Tel: 7676775624 | Mail: info@yellowandred.in

Language: EN KAN

    Follow us :


ಪ್ರತಿನಿತ್ಯ ನಗರ ಸ್ವಚ್ಚತೆ ಮಾಡುವ ಪೌರಕಾರ್ಮಿಕರು ಆರೋಗ್ಯದ ಕಡೆ ಗಮನ ನೀಡಬೇಕು, ರಮೇಶ್

Posted date: 11 Oct, 2023

Powered by:     Yellow and Red

ಪ್ರತಿನಿತ್ಯ ನಗರ ಸ್ವಚ್ಚತೆ ಮಾಡುವ ಪೌರಕಾರ್ಮಿಕರು ಆರೋಗ್ಯದ ಕಡೆ ಗಮನ ನೀಡಬೇಕು, ರಮೇಶ್

ಚನ್ನಪಟ್ಟಣ: ಮನೆಮನೆಯ ಕಸ ಪಡೆದು, ವಿಂಗಡಿಸಿ ವಿಲೇವಾರಿ ಮಾಡುವ ಹಾಗೂ ಪ್ರತಿ ಮನೆಯ ಮುಂಭಾಗವು ಸ್ವಚ್ಚತೆ ಮಾಡಿ, ನಗರದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪ್ರತಿನಿತ್ಯ ಶ್ರಮಿಸುವ ಪೌರಕಾರ್ಮಿಕರು ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್ ತಿಳಿಸಿದರು.


ನಗರದ ಪುರಭವನದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಗರವನ್ನು ಸ್ವಚ್ಛಗೊಳಿಸಿ ನಾಗರೀಕರ ಸ್ವಾಸ್ಥ್ಯ ಕಾಪಾಡುವ ಪೌರಕಾರ್ಮಿಕರು ತಮ್ಮ ಆರೋಗ್ಯದ ಕುರಿತು ಗಮನ ಹರಿಸಬೇಕು. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಪೌರಕಾರ್ಮಿಕರು ಹಾಗೂ ಆವರ ಕುಟುಂಬದ ಆರೋಗ್ಯ ತಪಾಸಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.


ಪೌರಕಾರ್ಮಿಕರು ಒಂದು ದಿನ ಕೆಲಸ ಮಾಡದಿದ್ದಲ್ಲಿ ನಗರದ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಊಹಿಸುವುದು ಕಷ್ಟ. ಆದ್ದರಿಂದ ಸರ್ಕಾರ ಪೌರಕಾರ್ಮಿಕರಿಗೆ ನೀಡಿರುವ ಸೌಲಭ್ಯಗಳನ್ನು ಅವರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯ ಎಂದರು. ಪೌರಕಾರ್ಮಿಕರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಯೋಜನೆಗಳನ್ನು ಪೌರಕಾರ್ಮಿಕರಿಗೆ ತಲುಪಿಸಲು ಅಧಿಕಾರಿಗಳು ಬದ್ಧತೆ ಪ್ರದರ್ಶಿಸಬೇಕು. ಉಳಿದಿರುವ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದು.


ಪೌರಕಾರ್ಮಿಕರ ಕುಟುಂಬದ ಹಿತದೃಷ್ಟಿಯಿಂದ ಅವರಿಗೆ ವಿಮಾ ಸೌಲಭ್ಯವನ್ನು ಕಲ್ಪಿಸಲಾಗಿದೆ. ಮನೆ ನಿರ್ಮಿಸಿಕೊಡುವ  ಕುರಿತು ಪೌರಕಾರ್ಮಿಕರು ಬೇಡಿಕೆ ಸಲ್ಲಿಸಿದ್ದಾರೆ. ಪೌರಕಾರ್ಮಿಕರು ನಗರ ಪ್ರದೇಶದಲ್ಲಿ ಕೆಲಸ ಮಾಡುವುದರಿಂದ ಅವರಿಗೆ ಎಲ್ಲೋ ದೂರದಲ್ಲಿ ನಿವೇಶನ ನೀಡಿದರೆ ಪ್ರಯೋಜನವಿಲ್ಲ. ನಗರಕ್ಕೆ ಹತ್ತಿರವಿರುವ ಪ್ರದೇಶದಲ್ಲಿ ಸರ್ಕಾರಿ ಜಾಗ ಗುರುತಿಸಿದರೆ, ಮನೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.


ಸರ್ಕಾರ ಮ್ಯಾನುವೆಲ್ ಸ್ಕ್ಯಾವೆಂಜಿನ್‍ಗೆ ಮಾನವ ಬಳಕೆಯನ್ನು  ಈಗಾಗಲೇ ನಿಷೇಧಿಸಿದೆ. ಆದರೆ, ಅದನ್ನು ಸರ್ಕಾರ ಆದೇಶವನ್ನು ಮೀರಿ ಪೌರಕಾರ್ಮಿಕರು ಶೌಚ ಗುಂಡಿಯನ್ನು ಸ್ವಚ್ಛ ಮಾಡುತ್ತಿರುವುದು ಕಂಡುಬಂದಿದೆ. ಯಾವುದೇ ಕಾರಣಕ್ಕೂ ಪೌರಕಾರ್ಮಿಕರು ಶೌಚ ಗುಂಡಿ ಸ್ವಚ್ಛಗೊಳಿಸಲು ಇಳಿಯಬಾರದು. ಇಂಥ ಪ್ರಕರಣ ಕಂಡು ಬಂದರೆ ಅಂಥ ಪೌರಕಾರ್ಮಿಕರ ಜತೆಗೆ ಅಧಿಕಾರಿಗಳು ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.


ಚನ್ನಪಟ್ಟಣದ ಕಸ ಸಮಸ್ಯೆಗೆ ಮುಕ್ತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ತಾಲೂಕಿನ ಬ್ರಹ್ಮಣೀಪುರದ ಬಳಿ ಕಸದ ಡಂಪಿಂಗ್‍ಗೆ 10 ಎಕರೆ ಜಾಗ ಗುರುತಿಸಲಾಗಿದೆ. ಆದಷ್ಟು ಬೇಗ ಜಾಗವನ್ನು ನಗರಸಭೆ ಸುಪರ್ಧಿಗೆ ವಹಿಸುವಂತೆ ತಹಸೀಲ್ದಾರ್ ರವರಿಗೆ ಸೂಚಿಸಲಾಗಿದೆ. ಜಾಗ ನೀಡದಿದ್ದಲ್ಲಿ ನಿಮ್ಮ ವಿರುದ್ಧವೇ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಎಚ್ಚರಿಕೆ ನೀಡಲಾಗಿದೆ. ಇದರ ಜತೆಗೆ ತಗಚಗೆರೆ ಹಾಗೂ ವಂದರಾಗುಪ್ಪೆ ಬಳಿ ಇರುವ ಜಾಗವನ್ನು ಬಳಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.


ಇದೇ ವೇಳೆ ಶೌಚ ಗುಂಡಿ ಸ್ವಚ್ಛತೆಗೆ ಮಾನವ ಬಳಕೆಗೆ ಮುಂದಾಗದ ಕುರಿತು ಪೌರಕಾರ್ಮಿಕರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಮೆರವಣಿಗೆ ಮೂಲಕ ನಗರಸಭೆಯಿಂದ ಅಂಬೇಡ್ಕರ್ ಪ್ರತಿಮೆವರೆಗೂ ತೆರಳಿ ಮಾಲಾರ್ಪಣೆ ಮಾಡಲಾಯಿತು. ಪೌರಕಾರ್ಮಿಕರಿಗಾಗಿ ಆಯೋಜಿಸಿದ್ದ ಕ್ರೀಡೆಗಳಲ್ಲಿ ವಿಜಯ ಸಾಧಿಸಿದವರಿಗೆ ಬಹುಮಾನ ನೀಡಲಾಯಿತು, ಆಯಾಯ ವಿಭಾಗಗಳಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿದ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಪೌರಾಯುಕ್ತ ಸಿ.ಪುಟ್ಟಸ್ವಾಮಿ, ನಗರಸಭೆ ಅಧ್ಯಕ್ಷ ಪ್ರಶಾಂತ್, ನೇರಪಾವತಿದಾರ ಗುತ್ತಿಗೆ ಕಾರ್ಮಿಕರ ರಾಜ್ಯಾಧ್ಯಕ್ಷ ಎಂ ಬಿ ನಾಗಣ್ಣಗೌಡ, ಸದಸ್ಯರಾದ ಮಂಜುನಾಥ್, ವಾಸೀಲ್ ಅಲಿಖಾನ್, ರಫೀಕ್, ಮಹದೇವ, ಸತೀಶ್ ಬಾಬು, ಸುಮಾರವೀಶ್, ಜಯಮಾಲ, ಸರ್ವಮಂಗಳ ಲೋಕೇಶ್, ಮಂಗಳಮ್ಮ, ಪೌರಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ನಾಗರಾಜು, ಜಿಲ್ಲಾ ಮತ್ತು ತಾಲ್ಲೂಕು ಅದ್ಯಕ್ಷರು ಮತ್ತು ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in channapatna »

ಎಂ. ರಾಜು ರವರ ಭೂಶಾಂತಿ ಕಾರ್ಯಕ್ಕೆ ಆಗಮಿಸುವಂತೆ, ಕುಟುಂಬದವರ ಮನವಿ
ಎಂ. ರಾಜು ರವರ ಭೂಶಾಂತಿ ಕಾರ್ಯಕ್ಕೆ ಆಗಮಿಸುವಂತೆ, ಕುಟುಂಬದವರ ಮನವಿ

ಚನ್ನಪಟ್ಟಣ: ತಾಲ್ಲೂಕಿನ ಮತ್ತಿಕೆರೆ-ಶೆಟ್ಟಿಹಳ್ಳಿ ನಿವಾಸಿ, ರಾಮನಗರ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾಗಿದ್ದ, ದಿವಂಗತ ಎಂ.

ಮತ್ತೀಕೆರೆ ಗ್ರಾಪಂಗೆ ನೂತನ ಅಧ್ಯಕ್ಷರಾದ ಯಶವಂತಗೌಡ
ಮತ್ತೀಕೆರೆ ಗ್ರಾಪಂಗೆ ನೂತನ ಅಧ್ಯಕ್ಷರಾದ ಯಶವಂತಗೌಡ

ಚನ್ನಪಟ್ಟಣ:ತಾಲೂಕಿನ ಮತ್ತೀಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಂ.ಎಸ್.ಯಶವಂತಗೌಡ (ಯತೀಶ್) ಅವಿರೋಧ ಅಯ್ಕೆಯಾಗಿದ್ದಾರೆ. 

ನಗರ ಸಭೆಯಲ್ಲಿ ಪ್ರಥಮ ಪ್ರಜೆ ಮತ್ತು ಪೌರಾಯುಕ್ತರ ನಡುವೆ ತಾರಕಕ್ಕೇರಿದ ಮುಸುಕಿನ ಗುದ್ದಾಟ, ತನಿಖೆಗೆ ಆದೇಶಿಸಿದ ಡಿ.ಸಿ. ತನಿಖಾ ತಂಡ ಆಗಮನ
ನಗರ ಸಭೆಯಲ್ಲಿ ಪ್ರಥಮ ಪ್ರಜೆ ಮತ್ತು ಪೌರಾಯುಕ್ತರ ನಡುವೆ ತಾರಕಕ್ಕೇರಿದ ಮುಸುಕಿನ ಗುದ್ದಾಟ, ತನಿಖೆಗೆ ಆದೇಶಿಸಿದ ಡಿ.ಸಿ. ತನಿಖಾ ತಂಡ ಆಗಮನ

ರಾಮನಗರ : ಚನ್ನಪಟ್ಟಣ: ನಗರಸಭೆಯಲ್ಲಿ ಕಳೆದ ಆರು ತಿಂಗಳುಗಳಿಂದ ನಗರದ ಪ್ರಥಮ ಪ್ರಜೆಯಾದ ಪ್ರಶಾಂತ್ ಮತ್ತು ಪೌರಾಯುಕ್ತ ಸಿ. ಪುಟ್ಟಸ್ವಾಮಿ ನಡುವಿನ ಸಂಘರ್ಷದ

ಸರ್ವರ ಬಾಳಿಗೂ ಸಂವಿಧಾನವೇ ಮೂಲ, ನ್ಯಾಯಾಧೀಶೆ ಶುಭಾ
ಸರ್ವರ ಬಾಳಿಗೂ ಸಂವಿಧಾನವೇ ಮೂಲ, ನ್ಯಾಯಾಧೀಶೆ ಶುಭಾ

ಚನ್ನಪಟ್ಟಣ: ಭಾರತದ ಪ್ರತಿಯೊಬ್ಬ ಪ್ರಜೆಯ ಹಕ್ಕುಗಳ ಮೂಲ ಸಂವಿಧಾನವೇ ಆಗಿದೆ, ಪ್ರತಿಯೊಬ್ಬರಿಗೂ ಸಂವಿಧಾನವೇ ಉಸಿರಾಗಬೇಕು ಎಂದು ನಗರದ ನ್ಯಾಯಾಲಯದ ಆವರ

ನಗರ ಸಿಪಿಐ ವರ್ಗಾವಣೆ, ನೂತನ ಸಿಪಿಐ ರವಿಕಿರಣ್
ನಗರ ಸಿಪಿಐ ವರ್ಗಾವಣೆ, ನೂತನ ಸಿಪಿಐ ರವಿಕಿರಣ್

  ಚನ್ನಪಟ್ಟಣ,ಫೆ:೧-ಲೋಕಸಭಾ ಚುನಾವಣೆಯ ಹೊಸ್ತಿಲಲ್ಲೇ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ  ಪರ್ವ ಪ್ರಾರಂಭವಾಗಿದ್ದು, ಅದಕ್ಕೆ ಪೂರಕ ವೆಂಬಂತ್ತೆ ನಗರ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಸಿ.ಪಿ.ಐ

ಯುವ ಪೀಳಿಗೆ ಹಕ್ಕು ಮತ್ತು ಕರ್ತವ್ಯ ಮರೆಯುತ್ತಿದೆ. ಮಂಜುನಾಥ್
ಯುವ ಪೀಳಿಗೆ ಹಕ್ಕು ಮತ್ತು ಕರ್ತವ್ಯ ಮರೆಯುತ್ತಿದೆ. ಮಂಜುನಾಥ್

ಚನ್ನಪಟ್ಟಣ: ಇಂದಿನ ವಿದ್ಯಾರ್ಥಿ ಸಮೂಹ ಹಾಗೂ ಯುವ ಪೀಳಿಗೆಯು ಹಕ್ಕು ಮತ್ತು ಕರ್ತವ್ಯಗಳನ್ನು ಮರೆಯುತ್ತಿದ್ದಾರೆ. ಸಂವಿಧಾನದ ಆಶಯಗಳಿಗೆ ಬದ್ದರಾಗುತ್ತಿಲ್ಲಾ

ಪ್ರಾಧಿಕಾರ ಅಧ್ಯಕ್ಷ ಸ್ಥಾನ ದಲಿತ ಸಮುದಾಯಕ್ಕೆ ನೀಡಿ ಮುಯ್ಯಿ ತೀರಿಸಿ, ಸರ್ಕಾರಕ್ಕೆ ಆಗ್ರಹ
ಪ್ರಾಧಿಕಾರ ಅಧ್ಯಕ್ಷ ಸ್ಥಾನ ದಲಿತ ಸಮುದಾಯಕ್ಕೆ ನೀಡಿ ಮುಯ್ಯಿ ತೀರಿಸಿ, ಸರ್ಕಾರಕ್ಕೆ ಆಗ್ರಹ

ಚನ್ನಪಟ್ಟಣ: ದಲಿತರು ದನಿಯಿಲ್ಲದ ಸಮುದಾಯ ಎಂಬಂತಾಗಿದೆ. ದಲಿತರಿಗೆ ಪ್ರತಿ ಹಂತದಲ್ಲೂ ಅನ್ಯಾಯವಾಗುತ್ತಿದೆ. ಅದು ತಾಲ್ಲೂಕಿನಲ್ಲಿಯೂ ಪ್ರತಿಬಿಂಬಿಸುತ್ತಿದೆ,

ಗವಿರಂಗಸ್ವಾಮಿ ಬೆಟ್ಟದಿಂದ ಜಿಗಿದು ಯುವಕ ಆತ್ಮಹತ್ಯೆ
ಗವಿರಂಗಸ್ವಾಮಿ ಬೆಟ್ಟದಿಂದ ಜಿಗಿದು ಯುವಕ ಆತ್ಮಹತ್ಯೆ

ಚನ್ನಪಟ್ಟಣ: ಜೀವನದಲ್ಲಿ ಜಿಗುಪ್ಸೆಗೊಂಡ ಬೆಂಗಳೂರಿನ ವಿವಾಹಿತನೋರ್ವ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ತಾಲ್ಲೂಕಿನ ಅಕ್ಕೂರು ಪೊಲೀಸ್

ರಾಮಂದಿರ ಪ್ರತಿ ಗ್ರಾಮದಲ್ಲಿಯೂ ಆಗಬೇಕೆಂಬುದು ಭಾರತೀಯರ ಆಸೆ, ಡಿ ಕೆ ಸುರೇಶ್
ರಾಮಂದಿರ ಪ್ರತಿ ಗ್ರಾಮದಲ್ಲಿಯೂ ಆಗಬೇಕೆಂಬುದು ಭಾರತೀಯರ ಆಸೆ, ಡಿ ಕೆ ಸುರೇಶ್

ಚನ್ನಪಟ್ಟಣ: ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣ ಸಮಸ್ತ ಭಾರತೀಯರ ಬಹು ದೊಡ್ಡ ಆಸೆಯಾಗಿದೆ.  ಒಬ್ಬರು ಒಂದು ಕಡೆ ಮಾತ್ರ ರಾಮಮಂದಿರ ನಿರ್ಮಾಣ ಮಾಡಬೇಕೆಂದು

ವಕೀಲ ಎಂ ಕೆ ನಿಂಗಪ್ಪ ರವರಿಂದ ಚಕ್ಕಲೂರು ಸರ್ಕಾರಿ ಶಾಲೆಗೆ ಪ್ರಿಂಟರ್ ಸ್ಕ್ಯಾನರ್ ಕೊಡುಗೆ
ವಕೀಲ ಎಂ ಕೆ ನಿಂಗಪ್ಪ ರವರಿಂದ ಚಕ್ಕಲೂರು ಸರ್ಕಾರಿ ಶಾಲೆಗೆ ಪ್ರಿಂಟರ್ ಸ್ಕ್ಯಾನರ್ ಕೊಡುಗೆ

ಚನ್ನಪಟ್ಟಣ : ೨೦೨೪ರ ನೂತನ ವರ್ಷದಾರಂಭ ಪ್ರಯುಕ್ತ ಸರ್ಕಾರಿ ಶಾಲಾ ಮಕ್ಕಳನ್ನು ಶೈಕ್ಷಣಿಕವಾಗಿ, ಕ್ರೀಡಾಶಕ್ತರಾಗಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಿ.ಕೆ.ಚಾ

Top Stories »  


Top ↑