ಒತ್ತಡದ ವೃತ್ತಿ ಜೀವನದಲ್ಲಿಯೂ ಸಂಭ್ರಮಿಸುವುದನ್ನು ಕಲಿಯಿರಿ ಐಜಿಪಿ ಕೆ ಚಂದ್ರಶೇಖರ

ಚನ್ನಪಟ್ಟಣ: ಪೋಲೀಸ್ ವೃತ್ತಿಯೇ ಒತ್ತಡದ ವೃತ್ತಿಯಾಗಿದ್ದು, ಒತ್ತಡದ ಕೆಲಸದ ಜೊತೆಗೆ ತಮ್ಮ ಕುಟುಂಬಕ್ಕೂ ಸಮಯ ನೀಡಿ, ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಸಂಭ್ರಮವನ್ನು ಆಚರಿಸಬೇಕು ಎಂದು ಕೇಂದ್ರ ವಲಯ ಐಜಿಪಿ ಕೆ ಚಂದ್ರಶೇಖರ ಪೋಲಿಸರಿಗೆ ಕರೆ ನೀಡಿದರು. ಅವರು ಶುಕ್ರವಾರ ಸಂಜೆ ನಗರದ ಪೋಲೀಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಮನಗರ ಜಿಲ್ಲಾ ಪೋಲೀಸ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾನ್ಯ ಕೇಂದ್ರವಲಯದ ಐಜಿಪಿ ರವರಾದ ಶ್ರೀ ಕೆ ಚಂದ್ರಶೇಖರ್ ಐಪಿಎಸ್ ರವರು ಆಗಮಿಸಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಪೊಲೀಸ್ ವೃತ್ತಿ ಜೀವನದಲ್ಲಿ ಬಹಳ ಒತ್ತಡದಿಂದ ಕರ್ತವ್ಯ ನಿರ್ವಹಿಸುವ ಸಂದರ್ಭಗಳು ಇರುತ್ತವೆ, ಇಂತಹ ಸಂದರ್ಭಗಳಲ್ಲಿ ಒತ್ತಡಕ್ಕೆ ಒಳಗಾಗದೆ ಪ್ರತಿಯೊಂದು ಸಂದರ್ಭವನ್ನು ಸಂಭ್ರಮಿಸಿ ಒತ್ತಡದಿಂದ ಹೊರ ಬರುವಂತೆ ಕರೆ ನೀಡಿದರು. ತಮಗಾಗಿ ದುಡಿಯುವ ನಮ್ಮ ಒತ್ತಡಗಳನ್ನು ಸಹಿಸಿಕೊಳ್ಳುವ ತಮ್ಮ ಕುಟುಂಬ ವರ್ಗದವರೊಂದಿಗೆ ಬಿಡುವಿನ ಸಮಯದಲ್ಲಿ ತಮ್ಮ ಅಮೂಲ್ಯ ಕ್ಷಣಗಳನ್ನು ಮೀಸಲಿಡುವಂತೆ ತಿಳಿಸಿದರು. ಪ್ರತಿ ವರ್ಷ ಪೊಲೀಸರಿಗಾಗಿ ನಡೆಯುವ ಕ್ರೀಡಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಭ್ರಮಿಸುವಂತೆ ಕರೆ ನೀಡಿದರು. ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಐಜಿಪಿ ರವರು ಪ್ರಶಸ್ತಿಗಳನ್ನು ನೀಡಿ ಅಭಿನಂದಿಸಿದರು. ಆಗಮಿಸಿದ ಪೊಲೀಸ್ ಕುಟುಂಬದವರಿಗೆ ಮತ್ತು ಮಕ್ಕಳಿಗೆ ಅಭಿನಂದನೆ ಸಲ್ಲಿಸಿರುತ್ತಾರೆ.
ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಪಟ್ಟವನ್ನು ಡಿಎಆರ್ ವಿಭಾಗದ ಮಧು ಪಡೆದರೆ, ಮಹಿಳಾ ತಂಡದ ವೈಯಕ್ತಿಕ ಚಾಂಪಿಯನ್ ಕು. ರಶ್ಮಿ ಮಹಿಳಾ ಪೊಲೀಸ್ ಠಾಣೆ ರವರು ಪಡೆದರು, ಕ್ರೀಡಾಕೂಟದ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಡಿಎಆರ್- ಡಿಪಿಓ ತಂಡ ಪಡೆದುಕೊಂಡಿತು.
ಸದರಿ ಕ್ರೀಡಾಕೂಟದಲ್ಲಿ ರಾಮನಗರ ಜಿಲ್ಲಾಧಿಕಾರಿಗಳಾದ ಅವಿನಾಶ್ ಮೆನನ್ ರಾಜೇಂದ್ರನ್ ರವರು, ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ ಸಂತೋಷ್ ಬಾಬು ಐಪಿಎಸ್ ರವರು, ಜಿಲ್ಲಾ ಪಂಚಾಯತ್ ಸಿಇಓ ರವರಾದ ದಿಗ್ವಿಜಯ ಬೋಡ್ಕೆ ರವರು ಹಾಗೂ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಮೆರಗು ನೀಡಿದರು.
*ಸಮುದಾಯ ಭವನ ಉದ್ಘಾಟನೆ*
ಇದೇ ಸಂದರ್ಭದಲ್ಲಿ ಚನ್ನಪಟ್ಟಣದ ಡಿಎಆರ್ ಕೇಂದ್ರ ಸ್ಥಾನದಲ್ಲಿ ನಿರ್ಮಾಣವಾಗಿರುವ ಪೊಲೀಸ್ ಸಮುದಾಯ ಭವನವನ್ನು ಕೇಂದ್ರವಲಯದ ಐಜಿಪಿ ರವರಾದ ಕೆ ಚಂದ್ರಶೇಖರ್ ಐಪಿಎಸ್ ರವರು ಉದ್ಘಾಟಿಸಿದರು.
ಎರಡು ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಿಸಿರುವ ಸದರಿ ಪೋಲಿಸ್ ಸಮುದಾಯ ಭವನವನ್ನು ರಾಮನಗರ ಜಿಲ್ಲಾ ಪೊಲೀಸರ ಉಪಯೋಗಕ್ಕಾಗಿ ಮುಕ್ತಗೊಳಿಸಿ ಶುಭ ಕೋರಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಮನಗರ ಜಿಲ್ಲಾಧಿಕಾರಿಗಳಾದ ಅವಿನಾಶ್ ಮೆನನ್ ರಾಜೇಂದ್ರನ್ ರವರು,ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ ಸಂತೋಷ್ ಬಾಬು ಐಪಿಎಸ್ ರವರು, ಜಿಲ್ಲಾ ಪಂಚಾಯತ್ ಸಿಇಓ ರವರಾದ ದಿಗ್ವಿಜಯ ಬೋಡ್ಕೆ ರವರು ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in channapatna »

ತಾಲ್ಲೂಕು ಆಡಳಿತದ ಗಣರಾಜ್ಯೋತ್ಸವದಲ್ಲಿ ಸಿಪಿವೈ ಭಾಗಿ ಹೆಚ್ಡಿಕೆ ಗೈರು
ಚನ್ನಪಟ್ಟಣ.ಜ.೨೬: ತಾಲ್ಲೂಕು ರಾಷ್ಟ
ಅಮೃತ ಸರೋವರಗಳ ಬಳಿ ಹಾರಾಡಿದ ತ್ರಿವರ್ಣ ಧ್ವಜ
ಚನ್ನಪಟ್ಟಣ: ಸ್ವಾತಂತ್ರ್ಯದ ಅಮೃತ ಮಹೋತ್ಸವ ದ ಸಲುವಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಿಷನ್ ಅಮೃತ

ಇದೇ ತಿಂಗಳು ವಿಜಯಸಂಕಲ್ಪ ಅಭಿಯಾನ: ಜಿಲ್ಲಾ ಸಂಚಾಲಕ ರವೀಶ್
ಚನ್ನಪಟ್ಟಣ,ಜ:19. ಮನೆ-ಮನಗಳಿಗೆ ಬಿಜೆಪಿ ನೇತೃತ್ವದ ಸರ್ಕಾರದ ಜನಪರ ಕೆಲಸಗಳನ್ನು ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕ

ನರೇಗಾ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ
ಚನ್ನಪಟ್ಟಣ:16/01/2023:ರಂತಾಲ್ಲೂಕಿನ ಎಲೆತೋಟದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಕನಹಳ್ಳಿ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಪ್ರಗತಿಯಲ್ಲಿದ್ದ ಮುದ್ದೆಗೌಡನಕಟ್ಟೆ ಹೂಳೆತ್ತುವ ಕ

ಕಾಂತರಾಜ್ ಪಟೇಲ್ ನಿಧನದಿಂದ ಜಿಲ್ಲೆಯ ಸಾಂಸ್ಕೃತಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ; ಎಂ.ಟಿ. ತಿಮ್ಮರಾಜು
ಚನ್ನಪಟ್ಟಣ: ನೇರ ನಡೆ-ನುಡಿಯ ಆದರ್ಶ ವ್ಯಕ್ತಿತ್ವದೊಂದಿಗೆ ಅಜಾತಶತ್ರುವಾಗಿ ಬದುಕಿ ಬಾಳಿದ ಹೃದಯವಂತ ವ್ಯಕ್ತಿ ಕಾಂತರಾಜ್ ಪಟೇಲ್ ಅವರ ನಿಧ

ಶಿಕ್ಷಣ ಪ್ರೇಮಿ ಮಳೂರು ದಿ.ಪುಟ್ಟಸ್ವಾಮಿಗೌಡರ ಸ್ಮರಣಾರ್ಥ ಅನ್ನವಿತ್ತ ಕುಟುಂಬಕ್ಕೆ ಗೌರವ ನಮನ
ಚನ್ನಪಟ್ಟಣ: ತಾಲ್ಲೂಕಿನಲ್ಲಷ್ಟೇ ಅಲ್ಲದೇ ಜಿಲ್ಲಾದ್ಯಂತ ಉದಾರ ದಾನಿಗಳು ಹಾಗೂ ಶ್ರೀಮಂತ ಕುಟುಂಬ ಎಂದೇ ಪ್ರಸಿದ್ಧಿಯಾಗಿದ್ದ ದಿ ಮಳೂರು ಪುಟ್ಟಸ್ವ

ಬೂತ್ ಮಟ್ಟದ ಕಾರ್ಯಕರ್ತರನ್ನು ಸದೃಢಗೊಳಿಸುತ್ತೇನೆ. ಸಿ ಪಿ ಯೋಗೇಶ್ವರ್
ಚನ್ನಪಟ್ಟಣ: ಬೂತ್ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸುವ ಮುಖಾಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಕಾರ್ಯಕರ್ತ

ಮಿಸ್ ನಂದಿನಿ ಚಲನಚಿತ್ರ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ವರದಾನ ಪ್ರಿಯಾಂಕ ಉಪೇಂದ್ರ
ಚನ್ನಪಟ್ಟಣ: ಮಿಸ್ ನಂದಿನಿ ಚಲನಚಿತ್ರದಲ್ಲಿನ ನವಿರಾದ ಕಥೆಯು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಚಿತ್ರಕಥೆಯ ಮೂಲಕ ಸರ್ಕಾರಿ ಶ

ಚನ್ನಪಟ್ಟಣ ತಾಲ್ಲೂಕು ರೈತ ಸಂಘದ ಹುಟ್ಟಿಗೆ ಕಾರಣವಾಗಿತ್ತು ಸು ತ ರಾಮೇಗೌಡ
ಚನ್ನಪಟ್ಟಣ: ಚನ್ನಪಟ್ಟಣ ತಾಲ್ಲೂಕು ರೈತಸಂಘದ ಹುಟ್ಟಿಗೆ ಕಾರಣವಾಗಿತ್ತು. ಅರಳಾಳುಸಂದ್ರ ಗ್ರಾಮ ಮೊದಲ್ಗೊಂಡು ಹಲವಾರು ಗ್ರಾಮಗಳಲ್ಲಿ ರೈತ ಚಳವಳಿ

ಮುದಗೆರೆ ಗ್ರಾಮದ ಬಳಿ ಭೀಕರ ಅಪಘಾತ. ಮೂರು ಮಂದಿ ಸಾವು
ಚನ್ನಪಟ್ಟಣ: ಬೆಂಗಳೂರು–ಮೈಸೂರು ನಡುವಿನ ಮುದಗೆರೆ ಗ್ರಾಮದ ಬಳಿಯ ವೈಶಾಲಿ ಹೋಟೆಲ್ ಹತ್ತಿರ ದಶಪಥ ಹೆದ್ದಾರಿಯಲ್ಲಿ ಟೆಂಪೋ ಟ್ರಾವೆಲ್ಲರ್ ಒಂದು ಚ
ಪ್ರತಿಕ್ರಿಯೆಗಳು