Tel: 7676775624 | Mail: info@yellowandred.in

Language: EN KAN

    Follow us :


ಮುದಗೆರೆ ಮತ್ತು ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ನ್ಯಾಯಾಧೀಶರು

Posted date: 30 Sep, 2022

Powered by:     Yellow and Red

ಮುದಗೆರೆ ಮತ್ತು ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ನ್ಯಾಯಾಧೀಶರು

ಚನ್ನಪಟ್ಟಣ.ಸೆ.೩೦: ನಗರದ ಸಾರ್ವಜನಿಕ ಆಸ್ಪತ್ರೆ ಮತ್ತು ಮುದಗೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಾಲ್ಲೂಕು ನ್ಯಾಯಾಲಯದ ಸಿವಿಲ್ ಮತ್ತು ಅಪರ ಸಿವಿಲ್ ನ್ಯಾಯಾಧೀಶರು ಭೇಟಿ ನೀಡಿ ಪರಿಶೀಲಿಸಿದರು.


ನಗರದ ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಮಹೇಂದ್ರ ಎಂ ಮತ್ತು ಅಪರ ಸಿವಿಲ್ ನ್ಯಾಯಾಧೀಶರಾದ ಉಷಾರಾಣಿಯವರು ಇಂದು ಮೊದಲಿಗೆ ತಾಲ್ಲೂಕಿನ ಮುದಗೆರೆ ಪ್ರಾಥಮಿಕ ಆಸ್ಪತ್ರೆಗೆ ಭೇಟಿ ನೀಡಿ, ಓಪಿಡಿ, ತುರ್ತು ಚಿಕಿತ್ಸಾ ಕೊಠಡಿ ಸೇರಿದಂತೆ ವಿವಿಧ ಕೊಠಡಿಗಳನ್ನು ಪರಿಶೀಲಿಸಿ ವೈದ್ಯರಾದ ದೀವಿತಾ ರವರ ಬಳಕ ಮಾಹಿತಿ ಪಡೆದುಕೊಂಡರು. ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವಂತೆ ಸೂಚಿಸಿದರು. ಓರ್ವ ವೈದ್ಯರು ಮಾತ್ರ ಇದ್ದು, ದಾದಿಯರು ಇಲ್ಲದಿರುವುದು ಹಾಗೂ ಹೆಂಗಸರಿಗೆ ಕಕ್ಕಸು ರೂಂ ಗಳು ಇಲ್ಲದಿರುವುದು ಕಂಡುಬಂದಿದ್ದು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲು ವೈದ್ಯರಿಗೆ ತಿಳಿಸಿದರು.


ನಂತರ ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮೊದಲಿಗೆ ಹೆರಿಗೆ ವಾರ್ಡ್, ಲ್ಯಾಬ್, ಓಪಿಡಿಗಳು, ಶಸ್ತ್ರಚಿಕಿತ್ಸಾ ಕೇಂದ್ರ, ಕಸ ವಿಂಗಡಣೆ, ದಾಖಲೆಗಳ ಪರಿಶೀಲಿಸನೆ, ವೈದ್ಯರ ಕೊರತೆ ಬಗ್ಗೆ ಪರಿಶೀಲಿಸಿದರು.


ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹೇಂದ್ರ ಎಂ ರವರು ಉಚ್ಛ ನ್ಯಾಯಾಲಯದ ಆದೇಶದಂತೆ ತಾಲ್ಲೂಕಿನ ನ್ಯಾಯಾಧೀಶರು ಪ್ರತಿ ತಿಂಗಳು ತಮ್ಮ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ಅಲ್ಲಿ ಯಾವ ರೀತಿ ವ್ಯವಸ್ಥೆ ಇದೆ, ಕುಂದುಕೊರತೆ, ಲೋಪದೋಷಗಳನ್ನು ಪಟ್ಟಿ ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು, ಅದರಂತೆ ಇಂದು ನ್ಯಾಯಾಧೀಶರಾದ ನಾವುಗಳು ಭೇಟಿ ನೀಡಿ ಪರಿಶೀಲಿಸಿದ್ದೇವೆ. ವೈದ್ಯರ ಕೊರತೆ ನೀಗಿಸಲು, ಹಾಗೂ ಸ್ವಚ್ಚತೆ ಕಾಪಾಡಲು ವೈದ್ಯಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.


ಹೆರಿಗೆ ವಿಭಾಗ, ಪ್ರಯೋಗಾಲಯ ಸೇರಿದಂತೆ ಪ್ರತಿ ವಾರ್ಡಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯ ಬಗ್ಗೆ ಅಧಿಕಾರಿಗಳು ಹಾಗೂ ರೋಗಿಗಳಿಂದಲೂ ಮಾಹಿತಿ ಪಡೆದರು. ಯಾವುದೇ ಮುಜುಗರವಿಲ್ಲದೆ ದೂರು ಗಳಿದ್ದರೆ ತಿಳಿಸಲು ರೋಗಿಗಳಿಗೆ ತಿಳಿಸಿದರು. ರೋಗಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.

ಸಾರ್ವಜನಿಕ ಆಸ್ಪತ್ರೆಗೆ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಅವರಿಗೆ ಕುಳಿತುಕೊಳ್ಳಲು ಕುರ್ಚಿ ಇಲ್ಲದಿರುವುದು ಕಂಡು ಬಂದಿದ್ದು, ಅದನ್ನು ಸರಿಪಡಿಸಲು ತಿಳಿಸಲಾಗಿದೆ ಎಂದು ಅಪರ ಸಿವಿಲ್ ನ್ಯಾಯಾಧೀಶರು ತಿಳಿಸಿದರು.


ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ವಿಜಯನರಸಿಂಹ, ತಾಲ್ಲೂಕು ವೈದ್ಯಾಧಿಕಾರಿ ರಾಜು, ಹಿರಿಯ ಫಾರ್ಮಾಸಿಸ್ಟ್ ವೇದಮೂರ್ತಿ, ಮೇಟ್ರಾನ್ ಸರಸ್ವತಿ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in channapatna »

ನಗರದ ವಿವಿಧ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಜರುಗಿದ ಹನುಮ ಜಯಂತಿ
ನಗರದ ವಿವಿಧ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಜರುಗಿದ ಹನುಮ ಜಯಂತಿ

ಚನ್ನಪಟ್ಟಣ: ನಗರ ಸೇರಿದಂತೆ ತಾಲೂಕಿನಾದ್ಯಂತ ಹಲವಾರು ಆಂಜನೇಯ ದೇವಾಲಯಗಳಲ್ಲಿ ಸೋಮವಾರ ವಿಜೃಂಭಣೆಯಿಂದ ಹನುಮ ಜಯಂತಿಯನ್ನು ಆಚರಿಸಲಾಯಿತು. ಪಟ್ಟಣ

ರಸ್ತೆ ಅಭಿವೃದ್ಧಿಗೆ ಅಡ್ಡಲಾಗಿದ್ದ ಖಬರಸ್ಥಾನ ಮತ್ತು ದೇವಸ್ಥಾನವನ್ನು ಮುಂಜಾನೆ ತೆರವುಗೊಳಿಸಿದ ಅಧಿಕಾರಿಗಳು
ರಸ್ತೆ ಅಭಿವೃದ್ಧಿಗೆ ಅಡ್ಡಲಾಗಿದ್ದ ಖಬರಸ್ಥಾನ ಮತ್ತು ದೇವಸ್ಥಾನವನ್ನು ಮುಂಜಾನೆ ತೆರವುಗೊಳಿಸಿದ ಅಧಿಕಾರಿಗಳು

ಚನ್ನಪಟ್ಟಣ: ಸಾತನೂರು ರಸ್ತೆ ಎಂದೆ ಪ್ರಸಿದ್ದಿಯಾದ ಚನ್ನಪಟ್ಟಣ-ಹಲಗೂರು ರಾಜ್ಯ ಹೆದ್ದಾರಿಯಲ್ಲಿದ್ದ ನಗರಕ್ಕೆ ಹೊಂದಿಕೊಂಡಿರುವ ರಸ್ತೆಯ ಪಕ್ಕದಲ್ಲಿದ್

ಶೋಕಿಗಾಗಿ ಅಧ್ಯಕ್ಷ, ಪೌರಾಯುಕ್ತರಾಗಿದ್ದೀರಿ ಮೊದಲು ಅಭಿವೃದ್ಧಿ ಮಾಡಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ
ಶೋಕಿಗಾಗಿ ಅಧ್ಯಕ್ಷ, ಪೌರಾಯುಕ್ತರಾಗಿದ್ದೀರಿ ಮೊದಲು ಅಭಿವೃದ್ಧಿ ಮಾಡಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ

ಚನ್ನಪಟ್ಟಣ: ನೀವು ಚನ್ನಪಟ್ಟಣ ನಗರವನ್ನು ಅಭಿವೃದ್ಧಿ ಮಾಡಲು ಬಂದವರಲ್ಲಾ, ಕೇವಲ ಶೋಕಿಗಾಗಿ ಅಧ್ಯಕ್ಷ ಮತ್ತು ಪೌರಾಯುಕ್ತರಾಗಿದ್ದೀರಿ, ನಿಮ್ಮ ಶೋ

ಎನ್ಎಸ್ ಗೌಡರಿಗೆ ಗಣ್ಯರಿಂದ ಶ್ರದ್ಧಾಂಜಲಿ
ಎನ್ಎಸ್ ಗೌಡರಿಗೆ ಗಣ್ಯರಿಂದ ಶ್ರದ್ಧಾಂಜಲಿ

ಚನ್ನಪಟ್ಟಣ.ನ.೩೦: ನಗರದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ೩೨ವರ್ಷಗಳ ಕಾಲ ದೀರ್ಘಾ ವಧಿ ಅಧ್ಯಕ್ಷರಾಗಿದ್ದ  ಎನ್. ಎಸ್ ಗೌಡ ಅವರ

ಪುರಭವನ ನೆಲಸಮಗೊಳಿಸದಂತೆ ನಗರಸಭೆ ಅಧಿಕಾರಿಗಳಿಗೆ ಮನವಿ
ಪುರಭವನ ನೆಲಸಮಗೊಳಿಸದಂತೆ ನಗರಸಭೆ ಅಧಿಕಾರಿಗಳಿಗೆ ಮನವಿ

ಚನ್ನಪಟ್ಟಣ.ನ.೨೯: ನಗರದ ಪುರಭವನದ ಮುಂದೆ ಸಭೆ ಸೇರಿದ್ದ ನಾಗರಿಕ ಹೋರಾಟ ಸಮಿತಿಯ ಪ್ರಮುಖರು ಪುರಭವನ ಐತಿಹಾಸಿಕವಾದುದು. ಇದನ್ನು ಉಳಿಸಿ, ಕೆಡವಲು ಅವಕ

ನಗರದಲ್ಲಿನ ಪುರಭವನ ಕೆಡವದಂತೆ ಆಗ್ರಹಿಸಲು ಸಭೆ. ಸರ್ವರೂ ಭಾಗವಹಿಸಲು ಕರೆ
ನಗರದಲ್ಲಿನ ಪುರಭವನ ಕೆಡವದಂತೆ ಆಗ್ರಹಿಸಲು ಸಭೆ. ಸರ್ವರೂ ಭಾಗವಹಿಸಲು ಕರೆ

ಚನ್ನಪಟ್ಟಣ


ತಾಲ್ಲೂಕಿನ ಸನ್ಮಿತ್ರರೇ;

*ನಗರದ ಹೃದಯ ಭಾಗದ

ತಾಲ್ಲೂಕಿನಲ್ಲಿ ನಿಂತ ನೀರಾದ ಕಾಂಗ್ರೆಸ್ ಪಕ್ಷ ಬಲಪಡಿಸಲು ಡಿ ಕೆ ಬ್ರದರ್ಸ್ ಹರಸಾಹಸ ಸೋಮವಾರ ಇನ್ನಿಬ್ಬರಿಂದ ಅರ್ಜಿ
ತಾಲ್ಲೂಕಿನಲ್ಲಿ ನಿಂತ ನೀರಾದ ಕಾಂಗ್ರೆಸ್ ಪಕ್ಷ ಬಲಪಡಿಸಲು ಡಿ ಕೆ ಬ್ರದರ್ಸ್ ಹರಸಾಹಸ ಸೋಮವಾರ ಇನ್ನಿಬ್ಬರಿಂದ ಅರ್ಜಿ

ಚನ್ನಪಟ್ಟಣ: ೨೦೨೩ ರ ಚುನಾವಣೆಗೆ ಇನ್ನೂ ಆರು ತಿಂಗಳ ಸಮಯವಿದೆ. ರಾಜ್ಯಾದ್ಯಂತ ಇನ್ನು ಮುಂದೆ ಆರಂಭವಾಗುವ ಚುನಾವಣಾ ಕಾವು ಚನ್ನಪಟ್ಟಣ ಕ್ಷೇತ್ರದಲ್ಲಿ ಮಾತ್ರ ವರ್ಷದ ಹಿಂದೆಯೇ ಆರಂಭವಾಗಿದ್ದು ವಿಶ

ಚೋಳಮಾರನಹಳ್ಳಿ ಸರ್ವೆ ನಂ.90ರ ಕಡತ ತಾಲ್ಲೂಕು ಕಛೇರಿಯಿಂದ ಕಾಣೆ: ಇಬ್ಬರ ಮೇಲೆ ಎಫ್ಐಆರ್ ದಾಖಲು
ಚೋಳಮಾರನಹಳ್ಳಿ ಸರ್ವೆ ನಂ.90ರ ಕಡತ ತಾಲ್ಲೂಕು ಕಛೇರಿಯಿಂದ ಕಾಣೆ: ಇಬ್ಬರ ಮೇಲೆ ಎಫ್ಐಆರ್ ದಾಖಲು

ಚನ್ನಪಟ್ಟಣ: ಕಳೆದ ಎರಡು ವರ್ಷಗಳ ಹಿಂದಿನಿಂದಲೂ ತಾಲ್ಲೂಕು ಕಛೇರಿಯಲ್ಲಿ ಅಕ್ರಮ ವ್ಯವಹಾರ, ಅಕ್ರಮ ಖಾತೆ, ನಕಲಿ ಖಾತೆ ಸೃಷ್ಠಿ, ಕಡತಗಳು ಅಭಿಲೇಖಾ

ಒತ್ತಡದ ವೃತ್ತಿ ಜೀವನದಲ್ಲಿಯೂ ಸಂಭ್ರಮಿಸುವುದನ್ನು ಕಲಿಯಿರಿ ಐಜಿಪಿ ಕೆ ಚಂದ್ರಶೇಖರ
ಒತ್ತಡದ ವೃತ್ತಿ ಜೀವನದಲ್ಲಿಯೂ ಸಂಭ್ರಮಿಸುವುದನ್ನು ಕಲಿಯಿರಿ ಐಜಿಪಿ ಕೆ ಚಂದ್ರಶೇಖರ

ಚನ್ನಪಟ್ಟಣ: ಪೋಲೀಸ್ ವೃತ್ತಿಯೇ ಒತ್ತಡದ ವೃತ್ತಿಯಾಗಿದ್ದು, ಒತ್ತಡದ ಕೆಲಸದ ಜೊತೆಗೆ ತಮ್ಮ ಕುಟುಂಬಕ್ಕೂ ಸಮಯ ನೀಡಿ, ಕ್ರೀಡೆಯಲ್ಲಿ ಭಾಗವಹಿಸುವ ಮ

ಕನಕದಾಸರು ದಾಸ ಶ್ರೇಷ್ಠರಲ್ಲೇ ಶ್ರೇಷ್ಠರು ತಹಶಿಲ್ದಾರ್ ಸುದರ್ಶನ್
ಕನಕದಾಸರು ದಾಸ ಶ್ರೇಷ್ಠರಲ್ಲೇ ಶ್ರೇಷ್ಠರು ತಹಶಿಲ್ದಾರ್ ಸುದರ್ಶನ್

ಚನ್ನಪಟ್ಟಣ: ದಾಸಸಾಹಿತ್ಯದಲ್ಲೇ ಶ್ರೇಷ್ಠ ಸಾಹಿತ್ಯ ಕನಕದಾಸ ಸಾಹಿತ್ಯ. ಈ ಸಾಹಿತ್ಯವನ್ನು ಓದುವ ಮೂಲಕ ನಾವೆಲ್ಲರೂ ನಮ್ಮ ಬದುಕಿನಲ್ಲಿ ಸಾಹಿತ್ಯದ

Top Stories »  


Top ↑