ಸಮಾಜ ಸೇವಕ ಕೆ ಜಿ ಕೃಷ್ಣ ಪರ, ಉನ್ನತ ಪೋಲಿಸ್ ಅಧಿಕಾರಿಗಳ ವಿರುದ್ದ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಚನ್ನಪಟ್ಟಣ: ಮೂಲತಃ ಹುಲಿಯೂರುದುರ್ಗದ ಸಮಾಜ ಸೇವಕ, ದಾನಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಕೆ ಜಿ ಕೃಷ್ಣ ರವರಿಗೆ ಉನ್ನತ ಪೋಲೀಸ್ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಜೆಡಿಎಸ್ ಪಕ್ಷದ ಹಲವಾರು ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸಹಸ್ರಾರು ಸಂಖ್ಯೆಯಲ್ಲಿ ಒಗ್ಗೂಡಿ ಬೃಹತ್ ಪ್ರತಿಭಟನೆ ನಡೆಸಿದರು.
ಪೊಲೀಸ್ ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗಿರುವ ರವಿಕಾಂತೇಗೌಡ ಹಾಗೂ ಮತ್ತೋರ್ವ ಅಧಿಕಾರಿಯಾದ ಯು.ಡಿ.ಕೃಷ್ಣಕುಮಾರ್ ವಿರುದ್ಧ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದರು.
ಸಾವಿರಾರು ಸಂಘಟನಕಾರರು ಪಟ್ಟಣದ ಗಾಂಧಿ ಭವನದಿಂದ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ತಾಲೂಕು ದಂಡಾಧಿಕಾರಿ ಮಹೇಂದ್ರ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ, ಕೂಡಲೆ ಅವರನ್ನು ಹುದ್ದೆಯಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ರಾಜ್ಯಾಪಾಲರು. ಮುಖ್ಯಮಂತ್ರಿಗಳು. ಹಾಗೂ ಗೃಹ ಸಚಿವರಿಗೆ ಅಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಉದ್ಯಮಿ. ಸಮಾಜ ಸೇವಕ ಕೆ.ಜಿ.ಕೃಷ್ಣ ವಿರುದ್ದ ಇಲ್ಲ ಸಲ್ಲದ ಅರೋಪ ಮಾಡುವ ಮೂಲಕ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಕೆ.ಜಿ.ಕೃಷ್ಣ ವಿರುದ್ದ ಕಿರುಕುಳ ನೀಡುತ್ತಿದ್ದು, ಅವರನ್ನು ರೌಡಿ ಶೀಟರ್ ಪಟ್ಟಿಯಲ್ಲಿ ಸೇರಿಸುವ ಮೂಲಕ ಅವರಿಗೆ ಅವಮಾನ ಮಾಡಲು ಮುಂದಾಗಿರುವ ಈ ಅಧಿಕಾರಿಗಳು ದಕ್ಷ, ಪ್ರಾಮಾಣಿಕತೆಯ ಇಲಾಖೆ ಎಂದು ಹೆಸರು ವಾಸಿಯಾಗಿರುವ ಪೊಲೀಸ್ ಇಲಾಖೆಗೆ ಕಳಂಕ ತರುತ್ತಿದ್ದಾರೆ. ಇಂತಹವರನ್ನು ಕೂಡಲೆ ಅಮಾನತ್ತುಗೊಳಿಸಿ. ಈ ಪ್ರಕರಣವನ್ನು ಸಿಬಿಐಗೆ ವಹಿಸಿ, ಉನ್ನತ ಮಟ್ಟದಲ್ಲಿ ತನಿಖೆ ನಡೆಸುವ ಮೂಲಕ ಸತ್ಯಾಸತ್ಯತೆ ಹೊರಬರುವ ಮೂಲಕ ಭ್ರಷ್ಟ ಅಧಿಕಾರಿಗಳ ಮುಖವಾಡ ಕಳಚುವಂತಾಗಲಿ ಎಂದು ಆಗ್ರಹಿಸಿದರು.
ಸಾವಿರಾರು ಮಂದಿ ಪ್ರತಿಭಟನಕಾರರು ಹಾಗೂ ಅವರ ಅಭಿಮಾನಿಗಳು ಕೆ.ಜಿ.ಕೃಷ್ಣ ಅವರ ಪರವಾಗಿ ಮತ್ತು ಪೊಲೀಸ್ ಇಲಾಖೆಯ ಭ್ರಷ್ಠ ಅಧಿಕಾರಿಗಳ ವಿರುದ್ದ ಘೋಷಣೆಗಳನ್ನು ಕೂಗುವ ಮೂಲಕ ಸಮಾಜದಲ್ಲಿ ಗೌರವಯುತವಾಗಿ ನಡೆಯುತ್ತಿರುವವರ ವಿರುದ್ಧ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಇಂತಹ ಅಧಿಕಾರಿಗಳಿಂದ ಬಡ ವರ್ಗದ ಮತ್ತು ಸಾಮಾನ್ಯ ವರ್ಗದವರಿಗೆ ಯಾವ ನ್ಯಾಯ ಸಿಗಬಹುದು ಎಂದು ಪ್ರಶ್ನೆ ಮಾಡುತ್ತ ಧಿಕ್ಕಾರ ಧಿಕ್ಕಾರ ಎಂದು ಕೂಗುವ ಮೂಲಕ ಕೂಡಲೆ ಭ್ರಷ್ಠ ಅಧಿಕಾರಿಗಳ ವಿರುದ್ಧ ತನಿಖೆ ಆಗಲೆ ಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಹೆಚ್.ಸಿ.ಜಯಮುತ್ತು. ಮುಖಂಡರಾದ ಗೋವಿಂದಹಳ್ಳಿ ನಾಗರಾಜು, ಕುಕ್ಕೂರುದೊಡ್ಡಿ ಜಯರಾಮು, ಬಿಜೆಪಿ ಮುಖಂಡರಾದ ಜಯರಾಮು, ಆನಂದಸ್ವಾಮಿ, ಮುದಗೆರೆ ಜಯಕುಮಾರ್, ಸುರೇಶ್, ಮಳೂರುಪಟ್ಟಣ ರವಿ, ಆತ್ಮರಾಮ್, ಮೇಹರೀಶ್(ಮನು), ಕ.ಜ.ವೇ.ಜಿಲ್ಲಾಧ್ಯಕ್ಷ ಯೋಗೇಶ್‌ಗೌಡ, ಮೈಲನಾಯಕನಹಳ್ಳಿ ಸಾಗರ್, ಮಹಿಳಾ ಮುಖಂಡರಾದ ಬಿಂದುಶ್ರೀ, ರೇಖಾ ಉಮಾಶಂಕರ್, ಸೇರಿದಂತೆ ಎಲ್ಲಾ ಸಂಘಟನೆಯ ಪದಾಧಿಕಾರಿಗಳು, ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
*ಒತ್ತಾಯದ ಬೇಡಿಕೆಗಳು:*
ಐಪಿಎಸ್ ಅಧಿಕಾರಿ ರವಿಕಾಂತೇಗೌಡರ ವಿರುದ್ಧ ಸಿಬಿಐ ತನಿಖೆಗೆ ಅದೇಶಿಸಬೇಕು. ಭ್ರಷ್ಟ ಅಧಿಕಾರಿ ಯು.ಡಿ.ಕೃಷ್ಣಕುಮಾರ್.ಅವರನ್ನು ವಜಾಗೊಳಿಸಿ ಅವರ ವಿರುದ್ಧ ತನಿಖೆಗೆ ಅದೇಶಿಸಬೇಕು. ರೌಡಿ ಶೀಟರ್ ಬೆಮೆಲ್ ಕಾಂತರಾಜು ಅವರನ್ನು ಕೂಡಲೇ ಬಂಧಿಸಬೇಕು. ಸಮಾಜ ಸೇವೆ.ಕೆ.ಜಿ.ಕೃಷ್ಣ ಅವರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಬೇಕು. ಕೂಡಲೆ ಕರ್ನಾಟಕ ಸರ್ಕಾರ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ.ದಾಖಲಿಸಿ ಸಬಿಐ ನಿಂದ ತನಿಖೆಗೆ ಅದೇಶಿಸ ಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in channapatna »

ಅಬಿದಾಬಾನು ಸದಸ್ಯತ್ವವನ್ನು ರದ್ದುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸುತ್ತೇನೆ, ವಾಸೀಲ್ ಅಲಿಖಾನ್
ಚನ್ನಪಟ್ಟಣ: ಸಭೆ ಮುಗಿಸಿ ಹೊರಬಂದಾಗ ನನ್ನ ಮೇಲೆ ನಗರಸಭೆ ಆವರಣದಲ್ಲೇ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 28ನೇ ವಾರ್ಡ್ ನಗರಸಭೆ ಸದಸ್ಯೆ ಅಬಿದಾ

ಆರೋಪಿ ಸುಹೇಲ್ ಪರವಾಗಿ ಕರ್ತವ್ಯ ನಿರತ ಪೋಲಿಸರ ಮೇಲೆ ಹಲ್ಲೆ ನಡೆಸಿದ ಗೆಳತಿ ಭಾನುಪ್ರಿಯಾ

ಪರಸ್ಪರರ ವಿರುದ್ಧ ನಗರಸಭೆ ಸದಸ್ಯರ ದೂರು
ಚನ್ನಪಟ್ಟಣ: ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರಿಬ್ಬರ ನಡುವೆ ನಡೆದ ಮಾತಿನ ಚಕಮಕಿಯ ನಂತರ ಹೊರ ಆವರಣದಲ್ಲಿ ಗಲಾಟೆ ಮಾಡಿಕೊಂಡಿದ್ದು, ಸದಸ್ಯರುಗಳ ಜೊತೆಗೆ

ಅನ್ನಭಾಗ್ಯ ಅಕ್ಕಿ ಕಳವು, ಆಡಳಿತ ಮಂಡಳಿ ಸದಸ್ಯರನ್ನು ಬಂಧಿಸಬೇಕು, ಕುಮಾರಸ್ವಾಮಿ ಹೊಣೆ ಹೊರಬೇಕು ಗಂಗಾಧರ್
ಚನ್ನಪಟ್ಟಣ: ನಗರದ ಟಿಎಪಿಸಿಎಂಎಸ್ ಗೋದಾಮಿನಲ್ಲಿ ೧,೬೦೦ ಕ್ವಿಂಟಾಲ್ ಅನ್ನಭಾಗ್ಯ ದ ಅಕ್ಕಿ ಕಳವು ಆಗಿದ್ದು, ಇದಕ್ಕೆ ಯಾರೋ ಒಬ್ಬ ಗುಮಾಸ್ತನನ್ನು ಬಂಧಿಸುವುದ

ನಗರಸಭೆ ನೂತನ ಉಪಾಧ್ಯಕ್ಷರಾಗಿ ಜೆಡಿಎಸ್‍ನ ನಿಗಾರ್ ಬೇಗಂ ಅವಿರೋಧವಾಗಿ ಆಯ್ಕೆಯಾದರು
ಚನ್ನಪಟ್ಟಣ: ಹಿಂದಿನ ಉಪಾಧ್ಯಕ್ಷೆ ಹಸೀನಾ ಫರ್ಹೀನ್ ರಾಜೀನಾಮೆಯಿಂದ ತೆರವಾಗಿದ್ದ ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಚುನಾ

ಸರ್ಕಾರದ ಹಣ ದುರುಪಯೋಗ ಮಾಡಬೇಡಿ, ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ ಕುಮಾರಸ್ವಾಮಿ
ಚನ್ನಪಟ್ಟಣ: ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಬರದ ಛಾಯೆ ಆವರಿಸಿದೆ, ನಮ್ಮ ಚನ್ನಪಟ್ಟಣ ತಾಲೂಕು ಇದರಿಂದ ಹೊರತಾಗಿಲ್ಲ. ನನ್ನ ಕ್ಷೇತ್ರ ಸೇರಿದಂತೆ ರಾ

ಸಂಸದರು ರಸ್ತೆ ಗುಂಡಿಗಳನ್ನು ಮುಚ್ಚಿಸಲಿ ಸಾಕು, ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯ
ಚನ್ನಪಟ್ಟಣ, ನ.೦೬: ಜನಸಂಪರ್ಕ ಸಭೆ ಹೆಸರಲ್ಲಿ ಅಧಿಕಾರಿಗಳನ್ನು ಬೆದರಿಸುವ ಸಂಸದರಿಗೆ ಸಾತನೂರು ಸರ್ಕಲ್ ರಸ್ತೆಯ ಗುಂಡಿಗಳು ಕಾಣಲಿಲ್ಲವೇ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಕ್ಷೇತ್ರದ ಶಾಸಕರಾದ ಹೆಚ್.

೧೨೨ ಅರ್ಜಿಗಳು, ಇನ್ನೂರಕ್ಕು ಹೆಚ್ಚು ಮಂದಿ ಭಾಗಿ, ನಗರದಲ್ಲಿ ಯಶಸ್ವಿಯಾದ ಜನತಾ ದರ್ಶನ
ಚನ್ನಪಟ್ಟಣ: ಸ್ಥಳೀಯ ಸಮಸ್ಯೆಗಳನ್ನು ಸಾರ್ವಜನಿಕರು ಸ್ಥಳದಲ್ಲಿಯೇ ಬಗೆಹರಿಸಿಕೊಳ್ಳಬೇಕು, ಗ್ರಾಪಂ, ತಾಪಂ, ನಗರಡಾಳಿತ, ತಹಶಿಲ್ದಾರರ ಕಛೇರಿಗೆ ಸಂಬಂಧಿಸಿದ ಸ

ಗೋಮಾಳದಲ್ಲಿ ಶೆಡ್ ನಿರ್ಮಿಸಿದ ವಸತಿ ರಹಿತರನ್ನು ಒಕ್ಕಲೆಬ್ಬಿಸಿದ ಬಲಾಢ್ಯರು, ರೈತಸಂಘ ಆರೋಪ
ಚನ್ನಪಟ್ಟಣ: ತಾಲ್ಲೂಕಿನ ಭೈರಾಪಟ್ಟಣ ಗ್ರಾಮದಲ್ಲಿರುವ ಸರ್ಕಾರಿ ಗೋಮಾಳದಲ್ಲಿ ಮನೆ ಇಲ್ಲದ ನಾಲ್ಕು ಮಂದಿ ಖಾಲಿ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡಿದ್ದು,

ವಳಗೆರೆದೊಡ್ಡಿ ಎಂಪಿಸಿಎಸ್ ನೂತನ ಅಧ್ಯಕ್ಷರಾಗಿ ಶಂಕರ್
ಚನ್ನಪಟ್ಟಣ: ತಾಲೂಕಿನ ವಳಗೆರೆದೊಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪತ್ರಕರ್ತ ಆರ್. ಶಂಕರ್‍ಅವರು ಅವಿರೋಧವಾಗಿ ಆಯ್ಕೆಯಾದರು.
ಪ್ರತಿಕ್ರಿಯೆಗಳು