ನಗರದ ವಿವಿಧ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಜರುಗಿದ ಹನುಮ ಜಯಂತಿ

ಚನ್ನಪಟ್ಟಣ: ನಗರ ಸೇರಿದಂತೆ ತಾಲೂಕಿನಾದ್ಯಂತ ಹಲವಾರು ಆಂಜನೇಯ ದೇವಾಲಯಗಳಲ್ಲಿ ಸೋಮವಾರ ವಿಜೃಂಭಣೆಯಿಂದ ಹನುಮ ಜಯಂತಿಯನ್ನು ಆಚರಿಸಲಾಯಿತು. ಪಟ್ಟಣದ ಕೋದಂಡರಾಮ ಬಡಾವಣೆಯ ಆಂಜನೇಯಸ್ವಾಮಿ, ಕೋಟೆ ಆಂಜನೇಯ ಸ್ವಾಮಿ ದೇವಾಲಯ, ಸಾತನೂರು ರಸ್ತೆಯ ಚನ್ನಪ್ಪಸ್ವಾಮಿ ಮಠ, ನೀಲಕಂಠನಹಳ್ಳಿ ಅಡ್ಡರಸ್ತೆಯ ಅಭಯ ಆಂಜನೇಯಸ್ವಾಮಿ ದೇವಾಲಯ, ಮಂಗಳವಾರಪೇಟೆ ದೇವಾಲಯ, ಕೋಡಂಬಳ್ಳಿ, ಹೊಂಗನೂರು, ಕೂಡ್ಲೂರು ಗ್ರಾಮಗಳಲ್ಲಿರುವ ಹಲವಾರು ಹನುಮನ ದೇವಾಲಯಗಳಲ್ಲಿ ಸೋಮವಾರ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದ ಆಂಜನೇಯ ಮೂರ್ತಿಗೆ ಅಭಿಷೇಕ, ಬೆಣ್ಣೆ ಅಲಂಕಾರ ಮಹಾಮಂಗಳಾರತಿ ನಡೆದವು.
ಜನಸಾಗರ: ನಗರದ ಕೋದಂಡರಾಮ ಬಡಾವಣೆಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸತತ 56 ವರ್ಷಗಳಿಂದಲೂ ಹನುಮ ಜಯಂತಿಯನ್ನು ಆಚರಣೆ ಮಾಡುತ್ತಾ ಬಂದಿರುವ ಭಕ್ತ ಮಂಡಳಿ ವರ್ಷ ವರ್ಷಕ್ಕೆ ಹಲವು ವಿಭಿನ್ನತೆಯೊಂದಿಗೆ ಹನುಮ ಜಯಂತಿಯನ್ನು ಆಚರಣೆ ಮಾಡುತ್ತಿದೆ. ಕಳೆದ ವರ್ಷ ಕೊರೋನಾ ಕಾರಣದಿಂದ ಸರಳವಾಗಿ ಆಚರಿಸಿದ್ದ ಹನುಮಜಯಂತಿಯನ್ನು ಈ ವರ್ಷ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.¨
ಬೆಳಿಗ್ಗೆ 12ಗಂಟೆಗೆ ಆರಂಭವಾದ ಅನ್ನಸಂತರ್ಪಣೆ ಕಾರ್ಯಕ್ರಮ ಸಂಜೆ 5 ಗಂಟೆವರೆಗೆ ನಡೆಯಿತು. ಈ ವೇಳೆ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಪ್ರಸಾಧ ಸ್ವೀಕರಿಸಿ ದೇವರ ದರ್ಶನ ಪಡೆದರು.
ರಾತ್ರಿ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಹನುಮ ದೇವರ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು.
ಸಂದರ್ಭದಲ್ಲಿ ನಗರಸಭಾ ಮಾಜಿ ಸದಸ್ಯ ವಿ.ರಾಮು, ದೇವಸ್ಥಾನದ ಪದಾಧಿಕಾರಿಗಳಾದ ಲಕ್ಷ್ಮೀನಾರಾಯಣ, ಗೋವಿಂದಪ್ಪ, ವಸಂತ, ಶ್ರೀನಿವಾಸ್, ಪಾರ್ಥ, ಆನೆರಾಮಣ್ಣ, ನಾರಾಯಣರಾವ್, ಲಕ್ಷ್ಮಣ, ಮಹದೇವ, ನಗರಸಭಾ ಮಾಜಿ ಸದಸ್ಯ ಎಂ.ರಾಜು, ಆಟೋಗುಂಡ, ಕೃಷ್ಣ, ಅನಂತರಾಮು, ಬಸ್ಗೋಪಿ, ಕಿಚುಡಿ ಕೃಷ್ಣ, ವಾಟರ್ ಸಿದ್ದ, ಡಿ.ಸಿ.ಕೃಷ್ಣ, ಮಂಜುನಾಥ್, ಆಟೋ ರಾಜೇಶ್, ರಘು, ಶ್ಯಾಂಕುಮಾರ್, ಬೆಣ್ಣೆಕೃಷ್ಣ, ಆನಂದ, ಕಪಾಲಿ, ಕಂಬಿ ರಾಜ, ಕುಮಾರ್, ಯೋಗೇಶ್, ಬೀರಪ್ಪ, ಶಿವಣ್ಣ, ಸುರೇಶ್, ಮೋಹನ, ಆಟೋ ಮಂಜ, ಮಂಜ, ಆಟೋ ವೆಂಕಟೇಶ್, ಬಲರಾಮ, ದೀಪು, ಕಿರಣ, ಬೆಂಗಳೂರು ಬಾರ್ ಸೂರಿ, ಲಾಂಡ್ರಿ ಲಕ್ಷ್ಮಣ ಸೇರಿದಂತೆ ಬಡಾವಣೆಯ ಯುವಕರು ಹನುಮಜಯಂತಿಯಲ್ಲಿ ಭಾಗವಹಿಸಿ ಶ್ರಮಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in channapatna »

ತಾಲ್ಲೂಕು ಆಡಳಿತದ ಗಣರಾಜ್ಯೋತ್ಸವದಲ್ಲಿ ಸಿಪಿವೈ ಭಾಗಿ ಹೆಚ್ಡಿಕೆ ಗೈರು
ಚನ್ನಪಟ್ಟಣ.ಜ.೨೬: ತಾಲ್ಲೂಕು ರಾಷ್ಟ
ಅಮೃತ ಸರೋವರಗಳ ಬಳಿ ಹಾರಾಡಿದ ತ್ರಿವರ್ಣ ಧ್ವಜ
ಚನ್ನಪಟ್ಟಣ: ಸ್ವಾತಂತ್ರ್ಯದ ಅಮೃತ ಮಹೋತ್ಸವ ದ ಸಲುವಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಿಷನ್ ಅಮೃತ

ಇದೇ ತಿಂಗಳು ವಿಜಯಸಂಕಲ್ಪ ಅಭಿಯಾನ: ಜಿಲ್ಲಾ ಸಂಚಾಲಕ ರವೀಶ್
ಚನ್ನಪಟ್ಟಣ,ಜ:19. ಮನೆ-ಮನಗಳಿಗೆ ಬಿಜೆಪಿ ನೇತೃತ್ವದ ಸರ್ಕಾರದ ಜನಪರ ಕೆಲಸಗಳನ್ನು ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕ

ನರೇಗಾ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ
ಚನ್ನಪಟ್ಟಣ:16/01/2023:ರಂತಾಲ್ಲೂಕಿನ ಎಲೆತೋಟದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಕನಹಳ್ಳಿ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಪ್ರಗತಿಯಲ್ಲಿದ್ದ ಮುದ್ದೆಗೌಡನಕಟ್ಟೆ ಹೂಳೆತ್ತುವ ಕ

ಕಾಂತರಾಜ್ ಪಟೇಲ್ ನಿಧನದಿಂದ ಜಿಲ್ಲೆಯ ಸಾಂಸ್ಕೃತಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ; ಎಂ.ಟಿ. ತಿಮ್ಮರಾಜು
ಚನ್ನಪಟ್ಟಣ: ನೇರ ನಡೆ-ನುಡಿಯ ಆದರ್ಶ ವ್ಯಕ್ತಿತ್ವದೊಂದಿಗೆ ಅಜಾತಶತ್ರುವಾಗಿ ಬದುಕಿ ಬಾಳಿದ ಹೃದಯವಂತ ವ್ಯಕ್ತಿ ಕಾಂತರಾಜ್ ಪಟೇಲ್ ಅವರ ನಿಧ

ಶಿಕ್ಷಣ ಪ್ರೇಮಿ ಮಳೂರು ದಿ.ಪುಟ್ಟಸ್ವಾಮಿಗೌಡರ ಸ್ಮರಣಾರ್ಥ ಅನ್ನವಿತ್ತ ಕುಟುಂಬಕ್ಕೆ ಗೌರವ ನಮನ
ಚನ್ನಪಟ್ಟಣ: ತಾಲ್ಲೂಕಿನಲ್ಲಷ್ಟೇ ಅಲ್ಲದೇ ಜಿಲ್ಲಾದ್ಯಂತ ಉದಾರ ದಾನಿಗಳು ಹಾಗೂ ಶ್ರೀಮಂತ ಕುಟುಂಬ ಎಂದೇ ಪ್ರಸಿದ್ಧಿಯಾಗಿದ್ದ ದಿ ಮಳೂರು ಪುಟ್ಟಸ್ವ

ಬೂತ್ ಮಟ್ಟದ ಕಾರ್ಯಕರ್ತರನ್ನು ಸದೃಢಗೊಳಿಸುತ್ತೇನೆ. ಸಿ ಪಿ ಯೋಗೇಶ್ವರ್
ಚನ್ನಪಟ್ಟಣ: ಬೂತ್ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸುವ ಮುಖಾಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಕಾರ್ಯಕರ್ತ

ಮಿಸ್ ನಂದಿನಿ ಚಲನಚಿತ್ರ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ವರದಾನ ಪ್ರಿಯಾಂಕ ಉಪೇಂದ್ರ
ಚನ್ನಪಟ್ಟಣ: ಮಿಸ್ ನಂದಿನಿ ಚಲನಚಿತ್ರದಲ್ಲಿನ ನವಿರಾದ ಕಥೆಯು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಚಿತ್ರಕಥೆಯ ಮೂಲಕ ಸರ್ಕಾರಿ ಶ

ಚನ್ನಪಟ್ಟಣ ತಾಲ್ಲೂಕು ರೈತ ಸಂಘದ ಹುಟ್ಟಿಗೆ ಕಾರಣವಾಗಿತ್ತು ಸು ತ ರಾಮೇಗೌಡ
ಚನ್ನಪಟ್ಟಣ: ಚನ್ನಪಟ್ಟಣ ತಾಲ್ಲೂಕು ರೈತಸಂಘದ ಹುಟ್ಟಿಗೆ ಕಾರಣವಾಗಿತ್ತು. ಅರಳಾಳುಸಂದ್ರ ಗ್ರಾಮ ಮೊದಲ್ಗೊಂಡು ಹಲವಾರು ಗ್ರಾಮಗಳಲ್ಲಿ ರೈತ ಚಳವಳಿ

ಮುದಗೆರೆ ಗ್ರಾಮದ ಬಳಿ ಭೀಕರ ಅಪಘಾತ. ಮೂರು ಮಂದಿ ಸಾವು
ಚನ್ನಪಟ್ಟಣ: ಬೆಂಗಳೂರು–ಮೈಸೂರು ನಡುವಿನ ಮುದಗೆರೆ ಗ್ರಾಮದ ಬಳಿಯ ವೈಶಾಲಿ ಹೋಟೆಲ್ ಹತ್ತಿರ ದಶಪಥ ಹೆದ್ದಾರಿಯಲ್ಲಿ ಟೆಂಪೋ ಟ್ರಾವೆಲ್ಲರ್ ಒಂದು ಚ
ಪ್ರತಿಕ್ರಿಯೆಗಳು