Tel: 7676775624 | Mail: info@yellowandred.in

Language: EN KAN

    Follow us :


ರಾಷ್ಟ್ರೀಯ ಸೇವಾ ಯೋಜನೆ ಎಂಬುದು ವಿದ್ಯಾರ್ಥಿಗಳಿಗೆ ಸುವರ್ಣವಕಾಶದ ಹೆಬ್ಬಾಗಿಲು

Posted date: 08 Aug, 2023

Powered by:     Yellow and Red

ರಾಷ್ಟ್ರೀಯ ಸೇವಾ ಯೋಜನೆ ಎಂಬುದು ವಿದ್ಯಾರ್ಥಿಗಳಿಗೆ ಸುವರ್ಣವಕಾಶದ ಹೆಬ್ಬಾಗಿಲು

ಚನ್ನಪಟ್ಟಣ: ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಎಂದರೆ ಹಲವಾರು ವಿದ್ಯಾರ್ಥಿಗಳು ಮೂಗು ಮುರಿಯುತ್ತಾರೆ, ಕಸಕಡ್ಡಿ ಶೇಖರಣೆ, ಚರಂಡಿ ಸ್ವಚ್ಚತೆ, ಕೆರೆ-ಕಟ್ಟೆ ಶುಚಿಗೊಳಿಸುವುದು ಎಂದಷ್ಟೇ ಕೆಲವು ವಿದ್ಯಾರ್ಥಿಗಳು ತಿಳಿದುಕೊಂಡಿದ್ದಾರೆ, ಹೆಚ್ಚೆಂದರೆ ಶಿಸ್ತು ಅಷ್ಟೇ ಎಂದು ತಿಳಿದುಕೊಂಡಿರುವುದು ಸರಿಯಲ್ಲಾ. ಇವೆಲ್ಲವೂ ಪ್ರತಿ ವಿದ್ಯಾರ್ಥಿಗಳಿಗೂ ಸುವರ್ಣವಕಾಶ ಎಂದು ಕೊಂಡು ಮುಂದುವರಿಯಬೇಕು. ಸಮಾಜದ ಅರಿವು, ಕಷ್ಟಗಳ ಪರಿಚಯ, ಕಲೆಗಳ ಜೊತೆ ಬೆರೆಯುವುದರಿಂದ ನಮಗೆ ಜೀವನದ ಪಾಠ ಕಲಿಸುತ್ತದೆ, ಹಾಗಾಗಿ ರಕ್ತ ಸಂಬಂಧಕ್ಕಿಂತ ಮಿಗಿಲಾದ ಬಾಂಧವ್ಯದಲ್ಲಿ ಒಂದಾದ 

ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯದ ಜೊತೆಗೆ ಅನುಭವವೂ ಆಗಿದೆ.

 

ರಕ್ತ ಸಂಬಂಧಗಳನ್ನೂ ಮೀರಿದ ಬಂಧವಿದು, 

ಯಾವ ಬಿಂದುವಿನಲ್ಲಿ ಬಂಧಿಸಿದರೂ

ಚಾಚಿ ತೋಳುಗಳನ್ನು ಬಿಗಿದಪ್ಪಿ ಕೊಳ್ಳುವುದೇ ಎನ್ಎಸ್ಎಸ್ ಶಿಬಿರಗಳು.

"ನಮ್ಮ ಪ್ರೀತಿ ನೋವುಗಳನ್ನು ತನ್ನದೆಂದು 

ಕೈಯ ಹಿಡಿದು ಹೆಜ್ಜೆ ಬೆಸೆದು 

ಮುಂದೆ ಮುಂದೆ ನಡೆವ ಎಂದು”

  ಇದು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರುಗಳಿಗೆ ಭಾವನಾತ್ಮಕವಾಗಿ ಆತ್ಮೀಯವಾದ  ಸಾಹಿತ್ಯವಾಗಿದೆ. ಎನ್ಎಸ್ಎಸ್ ಕೇವಲ ಒಂದು ಯೋಜನೆಯಾಗಿರದೆ. ಒಂದು ಸುಂದರ ಸಂಬಂಧಗಳನ್ನು ಸೃಷ್ಟಿಸುವ ತಾಣವಾಗಿದೆ. ಎಲ್ಲಾ ಸ್ವಯಂ ಸೇವಕರುಗಳು ಸ್ನೇಹ ಸಂಬಂಧದಲ್ಲಿ ಬಂಧಿಯಾಗಿ ಕೂಡು ಕುಟುಂಬದಂತೆ  ಜೊತೆಯಾಗಿ ಬೆಸೆಯುತ್ತಾರೆ. ಪ್ರತಿಭೆಗಳಿಗೆ ತಕ್ಕ ಅವಕಾಶವನ್ನು ಸೃಷ್ಟಿಸುವ ಮಹಾ ಮನೆಯಾಗಿರುವ ಎನ್ಎಸ್ಎಸ್ ಒಂದು ಅವಿಭಕ್ತ ಕುಟುಂಬದಂತೆ ಬೆಳೆದು ನಿಂತಿದೆ.


“ಆಕಾಶದಲ್ಲಿ ಹೊಳೆಯುವ ನಕ್ಷತ್ರಗಳಿಗಿಂತ ಕೈಯಲ್ಲಿರುವ ಹಣತೆ ಹೆಚ್ಚು ಬೆಳಕು ನೀಡುತ್ತದೆ” . ಹಾಗೆಯೇ ನಾವು ಅತೀ ಎತ್ತರದ ಆದರ್ಶ ವ್ಯಕ್ತಿಗಳನ್ನು ಅನುಸರಿಸುವುದು ಸ್ವಲ್ಪ ಕಷ್ಟ. ಆದರೆ ನಮ್ಮ ಸುತ್ತ ಮುತ್ತಲೇ ಅಗಾಧ ಸ್ಪೂರ್ತಿಯ ಚಿಲುಮೆಯಾಗಿರುವ ವ್ಯಕ್ತಿತ್ವಗಳು ಕಾಣಸಿಗುತ್ತಾರೆ. ಎನ್ಎಸ್ಎಸ್ ಕೂಡ ಅಪಾರ ಸ್ಪೂರ್ತಿಯ ಚಿಲುಮೆಗಳನ್ನು ಹೊಂದಿರುವ ತಾಣವಾಗಿದೆ. ಸ್ವಯಂ ಸೇವಕರುಗಳ ಪ್ರತಿಭೆ, ಸೇವಾ ಮನೋಭಾವ, ಕಲಾ ಕೌಶಲ, ಸಮಯ ಪ್ರಜ್ಞೆ, ಶಿಸ್ತು ಹಾಗೂ ಸಮರ್ಪಣಾ ಭಾವದಂತಹ ನೈತಿಕ ಮೌಲ್ಯಗಳು ಇತರ ವಿದ್ಯಾರ್ಥಿಗಳಿಗೂ ಸಹ ಪ್ರೇರೇಪಣೆ ನೀಡುತ್ತವೆ, ವಿಶೇಷವಾಗಿ ನಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರುಗಳು, ಎನ್ಎಸ್ಎಸ್ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಮೊದಲಿಗರಾಗಿರುವುದು ನಮ್ಮ ಕಾಲೇಜಿನ ಹೆಮ್ಮೆಯಾಗಿದೆ.


ಎನ್ಎಸ್ಎಸ್ ಶಿಬಿರಗಳಿಂದ ರಾಷ್ಟ್ರ, ರಾಜ್ಯಮಟ್ಟದಲ್ಲಿ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಭಾಗವಹಿಸುವ ಅವಕಾಶ, ಯೂತ್ ಫೆಸ್ಟ್, ನ್ಯಾಷನಲ್ ಇಂಟಿಗ್ರೇಷನ್ ಶಿಬಿರಗಳು, ವಾರ್ಷಿಕ ವಿಶೇಷ ಶಿಬಿರಗಳು, ವಿಶೇಷ ಉಪನ್ಯಾಸ ಕೇಳುವುದು, ಹೀಗೆ ಅನೇಕ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸದಾವಕಾಶ ದೊರೆಯುತ್ತದೆ. ನಮ್ಮ ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿಗಳಾದ ಮಹೇಶ್ ಹಾಗೂ ಆಲಿಯಾ ತಾಜ್ ಎಂಬ ವಿದ್ಯಾರ್ಥಿಗಳು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಭಾಗವಹಿಸುವ ಮೂಲಕ ನಮ್ಮ ಕಾಲೇಜಿನ ಗರಿಮೆಯನ್ನಷ್ಟೇ ಅಲ್ಲದೇ ತಾಲ್ಲೂಕು ಹಾಗೂ ಜಿಲ್ಲೆಯ ಗೌರವವನ್ನು ಹೆಚ್ಚಿಸಿದ್ದಾರೆ.


ಎನ್ಎಸ್ಎಸ್ ಕೇವಲ ಶಿಸ್ತು ಹಾಗೂ ಸೇವೆಗೆ ಮಾತ್ರ ಸೀಮಿತವಾಗಿರದೆ, ಜಾನಪದ ಕಲೆಗಳ ಉಳಿವಿನಲ್ಲೂ ಮಹತ್ವದ ಪಾತ್ರ ವಹಿಸುತ್ತದೆ. ‘ಹಳೆ ಬೇರು ಹೊಸ ಚಿಗುರು’ ಎಂಬ ನಾಣ್ಣುಡಿಯಂತೆ ಭಾರತೀಯ ಸಂಸ್ಕೃತಿಯ ತಳಹದಿಯಾದ ಜಾನಪದ ಕಲೆಗಳನ್ನು ವಿಭಿನ್ನವಾಗಿ ಅಭಿವ್ಯಕ್ತಗೊಳಿಸುವಲ್ಲಿ ಎನ್ಎಸ್ಎಸ್ ವಿಶಿಷ್ಟ ಮಾರ್ಗವಾಗಿ ರೂಪುಗೊಂಡಿದೆ. ಕಾಲಾಂತರದ ತೀವ್ರತೆಗೆ ಹುದುಗಿಹೋಗಿ ಎಲೆ ಮರೆ ಕಾಯಿಯಾಗಿ, ಹಿಂದೆ ಸರಿಯುತ್ತಿದ್ದಾಗ ಅವುಗಳ ಸಾರವನ್ನು ಅರಿತು, ತನ್ನ ಸ್ವಯಂಸೇವಕರ ಸೈನ್ಯದೊಂದಿಗೆ  ದೀಪದಂತೆ ಉಜ್ವಲವಾಗಿ ಪ್ರಜ್ವಲಿಸುವಂತೆ ಮಾಡುತ್ತಿದೆ ಎನ್ಎಸ್ಎಸ್ ಶಿಬಿರಗಳು.


ಕಲೆ ಎಂಬುದು ಪ್ರತಿ ಮನುಷ್ಯನಿಗೂ ಅತ್ಯವಶ್ಯಕ, ಕಲೆಯ ಬೆಲೆ ಅರಿತರೆ ಸಮಾಜದಲ್ಲಿ ಹೇಗೆ ಬದುಕುಬೇಕೆಂಬ ಅರಿವು ಮೂಡುತ್ತದೆ. ಇಂತಹ ಜಾನಪದ ಕಲೆಗಳನ್ನು ಭವಿಷ್ಯದ ಪ್ರಜ್ಞಾವಂತ ಯುವಕರಿಗೆ ಕಲಿಸಲಾಗುತ್ತದೆ. ನಮ್ಮದೇ ನೆಲದ ಮಣ್ಣಿನ ಕಲೆಗಳನ್ನು ಮಣ್ಣಿನ ಮಕ್ಕಳು ಬಹಳ ಶ್ರದ್ಧೆಯಿಂದ ಅಭ್ಯಾಸ ಮಾಡಿ ಕಾರ್ಯಕ್ರಮಗಳಲ್ಲಿ ಅಮೋಘವಾಗಿ  ಪ್ರದರ್ಶನ ನೀಡುತ್ತಾರೆ. ದೀಪ ಬೆಳಗಲು ಎಣ್ಣೆಯ ಅವಶ್ಯಕವಿದ್ದಂತೆ ಜಾನಪದ ಕಲೆಯೆಂಬ ದೀಪ ಬೆಳಗಲು ಅದಕ್ಕೆ ಶಕ್ತಿ ನೀಡುವ ಎಣ್ಣೆಯ ರೀತಿ ಎನ್ಎಸ್ಎಸ್ ತನ್ನದೇ ಆದ ಕೊಡುಗೆ ನೀಡುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ನಮ್ಮ ಕಾಲೇಜು ಮಹತ್ತರ ಹೆಜ್ಜೆಯನ್ನಿಟ್ಟಿತು. ಜೂನ್ 27 ರಂದು  ’ಜಾನಪದ ಕಲೋತ್ಸವ ' ಎಂಬ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿ ರಾಜ್ಯದ ಇಡೀ ವಿಶ್ವವಿದ್ಯಾಲಯ ಗಳನ್ನು ಆಹ್ವಾನಿಸಿ ಹಲವು ಪ್ರತಿಭೆಗಳ ಅನಾವರಣದ ಜೊತೆಗೆ ಜಾನಪದ ಕಲೆಗಳನ್ನು ವಿಜೃಂಭಿಸುವ ಸುಂದರ ಹಬ್ಬದಂತೆ  ಸಂಭ್ರಮಿಸಲಾಯಿತು.


  ಇತರ ರಾಷ್ಟೀಯ ಸೇವಾ ಯೋಜನೆಗಳ ಮಧ್ಯೆ ನಮ್ಮ ಕಾಲೇಜಿನ ಎನ್ಎಸ್ಎಸ್ ಶಿಬಿರಗಳು ವಿಭಿನ್ನವಾಗಿ ಹಾಗೂ ವಿಶಿಷ್ಟವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿರುವುದು ಎನ್ಎಸ್ಎಸ್ ನ ಕಾರ್ಯಕ್ರಮಗಳ ಅಧಿಕಾರಿಗಳಾದಂತಹ  ಶ್ರೀಕಾಂತ್ ಎನ್. ಹಾಗೂ ನಂಜುಂಡ .ಆರ್. ಅವರಿಂದ. ಇವರಿಬ್ಬರು ಕಾಲೇಜಿನ ಕೀರ್ತಿ ಕಳಸವಾಗಿದ್ದಾರೆ. ಎಲ್ಲಾ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಿದ್ದು, ವಿದ್ಯಾರ್ಥಿಗಳನ್ನು ನಕ್ಷತ್ರ ಗಳ ರೀತಿ ಮಿನುಗುವಂತೆ ಮಾಡುವಲ್ಲಿ ಈ ಅಧಿಕಾರಿಗಳ ಪಾತ್ರ ಅವಿಸ್ಮರಣೀಯವಾಗಿದೆ.


ನಮ್ಮ ಕಾಲೇಜಿನಲ್ಲಿ ಒಂದು ವಿಶಾಲ ವೃಕ್ಷದಂತೆ ಬೆಳೆದು ನಿಂತಿರುವ ಎನ್ಎಸ್ಎಸ್ ಅದ್ಭುತ ಜಾನಪದ ಪ್ರತಿಭೆಗಳ ಗಣಿಯೂ ಆಗಿದೆ . ಎನ್ಎಸ್ಎಸ್ ಹಳ್ಳಿಯಿಂದ ದಿಲ್ಲಿಯವರೆಗೆ ಪ್ರತಿಭೆಗಳನ್ನು ಹಾಗೂ ಜಾನಪದ ಕಲೆಗಳನ್ನು ಪೋಷಿಸಿ, ಮುನ್ನಡೆಸಿ ಬೆಳೆಸುವ ಪಾಲಕನಾಗಿದೆ. ಪ್ರತಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡರೆ ವಿದ್ಯಾರ್ಥಿಗಳ ಭವಿಷ್ಯದ ಬದುಕು ಬಂಗಾರವಾಗುತ್ತದೆ.

                                                                   -- -ಅನ್ನಪೂರ್ಣ ಎಂ,  ಪತ್ರಿಕೋದ್ಯಮ ವಿದ್ಯಾರ್ಥಿನಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚನ್ನಪಟ್ಟಣ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in channapatna »

ಅಬಿದಾಬಾನು ಸದಸ್ಯತ್ವವನ್ನು ರದ್ದುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸುತ್ತೇನೆ, ವಾಸೀಲ್ ಅಲಿಖಾನ್
ಅಬಿದಾಬಾನು ಸದಸ್ಯತ್ವವನ್ನು ರದ್ದುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸುತ್ತೇನೆ, ವಾಸೀಲ್ ಅಲಿಖಾನ್

ಚನ್ನಪಟ್ಟಣ: ಸಭೆ ಮುಗಿಸಿ ಹೊರಬಂದಾಗ ನನ್ನ ಮೇಲೆ ನಗರಸಭೆ ಆವರಣದಲ್ಲೇ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 28ನೇ ವಾರ್ಡ್ ನಗರಸಭೆ ಸದಸ್ಯೆ ಅಬಿದಾ

ಆರೋಪಿ ಸುಹೇಲ್ ಪರವಾಗಿ ಕರ್ತವ್ಯ ನಿರತ ಪೋಲಿಸರ ಮೇಲೆ ಹಲ್ಲೆ ನಡೆಸಿದ ಗೆಳತಿ ಭಾನುಪ್ರಿಯಾ
ಆರೋಪಿ ಸುಹೇಲ್ ಪರವಾಗಿ ಕರ್ತವ್ಯ ನಿರತ ಪೋಲಿಸರ ಮೇಲೆ ಹಲ್ಲೆ ನಡೆಸಿದ ಗೆಳತಿ ಭಾನುಪ್ರಿಯಾ

ಚನ್ನಪಟ್ಟಣ: ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯ ವಾಸೀಲ್ ಅಲಿಖಾನ್ ಮತ್ತು ಅಬಿದಾಬಾನು ರವರ ನಡುವೆ ವಾಗ್ವಾದ ನಡೆದಿತ್ತು. ಅದೇ ದಿನ ನಗರಸಭೆ ಆವರಣದಲ್ಲಿ

ಪರಸ್ಪರರ ವಿರುದ್ಧ ನಗರಸಭೆ ಸದಸ್ಯರ ದೂರು
ಪರಸ್ಪರರ ವಿರುದ್ಧ ನಗರಸಭೆ ಸದಸ್ಯರ ದೂರು

ಚನ್ನಪಟ್ಟಣ: ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರಿಬ್ಬರ ನಡುವೆ ನಡೆದ ಮಾತಿನ ಚಕಮಕಿಯ ನಂತರ ಹೊರ ಆವರಣದಲ್ಲಿ ಗಲಾಟೆ ಮಾಡಿಕೊಂಡಿದ್ದು, ಸದಸ್ಯರುಗಳ ಜೊತೆಗೆ

ಅನ್ನಭಾಗ್ಯ ಅಕ್ಕಿ ಕಳವು, ಆಡಳಿತ ಮಂಡಳಿ ಸದಸ್ಯರನ್ನು ಬಂಧಿಸಬೇಕು, ಕುಮಾರಸ್ವಾಮಿ ಹೊಣೆ ಹೊರಬೇಕು ಗಂಗಾಧರ್
ಅನ್ನಭಾಗ್ಯ ಅಕ್ಕಿ ಕಳವು, ಆಡಳಿತ ಮಂಡಳಿ ಸದಸ್ಯರನ್ನು ಬಂಧಿಸಬೇಕು, ಕುಮಾರಸ್ವಾಮಿ ಹೊಣೆ ಹೊರಬೇಕು ಗಂಗಾಧರ್

ಚನ್ನಪಟ್ಟಣ: ನಗರದ ಟಿಎಪಿಸಿಎಂಎಸ್ ಗೋದಾಮಿನಲ್ಲಿ ೧,೬೦೦ ಕ್ವಿಂಟಾಲ್ ಅನ್ನಭಾಗ್ಯ ದ ಅಕ್ಕಿ ಕಳವು ಆಗಿದ್ದು, ಇದಕ್ಕೆ ಯಾರೋ ಒಬ್ಬ ಗುಮಾಸ್ತನನ್ನು ಬಂಧಿಸುವುದ

ನಗರಸಭೆ ನೂತನ ಉಪಾಧ್ಯಕ್ಷರಾಗಿ ಜೆಡಿಎಸ್‍ನ ನಿಗಾರ್ ಬೇಗಂ ಅವಿರೋಧವಾಗಿ ಆಯ್ಕೆಯಾದರು
ನಗರಸಭೆ ನೂತನ ಉಪಾಧ್ಯಕ್ಷರಾಗಿ ಜೆಡಿಎಸ್‍ನ ನಿಗಾರ್ ಬೇಗಂ ಅವಿರೋಧವಾಗಿ ಆಯ್ಕೆಯಾದರು

ಚನ್ನಪಟ್ಟಣ: ಹಿಂದಿನ ಉಪಾಧ್ಯಕ್ಷೆ ಹಸೀನಾ ಫರ್ಹೀನ್ ರಾಜೀನಾಮೆಯಿಂದ ತೆರವಾಗಿದ್ದ ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಚುನಾ

ಸರ್ಕಾರದ ಹಣ ದುರುಪಯೋಗ ಮಾಡಬೇಡಿ, ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ ಕುಮಾರಸ್ವಾಮಿ
ಸರ್ಕಾರದ ಹಣ ದುರುಪಯೋಗ ಮಾಡಬೇಡಿ, ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ ಕುಮಾರಸ್ವಾಮಿ

ಚನ್ನಪಟ್ಟಣ: ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಬರದ ಛಾಯೆ ಆವರಿಸಿದೆ, ನಮ್ಮ ಚನ್ನಪಟ್ಟಣ ತಾಲೂಕು ಇದರಿಂದ ಹೊರತಾಗಿಲ್ಲ. ನನ್ನ ಕ್ಷೇತ್ರ ಸೇರಿದಂತೆ ರಾ

ಸಂಸದರು ರಸ್ತೆ ಗುಂಡಿಗಳನ್ನು ಮುಚ್ಚಿಸಲಿ  ಸಾಕು, ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯ
ಸಂಸದರು ರಸ್ತೆ ಗುಂಡಿಗಳನ್ನು ಮುಚ್ಚಿಸಲಿ ಸಾಕು, ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯ

 ಚನ್ನಪಟ್ಟಣ, ನ.೦೬: ಜನಸಂಪರ್ಕ ಸಭೆ ಹೆಸರಲ್ಲಿ ಅಧಿಕಾರಿಗಳನ್ನು ಬೆದರಿಸುವ ಸಂಸದರಿಗೆ ಸಾತನೂರು ಸರ್ಕಲ್ ರಸ್ತೆಯ ಗುಂಡಿಗಳು ಕಾಣಲಿಲ್ಲವೇ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಕ್ಷೇತ್ರದ ಶಾಸಕರಾದ ಹೆಚ್.

೧೨೨ ಅರ್ಜಿಗಳು, ಇನ್ನೂರಕ್ಕು ಹೆಚ್ಚು ಮಂದಿ ಭಾಗಿ, ನಗರದಲ್ಲಿ ಯಶಸ್ವಿಯಾದ ಜನತಾ ದರ್ಶನ
೧೨೨ ಅರ್ಜಿಗಳು, ಇನ್ನೂರಕ್ಕು ಹೆಚ್ಚು ಮಂದಿ ಭಾಗಿ, ನಗರದಲ್ಲಿ ಯಶಸ್ವಿಯಾದ ಜನತಾ ದರ್ಶನ

ಚನ್ನಪಟ್ಟಣ: ಸ್ಥಳೀಯ ಸಮಸ್ಯೆಗಳನ್ನು ಸಾರ್ವಜನಿಕರು ಸ್ಥಳದಲ್ಲಿಯೇ ಬಗೆಹರಿಸಿಕೊಳ್ಳಬೇಕು, ಗ್ರಾಪಂ, ತಾಪಂ, ನಗರಡಾಳಿತ, ತಹಶಿಲ್ದಾರರ ಕಛೇರಿಗೆ ಸಂಬಂಧಿಸಿದ ಸ

ಗೋಮಾಳದಲ್ಲಿ ಶೆಡ್ ನಿರ್ಮಿಸಿದ ವಸತಿ ರಹಿತರನ್ನು ಒಕ್ಕಲೆಬ್ಬಿಸಿದ ಬಲಾಢ್ಯರು, ರೈತಸಂಘ ಆರೋಪ
ಗೋಮಾಳದಲ್ಲಿ ಶೆಡ್ ನಿರ್ಮಿಸಿದ ವಸತಿ ರಹಿತರನ್ನು ಒಕ್ಕಲೆಬ್ಬಿಸಿದ ಬಲಾಢ್ಯರು, ರೈತಸಂಘ ಆರೋಪ

ಚನ್ನಪಟ್ಟಣ: ತಾಲ್ಲೂಕಿನ ಭೈರಾಪಟ್ಟಣ ಗ್ರಾಮದಲ್ಲಿರುವ ಸರ್ಕಾರಿ ಗೋಮಾಳದಲ್ಲಿ ಮನೆ ಇಲ್ಲದ ನಾಲ್ಕು ಮಂದಿ ಖಾಲಿ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡಿದ್ದು,

ವಳಗೆರೆದೊಡ್ಡಿ ಎಂಪಿಸಿಎಸ್ ನೂತನ ಅಧ್ಯಕ್ಷರಾಗಿ ಶಂಕರ್
ವಳಗೆರೆದೊಡ್ಡಿ ಎಂಪಿಸಿಎಸ್ ನೂತನ ಅಧ್ಯಕ್ಷರಾಗಿ ಶಂಕರ್

ಚನ್ನಪಟ್ಟಣ: ತಾಲೂಕಿನ ವಳಗೆರೆದೊಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪತ್ರಕರ್ತ ಆರ್. ಶಂಕರ್‍ಅವರು ಅವಿರೋಧವಾಗಿ ಆಯ್ಕೆಯಾದರು.

Top Stories »  


Top ↑