ನಗರಸಭೆ ಆವರಣದಲ್ಲಿ ಅನುಪಯುಕ್ತ ವಸ್ತುಗಳ ಹರಾಜು

ಚನ್ನಪಟ್ಟಣ: ಇಲ್ಲಿನ ನಗರಸಭೆ ಆವರಣದಲ್ಲಿ ಮಂಗಳವಾರ 2023-24 ನೇ ಸಾಲಿನ ನಿರುಪಯುಕ್ತ ವಸ್ತುಗಳ ಬಹಿರಂಗ ಹರಾಜು ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದ್ದು, ಹಳೇ ಕಬ್ಬಿಣ ಹಾಗೂ ಗುಜರಿ ವಸ್ತುಗಳ ಖರೀದಿಗಾಗಿ ಬಿಡ್ಡರ್ ಗಳು ಮುಗಿಬಿದ್ದ ಪ್ರಸಂಗ ನಡೆಯಿತು.
ನಗರಸಭೆ ಆವರಣದಲ್ಲಿ ಆರೋಗ್ಯ ಶಾಖೆಯ ನಿರುಪಯುಕ್ತ ವಸ್ತುಗಳಾದ 14 ಆಟೋ ಟಿಪ್ಪರ್ ಹಾಗೂ ಡಂಪರ್ ಪೆಸ್ಲರ್ ವಾಹನ, 38 ವಿವಿಧ ಬಗೆಯ ವಿದ್ಯುತ್ ಉಪಕರಣಗಳು, 62 ಕ್ಕೂ ಹೆಚ್ಚು ಕಬ್ಬಿಣದ ವಸ್ತುಗಳ ಹರಾಜಿಗೆ ಟೆಂಡರ್ ಕರೆಯಲಾಗಿದ್ದು, ಗುಜರಿ ವಸ್ತುಗಳ ಖರೀದಿಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಕಷ್ಟು ಪೈಪೋಟಿ ಕಂಡುಬಂದಿತ್ತು.
ಕಚೇರಿ ಆರಂಭವಾಗುತ್ತಿದ್ದಂತೆ ಟೆಂಡರ್ ನಲ್ಲಿ ಭಾಗವಹಿಸಲು ಠೇವಣಿ ಕಟ್ಟಲು ಬಿಡ್‍ದಾರರು ಮುಗಿಬಿದ್ದರು. ತಾಲೂಕು ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಯ ಜನತೆಯೂ ಸಹ ಹರಾಜಿನಲ್ಲಿ ಭಾಗವಹಿಸಲು ಆಗಮಿಸಿದ್ದರು.
*178 ಮಂದಿ ಬಿಡ್ಡರ್ ಗಳು ಭಾಗಿ:*
ನಗರಸಭೆ ಆವರಣದಲ್ಲಿ ನಡೆದ ಪ್ರತ್ಯೇಕ ಮೂರು ಹಂತದ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಕಷ್ಟು ಆಸಕ್ತಿ ಕಂಡುಬಂದಿತ್ತು. ಹರಾಜು ಪ್ರಕ್ರಿಯೆಯಲ್ಲಿ 178 ಬಿಡ್ಡರ್ ಗಳು ಭಾಗವಹಿಸಿದ್ದರು.
ಅಂತಿಮವಾಗಿ ಹಳೆಯ ಅನುಪಯುಕ್ತ ವಾಹನಗಳು ರೂ.4.77 ಲಕ್ಷ ರೂ., ಅನುಪಯುಕ್ತ ಬಲ್ಬ್ ಚೌಕ್ ಸೇರಿದಂತೆ ಇನ್ನಿತರ ಎಲೆಕ್ಟ್ರಿಕಲ್ ವಸ್ತುಗಳು 1.41 ಲಕ್ಷ ರೂ., ಹಾಗೂ ಅನುಪಯುಕ್ತ ಗುಜರಿ ವಸ್ತುಗಳು 3.16 ಲಕ್ಷಕ್ಕೆ ಬಿಕರಿಯಾದ್ದವು. ಒಟ್ಟಾರೆ ಎಲ್ಲಾ ವಸ್ತುಗಳು 9.34 ಲಕ್ಷ ರೂ.ಗಳಿಗೆ ಹರಾಜಾದವು.
ಮಂಗಳವಾರ ಹರಾಜಾದ ವಸ್ತುಗಳು ಹಲವಾರು ವರ್ಷಗಳಿಂದ ನಗರಸಭೆ ಆವರಣದಲ್ಲಿ ನಿರುಪಯುಕ್ತವಾಗಿ ಬಿದ್ದಿದ್ದು, ಈ ಗುಜರಿ ವಸ್ತುಗಳನ್ನು ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡಲಾಯಿತು. ಇದರೊಂದಿಗೆ, ನಗರಸಭೆಗೂ 9.34 ಆದಾಯ ಕ್ರೋಡೀಕರಣವಾಯಿತು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in channapatna »

ಗಣೇಶ ವಿಸರ್ಜನೆ, ಈದ್-ಮಿಲಾದ್ ಹಿನ್ನೆಲೆ ನಮೋ ಬ್ರಿಗೇಡ್ ಕಾರ್ಯಕ್ರಮಕ್ಕೆ ಪೋಲಿಸ್ ಅನುಮತಿ ಇಲ್ಲ
ಚನ್ನಪಟ್ಟಣ:ತಾಲ್ಲೂಕಿನ ಪುರಾಣ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ದೇವಾಲಯ ದಿಂದ ಇಂದು ಸಂಜೆ ಐದು ಗಂಟೆಗೆ ಬೈಕ್ ರ್ಯಾಲಿ ಹೊರಟು ನಂತರ ನಗರದ ಒಕ್ಕಲಿಗರ

ಸಮಾಜ ಸೇವಕ ಕೆ ಜಿ ಕೃಷ್ಣ ಪರ, ಉನ್ನತ ಪೋಲಿಸ್ ಅಧಿಕಾರಿಗಳ ವಿರುದ್ದ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಚನ್ನಪಟ್ಟಣ: ಮೂಲತಃ ಹುಲಿಯೂರುದುರ್ಗದ ಸಮಾಜ ಸೇವಕ, ದಾನಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಕೆ ಜಿ ಕೃಷ್ಣ ರವರಿಗೆ ಉನ್ನತ ಪೋಲೀಸ್ ಅಧಿಕಾರಿಗಳು ಕ

ಹಣ ಕೊಟ್ಟರೂ ಸ್ಮಶಾನಕ್ಕೆ ಜಾಗ ಸಿಕ್ಕುತ್ತಿಲ್ಲಾ, ವಿದ್ಯುತ್ ಚಿತಾಗಾರ ಸದುಪಯೋಗಪಡಿಸಿಕೊಳ್ಳಿ, ಸಂಸದ ಡಿ ಕೆ ಸುರೇಶ್
ಚನ್ನಪಟ್ಟಣ: ನಗರ ಪ್ರದೇಶವಿರಲಿ, ಗ್ರಾಮೀಣ ಭಾಗದಲ್ಲೂ ಸ್ಮಶಾನಕ್ಕಾಗಿ ಹಣ ನೀಡಿದರೂ ಜಾಗ ಸಿಕ್ಕುತ್ತಿಲ್ಲ, ಅದಕ್ಕಾಗಿಯೇ ನನ್ನ ಲೋಕಸಭಾ ಕ್ಷೇತ್ರದ

ಸಾರ್ವಜನಿಕರನ್ನು ಕಛೇರಿಗೆ ಅಲೆದಾಡಿಸುವುದನ್ನು ಸರಿಯಲ್ಲಾ, ಡಿ ಕೆ ಸುರೇಶ್
ಚನ್ನಪಟ್ಟಣ: ತಮ್ಮ ಕೆಲಸ ಕಾರ್ಯಗಳಿಗಾಗಿ ಜನರನ್ನು ಅಧಿಕಾರಿಗಳು ಕಚೇರಿಗೆ ಅಲೆದಾಡಿಸುವುದು ಸರಿಯಲ್ಲ.. ಅಧಿಕಾರಿಗಳು ಈ ಹಿಂದೆ ಯಾವ ರೀತಿ ಕೆಲಸ ಮಾಡಿದರೋ ಗೊ

ದಶವಾರ ಗ್ರಾಪಂ ಸದಸ್ಯ ಅಬ್ಬೂರುದೊಡ್ಡಿ ವರದರಾಜ ನಿಂದ ಅರಣ್ಯಪ್ರದೇಶದಲ್ಲಿ ಸಹಸ್ರಾರು ಗಿಡ ಮರಗಳ ಮಾರಣಹೋಮ
ರಾಮನಗರ:ಚನ್ನಪಟ್ಟಣ; ತಾಲ್ಲೂಕಿನ ಅಬ್ಬೂರು ಗ್ರಾಮ ವ್ಯಾಪ್ತಿಯ ಅರಣ್ಯ ಇಲಾಖೆಯ ಸರ್ವೇ ನಂಬರ್ ೩೫೩ ರಲ್ಲಿ ಸರಿಸುಮಾರು ಆರು ಎಕರೆಯಷ್ಟು ಅರಣ್ಯ ಭೂ

ರಾಷ್ಟ್ರೀಯ ಸೇವಾ ಯೋಜನೆ ಎಂಬುದು ವಿದ್ಯಾರ್ಥಿಗಳಿಗೆ ಸುವರ್ಣವಕಾಶದ ಹೆಬ್ಬಾಗಿಲು
ಚನ್ನಪಟ್ಟಣ: ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಎಂದರೆ ಹಲವಾರು ವಿದ್ಯಾರ್ಥಿಗಳು ಮೂಗು ಮುರಿಯುತ್ತಾರೆ, ಕಸಕಡ್ಡಿ ಶೇಖರಣೆ, ಚರಂಡಿ ಸ್ವಚ್ಚತೆ, ಕೆರೆ-ಕ

೨೦೨೪ರ ಮೊದಲ ತಿಂಗಳಲ್ಲಿ ಕಾಡಾನೆಗಳ ಹಾವಳಿಗೆ ಪೂರ್ಣ ವಿರಾಮ ನೀಡುತ್ತೇವೆ, ರೈತರ ಸಭೆಯಲ್ಲಿ ಅರಣ್ಯಾಧಿಕಾರಿ ಭರವಸೆ
ರಾಮನಗರ: ೨೦೨೪ ರ ಜನವರಿ ತಿಂಗಳೊಳಗೆ ಕಾಡಾನೆಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆ ನಾಶ ಪ್ರಾಣಹಾನಿ ಮಾಡುವುದನ್ನು ತಪ್ಪಿಸಲು ಪಣತೊಟ್ಟಿದ್ದು, 4 ತಿಂಗಳೊ

ನಗರಸಭೆ ಆವರಣದಲ್ಲಿ ಅನುಪಯುಕ್ತ ವಸ್ತುಗಳ ಹರಾಜು
ಚನ್ನಪಟ್ಟಣ: ಇಲ್ಲಿನ ನಗರಸಭೆ ಆವರಣದಲ್ಲಿ ಮಂಗಳವಾರ 2023-24 ನೇ ಸಾಲಿನ ನಿರುಪಯುಕ್ತ ವಸ್ತುಗಳ ಬಹಿರಂಗ ಹರಾಜು ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದ್ದು, ಹಳೇ ಕಬ

ಸಾರ್ವಜನಿಕರ ತೆರಿಗೆ ಹಣವನ್ನು ಜ್ಞಾನಾರ್ಜನೆಗೆ ಬಳಸಬೇಕು ಪ್ರೊ ಕಾಳೇಗೌಡ ನಾಗವಾರ.
ಚನ್ನಪಟ್ಟಣ: ಸಾರ್ವಜನಿಕರ ತೆರಿಗೆ ಹಣವನ್ನು ಸರ್ಕಾರಗಳು ವಿದ್ಯಾಭ್ಯಾಸಕ್ಕೆ, ಆಸ್ಪತ್ರೆಗೆ, ಸಾರ್ವಜನಿಕರ ಮೂಲಭೂತ ಸೌಕರ್ಯಗಳಿಗೆ ಹಾಗೂ ಅಭಿವೃದ್ಧಿಗಾಗಿ ಬಳಸ

ಸುರಕ್ಷತೆ, ಕೌಶಲ್ಯ ಅಭಿವೃದ್ಧಿಗಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಮತ್ತು ಸರ್ಕಾರಿ ಟೂಲ್ ರೂಮ್ ಮತ್ತು ತರಬೇತಿ
ರಾಮನಗರ:ಜುಲೈ 25, 2023: ಸರ್ಕಾರಿ ಟೂಲ್ ರೂಮ್ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಅನ್ನು ಉತ್ಪಾದನಾ ಘಟಕಗಳು ಮತ್ತು ಮೊದಲ ಬಾರಿ ಉದ್ಯಮಿಗಳಿಗೆ ನುರಿತ ಮಾ
ಪ್ರತಿಕ್ರಿಯೆಗಳು