Tel: 7676775624 | Mail: info@yellowandred.in

Language: EN KAN

    Follow us :


೧೨೨ ಅರ್ಜಿಗಳು, ಇನ್ನೂರಕ್ಕು ಹೆಚ್ಚು ಮಂದಿ ಭಾಗಿ, ನಗರದಲ್ಲಿ ಯಶಸ್ವಿಯಾದ ಜನತಾ ದರ್ಶನ

Posted date: 04 Nov, 2023

Powered by:     Yellow and Red

೧೨೨ ಅರ್ಜಿಗಳು, ಇನ್ನೂರಕ್ಕು ಹೆಚ್ಚು ಮಂದಿ ಭಾಗಿ, ನಗರದಲ್ಲಿ ಯಶಸ್ವಿಯಾದ ಜನತಾ ದರ್ಶನ

ಚನ್ನಪಟ್ಟಣ: ಸ್ಥಳೀಯ ಸಮಸ್ಯೆಗಳನ್ನು ಸಾರ್ವಜನಿಕರು ಸ್ಥಳದಲ್ಲಿಯೇ ಬಗೆಹರಿಸಿಕೊಳ್ಳಬೇಕು, ಗ್ರಾಪಂ, ತಾಪಂ, ನಗರಡಾಳಿತ, ತಹಶಿಲ್ದಾರರ ಕಛೇರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅದೇ ಅಧಿಕಾರಿಗಳ ಸಮ್ಮುಖದಲ್ಲಿ, ಜಿಲ್ಲಾಡಳಿತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಜಿಲ್ಲಾಡಳಿತವೂ ತಮ್ಮ ತಾಲ್ಲೂಕಿಗೆ ಬರುವುದರಿಂದ ತಮ್ಮ ತಾಲ್ಲೂಕಿನಲ್ಲಿಯೇ ತಂತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆಂಬ ಹಿನ್ನೆಲೆಯಲ್ಲಿ ಸರ್ಕಾರವೂ ಜನತಾ ದರ್ಶನ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದರು.

ಅವರು ಶನಿವಾರ ನಗರದ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ ಜನತಾ ದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


*ಬಂಡಿದಾರಿ ಸಮಸ್ಯೆಗಳೇ ಹೆಚ್ಚು*

ಬಹುತೇಕ ಸಮಸ್ಯೆಗಳನ್ನು ಹೊತ್ತು ತಂದವರು ರೈತರು, ಸಾರ್ವಜನಿಕ ರಸ್ತೆಗಳು, ಜಮೀನಿಗೆ ಓಡಾಡಲು ರಸ್ತೆ, ಜಮೀನು ಒತ್ತುವರಿ, ಸರ್ಕಾರಿ ಭೂಮಿಯಾದ ಗೋಮಾಳದಲ್ಲಿನ ಸಾಗುವಳಿ ಚೀಟಿ, ಕಾಡುಪ್ರಾಣಿಗಳ ಹಾವಳಿ, ವಿದ್ಯುತ್ ಸಮಸ್ಯೆ, ಸರ್ವೇಯಂತಹ ಹಲವಾರು ಸಮಸ್ಯೆಗಳನ್ನೇ ಹೊತ್ತು ತಂದಿದ್ದರು. ಈ ಎಲ್ಲಾ ಸಮಸ್ಯೆಗಳು ಬಹುತೇಕ ವೈಯುಕ್ತಿಕವಾಗಿದ್ದವೆ ವಿನಹ ಸಾರ್ವಜನಿಕ ಅಹವಾಲುಗಳು ಬಹುತೇಕ ಕಡಿಮೆ ಇದ್ದವು. ಅರ್ಜಿಯನ್ನು ನೀಡಿದವರಿಗೆ ಅವಕಾಶ ಇದ್ದುದರಿಂದ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಯಾರೂ ಸಹ ಮಾತನಾಡಲಿಲ್ಲ.


*ಸಿಎಂಸಿ ಲೇಔಟ್ ಗೆ ಕೋಟ್೯ಗೆ ಹೋಗಿ*

ನಗರದಲ್ಲಿನ ಸಿಎಂಸಿ ಲೇಔಟ್ ನಲ್ಲಿ ೪೭೪ ನಿವೇಶನಗಳಿದ್ದು, ಕೆಲವೊಂದು ನಿವೇಶನಗಳು ಮೂರ್ನಾಲ್ಕು ಮಂದಿಗೆ ಖಾತೆಗಳಾಗಿವೆ. ಸಿ ಎ ನಿವೇಶನಗಳು ಸಮಸ್ಯೆಗಳಾಗಿವೆ. ಕೆಲವರು ಈಗಾಗಲೇ ಮನೆಯನ್ನು ನಿರ್ಮಿಸಿ ಕೊಂಡಿದ್ದಾರೆ, ಕಷ್ಟ ಇರುವವರು ಮಾರಾಟ ಮಾಡಲು ಆಗುತ್ತಿಲ್ಲ. ನಗರಸಭೆ ಹಂಚಿರುವ ೪೭೪ ನಿವೇಶನಗಳಿಗೂ ಅಲ್ಲಿರುವ ನಿವೇಶನಗಳಿಗೂ ಸಂಬಂಧವಿಲ್ಲಾ ಎಂದು ನಿವೇಶನದಾರರೂ ಮನವಿ ನೀಡಿದಾಗ ಜಿಲ್ಲಾಧಿಕಾರಿಗಳು ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಿ ಎಂದರು.


*ಅಜ್ಜಿಯ ಅಹವಾಲು ಸ್ವೀಕರಿಸಲು ವೇದಿಕೆ ಇಳಿದು ಬಂದ ಡಿಸಿ, ಎಸಿ*

ಕೃಷ್ಣಾಪುರ ಗ್ರಾಮದಲ್ಲಿ ನಿಂಗಮ್ಮ ಗುಂಡೇಗೌಡ ಎಂಬುವವರ ಜಮೀನು ಇದ್ದು, ಇದೇ ಜಮೀನನ್ನು ಅದೇ ಹೆಸರನ್ನು ಹೊಂದಿದ ಮತ್ತೋರ್ವರು ಸುಳ್ಳು ದಾಖಲೆ ಸೃಷ್ಟಿಸಿ ಖಾತೆ ಮಾಡಿಸಿಕೊಂಡಿದ್ದಾರೆಂದು ಅಜ್ಜಿಯೊಬ್ಬರು ಬಂದಿದ್ದರು. ಅವರು ವೇದಿಕೆ ಮೇಲೆರಲು ಕಷ್ಟ ಎಂದರಿತ ಜಿಲ್ಲಾಧಿಕಾರಿ ಡಾ ಅವಿನಾಶ್ ಮೆನನ್ ರಾಜೇಂದ್ರನ್, ಉಪವಿಭಾಗಾಧಿಕಾರಿ ಬಿನೋಯ್,  ತಹಶಿಲ್ದಾರ್ ಮಹೇಂದ್ರ, ಸೇರಿದಂತೆ ಒಟ್ಟಿಗೆ ಬಂದು ಅಜ್ಜಿಯ ಅಹವಾಲು ಸ್ವೀಕಾರ ಮಾಡಿದ್ದಲ್ಲದೆ, ಅಜ್ಜಿಯ ಪುತ್ರನಿಗೆ ಉಪವಿಭಾಗಾಧಿಕಾರಿಗಳ ಕಛೇರಿಗೆ ಬರುವಂತೆ ಸೂಚಿಸಿ ಮಾನವೀಯತೆ ಮೆರೆದರು.


*ಭೈರಾಪಟ್ಟಣ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ಪರವಿರೋಧ*

ಭೈರಾಪಟ್ಟಣ ಗ್ರಾಮದಲ್ಲಿ ಸರ್ಕಾರಿ ಗೋಮಾಳವಿದ್ದು, ಈಗಾಗಲೇ ಕೆಲವರು ಸ್ವಾಧಿನಲ್ಲಿದ್ದೇವೆ, ಕೆಲವು ಮಂದಿ ಅರ್ಜಿಯನ್ನು ಹಾಕಿಕೊಂಡಿದ್ದೇವೆ. ಈ ಜಾಗಕ್ಕೆ ಇತ್ತಿಚೆಗೆ ಕೆಲವರು ಬಂದು ಶೆಡ್ ನಿರ್ಮಾಣ ಮಾಡುತ್ತಿದ್ದಾರೆ ಎಂದು ದೂರಿದರೆ, ಶೆಡ್ ನಿರ್ಮಾಣ ಮಾಡಿದವರು ರೈತ ಸಂಘಟನೆಯ ಮೂಲಕ ಬಂದು ನಮಗೆ ವಾಸಿಸಲು ಮನೆಯಿಲ್ಲ, ಕಟ್ಟಿಕೊಳ್ಳಲು ನಿವೇಶನವಿಲ್ಲಾ, ಸರ್ಕಾರಿ ಗೋಮಾಳದಲ್ಲಿ ನಮಗೆ ನಿವೇಶನ ನೀಡಬೇಕೆಂದು ಮನವಿ ನೀಡಿದರು. ಎರಡನ್ನೂ ಪರಿಶೀಲಿಸಿದ ಅಧಿಕಾರಿಗಳು ೨೦೧೫ಕ್ಕಿಂತ ಮೊದಲು ಮನೆ ನಿರ್ಮಿಸಿದರೆ ಹಾಗೂ ಸಾಗುವಳಿಗಾಗಿ ಅರ್ಜಿ ಹಾಕಿರುವ ದಾಖಲೆ ಇರುವವರನ್ನು ಬಿಟ್ಟು ಮಿಕ್ಕವರನ್ನು ಖಾಲಿ ಮಾಡಬೇಕಾಗುತ್ತದೆ, ನಿವೇಶನ ಇಲ್ಲದವರು ಗ್ರಾಪಂ ಗೆ ಅರ್ಜಿ ಸಲ್ಲಿಸಿ ಎಂದರು.


*ಶಿವಪ್ಪನಮಠ ಗ್ರಾಮದ ರಸ್ತೆಗೆ ಕಾಂಪೌಂಡ್*

ನಗರದ ಹೊರವಲಯಲ್ಲಿರುವ ಶಿವಪ್ಪನಮಠ ಎಂಬ ಗ್ರಾಮಕ್ಕೆ ಅನಾದಿಕಾಲದಿಂದಲೂ ರಸ್ತೆ ಇದ್ದು, ಖಾಸಗಿ ವ್ಯಕ್ತಿಯೊಬ್ಬರು ಈ ರಸ್ತೆ ಜಾಗ ನಮ್ಮ ಜಮೀನಿನಲ್ಲಿದೆ ಎಂದು ರಸ್ತೆಗೆ ಹದಿನೈದು ಅಡಿಯಷ್ಟು ಎತ್ತರದ ಕಾಂಪೌಂಡ್ ನಿರ್ಮಿಸಿದ್ದಾರೆ, ಕಣ್ವ ನದಿಗೆ ಸಂಬಂಧಿಸಿದ ಕಾಲುವೆಯನ್ನು ಸಹ ಅದೇ ಜಮೀನ್ದಾರರು ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ತೆರವುಗೊಳಿಸುವಂತೆ ನೀಲಕಂಠನಹಳ್ಳಿ ಗ್ರಾಮದ ಸೋಮಶೇಖರ್ ಮತ್ತು ಭರತ್ ಮನವಿ ನೀಡಿದರು. ಉಪವಿಭಾಗ ಅಧಿಕಾರಿ ಬಿನೋಯ್ ರವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ, ದಾಖಲೆ ಪರಿಶೀಲಿಸಿ ಶೀಘ್ರವಾಗಿ ಕ್ರಮಕೈಗೊಳ್ಳುವಂತೆ ಆದೇಶಿಸಿದರು.


*ನಗರದಲ್ಲಿ ಕಸದ ಸಮಸ್ಯೆ*

ಕಾಂಗ್ರೆಸ್ ಮುಖಂಡ ರಾಂಪುರ ಲೋಕೇಶ್ ರವರು ನಗರದಲ್ಲಿನ ಕಸದ ಸಮಸ್ಯೆ ಬಗೆಹರಿಸುವಂತೆ ಸಲ್ಲಿಸಿದ ಮನವಿಗೆ, ತಾಲ್ಲೂಕಿನ ಕೆಲವೆಡೆ ಭೂಮಿ ಗುರುತಿಸಿದ್ದು, ಸರ್ವೇ ಕಾರ್ಯ ನಡೆಯುತ್ತಿದೆ. ಭೂಮಿಯನ್ನು ವಶಕ್ಕೆ ಪಡೆದು ಶೀಘ್ರವಾಗಿ ಕಸವಿಲೇವಾರಿ ಘಟಕ ಆರಂಭಿಸಲಾಗುವುದು ಎಂದರು, ಭೂಮಿಯನ್ನು ಶೀಘ್ರವಾಗಿ ವಶಕ್ಕೆ ತೆಗೆದುಕೊಳ್ಳುವಂತೆ ಯೋಜನಾ ಅಧಿಕಾರಿ ರಮೇಶ್ ಮತ್ತು ನಗರದ ಪೌರಾಯುಕ್ತ ಸಿ ಪುಟ್ಟಸ್ವಾಮಿ ಯವರಿಗೆ ಸೂಚಿಸಿದರು.


*ರೈತಸಂಘದಿಂದ ಜಮೀನುಗಳಿಗೆ ರಸ್ತೆ ಬಿಡಿಸುವಂತೆ ಮನವಿ*

ರಾಜ್ಯ ರೈತಸಂಘದ ಪದಾಧಿಕಾರಿಗಳು ಮನವಿ ನೀಡಿ, ತಂತಮ್ಮ ಜಮೀನುಗಳಿಗೆ ಹೋಗಲು ಇರುವ ರಸ್ತೆಯನ್ನು ಮುಂದಿನ ಜಮೀನಿನವರು ಮುಚ್ಚಿದ್ದು, ಇದನ್ನು ಶೀಘ್ರವಾಗಿ ಬಿಡಿಸಬೇಕು, ಅಕ್ರಮ ಖಾತೆಗಳನ್ನು ಅಧಿಕಾರಿಗಳು ಮಾಡುತ್ತಿದ್ದು ತಡೆಗಟ್ಟಬೇಕು. ರೈತರಿಗೆ ವಿದ್ಯುತ್ ಸಂಪರ್ಕ ಸರಿಯಾದ ಸಮಯದಲ್ಲಿ ನೀಡುವ ಕುರಿತು ತಾಲ್ಲೂಕಿನಾದ್ಯಂತ ಇರುವ ರೈತರ ಸಮಸ್ಯೆಗಳನ್ನು ಬಗೆಹರಿಸಲು ಸ್ಥಳೀಯ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸುವಂತೆ ಮನವಿ ಮಾಡಿದರು.


*ಮನೆಕೊಡಿಸಿ, ಮದುವೆ ಮಾಡಿಸಿ, ಆಗಲ್ಲ ಹೋಗಿ ಡಿಸಿ*

ಹೆಚ್ ಬ್ಯಾಡರಹಳ್ಳಿ ಗ್ರಾಮದ ಅರವತ್ತು ವರ್ಷದ ವ್ಯಕ್ತಿಯೋರ್ವ ಮನವಿ ನೀಡಿ, ನನ್ನ ಹೆಂಡತಿ ಮಕ್ಕಳು ನನ್ನನ್ನು ಹೊರಹಾಕಿದ್ದಾರೆ. ನಾನು ಒಬ್ಬಂಟಿಯಾಗಿದ್ದೇನೆ. ನನಗೆ ಮತ್ತೊಂದು ಮನೆ ಕೊಡಿಸಿ ಹಾಗೂ ಮತ್ತೊಂದು ಮದುವೆ ಮಾಡಿಸಿ ಎಂಬ ವಿಶೇಷ ಬೇಡಿಕೆ ಇಟ್ಟ ಪ್ರಸಂಗ ನಡೆಯಿತು. ಈ ಹಿಂದೆಯೂ ಸಹ ಜಿಲ್ಲಾದ್ಯಂತ ನಡೆದ ಎಲ್ಲಾ ಜನತಾ ದರ್ಶನ ಕಾರ್ಯಕ್ರಮದಲ್ಲಿಯೂ ಈತ ದಯಾಮರಣ ಸೇರಿದಂತೆ ವಿವಿಧ ಮನವಿ ಮಾಡಿದ್ದನ್ನೂ ಗಮನಿಸಿದ ಜಿಲ್ಲಾಧಿಕಾರಿಗಳು ಈ ಕೆಲಸ ನಮ್ಮ ಕೆಲಸವಲ್ಲಾ ಎಂದು ಸಾಗಹಾಕಿದರು.


ಜನತಾ ದರ್ಶನ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅರ್ಜಿಗಳು ಕಂದಾಯ ಇಲಾಖೆಗೆ ಬಂದಿದ್ದು ಒಟ್ಟು ೭೪ ಅರ್ಜಿಗಳು, ಆರ್ ಡಿ ಪಿ ಆರ್ ಗೆ ೦೭, ಸರ್ವೆಗೆ ೦೩ ಅರ್ಜಿ ಸೇರಿದಂತೆ ಒಟ್ಟು ೧೨೨ ಅರ್ಜಿಗಳು  ಬಂದಿದ್ದವು. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ ಬೋಡ್ಕೆ, ಅರಣ್ಯ ಇಲಾಖೆಯ ಡಿಎಫ್ಓ ರಾಮಕೃಷ್ಣ, ಎಎಸ್ಪಿ ಸುರೇಶ್, ಜಿಲ್ಲಾ ಆರೋಗ್ಯಾಧಿಕಾರಿ ನಿರಂಜನ್, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in channapatna »

ಅಬಿದಾಬಾನು ಸದಸ್ಯತ್ವವನ್ನು ರದ್ದುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸುತ್ತೇನೆ, ವಾಸೀಲ್ ಅಲಿಖಾನ್
ಅಬಿದಾಬಾನು ಸದಸ್ಯತ್ವವನ್ನು ರದ್ದುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸುತ್ತೇನೆ, ವಾಸೀಲ್ ಅಲಿಖಾನ್

ಚನ್ನಪಟ್ಟಣ: ಸಭೆ ಮುಗಿಸಿ ಹೊರಬಂದಾಗ ನನ್ನ ಮೇಲೆ ನಗರಸಭೆ ಆವರಣದಲ್ಲೇ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 28ನೇ ವಾರ್ಡ್ ನಗರಸಭೆ ಸದಸ್ಯೆ ಅಬಿದಾ

ಆರೋಪಿ ಸುಹೇಲ್ ಪರವಾಗಿ ಕರ್ತವ್ಯ ನಿರತ ಪೋಲಿಸರ ಮೇಲೆ ಹಲ್ಲೆ ನಡೆಸಿದ ಗೆಳತಿ ಭಾನುಪ್ರಿಯಾ
ಆರೋಪಿ ಸುಹೇಲ್ ಪರವಾಗಿ ಕರ್ತವ್ಯ ನಿರತ ಪೋಲಿಸರ ಮೇಲೆ ಹಲ್ಲೆ ನಡೆಸಿದ ಗೆಳತಿ ಭಾನುಪ್ರಿಯಾ

ಚನ್ನಪಟ್ಟಣ: ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯ ವಾಸೀಲ್ ಅಲಿಖಾನ್ ಮತ್ತು ಅಬಿದಾಬಾನು ರವರ ನಡುವೆ ವಾಗ್ವಾದ ನಡೆದಿತ್ತು. ಅದೇ ದಿನ ನಗರಸಭೆ ಆವರಣದಲ್ಲಿ

ಪರಸ್ಪರರ ವಿರುದ್ಧ ನಗರಸಭೆ ಸದಸ್ಯರ ದೂರು
ಪರಸ್ಪರರ ವಿರುದ್ಧ ನಗರಸಭೆ ಸದಸ್ಯರ ದೂರು

ಚನ್ನಪಟ್ಟಣ: ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರಿಬ್ಬರ ನಡುವೆ ನಡೆದ ಮಾತಿನ ಚಕಮಕಿಯ ನಂತರ ಹೊರ ಆವರಣದಲ್ಲಿ ಗಲಾಟೆ ಮಾಡಿಕೊಂಡಿದ್ದು, ಸದಸ್ಯರುಗಳ ಜೊತೆಗೆ

ಅನ್ನಭಾಗ್ಯ ಅಕ್ಕಿ ಕಳವು, ಆಡಳಿತ ಮಂಡಳಿ ಸದಸ್ಯರನ್ನು ಬಂಧಿಸಬೇಕು, ಕುಮಾರಸ್ವಾಮಿ ಹೊಣೆ ಹೊರಬೇಕು ಗಂಗಾಧರ್
ಅನ್ನಭಾಗ್ಯ ಅಕ್ಕಿ ಕಳವು, ಆಡಳಿತ ಮಂಡಳಿ ಸದಸ್ಯರನ್ನು ಬಂಧಿಸಬೇಕು, ಕುಮಾರಸ್ವಾಮಿ ಹೊಣೆ ಹೊರಬೇಕು ಗಂಗಾಧರ್

ಚನ್ನಪಟ್ಟಣ: ನಗರದ ಟಿಎಪಿಸಿಎಂಎಸ್ ಗೋದಾಮಿನಲ್ಲಿ ೧,೬೦೦ ಕ್ವಿಂಟಾಲ್ ಅನ್ನಭಾಗ್ಯ ದ ಅಕ್ಕಿ ಕಳವು ಆಗಿದ್ದು, ಇದಕ್ಕೆ ಯಾರೋ ಒಬ್ಬ ಗುಮಾಸ್ತನನ್ನು ಬಂಧಿಸುವುದ

ನಗರಸಭೆ ನೂತನ ಉಪಾಧ್ಯಕ್ಷರಾಗಿ ಜೆಡಿಎಸ್‍ನ ನಿಗಾರ್ ಬೇಗಂ ಅವಿರೋಧವಾಗಿ ಆಯ್ಕೆಯಾದರು
ನಗರಸಭೆ ನೂತನ ಉಪಾಧ್ಯಕ್ಷರಾಗಿ ಜೆಡಿಎಸ್‍ನ ನಿಗಾರ್ ಬೇಗಂ ಅವಿರೋಧವಾಗಿ ಆಯ್ಕೆಯಾದರು

ಚನ್ನಪಟ್ಟಣ: ಹಿಂದಿನ ಉಪಾಧ್ಯಕ್ಷೆ ಹಸೀನಾ ಫರ್ಹೀನ್ ರಾಜೀನಾಮೆಯಿಂದ ತೆರವಾಗಿದ್ದ ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಚುನಾ

ಸರ್ಕಾರದ ಹಣ ದುರುಪಯೋಗ ಮಾಡಬೇಡಿ, ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ ಕುಮಾರಸ್ವಾಮಿ
ಸರ್ಕಾರದ ಹಣ ದುರುಪಯೋಗ ಮಾಡಬೇಡಿ, ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ ಕುಮಾರಸ್ವಾಮಿ

ಚನ್ನಪಟ್ಟಣ: ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಬರದ ಛಾಯೆ ಆವರಿಸಿದೆ, ನಮ್ಮ ಚನ್ನಪಟ್ಟಣ ತಾಲೂಕು ಇದರಿಂದ ಹೊರತಾಗಿಲ್ಲ. ನನ್ನ ಕ್ಷೇತ್ರ ಸೇರಿದಂತೆ ರಾ

ಸಂಸದರು ರಸ್ತೆ ಗುಂಡಿಗಳನ್ನು ಮುಚ್ಚಿಸಲಿ  ಸಾಕು, ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯ
ಸಂಸದರು ರಸ್ತೆ ಗುಂಡಿಗಳನ್ನು ಮುಚ್ಚಿಸಲಿ ಸಾಕು, ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯ

 ಚನ್ನಪಟ್ಟಣ, ನ.೦೬: ಜನಸಂಪರ್ಕ ಸಭೆ ಹೆಸರಲ್ಲಿ ಅಧಿಕಾರಿಗಳನ್ನು ಬೆದರಿಸುವ ಸಂಸದರಿಗೆ ಸಾತನೂರು ಸರ್ಕಲ್ ರಸ್ತೆಯ ಗುಂಡಿಗಳು ಕಾಣಲಿಲ್ಲವೇ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಕ್ಷೇತ್ರದ ಶಾಸಕರಾದ ಹೆಚ್.

೧೨೨ ಅರ್ಜಿಗಳು, ಇನ್ನೂರಕ್ಕು ಹೆಚ್ಚು ಮಂದಿ ಭಾಗಿ, ನಗರದಲ್ಲಿ ಯಶಸ್ವಿಯಾದ ಜನತಾ ದರ್ಶನ
೧೨೨ ಅರ್ಜಿಗಳು, ಇನ್ನೂರಕ್ಕು ಹೆಚ್ಚು ಮಂದಿ ಭಾಗಿ, ನಗರದಲ್ಲಿ ಯಶಸ್ವಿಯಾದ ಜನತಾ ದರ್ಶನ

ಚನ್ನಪಟ್ಟಣ: ಸ್ಥಳೀಯ ಸಮಸ್ಯೆಗಳನ್ನು ಸಾರ್ವಜನಿಕರು ಸ್ಥಳದಲ್ಲಿಯೇ ಬಗೆಹರಿಸಿಕೊಳ್ಳಬೇಕು, ಗ್ರಾಪಂ, ತಾಪಂ, ನಗರಡಾಳಿತ, ತಹಶಿಲ್ದಾರರ ಕಛೇರಿಗೆ ಸಂಬಂಧಿಸಿದ ಸ

ಗೋಮಾಳದಲ್ಲಿ ಶೆಡ್ ನಿರ್ಮಿಸಿದ ವಸತಿ ರಹಿತರನ್ನು ಒಕ್ಕಲೆಬ್ಬಿಸಿದ ಬಲಾಢ್ಯರು, ರೈತಸಂಘ ಆರೋಪ
ಗೋಮಾಳದಲ್ಲಿ ಶೆಡ್ ನಿರ್ಮಿಸಿದ ವಸತಿ ರಹಿತರನ್ನು ಒಕ್ಕಲೆಬ್ಬಿಸಿದ ಬಲಾಢ್ಯರು, ರೈತಸಂಘ ಆರೋಪ

ಚನ್ನಪಟ್ಟಣ: ತಾಲ್ಲೂಕಿನ ಭೈರಾಪಟ್ಟಣ ಗ್ರಾಮದಲ್ಲಿರುವ ಸರ್ಕಾರಿ ಗೋಮಾಳದಲ್ಲಿ ಮನೆ ಇಲ್ಲದ ನಾಲ್ಕು ಮಂದಿ ಖಾಲಿ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡಿದ್ದು,

ವಳಗೆರೆದೊಡ್ಡಿ ಎಂಪಿಸಿಎಸ್ ನೂತನ ಅಧ್ಯಕ್ಷರಾಗಿ ಶಂಕರ್
ವಳಗೆರೆದೊಡ್ಡಿ ಎಂಪಿಸಿಎಸ್ ನೂತನ ಅಧ್ಯಕ್ಷರಾಗಿ ಶಂಕರ್

ಚನ್ನಪಟ್ಟಣ: ತಾಲೂಕಿನ ವಳಗೆರೆದೊಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪತ್ರಕರ್ತ ಆರ್. ಶಂಕರ್‍ಅವರು ಅವಿರೋಧವಾಗಿ ಆಯ್ಕೆಯಾದರು.

Top Stories »  


Top ↑