ಸಾರ್ವಜನಿಕರ ತೆರಿಗೆ ಹಣವನ್ನು ಜ್ಞಾನಾರ್ಜನೆಗೆ ಬಳಸಬೇಕು ಪ್ರೊ ಕಾಳೇಗೌಡ ನಾಗವಾರ.

ಚನ್ನಪಟ್ಟಣ: ಸಾರ್ವಜನಿಕರ ತೆರಿಗೆ ಹಣವನ್ನು ಸರ್ಕಾರಗಳು ವಿದ್ಯಾಭ್ಯಾಸಕ್ಕೆ, ಆಸ್ಪತ್ರೆಗೆ, ಸಾರ್ವಜನಿಕರ ಮೂಲಭೂತ ಸೌಕರ್ಯಗಳಿಗೆ ಹಾಗೂ ಅಭಿವೃದ್ಧಿಗಾಗಿ ಬಳಸಬೇಕೆ ವಿನಹ ಯಾವುದೇ ಧರ್ಮದ ದೇವಾಲಯಗಳಿಗೆ ಬಳಸಬಾರದು ಎಂದು ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷರು, ವಿಶ್ರಾಂತ ಪ್ರಾಧ್ಯಾಪಕರು, ಜಾನಪದ ವಿದ್ವಾಂಸರು ಆದ ಡಾ ಕಾಳೇಗೌಡ ನಾಗವಾರ ರವರು ತಿಳಿಸಿದರು. ಅವರು ಸೋಮವಾರ ವಂದಾರಗುಪ್ಪೆ ಗ್ರಾಮದ ಬಳಿ ಇರುವ ಹೊಂಬೇಗೌಡ ಶಿಕ್ಷಣ ಸಂಸ್ಥೆಯ ಕುವೆಂಪು ಪ್ರಥಮ ದರ್ಜೆ ಕಾಲೇಜು ಮತ್ತು ಅಧ್ಯಯನ ಕೇಂದ್ರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು.
ಡಾ ಬಿ ಆರ್ ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದ ಇಂದು ನಾವೆಲ್ಲಾ ಜೀವಿಸುತ್ತಿದ್ದೇವೆ ಸಾರ್ವಜನಿಕರ ತೆರಿಗೆ ಹಣದಿಂದ ದೇವಾಲಯ ಕಟ್ಟಬಾರದು, ಜ್ಞಾನಾರ್ಜನೆಗಾಗಿ ಶಾಲೆಗಳನ್ನು ಕಟ್ಟಬೇಕು, ಆಸ್ಪತ್ರೆಗಳನ್ನು ನಿರ್ಮಿಸಬೇಕು, ಜನರ ಮತ್ತು ರಾಜ್ಯ ರಾಷ್ಟ್ರದ ಅಭಿವೃದ್ಧಿಗಾಗಿ ಬಳಸಬೇಕು. ರಾಷ್ಟ್ರಪತಿ, ಕುಲಪತಿ ಎನ್ನುವುದು ಅವಿವೇಕತನ, ಈ ಪದಗಳು ಗಂಡಸರಿಗೆ ಮಾತ್ರ ಅನ್ವಯವಾಗುತ್ತವೆ, ರಾಷ್ಟ್ರಾಧ್ಯಕ್ಷ ಎನ್ನುವುದು ಸೂಕ್ತ ಪದ, ನಾವು ದೇವಾಲಯದ ಮುಂದೆ ಕ್ಯೂ ನಿಲ್ಲುವುದಲ್ಲಾ, ಗ್ರಂಥಾಲಯದ ಮುಂದೆ ನಿಲ್ಲಬೇಕು ಎಂದರು.
ವಿದ್ಯಾರ್ಥಿಗಳು ಎಲ್ಲಾ ಪ್ರಾಕಾರಗಳನ್ನು ಓದಿಕೊಳ್ಳಬೇಕು ಅಸ್ಪೃಶ್ಯತೆ ಆಚರಣೆ ಮಾಡಬಾರದು. ಅಂಬೇಡ್ಕರ್, ಲೋಹಿಯಾ, ಕರಿಯಪ್ಪ, ಬಸವಲಿಂಗಪ್ಪ ರವಂತವರು ಹುಟ್ಟಬೇಕು. ಕುವೆಂಪು ಮತ್ತು ತೇಜಸ್ವಿ ಯವರ ಕೃತಿಗಳನ್ನು ಓದಬೇಕು.
ಏಕಲವ್ಯ ನ ಬೆರಳು ಕತ್ತರಿಸಿದ ಗುರು, ಸೀತೆ, ದ್ರೌಪದಿ ನಡೆಸಿಕೊಂಡು ಬಂದಂತಹ ಧರ್ಮ ಗ್ರಂಥಗಳು ನಮಗೆ ಬೇಕಾ ಎಂದು ಪ್ರಶ್ನೆ ಮಾಡಿದರು. ಹೆಸರು ಮುಖ್ಯವಲ್ಲ, ಕೆಲಸ ಮುಖ್ಯವಾಗಬೇಕು. ಸಾಹಿತ್ಯ ಎನ್ನುವುದು ಸಮಗ್ರವಾಗಿರಬೇಕು. ಸಾಹಿತ್ಯ ಮತ್ತು ಸಂಸ್ಕೃತಿಗಳ ನಡುವಿನ ಅರ್ಥವನ್ನು ತಿಳಿದುಕೊಳ್ಳಬೇಕು, ವಿದ್ಯಾರ್ಥಿಗಳು ಸಮಾಜವನ್ನು ಅರಿಯಬೇಕು ಎಂದು ಅರುಹಿದರು.
ನಾವೆಲ್ಲರೂ ಶ್ರಮಜೀವಿಗಳ ಋಣಿಯ ಮಕ್ಕಳು ಎಂದರು. ನೇಗಿಲಯೋಗಿ, ಶೂದ್ರ ತಪಸ್ವಿ ಎಂಬುದರ ವಿಶಾಲ ಅರ್ಥವನ್ನು ತಿಳಿಯಬೇಕು.
ಅಕ್ಕಾ ಮಹಾದೇವಿ ವಚನ ಇಡೀ ವಿಶ್ವದಲ್ಲೇ ಇಲ್ಲ. ಬಸವಣ್ಣ ದಲಿತ ಕೇರಿಗೆ ಹೋಗಿ ಬಂದಾಗ ಬ್ರಾಹ್ಮಣರು ಕುಲಗೆಟ್ಟು ಬಂದಿದ್ದಾನೆಂದು ಬೊಬ್ಬಿಟ್ಟಾಗ ನಾನು ಪುಣ್ಯಾತ್ಮರ ಕೇರಿಗೆ ಹೋಗಿ ಪವಿತ್ರನಾಗಿ ಬಂದಿದ್ದೇನೆ ಎಂದು ಹೇಳಿದರ ಬಗ್ಗೆ ತಿಳಿದುಕೊಳ್ಳಬೇಕು. ಪ್ರತಿ ಸೆಕೆಂಡುಗಳೂ ಸಹ ಒಳ್ಳೆಯದೇ ಆಗಿವೆ, ಕೆಟ್ಟ ಕಾಲ ಎಂಬುದಿಲ್ಲ, ರಾಹುಕಾಲ ಎಂಬುವುದನ್ನು ನಂಬದೆ ತೋಳ್ಬಲ ಮತ್ತು ತಮ್ಮ ಮನೋಬಲ ನಂಬಿ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅಂತರರಾಷ್ಟ್ರೀಯ ಜಾನಪದ ಗಾಯಕರಾದ ಅಪ್ಪಗೆರೆ ತಿಮ್ಮರಾಜು ರವರು ಮೂಲ ಜಾನಪದ ಗೀತೆಗಳನ್ನು ವಿಭಿನ್ನವಾಗಿ ಪ್ರಸ್ತುತ ಪಡಿಸಿದರು. ವೇದಿಕೆಯಲ್ಲಿ ನಿವೃತ್ತ ಕೆಎಎಸ್ ಅಧಿಕಾರಿ ರುದ್ರಪ್ಪ, ಸಂಗ್ರಾಮ ಟಿವಿ ಯ ಪ್ರಧಾನ ಸಂಪಾದಕ ಗೋ ರಾ ಶ್ರೀನಿವಾಸ, ಪ್ರಾಂಶುಪಾಲ ಡಾ ದೊಡ್ಡಸಿದ್ದಯ್ಯ, ಐಟಿಐ ಪ್ರಾಂಶುಪಾಲ ಶಂಕರಲಿಂಗೇಗೌಡ, ಅಧೀಕ್ಷಕ ಜಯರಾಮು, ಉಪನ್ಯಾಸಕರಾದ ಡಾ ರವೀಂದ್ರ, ಡಾ ತೇಜಾವತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in channapatna »

ಗಣೇಶ ವಿಸರ್ಜನೆ, ಈದ್-ಮಿಲಾದ್ ಹಿನ್ನೆಲೆ ನಮೋ ಬ್ರಿಗೇಡ್ ಕಾರ್ಯಕ್ರಮಕ್ಕೆ ಪೋಲಿಸ್ ಅನುಮತಿ ಇಲ್ಲ
ಚನ್ನಪಟ್ಟಣ:ತಾಲ್ಲೂಕಿನ ಪುರಾಣ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ದೇವಾಲಯ ದಿಂದ ಇಂದು ಸಂಜೆ ಐದು ಗಂಟೆಗೆ ಬೈಕ್ ರ್ಯಾಲಿ ಹೊರಟು ನಂತರ ನಗರದ ಒಕ್ಕಲಿಗರ

ಸಮಾಜ ಸೇವಕ ಕೆ ಜಿ ಕೃಷ್ಣ ಪರ, ಉನ್ನತ ಪೋಲಿಸ್ ಅಧಿಕಾರಿಗಳ ವಿರುದ್ದ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಚನ್ನಪಟ್ಟಣ: ಮೂಲತಃ ಹುಲಿಯೂರುದುರ್ಗದ ಸಮಾಜ ಸೇವಕ, ದಾನಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಕೆ ಜಿ ಕೃಷ್ಣ ರವರಿಗೆ ಉನ್ನತ ಪೋಲೀಸ್ ಅಧಿಕಾರಿಗಳು ಕ

ಹಣ ಕೊಟ್ಟರೂ ಸ್ಮಶಾನಕ್ಕೆ ಜಾಗ ಸಿಕ್ಕುತ್ತಿಲ್ಲಾ, ವಿದ್ಯುತ್ ಚಿತಾಗಾರ ಸದುಪಯೋಗಪಡಿಸಿಕೊಳ್ಳಿ, ಸಂಸದ ಡಿ ಕೆ ಸುರೇಶ್
ಚನ್ನಪಟ್ಟಣ: ನಗರ ಪ್ರದೇಶವಿರಲಿ, ಗ್ರಾಮೀಣ ಭಾಗದಲ್ಲೂ ಸ್ಮಶಾನಕ್ಕಾಗಿ ಹಣ ನೀಡಿದರೂ ಜಾಗ ಸಿಕ್ಕುತ್ತಿಲ್ಲ, ಅದಕ್ಕಾಗಿಯೇ ನನ್ನ ಲೋಕಸಭಾ ಕ್ಷೇತ್ರದ

ಸಾರ್ವಜನಿಕರನ್ನು ಕಛೇರಿಗೆ ಅಲೆದಾಡಿಸುವುದನ್ನು ಸರಿಯಲ್ಲಾ, ಡಿ ಕೆ ಸುರೇಶ್
ಚನ್ನಪಟ್ಟಣ: ತಮ್ಮ ಕೆಲಸ ಕಾರ್ಯಗಳಿಗಾಗಿ ಜನರನ್ನು ಅಧಿಕಾರಿಗಳು ಕಚೇರಿಗೆ ಅಲೆದಾಡಿಸುವುದು ಸರಿಯಲ್ಲ.. ಅಧಿಕಾರಿಗಳು ಈ ಹಿಂದೆ ಯಾವ ರೀತಿ ಕೆಲಸ ಮಾಡಿದರೋ ಗೊ

ದಶವಾರ ಗ್ರಾಪಂ ಸದಸ್ಯ ಅಬ್ಬೂರುದೊಡ್ಡಿ ವರದರಾಜ ನಿಂದ ಅರಣ್ಯಪ್ರದೇಶದಲ್ಲಿ ಸಹಸ್ರಾರು ಗಿಡ ಮರಗಳ ಮಾರಣಹೋಮ
ರಾಮನಗರ:ಚನ್ನಪಟ್ಟಣ; ತಾಲ್ಲೂಕಿನ ಅಬ್ಬೂರು ಗ್ರಾಮ ವ್ಯಾಪ್ತಿಯ ಅರಣ್ಯ ಇಲಾಖೆಯ ಸರ್ವೇ ನಂಬರ್ ೩೫೩ ರಲ್ಲಿ ಸರಿಸುಮಾರು ಆರು ಎಕರೆಯಷ್ಟು ಅರಣ್ಯ ಭೂ

ರಾಷ್ಟ್ರೀಯ ಸೇವಾ ಯೋಜನೆ ಎಂಬುದು ವಿದ್ಯಾರ್ಥಿಗಳಿಗೆ ಸುವರ್ಣವಕಾಶದ ಹೆಬ್ಬಾಗಿಲು
ಚನ್ನಪಟ್ಟಣ: ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಎಂದರೆ ಹಲವಾರು ವಿದ್ಯಾರ್ಥಿಗಳು ಮೂಗು ಮುರಿಯುತ್ತಾರೆ, ಕಸಕಡ್ಡಿ ಶೇಖರಣೆ, ಚರಂಡಿ ಸ್ವಚ್ಚತೆ, ಕೆರೆ-ಕ

೨೦೨೪ರ ಮೊದಲ ತಿಂಗಳಲ್ಲಿ ಕಾಡಾನೆಗಳ ಹಾವಳಿಗೆ ಪೂರ್ಣ ವಿರಾಮ ನೀಡುತ್ತೇವೆ, ರೈತರ ಸಭೆಯಲ್ಲಿ ಅರಣ್ಯಾಧಿಕಾರಿ ಭರವಸೆ
ರಾಮನಗರ: ೨೦೨೪ ರ ಜನವರಿ ತಿಂಗಳೊಳಗೆ ಕಾಡಾನೆಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆ ನಾಶ ಪ್ರಾಣಹಾನಿ ಮಾಡುವುದನ್ನು ತಪ್ಪಿಸಲು ಪಣತೊಟ್ಟಿದ್ದು, 4 ತಿಂಗಳೊ

ನಗರಸಭೆ ಆವರಣದಲ್ಲಿ ಅನುಪಯುಕ್ತ ವಸ್ತುಗಳ ಹರಾಜು
ಚನ್ನಪಟ್ಟಣ: ಇಲ್ಲಿನ ನಗರಸಭೆ ಆವರಣದಲ್ಲಿ ಮಂಗಳವಾರ 2023-24 ನೇ ಸಾಲಿನ ನಿರುಪಯುಕ್ತ ವಸ್ತುಗಳ ಬಹಿರಂಗ ಹರಾಜು ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದ್ದು, ಹಳೇ ಕಬ

ಸಾರ್ವಜನಿಕರ ತೆರಿಗೆ ಹಣವನ್ನು ಜ್ಞಾನಾರ್ಜನೆಗೆ ಬಳಸಬೇಕು ಪ್ರೊ ಕಾಳೇಗೌಡ ನಾಗವಾರ.
ಚನ್ನಪಟ್ಟಣ: ಸಾರ್ವಜನಿಕರ ತೆರಿಗೆ ಹಣವನ್ನು ಸರ್ಕಾರಗಳು ವಿದ್ಯಾಭ್ಯಾಸಕ್ಕೆ, ಆಸ್ಪತ್ರೆಗೆ, ಸಾರ್ವಜನಿಕರ ಮೂಲಭೂತ ಸೌಕರ್ಯಗಳಿಗೆ ಹಾಗೂ ಅಭಿವೃದ್ಧಿಗಾಗಿ ಬಳಸ

ಸುರಕ್ಷತೆ, ಕೌಶಲ್ಯ ಅಭಿವೃದ್ಧಿಗಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಮತ್ತು ಸರ್ಕಾರಿ ಟೂಲ್ ರೂಮ್ ಮತ್ತು ತರಬೇತಿ
ರಾಮನಗರ:ಜುಲೈ 25, 2023: ಸರ್ಕಾರಿ ಟೂಲ್ ರೂಮ್ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಅನ್ನು ಉತ್ಪಾದನಾ ಘಟಕಗಳು ಮತ್ತು ಮೊದಲ ಬಾರಿ ಉದ್ಯಮಿಗಳಿಗೆ ನುರಿತ ಮಾ
ಪ್ರತಿಕ್ರಿಯೆಗಳು