕಡೆ ಮಾತ್ರ ವಾಹನ ನಿಲ್ಲಿಸಲು ಸೂಚನೆ ನೀಡಿ ಸಿಬ್ಬಂದಿಯನ್ನು ನೇಮಿಸಲಾಗುವುದು.

*ಶುಭಾಂಬಿಕಾ ಪಿಎಸ್‍ಐ ಸಂಚಾರಿ ಪೊಲೀಸ್ ಠಾಣೆ.*


ನಗರದ ಪ್ರಮುಖ ರಸ್ತೆಯಾದ ಇದು ಲಿಂಕ್ ರಸ್ತೆಯಾಗಿದ್ದು, ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಕಾರಣ ಬಹುತೇಕರು ಈ ರಸ್ತೆಯನ್ನೇ ಹೆಚ್ಚು ಬಳಕೆ ಮಾಡುತ್ತಾರೆ, ಆದರೆ ಇಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದ್ದು, ಪಾದಾಚಾರಿಗಳು ನಡೆದಾಡಲು ಇಲ್ಲಿ ಕಷ್ಟಸಾಧ್ಯವಾಗಿದೆ, ಕೆಲವಾರು ಬಾರಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಗಳು ಸಹ ನಡೆದಿದ್ದು, ಸಂಚಾರಿ ಪೊಲೀಸರು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕಾಗಿದೆ.

*ಶಿವರಾಮ್(ಕೆಂಪ), ಮಾ.ಗ್ರಾ.ಪಂ.ಸದಸ್ಯರು.*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in channapatna »

ಗಣೇಶ ವಿಸರ್ಜನೆ, ಈದ್-ಮಿಲಾದ್ ಹಿನ್ನೆಲೆ ನಮೋ ಬ್ರಿಗೇಡ್ ಕಾರ್ಯಕ್ರಮಕ್ಕೆ ಪೋಲಿಸ್ ಅನುಮತಿ ಇಲ್ಲ
ಗಣೇಶ ವಿಸರ್ಜನೆ, ಈದ್-ಮಿಲಾದ್ ಹಿನ್ನೆಲೆ ನಮೋ ಬ್ರಿಗೇಡ್ ಕಾರ್ಯಕ್ರಮಕ್ಕೆ ಪೋಲಿಸ್ ಅನುಮತಿ ಇಲ್ಲ

ಚನ್ನಪಟ್ಟಣ:ತಾಲ್ಲೂಕಿನ ಪುರಾಣ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ದೇವಾಲಯ ದಿಂದ ಇಂದು ಸಂಜೆ ಐದು ಗಂಟೆಗೆ ಬೈಕ್ ರ್ಯಾಲಿ ಹೊರಟು ನಂತರ ನಗರದ ಒಕ್ಕಲಿಗರ

ಸಮಾಜ ಸೇವಕ ಕೆ ಜಿ ಕೃಷ್ಣ ಪರ, ಉನ್ನತ ಪೋಲಿಸ್ ಅಧಿಕಾರಿಗಳ ವಿರುದ್ದ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಸಮಾಜ ಸೇವಕ ಕೆ ಜಿ ಕೃಷ್ಣ ಪರ, ಉನ್ನತ ಪೋಲಿಸ್ ಅಧಿಕಾರಿಗಳ ವಿರುದ್ದ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಚನ್ನಪಟ್ಟಣ: ಮೂಲತಃ ಹುಲಿಯೂರುದುರ್ಗದ ಸಮಾಜ ಸೇವಕ, ದಾನಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಕೆ ಜಿ ಕೃಷ್ಣ ರವರಿಗೆ ಉನ್ನತ ಪೋಲೀಸ್ ಅಧಿಕಾರಿಗಳು ಕ

ಹಣ ಕೊಟ್ಟರೂ ಸ್ಮಶಾನಕ್ಕೆ ಜಾಗ ಸಿಕ್ಕುತ್ತಿಲ್ಲಾ, ವಿದ್ಯುತ್ ಚಿತಾಗಾರ ಸದುಪಯೋಗಪಡಿಸಿಕೊಳ್ಳಿ, ಸಂಸದ ಡಿ ಕೆ ಸುರೇಶ್
ಹಣ ಕೊಟ್ಟರೂ ಸ್ಮಶಾನಕ್ಕೆ ಜಾಗ ಸಿಕ್ಕುತ್ತಿಲ್ಲಾ, ವಿದ್ಯುತ್ ಚಿತಾಗಾರ ಸದುಪಯೋಗಪಡಿಸಿಕೊಳ್ಳಿ, ಸಂಸದ ಡಿ ಕೆ ಸುರೇಶ್

ಚನ್ನಪಟ್ಟಣ: ನಗರ ಪ್ರದೇಶವಿರಲಿ, ಗ್ರಾಮೀಣ ಭಾಗದಲ್ಲೂ ಸ್ಮಶಾನಕ್ಕಾಗಿ ಹಣ ನೀಡಿದರೂ ಜಾಗ ಸಿಕ್ಕುತ್ತಿಲ್ಲ, ಅದಕ್ಕಾಗಿಯೇ ನನ್ನ ಲೋಕಸಭಾ ಕ್ಷೇತ್ರದ

ಸಾರ್ವಜನಿಕರನ್ನು ಕಛೇರಿಗೆ ಅಲೆದಾಡಿಸುವುದನ್ನು ಸರಿಯಲ್ಲಾ, ಡಿ ಕೆ ಸುರೇಶ್
ಸಾರ್ವಜನಿಕರನ್ನು ಕಛೇರಿಗೆ ಅಲೆದಾಡಿಸುವುದನ್ನು ಸರಿಯಲ್ಲಾ, ಡಿ ಕೆ ಸುರೇಶ್

ಚನ್ನಪಟ್ಟಣ: ತಮ್ಮ ಕೆಲಸ ಕಾರ್ಯಗಳಿಗಾಗಿ ಜನರನ್ನು ಅಧಿಕಾರಿಗಳು ಕಚೇರಿಗೆ ಅಲೆದಾಡಿಸುವುದು ಸರಿಯಲ್ಲ.. ಅಧಿಕಾರಿಗಳು ಈ ಹಿಂದೆ ಯಾವ ರೀತಿ ಕೆಲಸ ಮಾಡಿದರೋ ಗೊ

ದಶವಾರ ಗ್ರಾಪಂ ಸದಸ್ಯ ಅಬ್ಬೂರುದೊಡ್ಡಿ ವರದರಾಜ ನಿಂದ ಅರಣ್ಯಪ್ರದೇಶದಲ್ಲಿ ಸಹಸ್ರಾರು ಗಿಡ ಮರಗಳ ಮಾರಣಹೋಮ
ದಶವಾರ ಗ್ರಾಪಂ ಸದಸ್ಯ ಅಬ್ಬೂರುದೊಡ್ಡಿ ವರದರಾಜ ನಿಂದ ಅರಣ್ಯಪ್ರದೇಶದಲ್ಲಿ ಸಹಸ್ರಾರು ಗಿಡ ಮರಗಳ ಮಾರಣಹೋಮ

ರಾಮನಗರ:ಚನ್ನಪಟ್ಟಣ; ತಾಲ್ಲೂಕಿನ ಅಬ್ಬೂರು ಗ್ರಾಮ ವ್ಯಾಪ್ತಿಯ ಅರಣ್ಯ ಇಲಾಖೆಯ ಸರ್ವೇ ನಂಬರ್ ೩೫೩ ರಲ್ಲಿ ಸರಿಸುಮಾರು ಆರು ಎಕರೆಯಷ್ಟು ಅರಣ್ಯ ಭೂ

ರಾಷ್ಟ್ರೀಯ ಸೇವಾ ಯೋಜನೆ ಎಂಬುದು ವಿದ್ಯಾರ್ಥಿಗಳಿಗೆ ಸುವರ್ಣವಕಾಶದ ಹೆಬ್ಬಾಗಿಲು
ರಾಷ್ಟ್ರೀಯ ಸೇವಾ ಯೋಜನೆ ಎಂಬುದು ವಿದ್ಯಾರ್ಥಿಗಳಿಗೆ ಸುವರ್ಣವಕಾಶದ ಹೆಬ್ಬಾಗಿಲು

ಚನ್ನಪಟ್ಟಣ: ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಎಂದರೆ ಹಲವಾರು ವಿದ್ಯಾರ್ಥಿಗಳು ಮೂಗು ಮುರಿಯುತ್ತಾರೆ, ಕಸಕಡ್ಡಿ ಶೇಖರಣೆ, ಚರಂಡಿ ಸ್ವಚ್ಚತೆ, ಕೆರೆ-ಕ

೨೦೨೪ರ ಮೊದಲ ತಿಂಗಳಲ್ಲಿ ಕಾಡಾನೆಗಳ ಹಾವಳಿಗೆ ಪೂರ್ಣ ವಿರಾಮ ನೀಡುತ್ತೇವೆ, ರೈತರ ಸಭೆಯಲ್ಲಿ ಅರಣ್ಯಾಧಿಕಾರಿ ಭರವಸೆ
೨೦೨೪ರ ಮೊದಲ ತಿಂಗಳಲ್ಲಿ ಕಾಡಾನೆಗಳ ಹಾವಳಿಗೆ ಪೂರ್ಣ ವಿರಾಮ ನೀಡುತ್ತೇವೆ, ರೈತರ ಸಭೆಯಲ್ಲಿ ಅರಣ್ಯಾಧಿಕಾರಿ ಭರವಸೆ

ರಾಮನಗರ: ೨೦೨೪ ರ ಜನವರಿ ತಿಂಗಳೊಳಗೆ ಕಾಡಾನೆಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆ ನಾಶ ಪ್ರಾಣಹಾನಿ ಮಾಡುವುದನ್ನು ತಪ್ಪಿಸಲು ಪಣತೊಟ್ಟಿದ್ದು, 4 ತಿಂಗಳೊ

ನಗರಸಭೆ ಆವರಣದಲ್ಲಿ ಅನುಪಯುಕ್ತ ವಸ್ತುಗಳ ಹರಾಜು
ನಗರಸಭೆ ಆವರಣದಲ್ಲಿ ಅನುಪಯುಕ್ತ ವಸ್ತುಗಳ ಹರಾಜು

ಚನ್ನಪಟ್ಟಣ: ಇಲ್ಲಿನ ನಗರಸಭೆ ಆವರಣದಲ್ಲಿ ಮಂಗಳವಾರ 2023-24 ನೇ ಸಾಲಿನ ನಿರುಪಯುಕ್ತ ವಸ್ತುಗಳ ಬಹಿರಂಗ ಹರಾಜು ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದ್ದು, ಹಳೇ ಕಬ

ಸಾರ್ವಜನಿಕರ ತೆರಿಗೆ ಹಣವನ್ನು ಜ್ಞಾನಾರ್ಜನೆಗೆ ಬಳಸಬೇಕು ಪ್ರೊ ಕಾಳೇಗೌಡ ನಾಗವಾರ.
ಸಾರ್ವಜನಿಕರ ತೆರಿಗೆ ಹಣವನ್ನು ಜ್ಞಾನಾರ್ಜನೆಗೆ ಬಳಸಬೇಕು ಪ್ರೊ ಕಾಳೇಗೌಡ ನಾಗವಾರ.

ಚನ್ನಪಟ್ಟಣ: ಸಾರ್ವಜನಿಕರ ತೆರಿಗೆ ಹಣವನ್ನು ಸರ್ಕಾರಗಳು ವಿದ್ಯಾಭ್ಯಾಸಕ್ಕೆ, ಆಸ್ಪತ್ರೆಗೆ, ಸಾರ್ವಜನಿಕರ ಮೂಲಭೂತ ಸೌಕರ್ಯಗಳಿಗೆ ಹಾಗೂ ಅಭಿವೃದ್ಧಿಗಾಗಿ ಬಳಸ

ಸುರಕ್ಷತೆ, ಕೌಶಲ್ಯ ಅಭಿವೃದ್ಧಿಗಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಮತ್ತು ಸರ್ಕಾರಿ ಟೂಲ್ ರೂಮ್ ಮತ್ತು ತರಬೇತಿ
ಸುರಕ್ಷತೆ, ಕೌಶಲ್ಯ ಅಭಿವೃದ್ಧಿಗಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಮತ್ತು ಸರ್ಕಾರಿ ಟೂಲ್ ರೂಮ್ ಮತ್ತು ತರಬೇತಿ

ರಾಮನಗರ:ಜುಲೈ 25, 2023: ಸರ್ಕಾರಿ ಟೂಲ್ ರೂಮ್ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಅನ್ನು ಉತ್ಪಾದನಾ ಘಟಕಗಳು ಮತ್ತು ಮೊದಲ ಬಾರಿ ಉದ್ಯಮಿಗಳಿಗೆ ನುರಿತ ಮಾ

Top Stories »  


Top ↑