ತಾಲ್ಲೂಕಿನಲ್ಲಿ ನಿಂತ ನೀರಾದ ಕಾಂಗ್ರೆಸ್ ಪಕ್ಷ ಬಲಪಡಿಸಲು ಡಿ ಕೆ ಬ್ರದರ್ಸ್ ಹರಸಾಹಸ ಸೋಮವಾರ ಇನ್ನಿಬ್ಬರಿಂದ ಅರ್ಜಿ

ಚನ್ನಪಟ್ಟಣ: ೨೦೨೩ ರ ಚುನಾವಣೆಗೆ ಇನ್ನೂ ಆರು ತಿಂಗಳ ಸಮಯವಿದೆ. ರಾಜ್ಯಾದ್ಯಂತ ಇನ್ನು ಮುಂದೆ ಆರಂಭವಾಗುವ ಚುನಾವಣಾ ಕಾವು ಚನ್ನಪಟ್ಟಣ ಕ್ಷೇತ್ರದಲ್ಲಿ ಮಾತ್ರ ವರ್ಷದ ಹಿಂದೆಯೇ ಆರಂಭವಾಗಿದ್ದು ವಿಶೇಷವಾಗಿತ್ತು. ರಾಜ್ಯದಲ್ಲಿ ಚುನಾವಣೆ ಆರಂಭವಾಗಿದೆ ಎಂದು ಗೊತ್ತಾಗಿದ್ದೇ ಚನ್ನಪಟ್ಟಣ ಕ್ಷೇತ್ರದಲ್ಲಿ ಎಂದರೂ ತಪ್ಪಾಗುವುದಿಲ್ಲ. ಅಷ್ಟರ ಮಟ್ಟಿಗೆ ಚುನಾವಣಾ ಜಿದ್ದಾಜಿದ್ದಿ ಏರ್ಪಟ್ಟು ಮೊದಲಿಗೆ ಬಿಜೆಪಿ ಯ ಸಿ ಪಿ ಯೋಗೇಶ್ವರ್ ಮತ್ತು ಶಾಸಕ ಹೆಚ್ ಡಿ ಕುಮಾರಸ್ವಾಮಿ ಯವರ ಬೆಂಬಲಿಗರ ನಡುವೆ ಆರಂಭವಾಗಿ ನೇರವಾಗಿ ವಿಧಾನ ಸಭಾ ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯರ ನಡುವೆ ಮಾಧ್ಯಮದವರ ಮೂಲಕ ಪರವಿರೋಧ ಹೇಳಿಕೆ ನೀಡುವ ಮೂಲಕ ಚುನಾವಣೆ ಆರಂಭಗೊಂಡಿತು.
ಇವರಿಬ್ಬರ ನಡುವಿನ ಮಾತಿನ ಚಕಮಕಿಯಲ್ಲಿ ಕಾಂಗ್ರೆಸ್ ಪಕ್ಷ ತಾಲ್ಲೂಕಿನಲ್ಲಿ ಇದೆಯೋ ಇಲ್ಲವೋ ಎಂಬ ಗುಸುಗುಸು ಆರಂಭವಾಗಿತ್ತು. ೨೦೧೮ ರ ಚುನಾವಣೆ ಮುಗಿದ ಮೇಲೆ ನೆಪಮಾತ್ರದ ಸಭೆಗಳನ್ನು ಹೊರತುಪಡಿಸಿ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಪ್ರಕ್ರಿಯೆಗಳು ನಡೆಯಲೇ ಇಲ್ಲಾ. ಕಾಂಗ್ರೆಸ್ ಪಕ್ಷದ ಶಾಸಕರಿರಲಿಲ್ಲಾ ನಿಜ. ಆದರೆ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅದೇ ಪಕ್ಷದಿಂದ ಚುನಾಯಿತರಾದ ಸಂಸದರೊಬ್ಬರಿದ್ದಾರೆ ಎಂಬುದಕ್ಕಾದರೂ, ಪದಾಧಿಕಾರಿಗಳು ಸಕ್ರಿಯವಾಗಿ ತೊಡಗಿಕೊಳ್ಳಬೇಕಾಗಿತ್ತು. ಶರತ್ ಚಂದ್ರ ರವರು ಸಣ್ಣಪುಟ್ಟ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಣ್ಮರೆಯಾಗುವುದು ಬಿಟ್ಟರೆ ಕಾಂಗ್ರೆಸ್ ಪಕ್ಷದ ಹಲವರು ಮುಖಂಡ ಮತ್ತು ಪದಾಧಿಕಾರಿ ಅನ್ನಿಸಿಕೊಂಡರೆ ಹೊರತು ಚುನಾವಣೆ ಹೆದರಿಸುವ ನಿಟ್ಟಿನಲ್ಲಿ ಬಲಗೊಳ್ಳಲಿಲ್ಲ.
ಇದರ ನಡುವೆ ಶಾಸಕ ಸ್ಥಾನದ ಆಕಾಂಕ್ಷೆ ಹೊಂದಿದ್ದ ಉದ್ಯಮಿ ಪ್ರಸನ್ನ ಪಿ ಗೌಡ ರವರನ್ನು ಕರೆತಂದು ಚುನಾವಣಾ ಅಖಾಡಕ್ಕೆ ಇಳಿಸಿದರು. ಈ ಅಖಾಡದಲ್ಲಿ ಪ್ರಸನ್ನ ಸದ್ದಿಲ್ಲದೆ ಕಾರ್ಯಾರಂಭ ಮಾಡಿದರು. ಲಕ್ಷಕ್ಕೆ ಲಕ್ಷ್ಯ ನೀಡದೆ ಚುನಾವಣೆ ಮುನ್ನವೇ ಮತದಾರರ ಮೇಲೆ ಪ್ರಭಾವ ಬೀರಿದರು. ಆರಂಭದಲ್ಲಿ ತಾಲ್ಲೂಕಿನ ಕಾಂಗ್ರೆಸ್ಸಿಗರು ಸಾಥ್ ನೀಡಿದ್ದಲ್ಲದೆ, ಹಳೆಯ ಕಾಂಗ್ರೆಸ್ ಮುಖಂಡರಾದಿಯಾಗಿ ಗ್ರಾಮಗಳನ್ನು ಪರಿಚಯಿಸಿಕೊಟ್ಟರು. ಕೆಲ ಹಂತದಲ್ಲಿ ಸ್ವತಃ ತನ್ನದೇ ಟೀಂ ಮಾಡೊಕೊಂಡು ಅಖಾಡಕ್ಕಿಳಿದು ನೊಂದವರಿಗೆ ಸ್ಪಂದಿಸುವ ಮೂಲಕ ನೆರವಾಗಿ ಗೆಲುವಿನ ಭರವಸೆ ಮೂಡಿಸಿಕೊಂಡರು. ಆರಂಭದಲ್ಲಿ ಸಾಥ್ ನೀಡಿದ ಮುಖಂಡರು ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಾಡಿದ ತಪ್ಪನ್ನೆಲ್ಲಾ ಧುರೀಣರ ಮುಂದೆ ಹೇಳಿದರು, ಅವರೂ ಕೇಳಿದರೂ ಎಂಬ ಊಹಾಪೋಹಗಳ ನಡುವೆ ಪ್ರಸನ್ನ ತೆರೆಮರೆಗೆ ಸರಿದರು.
*ಅಸಲಿ ಆಟ ಆರಂಭವಾಗಿದ್ದೇ ಆಗ*
ಪ್ರಸನ್ನ ಕ್ಷೇತ್ರದಿಂದ ಹಿಮ್ಮುಖವಾಗುತ್ತಿದ್ದಂತೆ ಸಾಮಾನ್ಯ ಕಾರ್ಯಕರ್ತರು ದಿಗ್ಭ್ರಮೆಗೊಂಡರೆ ಬಂಡಾಯ ನಾಯಕರು ಹೆಚ್ಚಾದರು. ಶರತ್ ಚಂದ್ರ ರವರದ್ದೇ ಒಂದು ಗುಂಪು, ಪದಾಧಿಕಾರಿಗಳದ್ದೇ ಮತ್ತೊಂದು ಗುಂಪಾಯಿತು. ಬೆರಳೆಣಿಕೆ ಮಂದಿಯ ಮಾತು ಕೇಳಿ ಪ್ರಪ್ರಥಮವಾಗಿ ಪ್ರಸನ್ನ ರವರ ವಿರುದ್ಧ ಶರತ್ ಚಂದ್ರ ರವರು ಪತ್ರಿಕಾಗೋಷ್ಠಿಯನ್ನು ನಡೆಸಿ ನಾನೂ ಒಬ್ಬ ಆಕಾಂಕ್ಷಿತ ಅಭ್ಯರ್ಥಿ ಎಂದು ಸ್ವಯಂ ಘೋಷಿಸಿಕೊಂಡರು. ಅದೇ ರೀತಿ ಪಕ್ಷದ ಕಛೇರಿಗೆ ಅಭ್ಯರ್ಥಿ ಎಂದು ಠೆವಣಿ ನೀಡಿ ಹೆಸರನ್ನು ನೋಂದಾಯಿಸಿದರು. ಬೇರೆ ಪಕ಼್ಷದವರಿರಲಿ ಅವರದ್ದೇ ಪಕ್ಷದವರು ಶರತ್ ಚಂದ್ರ ರವರು ಕೇವಲ ಒಂದು ಸಾವಿರ ಮತಗಳಿಗಾಗಿ ಹೋರಾಡಬೇಕಷ್ಟೆ !? ಎಂದು ಕುಹಕವಾಡುವುತ್ತಿರುವುದು ಸುಳ್ಳಲ್ಲಾ.
ಕುಕ್ಕುಟ ಮಹಾಮಂಡಳಿಯ ಡಿ ಕೆ ಕಾಂತರಾಜು, ಬೋರ್ ವೆಲ್ ರಂಗನಾಥ, ಹೊಂಗನೂರು ಜಿಪಂ ಮಾಜಿ ಸದಸ್ಯೆ ವೀಣಾಚಂದ್ರು ರವರ ಪುತ್ರ ಚಂದ್ರಸಾಗರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ, ನೀಲಕಂಠನಹಳ್ಳಿ ರುದ್ರಯ್ಯ, ಸೇರಿದಂತೆ ಕೊಟ್ಟರೆ ನಾನೂ ಒಂದು 'ಕೈ' ನೋಡುತ್ತೇನೆ ಎನ್ನುವ ಹಲವಾರು ನಾಯಕರು ಹೊರಹೊಮ್ಮಿದರಾದರೂ ಪ್ರಸನ್ನ ರವರನ್ನು ಬೀಟ್ ಮಾಡುವ ಯಾವುದೇ ಕೈ ಅಭ್ಯರ್ಥಿ ಹೈಕಮಾಂಡ್ ಗೆ ಒಪ್ಪಿಗೆಯಾಗಲಿಲ್ಲ. ಸಣ್ಣಪುಟ್ಟ ಮಾತುಗಳನ್ನು ಕೇಳಿಕೊಂಡು ನಾಯಕರು ನನ್ನನ್ನು ಕಡೆಗಣಿಸುತ್ತಿದ್ದಾರೆ. ಅವರೇ ಬಂದು ನನ್ನ ಬಳಿ ಮಾತನಾಡಲಿ ಎಂಬ ಅಹಂನೊಂದಿಗೆ ಪ್ರಸನ್ನ ವಿಮುಖಗೊಂಡರೆ, ಅಹಂ ಇರುವವನ ಬಳಿ ನಾವೇಕೆ ಹೋಗಬೇಕು ಎಂದು ನಾಯಕರು ಹಿಂದೆಗೆದ್ದರಿಂದ ಹಲವಾರು ನಾಯಕರು ಹುಟ್ಟಿಕೊಳ್ಳಲು ಸಾಧ್ಯವಾಯಿತು. ಇದನ್ನರಿತ ನಾಯಕರು ಶುಕ್ರವಾರ ಸಭೆಯನ್ನು ಏರ್ಪಡಿಸಿ ತೀರ್ಮಾನಕ್ಕೆ ಬಂದಿದ್ದಾರೆ.
ಈ ಸಭೆಯಲ್ಲಿ ಕಟ್ಟಕಡೆಯದಾಗಿ ಕಾಂಗ್ರೆಸ್ ಧುರೀಣರು, ಶಾಸಕರು ಆಗಿದ್ದ ದಿವಂಗತ ಡಿ ಟಿ ರಾಮು ರವರ ಪುತ್ರ ಡಾ ಭಗತ್ ರಾಮ್ ರವರನ್ನು ಕಣಕ್ಕಿಳಿಸಲು ಸಭೆಯಲ್ಲಿ ತೀರ್ಮಾನಿಸಿಲಾಗಿದೆ. ಅಲ್ಲಿಯೂ ಸಹ ಎಲ್ಲಾ ನಾಯಕರನ್ನು ಹಿಂದಿಕ್ಕಿ ಪ್ರಸನ್ನ ರವರೇ ಸೂಕ್ತ ಎಂಬ ಆಶಯ ವ್ಯಕ್ತವಾಗಿದೆ. ಅಷ್ಟರಲ್ಲಿ ಭಗತ್ ರಾಮ್ ರವರನ್ನು ಸೋಮವಾರ ಅರ್ಜಿ ಹಾಕಲು ಸೂಚಿಸಿದ ನಂತರವೂ ಸಂಸದ ಡಿ ಕೆ ಸುರೇಶ್ ರವರೇ ಪ್ರಸನ್ನ ಪಿ ಗೌಡ ರಿಗೆ ಕರೆಮಾಡಿ ಯಾವುದೇ ರೀತಿಯ ಗೊಂದಲಗಳಿಗೆ ಎಡೆಮಾಡಿಕೊಡದೆ, ಸೋಮವಾರ ಅರ್ಜಿ ಹಾಕಲು ಸೂಚಿಸಿದ್ದಾರೆ ಎಂದು ಸ್ವತಃ ಪ್ರಸನ್ನ ಪಿ ಗೌಡರೇ ನಮ್ಮ ಪತ್ರಿಕೆಗೆ ಹೇಳಿಕೆ ನೀಡಿದರು. ಅಂತೂ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಇಲ್ಲಾ ಎನ್ನುವ ಹಂತಕ್ಕೆ ಹೋಗಿದ್ದು, ಸೋಮವಾರದ ವೇಳೆಗೆ ಮೂರು ಮಂದಿ ಅರ್ಜಿ ಗುಜರಾಯಿಸುತ್ತಿರುವುದು ಸಹ ವಿಶೇಷ.
*ಚನ್ನಪಟ್ಟಣದಲ್ಲಿ ಬೀಡುಬಿಟ್ಟು ಡಾ ಭಗತ್ ರಾಮ್*
ಡಿ ಕೆ ಸಹೋದರರ ಅಣತಿಯಂತೆ ಡಾ ಭಗತ್ ರಾಮ್ ರವರು ಶನಿವಾರ ಬೆಳಿಗ್ಗೆಯಿಂದಲೇ ಚನ್ನಪಟ್ಟಣಕ್ಕೆ ಬಂದು ತಮ್ಮ ಹಿತೈಷಿಗಳ ಬಳಿ ಮಾತುಕತೆ ನಡೆಸುತ್ತಿದ್ದಾರೆ. ಡಿ ಕೆ ಶಿವಕುಮಾರ್ ರವರು ನೀನು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡ. ನಾನಿದ್ದೇನೆ ಸೋಮವಾರ ಅರ್ಜಿ ಹಾಕು ಎಂದು ಹೇಳಿರುವುದನ್ನೆ ಆನೆ ಬಲ ಎಂದುಕೊಂಡ ಅವರು ಮುಂಜಾನೆಯಿಂದಲೇ ನಗರ ಸೇರಿದಂತೆ ತಾಲ್ಲೂಕಿನ ಹಲವರು ಧುರೀಣರನ್ನು ಕಂಡು ತಮ್ಮನ್ನು ಕೈ ಹಿಡಿಯುವುಂತೆ ಕೇಳಿಕೊಳ್ಳುತ್ತಿದ್ದಾರೆ. ನಮ್ಮ ಪತ್ರಿಕೆಗೆ ಹೇಳಿಕೆ ನೀಡಿದ ಅವರು ಸಹೋದರರಿಬ್ಬರು ಅರ್ಜಿ ಹಾಕಲು ತಿಳಿಸಿದ್ದಾರೆ. ಆದ್ದರಿಂದ ನಾನು ಕ್ಷೇತ್ರಕ್ಕೆ ಬಂದಿದ್ದೇನೆ. ಹೈಕಮಾಂಡ್ ಸೂಚನೆಯಂತೆ ಸೋಮವಾರ ಅರ್ಜಿ ಹಾಕುವುದಾಗಿ ಅವರು ತಿಳಿಸಿದ್ದಾರೆ.
*ಪ್ರಸನ್ನ ಬಂದರೆ ಮಾತ್ರ ಕ್ಷೇತ್ರ ಟಫ್*
ಗೆಲುವು ಯಾರದ್ದಾದರೂ ಆಗಬಹುದು. ಕಾಂಗ್ರೆಸ್ ಪಕ್ಷದಲ್ಲಿ ಪ್ರಸನ್ನ ಪಿ ಗೌಡ ಬಿಟ್ಟು ಯಾವುದೇ ಅಭ್ಯರ್ಥಿ ಸ್ಪರ್ಧಿಸಿದರೂ ಹೆಚ್ಡಿಕೆ ಮತ್ತು ಸಿಪಿವೈ ನಡುವೇ ಮಾತ್ರ ಜಿದ್ದಾಜಿದ್ದಿ ಏರ್ಪಡುತ್ತಿತ್ತು. ಪ್ರಸನ್ನ ಅಖಾಡಕ್ಕೆ ಇಳಿದರೆ ಎಲ್ಲರಿಗೂ ಈ ಚುನಾವಣೆ ಜಿದ್ದಾಜಿದ್ದಿಯಾಗಿ ಮಾರ್ಪಡುವುದರ ಜೊತೆಗೆ ಯಾವುದೇ ಅಭ್ಯರ್ಥಿ ಗೆದ್ದರೂ ಅದು ಪ್ರಯಾಸದ ಗೆಲುವಾಗಲಿದೆ ಎಂಬುದು ಸಾಮಾನ್ಯ ಮತದಾರರ ಬಹಿರಂಗ ಹೇಳಿಕೆಯಾಗಿದೆ. ರಾಜಕೀಯ ಕ್ಷೇತ್ರಕ್ಕೆ ಹೊಸಬರಾದ ಪ್ರಸನ್ನರವರನ್ನು ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಮತ್ತು ಮುಖಂಡರು ಸಣ್ಣಪುಟ್ಟ ತಪ್ಪುಗಳನ್ನು ಕಡೆಗಣಿಸಿ ಅವರಿಗೆ ಒಗ್ಗಟ್ಟಿನ ಬೆಂಬಲ ನೀಡಿದರೆ ಗೆಲುವು ಅಸಾಧ್ಯವಲ್ಲ ಎಂಬುದು ಕಾಂಗ್ರೆಸ್ ನ ಕಟ್ಟಾ ಮತದಾರರ ಅನಿಸಿಕೆಯಾಗಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in channapatna »

ತಾಲ್ಲೂಕು ಆಡಳಿತದ ಗಣರಾಜ್ಯೋತ್ಸವದಲ್ಲಿ ಸಿಪಿವೈ ಭಾಗಿ ಹೆಚ್ಡಿಕೆ ಗೈರು
ಚನ್ನಪಟ್ಟಣ.ಜ.೨೬: ತಾಲ್ಲೂಕು ರಾಷ್ಟ
ಅಮೃತ ಸರೋವರಗಳ ಬಳಿ ಹಾರಾಡಿದ ತ್ರಿವರ್ಣ ಧ್ವಜ
ಚನ್ನಪಟ್ಟಣ: ಸ್ವಾತಂತ್ರ್ಯದ ಅಮೃತ ಮಹೋತ್ಸವ ದ ಸಲುವಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಿಷನ್ ಅಮೃತ

ಇದೇ ತಿಂಗಳು ವಿಜಯಸಂಕಲ್ಪ ಅಭಿಯಾನ: ಜಿಲ್ಲಾ ಸಂಚಾಲಕ ರವೀಶ್
ಚನ್ನಪಟ್ಟಣ,ಜ:19. ಮನೆ-ಮನಗಳಿಗೆ ಬಿಜೆಪಿ ನೇತೃತ್ವದ ಸರ್ಕಾರದ ಜನಪರ ಕೆಲಸಗಳನ್ನು ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕ

ನರೇಗಾ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ
ಚನ್ನಪಟ್ಟಣ:16/01/2023:ರಂತಾಲ್ಲೂಕಿನ ಎಲೆತೋಟದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಕನಹಳ್ಳಿ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಪ್ರಗತಿಯಲ್ಲಿದ್ದ ಮುದ್ದೆಗೌಡನಕಟ್ಟೆ ಹೂಳೆತ್ತುವ ಕ

ಕಾಂತರಾಜ್ ಪಟೇಲ್ ನಿಧನದಿಂದ ಜಿಲ್ಲೆಯ ಸಾಂಸ್ಕೃತಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ; ಎಂ.ಟಿ. ತಿಮ್ಮರಾಜು
ಚನ್ನಪಟ್ಟಣ: ನೇರ ನಡೆ-ನುಡಿಯ ಆದರ್ಶ ವ್ಯಕ್ತಿತ್ವದೊಂದಿಗೆ ಅಜಾತಶತ್ರುವಾಗಿ ಬದುಕಿ ಬಾಳಿದ ಹೃದಯವಂತ ವ್ಯಕ್ತಿ ಕಾಂತರಾಜ್ ಪಟೇಲ್ ಅವರ ನಿಧ

ಶಿಕ್ಷಣ ಪ್ರೇಮಿ ಮಳೂರು ದಿ.ಪುಟ್ಟಸ್ವಾಮಿಗೌಡರ ಸ್ಮರಣಾರ್ಥ ಅನ್ನವಿತ್ತ ಕುಟುಂಬಕ್ಕೆ ಗೌರವ ನಮನ
ಚನ್ನಪಟ್ಟಣ: ತಾಲ್ಲೂಕಿನಲ್ಲಷ್ಟೇ ಅಲ್ಲದೇ ಜಿಲ್ಲಾದ್ಯಂತ ಉದಾರ ದಾನಿಗಳು ಹಾಗೂ ಶ್ರೀಮಂತ ಕುಟುಂಬ ಎಂದೇ ಪ್ರಸಿದ್ಧಿಯಾಗಿದ್ದ ದಿ ಮಳೂರು ಪುಟ್ಟಸ್ವ

ಬೂತ್ ಮಟ್ಟದ ಕಾರ್ಯಕರ್ತರನ್ನು ಸದೃಢಗೊಳಿಸುತ್ತೇನೆ. ಸಿ ಪಿ ಯೋಗೇಶ್ವರ್
ಚನ್ನಪಟ್ಟಣ: ಬೂತ್ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸುವ ಮುಖಾಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಕಾರ್ಯಕರ್ತ

ಮಿಸ್ ನಂದಿನಿ ಚಲನಚಿತ್ರ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ವರದಾನ ಪ್ರಿಯಾಂಕ ಉಪೇಂದ್ರ
ಚನ್ನಪಟ್ಟಣ: ಮಿಸ್ ನಂದಿನಿ ಚಲನಚಿತ್ರದಲ್ಲಿನ ನವಿರಾದ ಕಥೆಯು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಚಿತ್ರಕಥೆಯ ಮೂಲಕ ಸರ್ಕಾರಿ ಶ

ಚನ್ನಪಟ್ಟಣ ತಾಲ್ಲೂಕು ರೈತ ಸಂಘದ ಹುಟ್ಟಿಗೆ ಕಾರಣವಾಗಿತ್ತು ಸು ತ ರಾಮೇಗೌಡ
ಚನ್ನಪಟ್ಟಣ: ಚನ್ನಪಟ್ಟಣ ತಾಲ್ಲೂಕು ರೈತಸಂಘದ ಹುಟ್ಟಿಗೆ ಕಾರಣವಾಗಿತ್ತು. ಅರಳಾಳುಸಂದ್ರ ಗ್ರಾಮ ಮೊದಲ್ಗೊಂಡು ಹಲವಾರು ಗ್ರಾಮಗಳಲ್ಲಿ ರೈತ ಚಳವಳಿ

ಮುದಗೆರೆ ಗ್ರಾಮದ ಬಳಿ ಭೀಕರ ಅಪಘಾತ. ಮೂರು ಮಂದಿ ಸಾವು
ಚನ್ನಪಟ್ಟಣ: ಬೆಂಗಳೂರು–ಮೈಸೂರು ನಡುವಿನ ಮುದಗೆರೆ ಗ್ರಾಮದ ಬಳಿಯ ವೈಶಾಲಿ ಹೋಟೆಲ್ ಹತ್ತಿರ ದಶಪಥ ಹೆದ್ದಾರಿಯಲ್ಲಿ ಟೆಂಪೋ ಟ್ರಾವೆಲ್ಲರ್ ಒಂದು ಚ
ಪ್ರತಿಕ್ರಿಯೆಗಳು