Tel: 7676775624 | Mail: info@yellowandred.in

Language: EN KAN

    Follow us :


ಅಂಗಾಂಶ ಬಾಳೆ ಹಗರಣ: ರೈತಸಂಘದಿಂದ ಪ್ರತಿಭಟನೆ ಜಂಟಿ ನಿರ್ದೇಶಕರಿಗೆ ಗಡುವು

Posted date: 22 Sep, 2022

Powered by:     Yellow and Red

ಅಂಗಾಂಶ ಬಾಳೆ ಹಗರಣ: ರೈತಸಂಘದಿಂದ ಪ್ರತಿಭಟನೆ ಜಂಟಿ ನಿರ್ದೇಶಕರಿಗೆ ಗಡುವು

ಚನ್ನಪಟ್ಟಣ: ತಾಲ್ಲೂಕಿನಲ್ಲಿ ಸರಿಸುಮಾರು ಒಂದೂವರೆ ಸಾವಿರ ರೈತರ ಹೆಸರಿನಲ್ಲಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ. ತೋಟಗಾರಿಕಾ ಇಲಾಖೆಯ ವ್ಯಾಪ್ತಿಯಲ್ಲಿ ನಡೆದಿರುವ ಅಂಗಾಂಶ ಬಾಳೆ ಹಗರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸಲು ಆಗ್ರಹಿಸಿ ಸಮಾನ ಮನಸ್ಕರ ಸಹಭಾಗಿತ್ವದ ರಾಜ್ಯ ರೈತಸಂಘದ ಕಾರ್ಯಕರ್ತರು ನಗರದ ತೋಟಗಾರಿಕಾ ಕಚೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಿದರು.


ನಗರದ ಮಂಜುನಾಥ ನಗರದ ಚಾನಲ್ ರಸ್ತೆಯಲ್ಲಿರುವ ತೋಟಗಾರಿಕಾ ಕಚೇರಿಯ ಮುಂಭಾಗ ನಡೆದ ಹೋರಾಟವನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ರೈತಹೋರಾಟಗಾರ ಅರಳಾಳುಸಂದ್ರ ಗ್ರಾಮದ ಸಿ.ಪುಟ್ಟಸ್ವಾಮಿ, ನರೇಗಾಯೋಜನೆ ಮೂಲಕ ಅಂಗಾಂಶ ಬಾಳೆ ಅಭಿವೃದ್ಧಿ ಮಾಡುವ ಯೋಜನೆಯಲ್ಲಿ ಎಂಟು ಕೋಟಿ ರೂಪಾಯಿಗೂ ಹೆಚ್ಚು ಅವ್ಯವಹಾರ ನಡೆದಿದೆ. ಕೋಟಿ ಕೋಟಿ ಹಣ ದುರ್ಬಳಕೆಯಾಗಿದ್ದು ತಕ್ಷಣ ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.


ತಾಲೂಕಿನಲ್ಲಿ 2020-21ನೇ ಸಾಲಿನಲ್ಲಿ ಸಾವಿರಾರು ಮಂದಿಗೆ ಬಾಳೆ ಬೆಳೆಯಲು ನರೇಗಾದಲ್ಲಿ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಸಾಕಷ್ಟು ಮಂದಿ ರೈತರ ಹೆಸರಿನಲ್ಲಿ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ನಕಲಿ ಬಿಲ್ ಸೃಷ್ಟಿಸಿ ಹಣ ಪಡೆಯಲಾಗಿದೆ. ಕೆಲ ರೈತರಿಗೆ ಮಾಹಿತಿಯೇ ನೀಡದಂತೆ ಹಣ ಪಡೆದಿದ್ದರೆ, ಕೆಲ ರೈತರಿಗೆ ನಂಬಿಸಿ ಕೋಟ್ಯಾಂತರ ರೂ. ಹಣ ದುರ್ಬಳಕೆ ಮಾಡಿದ್ದಾರೆ. ಇದರಲ್ಲಿ ಅಧಿಕಾರಿಗಳೇ ನೇರಹೊಣೆಗಾರರು ಎಂದು ಆರೋಪಿಸಿದರು.


ತಾಲ್ಲೂಕಿನಾದ್ಯಂತ ಅಂಗಾಂಶ ಬಾಳೆಯ ಯೋಜನೆಯ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ತಪ್ಪಿತಸ್ಥ ಅಧಿಕಾರಿಗಳನ್ನು ಗುರುತಿಸಿ ಅವರನ್ನೇ ಹೊಣೆಯಾಗಿಸಿ ನಷ್ಟ ಭರ್ತಿಮಾಡುವ ಕೆಲಸ ಮಾಡಬೇಕು. ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ಅಧಿಕಾರಿಗಳನ್ನು ಅಮಾನತ್ತು ಗೊಳಿಸಬೇಕು ಎಂದು ಆಗ್ರಹಿಸಿದರು.


ಅಂಗಾಂಶ ಬಾಳೆಗೆ ನರೇಗಾದಿಂದ ಬಿಡುಗಡೆಯಾಗಿರುವ ಅನುದಾನದಲ್ಲಿ ಸಾಕಷ್ಟು ಲೋಪ ನಡೆದಿದೆ. ರೈತರು ಬಾಳೆ ಬೆಳೆಯದಿದ್ದರೂ ಅವರ ಹೆಸರಿನಲ್ಲಿ ದಾಖಲೆ ಸೃಷ್ಟಿಸಿ ಹಣ ನೀಡಲಾಗಿದೆ ಎಂದು ಇಲಾಖೆ ನಡೆಸಿರುವ ರ್ಯಾಂಡಮ್ ತನಿಖೆಯಲ್ಲಿ ಸಾಬೀತಾಗಿದೆ. ಈ ವರದಿ ಇದ್ದರೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಮೀನಾಮೇಷ ಯಾಕೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.


ತಾಲೂಕಿನಲ್ಲಿ ನರೇಗಾ ಯೋಜನೆಯಡಿಯಲ್ಲಿ ಅಂಗಾಂಶ ಬಾಳೆ ಬೆಳೆದಿರುವ ರೈತರ ಜಮೀನಿನುಗಳನ್ನು ಸಮಗ್ರವಾಗಿ ಪರಿಶೀಲನೆ ಮಾಡಬೇಕು. ಇದಕ್ಕಾಗಿ ಉನ್ನತ ಮಟ್ಟದ ತಂಡ ರಚಿಸಬೇಕು. ತಪ್ಪಿತಸ್ಥ ಅಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇದಕ್ಕೆ ಸಹಕಾರ ನೀಡಿರುವ ಹಿರಿಯ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸ ಬೇಕು ಎಂದು ಪಟ್ಟು ಹಿಡಿದರು.


*ನಾಲ್ಕು ವಿಶೇಷ ತಂಡ ರಚನೆ:* ಪ್ರತಿಭಟನಾಕಾರರನ್ನುದ್ದೇಶಿ ಮಾತನಾಡಿದ ತೋಟಗಾರಿಕಾ ಇಲಾಖೆ ಜಂಟಿನಿರ್ದೇಶಕ  ವಿಶ್ವನಾಥ್, ನಿಮ್ಮ ಒತ್ತಾಯದ ಬಗ್ಗೆ ನಿರ್ದೇಶಕರಿಗೆ ಮಾಹಿತಿ ನೀಡುತ್ತೇನೆ. ಕೂಡಲೇ ನಾಲ್ಕು ತನಿಖಾ ತಂಡಗಳನ್ನು ರಚಿಸುವಂತೆ ಶಿಫಾರಸ್ಸು ಮಾಡುತ್ತೇನೆ. ಹೊರಭಾಗದ ಅಧಿಕಾರಿಗಳ ತಂಡವನ್ನು ರಚಿಸಿ ತನಿಖೆಯನ್ನು ನಡೆಸಲಾಗುವುದು. ಶೇ.40 ರಷ್ಟು ಫಲಾನುಭವಿಗಳ ಜಮೀನಿಗೆ ಭೇಟಿಮಾಡಿ ಪರಿಶೀಲನೆ ನಡೆಸಲಾಗುವುದು. ತನಿಖಾ ವರದಿ ಬಂದ ಬಳಿಕ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಇಲಾಖೆಗೆ ಕನಿಷ್ಟ ಒಂದು ತಿಂಗಳು ಕಾಲಾವಕಾಶ ನೀಡಬೇಕು ಎಂದು ತಿಳಿಸಿದರು.


ಪ್ರತಿಭಟನೆಯಲ್ಲಿ  ರೈತಸಂಘದ ಮುಖಂಡರಾದ ಶಿವಕುಮಾರ್ ಸೀಬನಹಳ್ಳಿ, ಹೊಂಬಾಳೇಗೌಡ, ಮೆಂಗಳ್ಳಿ ಮಹೇಶ್, ದೇವಣ್ಣ, ಉಜ್ಜನಹಳ್ಳಿ ಮಲ್ಲಿಕಾರ್ಜುನ್, ದೇವರಾಜು ಸೇರಿದಂತೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.


ಸನ್ಮಿತ್ರ ಅವರಿಂದ ಸಂಬಂಧಿತ ವೀಡಿಯೊಗಳು


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in channapatna »

ಚನ್ನಪಟ್ಟಣಕ್ಕೆ ಬಂದ ಗಾಂಧಿ ಮತ್ತು ಭವನದ ಹೋರಾಟ ಕುರಿತು ಲೇಖನಕ್ಕೆ ಆಹ್ವಾನ
ಚನ್ನಪಟ್ಟಣಕ್ಕೆ ಬಂದ ಗಾಂಧಿ ಮತ್ತು ಭವನದ ಹೋರಾಟ ಕುರಿತು ಲೇಖನಕ್ಕೆ ಆಹ್ವಾನ

ಚನ್ನಪಟ್ಟಣ.ಸೆ.೨೯:  ನಗರದ ಗಾಂಧಿ ಸ್ಮಾರಕ ಭವನದ ಹೋರಾಟ ಕುರಿತು ಒಂದು ಕಿರು ಹೊತ್ತಿಗೆಯನ್ನು ತರುವ ಪ್ರಯತ್ನ ನಡೆದಿದೆ. ಇದರಲ್ಲಿ ಬಹಳ ಮು

ಮುದಗೆರೆ ಮತ್ತು ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ನ್ಯಾಯಾಧೀಶರು
ಮುದಗೆರೆ ಮತ್ತು ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ನ್ಯಾಯಾಧೀಶರು

ಚನ್ನಪಟ್ಟಣ.ಸೆ.೩೦: ನಗರದ ಸಾರ್ವಜನಿಕ ಆಸ್ಪತ್ರೆ ಮತ್ತು ಮುದಗೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಾಲ್ಲೂಕು ನ್ಯಾಯಾಲಯದ ಸಿವಿಲ್ ಮತ್ತ

ನಿಷ್ಠಾವಂತರಿಗೆ ಜೆಡಿಎಸ್ ಪಕ್ಷದಲ್ಲಿ ಸ್ಥಾನವಿಲ್ಲ ಅರಳಾಳುಸಂದ್ರ ಶಿವಪ್ಪ ಆರೋಪ
ನಿಷ್ಠಾವಂತರಿಗೆ ಜೆಡಿಎಸ್ ಪಕ್ಷದಲ್ಲಿ ಸ್ಥಾನವಿಲ್ಲ ಅರಳಾಳುಸಂದ್ರ ಶಿವಪ್ಪ ಆರೋಪ

ಚನ್ನಪಟ್ಟಣ: ರಾಜ್ಯ ಜೆಡಿಎಸ್ ಪಕ್ಷ ಸೇರಿದಂತೆ, ತಾಲ್ಲೂಕು ಜೆಡಿಎಸ್‍ನಲ್ಲಿಯೂ ಸಹ ನಿಷ್ಠಾವಂತ ಮುಖಂಡರು, ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ

ನಗರಸಭೆಯ ಸಾಮಾನ್ಯ ಸಭೆಯ ಆರಂಭದಲ್ಲೇ ಆಡಳಿತ ವಿರೋಧ ಪಕ್ಷಗಳ ನಡುವೆ ವಾಕ್ಸಮರ
ನಗರಸಭೆಯ ಸಾಮಾನ್ಯ ಸಭೆಯ ಆರಂಭದಲ್ಲೇ ಆಡಳಿತ ವಿರೋಧ ಪಕ್ಷಗಳ ನಡುವೆ ವಾಕ್ಸಮರ

ಚನ್ನಪಟ್ಟಣ: ಕುಡಿಯುವ ನೀರಿನ ಬಾಟಲ್ ಗಳು, ಹ್ಯಾಂಡ್ ಮೈಕ್ ಮತ್ತು ತಮ್ಮ ಕೈ ಮೂಲಕ ಟೇಬಲ್ ಗಳನ್ನು ಗುದ್ದಿ, ನಗರಸಭೆಯ ಅಜೆಂಡಾ ಪತ್ರಗಳನ್ನು ಎಸೆದ

ನಗರದ ಎಸ್ ಆರ್ ಟೆಕ್ಸ್ ಟೈಲ್ಸ್ ರೇಷ್ಮೆ ನೂಲು ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಕೇಂದ್ರದ ರಾಜ್ಯ ಸಚಿವೆ
ನಗರದ ಎಸ್ ಆರ್ ಟೆಕ್ಸ್ ಟೈಲ್ಸ್ ರೇಷ್ಮೆ ನೂಲು ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಕೇಂದ್ರದ ರಾಜ್ಯ ಸಚಿವೆ

ಚನ್ನಪಟ್ಟಣ: ಜಿಲ್ಲೆಯಲ್ಲೇ ಹೆಸರುವಾಸಿಯಾದ ನಗರದ ಎಲೆಕೇರಿಯಲ್ಲಿರುವ ಖಾಸಗಿ ಒಡೆತನದ ಎಸ್.ಆರ್. ಟೆಕ್ಸ್ ಟೈಲ್ ರೇಷ್ಮೆ ನೂಲು ಉತ್ಪಾದನಾ ಘಟಕಕ್ಕೆ

ಅಂಗಾಂಶ ಬಾಳೆ ಹಗರಣ: ರೈತಸಂಘದಿಂದ ಪ್ರತಿಭಟನೆ ಜಂಟಿ ನಿರ್ದೇಶಕರಿಗೆ ಗಡುವು
ಅಂಗಾಂಶ ಬಾಳೆ ಹಗರಣ: ರೈತಸಂಘದಿಂದ ಪ್ರತಿಭಟನೆ ಜಂಟಿ ನಿರ್ದೇಶಕರಿಗೆ ಗಡುವು

ಚನ್ನಪಟ್ಟಣ: ತಾಲ್ಲೂಕಿನಲ್ಲಿ ಸರಿಸುಮಾರು ಒಂದೂವರೆ ಸಾವಿರ ರೈತರ ಹೆಸರಿನಲ್ಲಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ. ತೋಟಗಾರಿಕಾ ಇಲಾಖೆಯ ವ್ಯಾಪ್ತಿ

ಅಪ್ಪ ಮಕ್ಕಳಿಗೆ ಗೇದು ಮೊಮ್ಮಕ್ಕಳಿಗೂ ಗೆಯ್ಯಲೇ! ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಜೆಡಿಎಸ್ ಮುಖಂಡ ಸಿಂಗರಾಜಿಪುರ ರಾಜಣ್ಣ
ಅಪ್ಪ ಮಕ್ಕಳಿಗೆ ಗೇದು ಮೊಮ್ಮಕ್ಕಳಿಗೂ ಗೆಯ್ಯಲೇ! ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಜೆಡಿಎಸ್ ಮುಖಂಡ ಸಿಂಗರಾಜಿಪುರ ರಾಜಣ್ಣ

ಚನ್ನಪಟ್ಟಣ: ಕುಮಾರಸ್ವಾಮಿಯವರೇ ದೇವೇಗೌಡ ಅಪ್ಪಾಜಿ ಯಂತಹ ಮಹಾನ್ ವ್ಯಕ್ತಿಯ ಹೊಟ್ಟೆಯಲ್ಲಿ ಯಾಕೆ ಹುಟ್ಟಿದಿರಿ ! ದೇವೇಗೌಡರಿಗೂ ಗೇದಿದ್ದೀವಿ, ನಿ

ಸ್ವತಃ ಪೊರಕೆ ಹಿಡಿದು ಕಸ ಗುಡಿಸುವ ಮೂಲಕ ಸ್ವಚ್ಚ ಸೇವಾ ಅಭಿಯಾನಕ್ಕೆ ಚಾಲನೆ ನೀಡಿದ ಸಿಇಓ
ಸ್ವತಃ ಪೊರಕೆ ಹಿಡಿದು ಕಸ ಗುಡಿಸುವ ಮೂಲಕ ಸ್ವಚ್ಚ ಸೇವಾ ಅಭಿಯಾನಕ್ಕೆ ಚಾಲನೆ ನೀಡಿದ ಸಿಇಓ

ಚನ್ನಪಟ್ಟಣ: ರಾಮನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ದಿಗ್ವಿಜಯ್ ಬೋಡ್ಕೆ ರವರು ಸ್ವಚ್ಛತೆಯ ಸೇವೆ ಎಂಬ ಅಭಿಯಾನದ ಅಂಗವಾ

ಜಲಾವೃತಗೊಂಡಿದ್ದ ತಟ್ಟೆಕೆರೆ ಶಾಲೆಗೆ ಡಿಸಿ, ಸಿಇಓ ಭೇಟಿ
ಜಲಾವೃತಗೊಂಡಿದ್ದ ತಟ್ಟೆಕೆರೆ ಶಾಲೆಗೆ ಡಿಸಿ, ಸಿಇಓ ಭೇಟಿ

ಚನ್ನಪಟ್ಟಣ: ನಗರದ 20ನೇ ವಾರ್ಡ್ ನ ಸರ್ಕಾರಿ ಶಾಲೆಯ ಹೊರಾಂಗಣ ಮತ್ತು ಒಳಾಂಗಣ ತುಂಬಾ ತಗ್ಗು ಪ್ರದೇಶದಲ್ಲಿ ಇರುವುದರಿಂದ, ಚರಂಡಿಯು ಮೇಲಿದ್ದು,

ಗಿಡ ನೆಡುವುದಷ್ಟೇ ಮುಖ್ಯವಲ್ಲಾ ನೆಟ್ಟ ಗಿಡಗಳನ್ನು ಕಾಪಾಡಿ ಮರಮಾಡುವುದು ಮುಖ್ಯ ಡಿವೈಎಸ್ಪಿ ಓಂಪ್ರಕಾಶ್
ಗಿಡ ನೆಡುವುದಷ್ಟೇ ಮುಖ್ಯವಲ್ಲಾ ನೆಟ್ಟ ಗಿಡಗಳನ್ನು ಕಾಪಾಡಿ ಮರಮಾಡುವುದು ಮುಖ್ಯ ಡಿವೈಎಸ್ಪಿ ಓಂಪ್ರಕಾಶ್

ಚನ್ನಪಟ್ಟಣ: ಗಿಡಗಳನ್ನು ನೆಡುವಷ್ಟೇ ಕಾತುರ ಮರವಾಗುವ ತನಕ ಇರಬೇಕು. ಆ ಕೆಲಸವನ್ನು ಡಾ ಮಲವೇಗೌಡರು ಮಾಡುತಿದ್ದಾರೆ. ಅವರು ಮತ್ತು ಅವರ ತಂಡದವರಿಗ

Top Stories »  


Top ↑