Tel: 7676775624 | Mail: info@yellowandred.in

Language: EN KAN

    Follow us :


ಚೋಳಮಾರನಹಳ್ಳಿ ಸರ್ವೆ ನಂ.90ರ ಕಡತ ತಾಲ್ಲೂಕು ಕಛೇರಿಯಿಂದ ಕಾಣೆ: ಇಬ್ಬರ ಮೇಲೆ ಎಫ್ಐಆರ್ ದಾಖಲು

Posted date: 17 Nov, 2022

Powered by:     Yellow and Red

ಚೋಳಮಾರನಹಳ್ಳಿ ಸರ್ವೆ ನಂ.90ರ ಕಡತ ತಾಲ್ಲೂಕು ಕಛೇರಿಯಿಂದ ಕಾಣೆ: ಇಬ್ಬರ ಮೇಲೆ ಎಫ್ಐಆರ್ ದಾಖಲು

ಚನ್ನಪಟ್ಟಣ: ಕಳೆದ ಎರಡು ವರ್ಷಗಳ ಹಿಂದಿನಿಂದಲೂ ತಾಲ್ಲೂಕು ಕಛೇರಿಯಲ್ಲಿ ಅಕ್ರಮ ವ್ಯವಹಾರ, ಅಕ್ರಮ ಖಾತೆ, ನಕಲಿ ಖಾತೆ ಸೃಷ್ಠಿ, ಕಡತಗಳು ಅಭಿಲೇಖಾಲಯ (ರೆಕಾರ್ಡ್ ರೂಂ) ನಿಂದಲೇ ಮಂಗಮಾಯ ಪ್ರಕಣರಣಗಳು ಸೇರಿದಂತೆ ಒಂದಲ್ಲಾ ಒಂದು ರೀತಿಯಲ್ಲಿ ತಹಶಿಲ್ದಾರ್ ಕಛೇರಿ  ಸುದ್ದಿಯಲ್ಲಿದೆ. ಕಳೆದ ಬಾರಿ ಕರ್ತವ್ಯ ನಿರ್ವಹಿಸಿದ ಸುದರ್ಶನ್ ರವರೇ ಹತ್ತೊಂಭತ್ರು ಮಂದಿಯ ಮೇಲೆ ಕೇಸು ದಾಖಲಿಸಿದ್ದು ಸೇರಿ ಹರ್ಷವರ್ಧನ್ ರವರು ಒಂದು ಕೇಸು ದಾಖಲಿಸಿ ನಂತರ ಸುದರ್ಶನ್ ರವರು ಇತ್ತೀಚೆಗೆ ದಾಖಲಿಸಿದ ಕೇಸುಗಳು  ಜನಮಾನಸದಲ್ಲಿ ಮಾಸುವ ಮುನ್ನವೇ ತಾಲ್ಲೂಕು ಕಛೇರಿ ಈಗ ಮತ್ತೊಂದು ಕಡತ ಕಾಣೆಯಾಗಿರುವ ಪ್ರಕರಣ ದಾಖಲಿಸಿದ್ಧು ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತು ತಾಲ್ಲೂಕು ಕಛೇರಿಗೆ ಅಕ್ಷರಶಃ ಅನ್ವಯಿಸುತ್ತದೆ.


ತಾಲ್ಲೂಕು ಕಛೇರಿಯ ಅಭಿಲೇಖಾಲಯ ವಿಭಾಗದಲ್ಲಿ ತಾಲ್ಲೂಕಿನ ಚೋಳಮಾರನಹಳ್ಳಿ ಗ್ರಾಮದ ಸರ್ವೆ ನಂ.90ರ ರೆಕಾರ್ಡ್ ಕಾಣೆಯಾಗಿದ್ದು, ಇಬ್ಬರು ವ್ಯಕ್ತಿಗಳ ಮೇಲೆ ಕೇಸು ದಾಖಲಾಗಿರುವ ಪ್ರಕಣರಣ ಬೆಳಕಿಗೆ ಬಂದಿದೆ. 

ತಹಶೀಲ್ದಾರ್ ಬಿ.ಕೆ.ಸುದರ್ಶನ್ ಅವರು ಈ ಸಂಬಂಧ ಪುರ ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಂಜು ಮತ್ತು ಮಾಜಿ ಗ್ರಾಮ ಸಹಾಯಕ ಮಹದೇವ ಎಂಬ ಇಬ್ಬರು ಅರೋಪಿಗಳನ್ನು ಬಂಧಿಸಿದ್ದು ವಿಚಾರಣೆ ಕೈಗೊಂಡಿದ್ದಾರೆ ಎಂದು ಬಲ್ಲ ಖಚಿತ ಮಾಹಿತಿಗಳು ಲಭ್ಯವಾಗಿವೆ.


*ಘಟನೆಯ ಹಿನ್ನೆಲೆ:*

ನಗರದ ವಾಸಿ ಬೋರೇಗೌಡ ಎಂಬುವರು, ತಾಲ್ಲೂಕಿನ ಚೋಳಮಾರನಹಳ್ಳಿ ಗ್ರಾಮದ ಸರ್ವೆ ನಂ.90ರಲ್ಲಿ 2.20 ಗುಂಟೆ ಎಲ್‍ಎನ್‍ಡಿಎಸ್‍ಆರ್206/79-80ರಂತೆ ಅಂಕಯ್ಯ ಬಿನ್ ಅಂಕಯ್ಯ ರವರ ಹೆಸರಿಗೆ ಸಾಗುವಳಿ ಚೀಟಿ ಕೊಟ್ಟಿರುವ ಬಗ್ಗೆ ಮೂಲ ಸಾಗುವಳಿ ಚೀಟಿ, ಓಎಂ.ಕಾಫಿ, ಸರ್ವೆ ಸ್ಕೆಚ್ ಕಾಫಿಗಳನ್ನು ಕೊಡಬೇಕೆಂದು ಕೋರಿ ದಿನಾಂಕ:27-10-2022ರಂದು ತಾಲ್ಲೂಕು ಕಛೇರಿಯ ಟಪಾಲಿಗೆ ಅರ್ಜಿ ನೀಡಿರುತ್ತಾರೆ. ಸದರಿ ಅರ್ಜಿಗೆ ಸಲ್ಲಿಸಿದ ಮೂಲ ದಾಖಲಾತಿಗಳು ಲಭ್ಯವಿರುವುದಿಲ್ಲ ಎಂದು ರೆಕಾರ್ಡ್ ರೂಂನ ವಿಷಯ ನಿರ್ವಾಹಕರು ಅರ್ಜಿದಾರರಿಗೆ ತಿಳಿಸಿರುತ್ತಾರೆ.

ಇದರಿಂದ ಬೇಸರಗೊಂಡ ಬೋರೇಗೌಡರು ನೀಡಿದ್ದ ಅರ್ಜಿಯನ್ನು ವಾಪಸ್ಸು ಪಡೆದುಕೊಂಡು, ತಮ್ಮ ಪಕ್ಕದ ಜಮೀನಿನವರೆನ್ನಲಾದ ಮಂಜು ಎಂಬುವರನ್ನು ಕರೆದುಕೊಂಡು ನ.15ರಂದು ತಾಲ್ಲೂಕು ಕಛೇರಿಯ ಗ್ರೇಡ್-2 ತಹಶೀಲ್ದಾರ್ ಲಕ್ಷ್ಮಿದೇವಿ ಅವರನ್ನು ಭೇಟಿ ಮಾಡಿ ಅರ್ಜಿಗೆ ಸಂಬಂಧಿಸಿದಂತೆ ಮೂಲ ದಾಖಲಾತಿಗಳನ್ನು ನೀಡಿರುತ್ತಾರೆ. ಅದನ್ನು ಗಮನಿಸಿದ ಗ್ರೇಡ್ 2 ತಹಶೀಲ್ದಾರ್ ಲಕ್ಷ್ಮಿದೇವಿ ಅವರು, ಅನುಮಾನಗೊಂಡು ತಹಶೀಲ್ದಾರ್ ಬಿ.ಕೆ.ಸುದರ್ಶನ್ ಅವರಿಗೆ ನಿಜ ವಿಷಯವನ್ನು ತಿಳಿಸಿದ್ದಾರೆ. 


ತಹಶೀಲ್ದಾರ್ ಬಿ.ಕೆ.ಸುದರ್ಶನ್ ಅವರು ತಕ್ಷಣ ಬೋರೇಗೌಡ ಮತ್ತು ಮಂಜು ನೀಡಿದ ದಾಖಲೆಗಳನ್ನು ಪರಿಶೀಲಿಸಿ, ಬೋರೇಗೌಡ ಮತ್ತು ಮಂಜು ಅವರನ್ನು ವಿಚಾರ ಮಾಡಿದಾಗ, ಸದರಿ ಕಡತವನ್ನು ಮಹದೇವ ಎಂಬುವರು ನನಗೆ 3 ವರ್ಷಗಳ ಹಿಂದೆ ನೀಡಿರುತ್ತಾರೆ ಎಂದು ಮಂಜು ಸತ್ಯಾಂಶವನ್ನು ಬಾಯಿ ಬಿಟ್ಟಿದ್ದಾನೆ. ಆಗ ಚೋಳಮಾರನಹಳ್ಳಿ ಸರ್ವೆ ನಂ.90ರ ಮೂಲಕ ಕಡತ ರೆಕಾರ್ಡ್ ರೂಂನಿಂದ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಮಹದೇವ ಎಂಬುವರು ವಿಚಾರ ಮಾಡಿದಾಗ ತಾಲ್ಲೂಕು ಕಛೇರಿಯಲ್ಲಿ 2005 ರವರೆಗೆ ಗ್ರಾಮ ಸಹಾಯಕನಾಗಿ ಕೆಲಸ ಮಾಡುತ್ತಿದ್ದೆ ಎಂಬುದನ್ನು ಒಪ್ಪಿಕೊಂಡಿದ್ದಾನೆ.


ತಾಲ್ಲೂಕು ಕಛೇರಿ  ರೆಕಾರ್ಡ್ ರೂಂ ನಲ್ಲಿರಬೇಕಾದ ಮೂಲ ದಾಖಲಾತಿ ಕಡತ ಯಾವುದೋ ಸಮಯದಲ್ಲಿ ಮೋಸ ಮಾಡುವ ಉದ್ದೇಶದಿಂದ ಒಳಸಂಚು ಮಾಡಿ ಕಳ್ಳತನ ಮಾಡಿಕೊಂಡು ಅಥವಾ ಸೃಷ್ಠಿ ಮಾಡಿರುವುದು ಕಂಡು ಬಂದಿರುತ್ತದೆ. ಸದರಿ ಕಡತವನ್ನು ಕಳ್ಳತನ ಮಾಡಿಕೊಂಡು ಅಥವಾ ಸೃಷ್ಠಿ ಮಾಡಿ ಸರ್ಕಾರಕ್ಕೆ ಮೋಸ ಮಾಡುವ ಉದ್ದೇಶದಿಂದ ಒಳಸಂಚು ಮಾಡಿರುವ ಮಂಜು ಮತ್ತು ಮಹದೇವ ಎಂಬುವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ತಹಶೀಲ್ದಾರ್ ಬಿ.ಕೆ ಸುದರ್ಶನ್ ಅವರು ಪುರ ಪೊಲೀಸರಿಗೆ ದೂರು ನೀಡಿದ್ದಾರೆ.


ಪುರ ಪೊಲೀಸ್ ಠಾಣೆಯ  ಸಬ್ ಇನ್ಸ್‍ಸ್ಪೆಕ್ಟರ್ ಶ್ರೀಮತಿ ಮಮತಾ ಅವರು ಈ ಸಂಬಂಧ ಪ್ರಕಣರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಇತ್ತೀಚೆಗೆ ತಾಲ್ಲೂಕು ಆಡಳಿತ ಕೇಂದ್ರದಲ್ಲಿ ಅಕ್ರಮವಾಗಿ ಭೂಹಗರಣಗಳು ನಡೆದು, ಗೋಮಾಳ ಸೇರಿದಂತೆ ಹಲವಾರು ಸರ್ಕಾರಿ ಭೂಮಿಯನ್ನು ಕೊಳ್ಳೆ ಹೊಡೆದಿರುವುದು ಕಂಡುಬರುತ್ತಿದೆ. ಕೇವಲ ಬೆರಳೆಣಿಕೆಯ ಪ್ರಾಮಾಣಿಕ ಅಧಿಕಾರಿಗಳು ಇದನ್ನು ಹೊರತರಲು ಪ್ರಯತ್ನಿಸಿ ಎಫ್ಐಆರ್ ದಾಖಲು ಮಾಡುತ್ತಿದ್ದಾರೆ. ಸಮಗ್ರ ಹಾಗೂ ಶೀಘ್ರ ತನಿಖೆಯಾಗದೆ ಕೆಲ ಕೇಸುಗಳು ಹಳ್ಳ ಹಿಡಿದಿವೆ. ಒಂದೆರಡು ಪ್ರಕರಣಗಳಲ್ಲಿ ಮಾತ್ರ ಸಣ್ಣ ಪ್ರಮಾಣದ ಶಿಕ್ಷೆಯಾಗಿರುವುದು ಕಂಡುಬಂದಿದೆ. ಸಂಬಂಧಿಸಿದ ಮೇಲಾಧಿಕಾರಿಗಳು ಶೀಘ್ರವಾಗಿ ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಂಡು ಸರ್ಕಾರಿ ಆಸ್ತಿಯನ್ನು ಉಳಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in channapatna »

ನಗರದ ವಿವಿಧ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಜರುಗಿದ ಹನುಮ ಜಯಂತಿ
ನಗರದ ವಿವಿಧ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಜರುಗಿದ ಹನುಮ ಜಯಂತಿ

ಚನ್ನಪಟ್ಟಣ: ನಗರ ಸೇರಿದಂತೆ ತಾಲೂಕಿನಾದ್ಯಂತ ಹಲವಾರು ಆಂಜನೇಯ ದೇವಾಲಯಗಳಲ್ಲಿ ಸೋಮವಾರ ವಿಜೃಂಭಣೆಯಿಂದ ಹನುಮ ಜಯಂತಿಯನ್ನು ಆಚರಿಸಲಾಯಿತು. ಪಟ್ಟಣ

ರಸ್ತೆ ಅಭಿವೃದ್ಧಿಗೆ ಅಡ್ಡಲಾಗಿದ್ದ ಖಬರಸ್ಥಾನ ಮತ್ತು ದೇವಸ್ಥಾನವನ್ನು ಮುಂಜಾನೆ ತೆರವುಗೊಳಿಸಿದ ಅಧಿಕಾರಿಗಳು
ರಸ್ತೆ ಅಭಿವೃದ್ಧಿಗೆ ಅಡ್ಡಲಾಗಿದ್ದ ಖಬರಸ್ಥಾನ ಮತ್ತು ದೇವಸ್ಥಾನವನ್ನು ಮುಂಜಾನೆ ತೆರವುಗೊಳಿಸಿದ ಅಧಿಕಾರಿಗಳು

ಚನ್ನಪಟ್ಟಣ: ಸಾತನೂರು ರಸ್ತೆ ಎಂದೆ ಪ್ರಸಿದ್ದಿಯಾದ ಚನ್ನಪಟ್ಟಣ-ಹಲಗೂರು ರಾಜ್ಯ ಹೆದ್ದಾರಿಯಲ್ಲಿದ್ದ ನಗರಕ್ಕೆ ಹೊಂದಿಕೊಂಡಿರುವ ರಸ್ತೆಯ ಪಕ್ಕದಲ್ಲಿದ್

ಶೋಕಿಗಾಗಿ ಅಧ್ಯಕ್ಷ, ಪೌರಾಯುಕ್ತರಾಗಿದ್ದೀರಿ ಮೊದಲು ಅಭಿವೃದ್ಧಿ ಮಾಡಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ
ಶೋಕಿಗಾಗಿ ಅಧ್ಯಕ್ಷ, ಪೌರಾಯುಕ್ತರಾಗಿದ್ದೀರಿ ಮೊದಲು ಅಭಿವೃದ್ಧಿ ಮಾಡಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ

ಚನ್ನಪಟ್ಟಣ: ನೀವು ಚನ್ನಪಟ್ಟಣ ನಗರವನ್ನು ಅಭಿವೃದ್ಧಿ ಮಾಡಲು ಬಂದವರಲ್ಲಾ, ಕೇವಲ ಶೋಕಿಗಾಗಿ ಅಧ್ಯಕ್ಷ ಮತ್ತು ಪೌರಾಯುಕ್ತರಾಗಿದ್ದೀರಿ, ನಿಮ್ಮ ಶೋ

ಎನ್ಎಸ್ ಗೌಡರಿಗೆ ಗಣ್ಯರಿಂದ ಶ್ರದ್ಧಾಂಜಲಿ
ಎನ್ಎಸ್ ಗೌಡರಿಗೆ ಗಣ್ಯರಿಂದ ಶ್ರದ್ಧಾಂಜಲಿ

ಚನ್ನಪಟ್ಟಣ.ನ.೩೦: ನಗರದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ೩೨ವರ್ಷಗಳ ಕಾಲ ದೀರ್ಘಾ ವಧಿ ಅಧ್ಯಕ್ಷರಾಗಿದ್ದ  ಎನ್. ಎಸ್ ಗೌಡ ಅವರ

ಪುರಭವನ ನೆಲಸಮಗೊಳಿಸದಂತೆ ನಗರಸಭೆ ಅಧಿಕಾರಿಗಳಿಗೆ ಮನವಿ
ಪುರಭವನ ನೆಲಸಮಗೊಳಿಸದಂತೆ ನಗರಸಭೆ ಅಧಿಕಾರಿಗಳಿಗೆ ಮನವಿ

ಚನ್ನಪಟ್ಟಣ.ನ.೨೯: ನಗರದ ಪುರಭವನದ ಮುಂದೆ ಸಭೆ ಸೇರಿದ್ದ ನಾಗರಿಕ ಹೋರಾಟ ಸಮಿತಿಯ ಪ್ರಮುಖರು ಪುರಭವನ ಐತಿಹಾಸಿಕವಾದುದು. ಇದನ್ನು ಉಳಿಸಿ, ಕೆಡವಲು ಅವಕ

ನಗರದಲ್ಲಿನ ಪುರಭವನ ಕೆಡವದಂತೆ ಆಗ್ರಹಿಸಲು ಸಭೆ. ಸರ್ವರೂ ಭಾಗವಹಿಸಲು ಕರೆ
ನಗರದಲ್ಲಿನ ಪುರಭವನ ಕೆಡವದಂತೆ ಆಗ್ರಹಿಸಲು ಸಭೆ. ಸರ್ವರೂ ಭಾಗವಹಿಸಲು ಕರೆ

ಚನ್ನಪಟ್ಟಣ


ತಾಲ್ಲೂಕಿನ ಸನ್ಮಿತ್ರರೇ;

*ನಗರದ ಹೃದಯ ಭಾಗದ

ತಾಲ್ಲೂಕಿನಲ್ಲಿ ನಿಂತ ನೀರಾದ ಕಾಂಗ್ರೆಸ್ ಪಕ್ಷ ಬಲಪಡಿಸಲು ಡಿ ಕೆ ಬ್ರದರ್ಸ್ ಹರಸಾಹಸ ಸೋಮವಾರ ಇನ್ನಿಬ್ಬರಿಂದ ಅರ್ಜಿ
ತಾಲ್ಲೂಕಿನಲ್ಲಿ ನಿಂತ ನೀರಾದ ಕಾಂಗ್ರೆಸ್ ಪಕ್ಷ ಬಲಪಡಿಸಲು ಡಿ ಕೆ ಬ್ರದರ್ಸ್ ಹರಸಾಹಸ ಸೋಮವಾರ ಇನ್ನಿಬ್ಬರಿಂದ ಅರ್ಜಿ

ಚನ್ನಪಟ್ಟಣ: ೨೦೨೩ ರ ಚುನಾವಣೆಗೆ ಇನ್ನೂ ಆರು ತಿಂಗಳ ಸಮಯವಿದೆ. ರಾಜ್ಯಾದ್ಯಂತ ಇನ್ನು ಮುಂದೆ ಆರಂಭವಾಗುವ ಚುನಾವಣಾ ಕಾವು ಚನ್ನಪಟ್ಟಣ ಕ್ಷೇತ್ರದಲ್ಲಿ ಮಾತ್ರ ವರ್ಷದ ಹಿಂದೆಯೇ ಆರಂಭವಾಗಿದ್ದು ವಿಶ

ಚೋಳಮಾರನಹಳ್ಳಿ ಸರ್ವೆ ನಂ.90ರ ಕಡತ ತಾಲ್ಲೂಕು ಕಛೇರಿಯಿಂದ ಕಾಣೆ: ಇಬ್ಬರ ಮೇಲೆ ಎಫ್ಐಆರ್ ದಾಖಲು
ಚೋಳಮಾರನಹಳ್ಳಿ ಸರ್ವೆ ನಂ.90ರ ಕಡತ ತಾಲ್ಲೂಕು ಕಛೇರಿಯಿಂದ ಕಾಣೆ: ಇಬ್ಬರ ಮೇಲೆ ಎಫ್ಐಆರ್ ದಾಖಲು

ಚನ್ನಪಟ್ಟಣ: ಕಳೆದ ಎರಡು ವರ್ಷಗಳ ಹಿಂದಿನಿಂದಲೂ ತಾಲ್ಲೂಕು ಕಛೇರಿಯಲ್ಲಿ ಅಕ್ರಮ ವ್ಯವಹಾರ, ಅಕ್ರಮ ಖಾತೆ, ನಕಲಿ ಖಾತೆ ಸೃಷ್ಠಿ, ಕಡತಗಳು ಅಭಿಲೇಖಾ

ಒತ್ತಡದ ವೃತ್ತಿ ಜೀವನದಲ್ಲಿಯೂ ಸಂಭ್ರಮಿಸುವುದನ್ನು ಕಲಿಯಿರಿ ಐಜಿಪಿ ಕೆ ಚಂದ್ರಶೇಖರ
ಒತ್ತಡದ ವೃತ್ತಿ ಜೀವನದಲ್ಲಿಯೂ ಸಂಭ್ರಮಿಸುವುದನ್ನು ಕಲಿಯಿರಿ ಐಜಿಪಿ ಕೆ ಚಂದ್ರಶೇಖರ

ಚನ್ನಪಟ್ಟಣ: ಪೋಲೀಸ್ ವೃತ್ತಿಯೇ ಒತ್ತಡದ ವೃತ್ತಿಯಾಗಿದ್ದು, ಒತ್ತಡದ ಕೆಲಸದ ಜೊತೆಗೆ ತಮ್ಮ ಕುಟುಂಬಕ್ಕೂ ಸಮಯ ನೀಡಿ, ಕ್ರೀಡೆಯಲ್ಲಿ ಭಾಗವಹಿಸುವ ಮ

ಕನಕದಾಸರು ದಾಸ ಶ್ರೇಷ್ಠರಲ್ಲೇ ಶ್ರೇಷ್ಠರು ತಹಶಿಲ್ದಾರ್ ಸುದರ್ಶನ್
ಕನಕದಾಸರು ದಾಸ ಶ್ರೇಷ್ಠರಲ್ಲೇ ಶ್ರೇಷ್ಠರು ತಹಶಿಲ್ದಾರ್ ಸುದರ್ಶನ್

ಚನ್ನಪಟ್ಟಣ: ದಾಸಸಾಹಿತ್ಯದಲ್ಲೇ ಶ್ರೇಷ್ಠ ಸಾಹಿತ್ಯ ಕನಕದಾಸ ಸಾಹಿತ್ಯ. ಈ ಸಾಹಿತ್ಯವನ್ನು ಓದುವ ಮೂಲಕ ನಾವೆಲ್ಲರೂ ನಮ್ಮ ಬದುಕಿನಲ್ಲಿ ಸಾಹಿತ್ಯದ

Top Stories »  


Top ↑