Tel: 7676775624 | Mail: info@yellowandred.in

Language: EN KAN

    Follow us :


ಒತ್ತಡದ ವೃತ್ತಿ ಜೀವನದಲ್ಲಿಯೂ ಸಂಭ್ರಮಿಸುವುದನ್ನು ಕಲಿಯಿರಿ ಐಜಿಪಿ ಕೆ ಚಂದ್ರಶೇಖರ

Posted date: 17 Nov, 2022

Powered by:     Yellow and Red

ಒತ್ತಡದ ವೃತ್ತಿ ಜೀವನದಲ್ಲಿಯೂ ಸಂಭ್ರಮಿಸುವುದನ್ನು ಕಲಿಯಿರಿ ಐಜಿಪಿ ಕೆ ಚಂದ್ರಶೇಖರ

ಚನ್ನಪಟ್ಟಣ: ಪೋಲೀಸ್ ವೃತ್ತಿಯೇ ಒತ್ತಡದ ವೃತ್ತಿಯಾಗಿದ್ದು, ಒತ್ತಡದ ಕೆಲಸದ ಜೊತೆಗೆ ತಮ್ಮ ಕುಟುಂಬಕ್ಕೂ ಸಮಯ ನೀಡಿ, ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಸಂಭ್ರಮವನ್ನು ಆಚರಿಸಬೇಕು ಎಂದು ಕೇಂದ್ರ ವಲಯ ಐಜಿಪಿ ಕೆ ಚಂದ್ರಶೇಖರ ಪೋಲಿಸರಿಗೆ ಕರೆ ನೀಡಿದರು. ಅವರು ಶುಕ್ರವಾರ ಸಂಜೆ ನಗರದ ಪೋಲೀಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಮನಗರ ಜಿಲ್ಲಾ ಪೋಲೀಸ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.


 ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾನ್ಯ ಕೇಂದ್ರವಲಯದ ಐಜಿಪಿ ರವರಾದ ಶ್ರೀ ಕೆ ಚಂದ್ರಶೇಖರ್ ಐಪಿಎಸ್ ರವರು ಆಗಮಿಸಿದ್ದರು.


ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಪೊಲೀಸ್ ವೃತ್ತಿ ಜೀವನದಲ್ಲಿ ಬಹಳ ಒತ್ತಡದಿಂದ ಕರ್ತವ್ಯ ನಿರ್ವಹಿಸುವ ಸಂದರ್ಭಗಳು ಇರುತ್ತವೆ, ಇಂತಹ ಸಂದರ್ಭಗಳಲ್ಲಿ ಒತ್ತಡಕ್ಕೆ ಒಳಗಾಗದೆ ಪ್ರತಿಯೊಂದು ಸಂದರ್ಭವನ್ನು ಸಂಭ್ರಮಿಸಿ ಒತ್ತಡದಿಂದ ಹೊರ ಬರುವಂತೆ ಕರೆ ನೀಡಿದರು. ತಮಗಾಗಿ ದುಡಿಯುವ ನಮ್ಮ ಒತ್ತಡಗಳನ್ನು ಸಹಿಸಿಕೊಳ್ಳುವ ತಮ್ಮ ಕುಟುಂಬ ವರ್ಗದವರೊಂದಿಗೆ ಬಿಡುವಿನ ಸಮಯದಲ್ಲಿ ತಮ್ಮ ಅಮೂಲ್ಯ ಕ್ಷಣಗಳನ್ನು ಮೀಸಲಿಡುವಂತೆ ತಿಳಿಸಿದರು. ಪ್ರತಿ ವರ್ಷ ಪೊಲೀಸರಿಗಾಗಿ  ನಡೆಯುವ  ಕ್ರೀಡಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಭ್ರಮಿಸುವಂತೆ ಕರೆ ನೀಡಿದರು. ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ  ಕ್ರೀಡಾಪಟುಗಳಿಗೆ ಐಜಿಪಿ ರವರು ಪ್ರಶಸ್ತಿಗಳನ್ನು  ನೀಡಿ ಅಭಿನಂದಿಸಿದರು. ಆಗಮಿಸಿದ ಪೊಲೀಸ್ ಕುಟುಂಬದವರಿಗೆ ಮತ್ತು ಮಕ್ಕಳಿಗೆ ಅಭಿನಂದನೆ ಸಲ್ಲಿಸಿರುತ್ತಾರೆ.


 ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಪಟ್ಟವನ್ನು  ಡಿಎಆರ್ ವಿಭಾಗದ ಮಧು ಪಡೆದರೆ, ಮಹಿಳಾ ತಂಡದ ವೈಯಕ್ತಿಕ ಚಾಂಪಿಯನ್ ಕು. ರಶ್ಮಿ ಮಹಿಳಾ ಪೊಲೀಸ್ ಠಾಣೆ  ರವರು ಪಡೆದರು, ಕ್ರೀಡಾಕೂಟದ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು  ಡಿಎಆರ್- ಡಿಪಿಓ ತಂಡ ಪಡೆದುಕೊಂಡಿತು.


ಸದರಿ ಕ್ರೀಡಾಕೂಟದಲ್ಲಿ  ರಾಮನಗರ ಜಿಲ್ಲಾಧಿಕಾರಿಗಳಾದ ಅವಿನಾಶ್ ಮೆನನ್ ರಾಜೇಂದ್ರನ್  ರವರು, ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ ಸಂತೋಷ್ ಬಾಬು ಐಪಿಎಸ್ ರವರು, ಜಿಲ್ಲಾ ಪಂಚಾಯತ್ ಸಿಇಓ ರವರಾದ  ದಿಗ್ವಿಜಯ ಬೋಡ್ಕೆ ರವರು ಹಾಗೂ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕ್ರೀಡಾಕೂಟದಲ್ಲಿ  ಭಾಗವಹಿಸಿ ಕ್ರೀಡಾಕೂಟಕ್ಕೆ ಮೆರಗು ನೀಡಿದರು.


*ಸಮುದಾಯ ಭವನ ಉದ್ಘಾಟನೆ*

ಇದೇ ಸಂದರ್ಭದಲ್ಲಿ ಚನ್ನಪಟ್ಟಣದ ಡಿಎಆರ್ ಕೇಂದ್ರ ಸ್ಥಾನದಲ್ಲಿ ನಿರ್ಮಾಣವಾಗಿರುವ ಪೊಲೀಸ್ ಸಮುದಾಯ ಭವನವನ್ನು ಕೇಂದ್ರವಲಯದ ಐಜಿಪಿ ರವರಾದ ಕೆ ಚಂದ್ರಶೇಖರ್ ಐಪಿಎಸ್ ರವರು ಉದ್ಘಾಟಿಸಿದರು.


 ಎರಡು ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಿಸಿರುವ ಸದರಿ ಪೋಲಿಸ್ ಸಮುದಾಯ ಭವನವನ್ನು  ರಾಮನಗರ ಜಿಲ್ಲಾ ಪೊಲೀಸರ ಉಪಯೋಗಕ್ಕಾಗಿ ಮುಕ್ತಗೊಳಿಸಿ ಶುಭ ಕೋರಿದರು.


 ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಮನಗರ ಜಿಲ್ಲಾಧಿಕಾರಿಗಳಾದ ಅವಿನಾಶ್  ಮೆನನ್ ರಾಜೇಂದ್ರನ್  ರವರು,ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ ಸಂತೋಷ್ ಬಾಬು ಐಪಿಎಸ್ ರವರು, ಜಿಲ್ಲಾ ಪಂಚಾಯತ್ ಸಿಇಓ ರವರಾದ  ದಿಗ್ವಿಜಯ ಬೋಡ್ಕೆ  ರವರು ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in channapatna »

ನಗರದ ವಿವಿಧ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಜರುಗಿದ ಹನುಮ ಜಯಂತಿ
ನಗರದ ವಿವಿಧ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಜರುಗಿದ ಹನುಮ ಜಯಂತಿ

ಚನ್ನಪಟ್ಟಣ: ನಗರ ಸೇರಿದಂತೆ ತಾಲೂಕಿನಾದ್ಯಂತ ಹಲವಾರು ಆಂಜನೇಯ ದೇವಾಲಯಗಳಲ್ಲಿ ಸೋಮವಾರ ವಿಜೃಂಭಣೆಯಿಂದ ಹನುಮ ಜಯಂತಿಯನ್ನು ಆಚರಿಸಲಾಯಿತು. ಪಟ್ಟಣ

ರಸ್ತೆ ಅಭಿವೃದ್ಧಿಗೆ ಅಡ್ಡಲಾಗಿದ್ದ ಖಬರಸ್ಥಾನ ಮತ್ತು ದೇವಸ್ಥಾನವನ್ನು ಮುಂಜಾನೆ ತೆರವುಗೊಳಿಸಿದ ಅಧಿಕಾರಿಗಳು
ರಸ್ತೆ ಅಭಿವೃದ್ಧಿಗೆ ಅಡ್ಡಲಾಗಿದ್ದ ಖಬರಸ್ಥಾನ ಮತ್ತು ದೇವಸ್ಥಾನವನ್ನು ಮುಂಜಾನೆ ತೆರವುಗೊಳಿಸಿದ ಅಧಿಕಾರಿಗಳು

ಚನ್ನಪಟ್ಟಣ: ಸಾತನೂರು ರಸ್ತೆ ಎಂದೆ ಪ್ರಸಿದ್ದಿಯಾದ ಚನ್ನಪಟ್ಟಣ-ಹಲಗೂರು ರಾಜ್ಯ ಹೆದ್ದಾರಿಯಲ್ಲಿದ್ದ ನಗರಕ್ಕೆ ಹೊಂದಿಕೊಂಡಿರುವ ರಸ್ತೆಯ ಪಕ್ಕದಲ್ಲಿದ್

ಶೋಕಿಗಾಗಿ ಅಧ್ಯಕ್ಷ, ಪೌರಾಯುಕ್ತರಾಗಿದ್ದೀರಿ ಮೊದಲು ಅಭಿವೃದ್ಧಿ ಮಾಡಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ
ಶೋಕಿಗಾಗಿ ಅಧ್ಯಕ್ಷ, ಪೌರಾಯುಕ್ತರಾಗಿದ್ದೀರಿ ಮೊದಲು ಅಭಿವೃದ್ಧಿ ಮಾಡಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ

ಚನ್ನಪಟ್ಟಣ: ನೀವು ಚನ್ನಪಟ್ಟಣ ನಗರವನ್ನು ಅಭಿವೃದ್ಧಿ ಮಾಡಲು ಬಂದವರಲ್ಲಾ, ಕೇವಲ ಶೋಕಿಗಾಗಿ ಅಧ್ಯಕ್ಷ ಮತ್ತು ಪೌರಾಯುಕ್ತರಾಗಿದ್ದೀರಿ, ನಿಮ್ಮ ಶೋ

ಎನ್ಎಸ್ ಗೌಡರಿಗೆ ಗಣ್ಯರಿಂದ ಶ್ರದ್ಧಾಂಜಲಿ
ಎನ್ಎಸ್ ಗೌಡರಿಗೆ ಗಣ್ಯರಿಂದ ಶ್ರದ್ಧಾಂಜಲಿ

ಚನ್ನಪಟ್ಟಣ.ನ.೩೦: ನಗರದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ೩೨ವರ್ಷಗಳ ಕಾಲ ದೀರ್ಘಾ ವಧಿ ಅಧ್ಯಕ್ಷರಾಗಿದ್ದ  ಎನ್. ಎಸ್ ಗೌಡ ಅವರ

ಪುರಭವನ ನೆಲಸಮಗೊಳಿಸದಂತೆ ನಗರಸಭೆ ಅಧಿಕಾರಿಗಳಿಗೆ ಮನವಿ
ಪುರಭವನ ನೆಲಸಮಗೊಳಿಸದಂತೆ ನಗರಸಭೆ ಅಧಿಕಾರಿಗಳಿಗೆ ಮನವಿ

ಚನ್ನಪಟ್ಟಣ.ನ.೨೯: ನಗರದ ಪುರಭವನದ ಮುಂದೆ ಸಭೆ ಸೇರಿದ್ದ ನಾಗರಿಕ ಹೋರಾಟ ಸಮಿತಿಯ ಪ್ರಮುಖರು ಪುರಭವನ ಐತಿಹಾಸಿಕವಾದುದು. ಇದನ್ನು ಉಳಿಸಿ, ಕೆಡವಲು ಅವಕ

ನಗರದಲ್ಲಿನ ಪುರಭವನ ಕೆಡವದಂತೆ ಆಗ್ರಹಿಸಲು ಸಭೆ. ಸರ್ವರೂ ಭಾಗವಹಿಸಲು ಕರೆ
ನಗರದಲ್ಲಿನ ಪುರಭವನ ಕೆಡವದಂತೆ ಆಗ್ರಹಿಸಲು ಸಭೆ. ಸರ್ವರೂ ಭಾಗವಹಿಸಲು ಕರೆ

ಚನ್ನಪಟ್ಟಣ


ತಾಲ್ಲೂಕಿನ ಸನ್ಮಿತ್ರರೇ;

*ನಗರದ ಹೃದಯ ಭಾಗದ

ತಾಲ್ಲೂಕಿನಲ್ಲಿ ನಿಂತ ನೀರಾದ ಕಾಂಗ್ರೆಸ್ ಪಕ್ಷ ಬಲಪಡಿಸಲು ಡಿ ಕೆ ಬ್ರದರ್ಸ್ ಹರಸಾಹಸ ಸೋಮವಾರ ಇನ್ನಿಬ್ಬರಿಂದ ಅರ್ಜಿ
ತಾಲ್ಲೂಕಿನಲ್ಲಿ ನಿಂತ ನೀರಾದ ಕಾಂಗ್ರೆಸ್ ಪಕ್ಷ ಬಲಪಡಿಸಲು ಡಿ ಕೆ ಬ್ರದರ್ಸ್ ಹರಸಾಹಸ ಸೋಮವಾರ ಇನ್ನಿಬ್ಬರಿಂದ ಅರ್ಜಿ

ಚನ್ನಪಟ್ಟಣ: ೨೦೨೩ ರ ಚುನಾವಣೆಗೆ ಇನ್ನೂ ಆರು ತಿಂಗಳ ಸಮಯವಿದೆ. ರಾಜ್ಯಾದ್ಯಂತ ಇನ್ನು ಮುಂದೆ ಆರಂಭವಾಗುವ ಚುನಾವಣಾ ಕಾವು ಚನ್ನಪಟ್ಟಣ ಕ್ಷೇತ್ರದಲ್ಲಿ ಮಾತ್ರ ವರ್ಷದ ಹಿಂದೆಯೇ ಆರಂಭವಾಗಿದ್ದು ವಿಶ

ಚೋಳಮಾರನಹಳ್ಳಿ ಸರ್ವೆ ನಂ.90ರ ಕಡತ ತಾಲ್ಲೂಕು ಕಛೇರಿಯಿಂದ ಕಾಣೆ: ಇಬ್ಬರ ಮೇಲೆ ಎಫ್ಐಆರ್ ದಾಖಲು
ಚೋಳಮಾರನಹಳ್ಳಿ ಸರ್ವೆ ನಂ.90ರ ಕಡತ ತಾಲ್ಲೂಕು ಕಛೇರಿಯಿಂದ ಕಾಣೆ: ಇಬ್ಬರ ಮೇಲೆ ಎಫ್ಐಆರ್ ದಾಖಲು

ಚನ್ನಪಟ್ಟಣ: ಕಳೆದ ಎರಡು ವರ್ಷಗಳ ಹಿಂದಿನಿಂದಲೂ ತಾಲ್ಲೂಕು ಕಛೇರಿಯಲ್ಲಿ ಅಕ್ರಮ ವ್ಯವಹಾರ, ಅಕ್ರಮ ಖಾತೆ, ನಕಲಿ ಖಾತೆ ಸೃಷ್ಠಿ, ಕಡತಗಳು ಅಭಿಲೇಖಾ

ಒತ್ತಡದ ವೃತ್ತಿ ಜೀವನದಲ್ಲಿಯೂ ಸಂಭ್ರಮಿಸುವುದನ್ನು ಕಲಿಯಿರಿ ಐಜಿಪಿ ಕೆ ಚಂದ್ರಶೇಖರ
ಒತ್ತಡದ ವೃತ್ತಿ ಜೀವನದಲ್ಲಿಯೂ ಸಂಭ್ರಮಿಸುವುದನ್ನು ಕಲಿಯಿರಿ ಐಜಿಪಿ ಕೆ ಚಂದ್ರಶೇಖರ

ಚನ್ನಪಟ್ಟಣ: ಪೋಲೀಸ್ ವೃತ್ತಿಯೇ ಒತ್ತಡದ ವೃತ್ತಿಯಾಗಿದ್ದು, ಒತ್ತಡದ ಕೆಲಸದ ಜೊತೆಗೆ ತಮ್ಮ ಕುಟುಂಬಕ್ಕೂ ಸಮಯ ನೀಡಿ, ಕ್ರೀಡೆಯಲ್ಲಿ ಭಾಗವಹಿಸುವ ಮ

ಕನಕದಾಸರು ದಾಸ ಶ್ರೇಷ್ಠರಲ್ಲೇ ಶ್ರೇಷ್ಠರು ತಹಶಿಲ್ದಾರ್ ಸುದರ್ಶನ್
ಕನಕದಾಸರು ದಾಸ ಶ್ರೇಷ್ಠರಲ್ಲೇ ಶ್ರೇಷ್ಠರು ತಹಶಿಲ್ದಾರ್ ಸುದರ್ಶನ್

ಚನ್ನಪಟ್ಟಣ: ದಾಸಸಾಹಿತ್ಯದಲ್ಲೇ ಶ್ರೇಷ್ಠ ಸಾಹಿತ್ಯ ಕನಕದಾಸ ಸಾಹಿತ್ಯ. ಈ ಸಾಹಿತ್ಯವನ್ನು ಓದುವ ಮೂಲಕ ನಾವೆಲ್ಲರೂ ನಮ್ಮ ಬದುಕಿನಲ್ಲಿ ಸಾಹಿತ್ಯದ

Top Stories »  


Top ↑