Tel: 7676775624 | Mail: info@yellowandred.in

Language: EN KAN

    Follow us :


ನಗರಸಭೆಯ ಸಾಮಾನ್ಯ ಸಭೆಯ ಆರಂಭದಲ್ಲೇ ಆಡಳಿತ ವಿರೋಧ ಪಕ್ಷಗಳ ನಡುವೆ ವಾಕ್ಸಮರ

Posted date: 28 Sep, 2022

Powered by:     Yellow and Red

ನಗರಸಭೆಯ ಸಾಮಾನ್ಯ ಸಭೆಯ ಆರಂಭದಲ್ಲೇ ಆಡಳಿತ ವಿರೋಧ ಪಕ್ಷಗಳ ನಡುವೆ ವಾಕ್ಸಮರ

ಚನ್ನಪಟ್ಟಣ: ಕುಡಿಯುವ ನೀರಿನ ಬಾಟಲ್ ಗಳು, ಹ್ಯಾಂಡ್ ಮೈಕ್ ಮತ್ತು ತಮ್ಮ ಕೈ ಮೂಲಕ ಟೇಬಲ್ ಗಳನ್ನು ಗುದ್ದಿ, ನಗರಸಭೆಯ ಅಜೆಂಡಾ ಪತ್ರಗಳನ್ನು ಎಸೆದು ಏರು ಧ್ವನಿಯಲ್ಲಿ ನಿಂತು ವೇದಿಕೆ ಮೇಲಿದ್ದ ಸ್ಥಾಯಿ ಸಮಿತಿ ಅಧ್ಯಕ್ಷ ಮತ್ತು ಸದಸ್ಯರು ವಾಕ್ಸಮರ ನಡೆಸಿದರು. ನಗರಸಭೆಯ ಸಾಮಾನ್ಯ ಸಭೆ 

ಆರಂಭದಲ್ಲೇ ಆಡಳಿತ ಮತ್ತು ವಿರೋಧ ಪಕ್ಷಗಳ 

ನಡುವೆ ಆರಂಭವಾದ ಮಾತಿನ ಸಮರ ಒಂದು ಹಂತದಲ್ಲಿ ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಯಿತಾದರೂ ಅಧ್ಯಕ್ಷ ಪ್ರಶಾಂತ್ ಮತ್ತು ಪೌರಾಯುಕ್ತ ಸಿ ಪುಟ್ಟಸ್ವಾಮಿ ಎಲ್ಲರನ್ನೂ ಸಮಾಧಾನಪಡಿಸಿದರು.


ಇಲ್ಲಿನ ನಗರಸಭೆಯ ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷ ಪ್ರಶಾಂತ್ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ, ಜೆಡಿಎಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಅಜೆಂಡಾ ಪ್ರಕಾರವೇ ಚರ್ಚೆ ನಡೆಯಲಿ ಬೇರೆ ಯಾವ ವಿಚಾರ ಪ್ರಸ್ತಾಪವಾಗುವುದು ಬೇಡ ಎಂದು ಆಗ್ರಹಿಸಿದರು. ಇದಕ್ಕೆ ವಾಸೀಲ್ ಆಲಿಖಾನ್ ನನಗೆ ಹತ್ತು ನಿಮಿಷ 

ಮಾತನಾಡಲು ಅವಕಾಶ ನೀಡಿ ನಂತರ ಬೇರೆ ವಿಚಾರಗಳ ಚರ್ಚೆ ನಡೆಸಿ ಎಂದು ಆಗ್ರಹಿಸಿದರು. ಇದಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ಆಕ್ಷೇಪಿದರು. ಇದಕ್ಕೆ ಕೆರಳಿದ ವಾಸೀಲ್ ಮೈಕ್ ಕಿತ್ತೆಸೆದರು. ಇದಕ್ಕೆ ಇತರೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ದನಿಗೂಡಿಸಿ, ಎಲ್ಲಾ ವಿಚಾರಕ್ಕೂ ಸ್ಥಾಯಿ ಸಮಿತಿ ಅಧ್ಯಕ್ಷರೇಕೆ ಪ್ರತಿಕ್ರಿಯಿಸುತ್ತಾರೆ, ಅಧ್ಯಕ್ಷರು ಉತ್ತರ ನೀಡಲಿ ಎಂದು ಆಗ್ರಹಿಸಿದರು.


ಈ ವಿಚಾರ ವಿರೋಧ ಪಕ್ಷಗಳ ಸದಸ್ಯರ ನಡುವೆ 

ಮಾತಿನ ಸಮರಕ್ಕೆ ಕಾರಣವಾಯಿತು. ಒಂದು ಹಂತದಲ್ಲಿ ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಯಿತಾದರೂ ಮಧ್ಯ ಪ್ರವೇಶಿಸಿದ ನಗರಸಭೆ ಅಧ್ಯಕ್ಷ ಮತ್ತು ಪೌರಾಯುಕ್ತ ಪುಟ್ಟಸ್ವಾಮಿಎಲ್ಲರಿಗೂ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.


*ಪುರಭವನದ ವಿಚಾರಕ್ಕೆ ವಾಗ್ವಾದ:*

ನಗರಸಭೆ ಕಚೇರಿ ಮತ್ತು ಸಭಾಂಗಣ ತುಂಬಾ ಕಿರಿದಾಗಿರುವ ಕಾರಣ ಸುಲಲಿತ ಆಡಳಿತಕ್ಕೆ ಸಮಸ್ಯೆಯಾಗುತ್ತಿದೆ. ಸಭಾಂಗಣ ಚಿಕ್ಕದಾಗಿರುವ ಕಾರಣ ಸಭೆ ನಡೆಸುವುದು ಕಷ್ಟವಾಗಿದೆ. 

ಆದ್ದರಿಂದ ನಗರಸಭೆಯ ಆವರಣದಲ್ಲಿರುವ 

ಪುರಭವನದ ಕಟ್ಟಡ ಕೆಡವಿ ಅಲ್ಲಿ ಸುಸಜ್ಜಿತ ನೂತನ ನಗರಸಭೆ ಭವನ ಮತ್ತು ಸಭಾಂಗಣ ನಿರ್ಮಿಸಲು ಯೋಚಿಸಲಾಗಿದೆ ಎಂದು ಪೌರಾಯುಕ್ತ ಪುಟ್ಟಸ್ವಾಮಿ ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು 

ಪುರಭವನ ಪಾರಂಪರಿಕ ಕಟ್ಟಡವಾಗಿದ್ದು, ಮೈಸೂರು, ಬೆಂಗಳೂರು ಬಿಟ್ಟರೆ ಬೇರೆಲ್ಲೂ ಇಂಥ ಪುರಾತನ ಪುರಭವನದ ಕಟ್ಟಡವಿಲ್ಲ. ಆದ್ದರಿಂದ ಇದನ್ನು ಯಾವುದೇ ಕಾರಣಕ್ಕೂ ಕೆಡವಬಾರದು ಎಂದು ಆಗ್ರಹಿಸಿದರು.ಪುರಭವನವನ್ನು ಹಾಗೇ ಉಳಿಸಿಕೊಂಡು ಉಳಿದಿರುವ ಜಾಗದಲ್ಲಿ ಬೇಕಿದ್ದರೆ ನೂತನ ಕಟ್ಟಡ ನಿರ್ಮಿಸಿ. ಯಾವುದೇ ಕಾರಣಕ್ಕೂ ಕಟ್ಟಡ ಕೆಡವುದು ಬೇಡ. ಈ ವಿಚಾರವನ್ನು ಪಕ್ಕಕ್ಕಿಟ್ಟು ಬೇರೆ ವಿಚಾರ ಚರ್ಚಿಸಿ ಎಂದು ಆಗ್ರಹಿಸಿದರು.


ಧ್ವನಿ ಮತದ ಮೂಲಕ ಅನುಮತಿ ಪಡೆಯಲು 

ಪ್ರಯತ್ನ ನಡೆಸಲಾಯಿತಾದರೂ ಪುರಭವನದ ಕಟ್ಟಡ ಕೆಡುವುದು ಬೇಡ ಬೇಕಿದ್ದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಶೇಷ ಸಭೆ ಕರೆದು ವಿಸ್ತಾರವಾಗಿ ಚರ್ಚಿಸಿ ನಡೆಸಿ ತೀರ್ಮಾನ ಕೈಗೊಳ್ಳಿ ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು.


*ಪ್ರತಿ ತಿಂಗಳು ಸಾಮಾನ್ಯ ಸಭೆ ನಡೆಸಿ:*

ನಗರಸಭೆ ಸಾಮಾನ್ಯ ಸಭೆಯನ್ನು ಮೂರು ನಾಲ್ಕು ತಿಂಗಳಿಗೊಮ್ಮೆ ನಡೆಸಲಾಗುತ್ತಿದೆ. ಪ್ರತಿ ತಿಂಗಳು ಸಾಮಾನ್ಯ ಸಭೆಯನ್ನು ನಡೆಸಿ ಎಂದು ನಾಮಿನಿ ಸದಸ್ಯ ಸಂತೋಷ್ ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ನಗರಸಭೆ ಅಧ್ಯಕ್ಷ ಪ್ರಶಾಂತ್ ಕೆಲ ಅನಿವಾರ್ಯ ಕಾರಣಗಳಿಂದ ಸಭೆ ನಡೆಸಲಾಗಲಿಲ್ಲ. ಮುಂದೆ ಈಗಾಗದಂತೆ ನೋಡಿಕೊಳ್ಳಲಾಗುವುದು, ಪ್ರತಿ ತಿಂಗಳು ಸಭೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.


*ಜೆಸಿಬಿ ಖರೀದಿ:*

ನಗರಸಭೆ ಸುಪರ್ದಿಯಲ್ಲಿರುವ ಜೆಸಿಬಿ 

ಹಳತಾಗಿದ್ದು, ನೂತನ ಜೆಸಿಬಿ ಖರೀದಿಗೆ ಒಪ್ಪಿಗೆ ಸೂಚಿಸುವಂತೆ ಕೋರಲಾಯಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಿರೋಧ ಪಕ್ಷಗಳ ಸದಸ್ಯರು, ಜೆಸಿಬಿಗಳು 10ರಿಂದ 15 ವರ್ಷಗಳಷ್ಟು ದೀರ್ಘಾವಧಿ ಬಾಳಿಕೆ ಬರುತ್ತದೆ. ಈಗಿರುವ 

ಜೆಸಿಬಿ ಖರೀದಿಸಿ ಬರೀ ಎಂಟು ವರ್ಷ ಕಳೆದಿದೆಯಷ್ಟೇ, ಸರಿಯಾಗಿ 

ನಿರ್ವಹಣೆ ಮಾಡದ ಕಾರಣ ಇದು ಕೆಟ್ಟು ನಿಂತಿದೆ. 

ನಗರಸಭೆ ವಸ್ತುಗಳನ್ನು ಸರಿಯಾಗಿ 

ನೋಡಿಕೊಳ್ಳಬೇಕು. ಉತ್ತಮ ಚಾಲಕನನ್ನು ನೇಮಿಸಿ ಹೊಸ ಜೆಸಿಬಿ ಸಹ ಹಾಳಾಗದಂತೆ ಕ್ರಮ ವಹಿಸಿ ಎಂದು ಸಲಹೆ ನೀಡಿದರು.


ಬೀದಿ ಬದಿ ವ್ಯಾಪಾರ ಸಮಸ್ಯೆಯಿಂದ ನಗರದ ಅಂದ ಹಾಳಾಗುತ್ತಿದೆ. ಕರಬಲ ಮೈದಾನದಲ್ಲಿ ನಿರ್ಮಿಸಿರುವ ಅಂಗಡಿಗಳಿಗೆ ಕಡಿಮೆ ಬಾಡಿಗೆ ನಿಗದಿ ಗೊಳಿಸಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರನ್ನು ಅಲ್ಲಿಗೆ ಸ್ಥಳಾಂತರಿಸಿ. ಇಲ್ಲವೇ 

ಒಂದು ಝೋನ್ ನಿರ್ಮಿಸಿ ಅಲ್ಲಿ ಅವರಿಗೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿ ಎಂದು ಆಗ್ರಹಿಸಿದರು.


*ಪತ್ರಕರ್ತರ ಭವನಕ್ಕೆ ನಿವೇಶನ:*

ಇದೇ ವೇಳೆ ನಗರದಲ್ಲಿ ಪತ್ರಕರ್ತರ ಭವನ ನಿರ್ಮಿಸಲು ನಿವೇಶನ ನೀಡಲು ನಗರಸಭೆಯ ಸರ್ವ ಸದಸ್ಯರು ಒಕ್ಕೊರಲ ಅನುಮೋದನೆ ನೀಡಿದರು. ಈ ವಿಚಾರ ಬಹಳ ವರ್ಷಗಳಿಂದ 

ನೆನೆಗುದಿಗೆ ಬಿದ್ದಿದ್ದು ಆದಷ್ಟು ಬೇಗ ನಿವೇಶನ ನೀಡಲು ಕ್ರಮ ಕೈಗೊಂಡು ನಿವೇಶನ ಹಸ್ತಾಂತರಿಸುವಂತೆ ಆಗ್ರಹಿಸಿದರು.


ಮೂವತ್ತೊಂದನೇ ವಾರ್ಡಿನಲ್ಲಿರುವ ಉದ್ಯಾನ ಸೇರಿದಂತೆ ನಗರದಲ್ಲಿರುವ ಹಲವಾರು ಉದ್ಯಾನಗಳನ್ನು ನಿರ್ವಹಿಸುವಂತೆ ಹಾಗೂ ತಂತಮ್ಮ ವಾರ್ಡ್ ಗಳಲ್ಲಿನ ಸಮಸ್ಯೆ ಮುಖ್ಯವಾಗಿ ನೀರಿನ ಸಮಸ್ಯೆಗಳನ್ನು ಪರಿಹರಿಸುವಂತೆ ಸದಸ್ಯರು ಒಕ್ಕೊರಲಿನ ಧ್ವನಿಯಲ್ಲಿ ಆಗ್ರಹಿಸಿದರು.


ನಗರಸಭೆ ಉಪಾಧ್ಯಕ್ಷೆ ಹಸೀನಾ ಫರ್ಹೀನ್, ಸದಸ್ಯರಾದ ನಾಗೇಶ್, ರಮೇಶ್ ಬಾಬು, ಕೋಟೆ ಚಂದ್ರ, ನಾಗೇಶ್, ವಾಸೀಲ್ ಅಲಿಖಾನ್, ಲಿಯಾಕತ್, ಮಾದೇವ, ಸುಮಾ ರವೀಶ್, ಜಯಮಾಲ ಮತ್ತಿತರರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in channapatna »

ನಗರದ ವಿವಿಧ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಜರುಗಿದ ಹನುಮ ಜಯಂತಿ
ನಗರದ ವಿವಿಧ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಜರುಗಿದ ಹನುಮ ಜಯಂತಿ

ಚನ್ನಪಟ್ಟಣ: ನಗರ ಸೇರಿದಂತೆ ತಾಲೂಕಿನಾದ್ಯಂತ ಹಲವಾರು ಆಂಜನೇಯ ದೇವಾಲಯಗಳಲ್ಲಿ ಸೋಮವಾರ ವಿಜೃಂಭಣೆಯಿಂದ ಹನುಮ ಜಯಂತಿಯನ್ನು ಆಚರಿಸಲಾಯಿತು. ಪಟ್ಟಣ

ರಸ್ತೆ ಅಭಿವೃದ್ಧಿಗೆ ಅಡ್ಡಲಾಗಿದ್ದ ಖಬರಸ್ಥಾನ ಮತ್ತು ದೇವಸ್ಥಾನವನ್ನು ಮುಂಜಾನೆ ತೆರವುಗೊಳಿಸಿದ ಅಧಿಕಾರಿಗಳು
ರಸ್ತೆ ಅಭಿವೃದ್ಧಿಗೆ ಅಡ್ಡಲಾಗಿದ್ದ ಖಬರಸ್ಥಾನ ಮತ್ತು ದೇವಸ್ಥಾನವನ್ನು ಮುಂಜಾನೆ ತೆರವುಗೊಳಿಸಿದ ಅಧಿಕಾರಿಗಳು

ಚನ್ನಪಟ್ಟಣ: ಸಾತನೂರು ರಸ್ತೆ ಎಂದೆ ಪ್ರಸಿದ್ದಿಯಾದ ಚನ್ನಪಟ್ಟಣ-ಹಲಗೂರು ರಾಜ್ಯ ಹೆದ್ದಾರಿಯಲ್ಲಿದ್ದ ನಗರಕ್ಕೆ ಹೊಂದಿಕೊಂಡಿರುವ ರಸ್ತೆಯ ಪಕ್ಕದಲ್ಲಿದ್

ಶೋಕಿಗಾಗಿ ಅಧ್ಯಕ್ಷ, ಪೌರಾಯುಕ್ತರಾಗಿದ್ದೀರಿ ಮೊದಲು ಅಭಿವೃದ್ಧಿ ಮಾಡಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ
ಶೋಕಿಗಾಗಿ ಅಧ್ಯಕ್ಷ, ಪೌರಾಯುಕ್ತರಾಗಿದ್ದೀರಿ ಮೊದಲು ಅಭಿವೃದ್ಧಿ ಮಾಡಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ

ಚನ್ನಪಟ್ಟಣ: ನೀವು ಚನ್ನಪಟ್ಟಣ ನಗರವನ್ನು ಅಭಿವೃದ್ಧಿ ಮಾಡಲು ಬಂದವರಲ್ಲಾ, ಕೇವಲ ಶೋಕಿಗಾಗಿ ಅಧ್ಯಕ್ಷ ಮತ್ತು ಪೌರಾಯುಕ್ತರಾಗಿದ್ದೀರಿ, ನಿಮ್ಮ ಶೋ

ಎನ್ಎಸ್ ಗೌಡರಿಗೆ ಗಣ್ಯರಿಂದ ಶ್ರದ್ಧಾಂಜಲಿ
ಎನ್ಎಸ್ ಗೌಡರಿಗೆ ಗಣ್ಯರಿಂದ ಶ್ರದ್ಧಾಂಜಲಿ

ಚನ್ನಪಟ್ಟಣ.ನ.೩೦: ನಗರದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ೩೨ವರ್ಷಗಳ ಕಾಲ ದೀರ್ಘಾ ವಧಿ ಅಧ್ಯಕ್ಷರಾಗಿದ್ದ  ಎನ್. ಎಸ್ ಗೌಡ ಅವರ

ಪುರಭವನ ನೆಲಸಮಗೊಳಿಸದಂತೆ ನಗರಸಭೆ ಅಧಿಕಾರಿಗಳಿಗೆ ಮನವಿ
ಪುರಭವನ ನೆಲಸಮಗೊಳಿಸದಂತೆ ನಗರಸಭೆ ಅಧಿಕಾರಿಗಳಿಗೆ ಮನವಿ

ಚನ್ನಪಟ್ಟಣ.ನ.೨೯: ನಗರದ ಪುರಭವನದ ಮುಂದೆ ಸಭೆ ಸೇರಿದ್ದ ನಾಗರಿಕ ಹೋರಾಟ ಸಮಿತಿಯ ಪ್ರಮುಖರು ಪುರಭವನ ಐತಿಹಾಸಿಕವಾದುದು. ಇದನ್ನು ಉಳಿಸಿ, ಕೆಡವಲು ಅವಕ

ನಗರದಲ್ಲಿನ ಪುರಭವನ ಕೆಡವದಂತೆ ಆಗ್ರಹಿಸಲು ಸಭೆ. ಸರ್ವರೂ ಭಾಗವಹಿಸಲು ಕರೆ
ನಗರದಲ್ಲಿನ ಪುರಭವನ ಕೆಡವದಂತೆ ಆಗ್ರಹಿಸಲು ಸಭೆ. ಸರ್ವರೂ ಭಾಗವಹಿಸಲು ಕರೆ

ಚನ್ನಪಟ್ಟಣ


ತಾಲ್ಲೂಕಿನ ಸನ್ಮಿತ್ರರೇ;

*ನಗರದ ಹೃದಯ ಭಾಗದ

ತಾಲ್ಲೂಕಿನಲ್ಲಿ ನಿಂತ ನೀರಾದ ಕಾಂಗ್ರೆಸ್ ಪಕ್ಷ ಬಲಪಡಿಸಲು ಡಿ ಕೆ ಬ್ರದರ್ಸ್ ಹರಸಾಹಸ ಸೋಮವಾರ ಇನ್ನಿಬ್ಬರಿಂದ ಅರ್ಜಿ
ತಾಲ್ಲೂಕಿನಲ್ಲಿ ನಿಂತ ನೀರಾದ ಕಾಂಗ್ರೆಸ್ ಪಕ್ಷ ಬಲಪಡಿಸಲು ಡಿ ಕೆ ಬ್ರದರ್ಸ್ ಹರಸಾಹಸ ಸೋಮವಾರ ಇನ್ನಿಬ್ಬರಿಂದ ಅರ್ಜಿ

ಚನ್ನಪಟ್ಟಣ: ೨೦೨೩ ರ ಚುನಾವಣೆಗೆ ಇನ್ನೂ ಆರು ತಿಂಗಳ ಸಮಯವಿದೆ. ರಾಜ್ಯಾದ್ಯಂತ ಇನ್ನು ಮುಂದೆ ಆರಂಭವಾಗುವ ಚುನಾವಣಾ ಕಾವು ಚನ್ನಪಟ್ಟಣ ಕ್ಷೇತ್ರದಲ್ಲಿ ಮಾತ್ರ ವರ್ಷದ ಹಿಂದೆಯೇ ಆರಂಭವಾಗಿದ್ದು ವಿಶ

ಚೋಳಮಾರನಹಳ್ಳಿ ಸರ್ವೆ ನಂ.90ರ ಕಡತ ತಾಲ್ಲೂಕು ಕಛೇರಿಯಿಂದ ಕಾಣೆ: ಇಬ್ಬರ ಮೇಲೆ ಎಫ್ಐಆರ್ ದಾಖಲು
ಚೋಳಮಾರನಹಳ್ಳಿ ಸರ್ವೆ ನಂ.90ರ ಕಡತ ತಾಲ್ಲೂಕು ಕಛೇರಿಯಿಂದ ಕಾಣೆ: ಇಬ್ಬರ ಮೇಲೆ ಎಫ್ಐಆರ್ ದಾಖಲು

ಚನ್ನಪಟ್ಟಣ: ಕಳೆದ ಎರಡು ವರ್ಷಗಳ ಹಿಂದಿನಿಂದಲೂ ತಾಲ್ಲೂಕು ಕಛೇರಿಯಲ್ಲಿ ಅಕ್ರಮ ವ್ಯವಹಾರ, ಅಕ್ರಮ ಖಾತೆ, ನಕಲಿ ಖಾತೆ ಸೃಷ್ಠಿ, ಕಡತಗಳು ಅಭಿಲೇಖಾ

ಒತ್ತಡದ ವೃತ್ತಿ ಜೀವನದಲ್ಲಿಯೂ ಸಂಭ್ರಮಿಸುವುದನ್ನು ಕಲಿಯಿರಿ ಐಜಿಪಿ ಕೆ ಚಂದ್ರಶೇಖರ
ಒತ್ತಡದ ವೃತ್ತಿ ಜೀವನದಲ್ಲಿಯೂ ಸಂಭ್ರಮಿಸುವುದನ್ನು ಕಲಿಯಿರಿ ಐಜಿಪಿ ಕೆ ಚಂದ್ರಶೇಖರ

ಚನ್ನಪಟ್ಟಣ: ಪೋಲೀಸ್ ವೃತ್ತಿಯೇ ಒತ್ತಡದ ವೃತ್ತಿಯಾಗಿದ್ದು, ಒತ್ತಡದ ಕೆಲಸದ ಜೊತೆಗೆ ತಮ್ಮ ಕುಟುಂಬಕ್ಕೂ ಸಮಯ ನೀಡಿ, ಕ್ರೀಡೆಯಲ್ಲಿ ಭಾಗವಹಿಸುವ ಮ

ಕನಕದಾಸರು ದಾಸ ಶ್ರೇಷ್ಠರಲ್ಲೇ ಶ್ರೇಷ್ಠರು ತಹಶಿಲ್ದಾರ್ ಸುದರ್ಶನ್
ಕನಕದಾಸರು ದಾಸ ಶ್ರೇಷ್ಠರಲ್ಲೇ ಶ್ರೇಷ್ಠರು ತಹಶಿಲ್ದಾರ್ ಸುದರ್ಶನ್

ಚನ್ನಪಟ್ಟಣ: ದಾಸಸಾಹಿತ್ಯದಲ್ಲೇ ಶ್ರೇಷ್ಠ ಸಾಹಿತ್ಯ ಕನಕದಾಸ ಸಾಹಿತ್ಯ. ಈ ಸಾಹಿತ್ಯವನ್ನು ಓದುವ ಮೂಲಕ ನಾವೆಲ್ಲರೂ ನಮ್ಮ ಬದುಕಿನಲ್ಲಿ ಸಾಹಿತ್ಯದ

Top Stories »  


Top ↑