ಪುರಭವನ ನೆಲಸಮಗೊಳಿಸದಂತೆ ನಗರಸಭೆ ಅಧಿಕಾರಿಗಳಿಗೆ ಮನವಿ

ಚನ್ನಪಟ್ಟಣ.ನ.೨೯: ನಗರದ ಪುರಭವನದ ಮುಂದೆ ಸಭೆ ಸೇರಿದ್ದ ನಾಗರಿಕ ಹೋರಾಟ ಸಮಿತಿಯ ಪ್ರಮುಖರು ಪುರಭವನ ಐತಿಹಾಸಿಕವಾದುದು. ಇದನ್ನು ಉಳಿಸಿ, ಕೆಡವಲು ಅವಕಾಶ ನೀಡಬಾರದು ಎಂದು ನಿರ್ಧರಿಸಿ, ನಗರಸಭೆಯ ಆಯುಕ್ತರಿಗೆ ಈ ಸಂಬಂಧ ಆಕ್ಷೇಪಣಾ ಪತ್ರ ಸಲ್ಲಿಸಲಾಯಿತು
ಭವನಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಈ ಭವನವನ್ನು ಇಲ್ಲಿನ ಜನರಲ್ಲಿ ಮತೀಯ ಸಾಮರಸ್ಯ ಉಂಟು ಮಾಡಲು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಉದ್ದೇಶದಿಂದ ಮುಸ್ಲಿಂ ಸಮುದಾಯದ ಖುದ್ದುಸ್ ಸಾಹೇಬರು ದಾನವಾಗಿ ಕೊಟ್ಟಿದ್ದಾರೆ. ಅದನ್ನು ಸ್ವಾತಂತ್ರ್ಯ ಬರುವವರೆಗೂ ಸದುಪಯೋಗ ಪಡಿಸಿಕೊಳ್ಳಲಾಗಿದೆ. ಸ್ವಾತಂತ್ರ್ಯ ನಂತರ ಇಲ್ಲಿಗೆ ಬಂದ ಪುರಸಭೆಯ ಆಡಳಿತ ಸಮರ್ಪಕವಾಗಿ ಬಳಸಿ ಕೊಂಡು, ಈಗ ನಗರಸಭೆಯ ಕಛೇರಿಯನ್ನು ನಿರ್ಮಾಣ ಮಾಡಿಕೊಂಡ ನಂತರ ಅದನ್ನು ಕೆಡವಿ ನಗರಸಭೆ ಆಡಳಿತ ಕಛೇರಿ ಮಾಡಿ ಕೊಳ್ಳುವ ಹುನ್ನಾರ ಮಾಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿ, ಇದನ್ನು ನಾವು ಶತಾಯ ಗತಾಯ ತಡೆದೇ ತಡೆಯುತ್ತೇವೆ ಎಂದು ತಮ್ಮ ಆಕ್ಷೇಪಣಾ ಪತ್ರದಲ್ಲಿ ತಿಳಿಸಲಾಗಿದೆ.
ನೂರು ವರ್ಷದ ಕಟ್ಟಡವಾಗಿರುವ ಈ ಕಟ್ಟಡ ಇನ್ನೂ ಬಲಯುತವಾಗಿಯೇ ಇದೆ. ಈ ಜಾಗದಲ್ಲಿ ಭವನ ನಿರ್ಮಾಣಕ್ಕೆ ೨೭ ಜೂನ್ ೧೯೧೬ರಲ್ಲಿ ಆಗಿನ ಬೆಂಗಳೂರು ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಕೆ. ಚಾಂಡಿ ಅವರು ಅಸ್ಥಿಭಾರ ಹಾಕಿದ್ದಾರೆ. ಅದಾದ ನಂತರ ಆಗಿನ ಮೈಸೂರು ರಾಜರ ಆಡಳಿತದಲ್ಲಿ ದಿವಾನರಾಗಿದ್ದ ಅಮೀನ್ ಉಲ್ ಮುಲ್ಕ್ ಸರ್ ಮಿರ್ಜಾ ಇಸ್ಮಾಯಿಲ್ ಅವರು ೭ ಏಪ್ರಿಲ್ ೧೯೩೦ ರಲ್ಲಿ ಅಧಿಕೃತವಾಗಿ ಈ ಭವನವನ್ನು ಉದ್ಘಾಟನೆ ಮಾಡಿದ್ದಾರೆ. ಕಾಲಾನಂತರ ಪುರಸಭೆಯವರು ಅದು ತಮ್ಮದೇ ಜಾಗ ಎಂಬ ರೀತಿಯಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೊಡದೆ, ಕಟ್ಟಡ ಶಿಥಿಲಾವಸ್ಥೆಯಲ್ಲಿ ಇದೆ ಎಂಬ ಸಬೂಬು ಹೇಳಿಕೊಂಡು ಮುಂದುವರಿದುಕೊಂಡು ಬರುತ್ತಿದ್ದರು.
ಅದಾದ ನಂತರ ೧೯೮೪ರಲ್ಲಿ ಒಂದು ಬಾರಿ, ೨೦೦೮ರಲ್ಲಿ ಒಂದು ಬಾರಿ ಈ ಪುರಭವನ ಪುರೋಭಿವೃದ್ಧಿಗಾಗಿ ಹತ್ತಾರು ಲಕ್ಷ ಖರ್ಚು ಮಾಡಿದ್ದಾರೆ. ಆದರೆ, ಸುಸಜ್ಜಿತಗೊಳಿಸುವ ಕೆಲಸ ಮಾಡಿಲ್ಲ. ಅಲ್ಲಿಂದಾಚೆಗೆ ಈ ಪುರಭವನ ನಗರಸಭೆಯ ಹಳೆ ಸಾಮಾನುಗಳು, ವಾಹನಗಳ ಬಿಡಿ ಭಾಗಗಳು ಹಾಗೂ ಅವರ ಹಳೆಯ ಕಡತ ಗಳನ್ನು ಸಂಗ್ರಹಿಸಿ ಇಟ್ಟು ಕೊಳ್ಳಲು ಸೀಮಿತವಾಗಿದೆ.
ಯಾವುದೇ ಸ್ಥಳೀಯ ಸಂಸ್ಥೆಯಾಗಲಿ ನಾಗರೀಕರಿಗೆ ಸೌಲಭ್ಯ ಕಲ್ಪಿಸಿಕೊಡುವ, ಅವರ ಇಚ್ಛೆಗೆ ಅನುಗುಣವಾಗಿ ಕೆಲಸ ಮಾಡುವ ಉದ್ದಿಶ್ಯ ಹೊಂದಿರಬೇಕು. ಆದರೆ, ಪುರಸಭೆ, ನಗರಸಭೆ ಆದ ನಂತರ ಅದಾವುದರ ಕಡೆಯೂ ಗಮನ ಕೊಡದೆ ಅದನ್ನು ಪಾಳುಗೆಡವಿದೆ.
ಐತಿಹಾಸಿಕವಾದ ಈ ಕಟ್ಟಡ ಉಳಿದು, ಈ ಊರಿನ ಹಿರಿಮೆಯನ್ನು ಸಾರಬೇಕಾಗಿದೆ. ಅದನ್ನು ಬಿಟ್ಟು ಒಡೆದು ಹಾಕುವ ಕೆಲಸ ಮಾಡ ಬಾರದು ಎಂದು ನಮ್ಮ ಆಕ್ಷೇಪಣೆ ಇದೆ. ಮುಂದು ವರಿದು ಹಠ ಹಿಡಿದರೆ ಆಗ ಬೇರೆಯದೇ ಮಾರ್ಗವನ್ನು ಹುಡುಕಬೇಕಾಗುತ್ತದೆ ಎಂದು ಈ ಮೂಲಕ ತಿಳಿಸ ಬಯಸುತ್ತೇವೆ. ಅಸಲಿಗೆ ಈ ಜಾಗ ನಗರಸಭೆಯ ಜಾಗವಲ್ಲ, ೧೯೬೪ರಲ್ಲಿ ಆಗಿನ ಪುರಸಭೆಗೆ ಸರ್ಕಾರ ಬೇರೆ ಜಾಗ ಮಂಜೂರು ಮಾಡಿದೆ ಎಂದಿದ್ದಾರೆ.
ಆ ಜಾಗಕ್ಕೆ ಹೋಗಿ ತಮ್ಮ ನೆಲೆಯನ್ನು ಕಂಡುಕೊಳ್ಳಬೇಕು. ಈ ಜಾಗವನ್ನು ಶಾಶ್ವತವಾಗಿ ನಗರದ ಜನರ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೀಸಲಿಡಲು ಈ ಮೂಲಕ ಸಾರ್ವಜನಿಕರ ಪರವಾಗಿ ವಿನಂತಿಸುತ್ತಿದ್ದೇವೆ ಎಂಬ ಆಕ್ಷೇಪಣಾ ಪತ್ರವನ್ನು ಆಯುಕ್ತರ ಗೈರು ಹಾಜರಿಯಲ್ಲಿ ಕಛೇರಿಯ ಮ್ಯಾನೇಜರ್ ನಾಗಣ್ಣ ಹಾಗೂ ಸಹಾಯಕ ಕಾರ್ಯಪಾಲಕ ಮಧುಸೂದನ್ ಅವರಿಗೆ ನೀಡಿ ಇದನ್ನು ತಕ್ಷಣ ಆಯುಕ್ತರ ಗಮನಕ್ಕೆ ತರಲು ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಮನವಿಯನ್ನು ಸಮಿತಿಯ ಪರವಾಗಿ ಸು.ತ ರಾಮೇಗೌಡ ಓದಿದರು. ಕಾಂಗ್ರೆಸ್ ಪ್ರಮುಖರಾದ ಶರತ್ಚಂದ್ರ, ಕನ್ನಡ ಪರ ಹೋರಾಟಗಾರ ಸಿಂ.ಲಿಂ ನಾಗರಾಜು, ಹೋರಾಟ ಸಮಿತಿಯ ಗೋ.ರಾ ಶ್ರೀನಿವಾಸ್, ಸರ್ಕಾರಿ ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಬಿ.ಎನ್ ಕಾಡಯ್ಯ, ಅನಿಕೇತನ ಟ್ರಸ್ಟ್ನ ಯೋಗೇಶ್ ಚೆಕ್ಕರೆ, ಮುಸ್ಲಿಂ ಪ್ರಮುಖರಾದ ಸೈಯದ್ ನವಾಜ್ ಹಷ್ಮಿ ಪತ್ರಕರ್ತರು, ಸಾರ್ವಜನಿಕರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು, ಈ ಭವನ ಉಳಿಯಬೇಕು ಎಂಬ ಆಶಯ ವ್ಯಕ್ತ ಪಡಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in channapatna »

ತಾಲ್ಲೂಕು ಆಡಳಿತದ ಗಣರಾಜ್ಯೋತ್ಸವದಲ್ಲಿ ಸಿಪಿವೈ ಭಾಗಿ ಹೆಚ್ಡಿಕೆ ಗೈರು
ಚನ್ನಪಟ್ಟಣ.ಜ.೨೬: ತಾಲ್ಲೂಕು ರಾಷ್ಟ
ಅಮೃತ ಸರೋವರಗಳ ಬಳಿ ಹಾರಾಡಿದ ತ್ರಿವರ್ಣ ಧ್ವಜ
ಚನ್ನಪಟ್ಟಣ: ಸ್ವಾತಂತ್ರ್ಯದ ಅಮೃತ ಮಹೋತ್ಸವ ದ ಸಲುವಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಿಷನ್ ಅಮೃತ

ಇದೇ ತಿಂಗಳು ವಿಜಯಸಂಕಲ್ಪ ಅಭಿಯಾನ: ಜಿಲ್ಲಾ ಸಂಚಾಲಕ ರವೀಶ್
ಚನ್ನಪಟ್ಟಣ,ಜ:19. ಮನೆ-ಮನಗಳಿಗೆ ಬಿಜೆಪಿ ನೇತೃತ್ವದ ಸರ್ಕಾರದ ಜನಪರ ಕೆಲಸಗಳನ್ನು ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕ

ನರೇಗಾ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ
ಚನ್ನಪಟ್ಟಣ:16/01/2023:ರಂತಾಲ್ಲೂಕಿನ ಎಲೆತೋಟದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಕನಹಳ್ಳಿ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಪ್ರಗತಿಯಲ್ಲಿದ್ದ ಮುದ್ದೆಗೌಡನಕಟ್ಟೆ ಹೂಳೆತ್ತುವ ಕ

ಕಾಂತರಾಜ್ ಪಟೇಲ್ ನಿಧನದಿಂದ ಜಿಲ್ಲೆಯ ಸಾಂಸ್ಕೃತಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ; ಎಂ.ಟಿ. ತಿಮ್ಮರಾಜು
ಚನ್ನಪಟ್ಟಣ: ನೇರ ನಡೆ-ನುಡಿಯ ಆದರ್ಶ ವ್ಯಕ್ತಿತ್ವದೊಂದಿಗೆ ಅಜಾತಶತ್ರುವಾಗಿ ಬದುಕಿ ಬಾಳಿದ ಹೃದಯವಂತ ವ್ಯಕ್ತಿ ಕಾಂತರಾಜ್ ಪಟೇಲ್ ಅವರ ನಿಧ

ಶಿಕ್ಷಣ ಪ್ರೇಮಿ ಮಳೂರು ದಿ.ಪುಟ್ಟಸ್ವಾಮಿಗೌಡರ ಸ್ಮರಣಾರ್ಥ ಅನ್ನವಿತ್ತ ಕುಟುಂಬಕ್ಕೆ ಗೌರವ ನಮನ
ಚನ್ನಪಟ್ಟಣ: ತಾಲ್ಲೂಕಿನಲ್ಲಷ್ಟೇ ಅಲ್ಲದೇ ಜಿಲ್ಲಾದ್ಯಂತ ಉದಾರ ದಾನಿಗಳು ಹಾಗೂ ಶ್ರೀಮಂತ ಕುಟುಂಬ ಎಂದೇ ಪ್ರಸಿದ್ಧಿಯಾಗಿದ್ದ ದಿ ಮಳೂರು ಪುಟ್ಟಸ್ವ

ಬೂತ್ ಮಟ್ಟದ ಕಾರ್ಯಕರ್ತರನ್ನು ಸದೃಢಗೊಳಿಸುತ್ತೇನೆ. ಸಿ ಪಿ ಯೋಗೇಶ್ವರ್
ಚನ್ನಪಟ್ಟಣ: ಬೂತ್ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸುವ ಮುಖಾಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಕಾರ್ಯಕರ್ತ

ಮಿಸ್ ನಂದಿನಿ ಚಲನಚಿತ್ರ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ವರದಾನ ಪ್ರಿಯಾಂಕ ಉಪೇಂದ್ರ
ಚನ್ನಪಟ್ಟಣ: ಮಿಸ್ ನಂದಿನಿ ಚಲನಚಿತ್ರದಲ್ಲಿನ ನವಿರಾದ ಕಥೆಯು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಚಿತ್ರಕಥೆಯ ಮೂಲಕ ಸರ್ಕಾರಿ ಶ

ಚನ್ನಪಟ್ಟಣ ತಾಲ್ಲೂಕು ರೈತ ಸಂಘದ ಹುಟ್ಟಿಗೆ ಕಾರಣವಾಗಿತ್ತು ಸು ತ ರಾಮೇಗೌಡ
ಚನ್ನಪಟ್ಟಣ: ಚನ್ನಪಟ್ಟಣ ತಾಲ್ಲೂಕು ರೈತಸಂಘದ ಹುಟ್ಟಿಗೆ ಕಾರಣವಾಗಿತ್ತು. ಅರಳಾಳುಸಂದ್ರ ಗ್ರಾಮ ಮೊದಲ್ಗೊಂಡು ಹಲವಾರು ಗ್ರಾಮಗಳಲ್ಲಿ ರೈತ ಚಳವಳಿ

ಮುದಗೆರೆ ಗ್ರಾಮದ ಬಳಿ ಭೀಕರ ಅಪಘಾತ. ಮೂರು ಮಂದಿ ಸಾವು
ಚನ್ನಪಟ್ಟಣ: ಬೆಂಗಳೂರು–ಮೈಸೂರು ನಡುವಿನ ಮುದಗೆರೆ ಗ್ರಾಮದ ಬಳಿಯ ವೈಶಾಲಿ ಹೋಟೆಲ್ ಹತ್ತಿರ ದಶಪಥ ಹೆದ್ದಾರಿಯಲ್ಲಿ ಟೆಂಪೋ ಟ್ರಾವೆಲ್ಲರ್ ಒಂದು ಚ
ಪ್ರತಿಕ್ರಿಯೆಗಳು