Tel: 7676775624 | Mail: info@yellowandred.in

Language: EN KAN

    Follow us :


ಕಾಂತರಾಜ್ ಪಟೇಲ್ ನಿಧನದಿಂದ ಜಿಲ್ಲೆಯ ಸಾಂಸ್ಕೃತಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ; ಎಂ.ಟಿ. ತಿಮ್ಮರಾಜು

Posted date: 12 Jan, 2023

Powered by:     Yellow and Red

ಕಾಂತರಾಜ್ ಪಟೇಲ್ ನಿಧನದಿಂದ ಜಿಲ್ಲೆಯ ಸಾಂಸ್ಕೃತಿಕ ಕ್ಷೇತ್ರಕ್ಕೆ  ತುಂಬಲಾರದ ನಷ್ಟವಾಗಿದೆ; ಎಂ.ಟಿ. ತಿಮ್ಮರಾಜು

ಚನ್ನಪಟ್ಟಣ: ನೇರ ನಡೆ-ನುಡಿಯ ಆದರ್ಶ  ವ್ಯಕ್ತಿತ್ವದೊಂದಿಗೆ ಅಜಾತಶತ್ರುವಾಗಿ ಬದುಕಿ ಬಾಳಿದ ಹೃದಯವಂತ ವ್ಯಕ್ತಿ ಕಾಂತರಾಜ್ ಪಟೇಲ್ ಅವರ ನಿಧನದಿಂದ ಜಿಲ್ಲೆಯ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರವಾದ ನಷ್ಟ ಉಂಟಾಗಿದೆ ಎಂದು ಹಿರಿಯ ರಂಗಭೂಮಿ ಕಲಾವಿದ ಮಂಗಳವಾರಪೇಟೆ  ಎಂ ಟಿ ತಿಮ್ಮರಾಜು ತಿಳಿಸಿದರು.

ಪಟ್ಟಣದ ಕೊಲ್ಲಾಪುರದಮ್ಮನ ದೇವಸ್ಥಾನ ಆವರಣದ 

ಡಾ. ರಾಜ್ ಬಯಲು ರಂಗಮಂದಿರದಲ್ಲಿ ತಾಲೂಕಿನ ವಿವಿಧ ಸಂಘಟನೆಗಳು,  ರಂಗಭೂಮಿ ಕಲಾವಿದರು  ಒಟ್ಟಾಗಿ ಸೇರಿ ಆಯೋಜಿಸಿದ್ದ  ಅಗಲಿದ ಹಿರಿಯ ರಂಗಭೂಮಿ  ಕಲಾವಿದ, ಸಮಾಜ ಸೇವಕ, ರಕ್ತದಾನಿ, ರಾಮನಗರದ ಕಾಂಗ್ರೆಸ್ ಪಕ್ಷದ ಪ್ರಭಾವಿ  ಮುಖಂಡರಾದ ಕಾಂತರಾಜ್ ಪಟೇಲ್ ರವರ 

 ಶ್ರದ್ದಾಂಜಲಿ ಸಭೆ ಮತ್ತು   ನುಡಿನಮನ ಕಾರ್ಯಕ್ರಮದಲ್ಲಿ  ಶ್ರದ್ಧಾಂಜಲಿ ಅರ್ಪಿಸಿ ಅವರು ಮಾತನಾಡಿದರು.


ಉತ್ತಮ ರಂಗಭೂಮಿ ಕಲಾವಿದರಾಗಿ ದುರ್ಯೋಧನ, ಎಚ್ಚಮನಾಯಕ ಮೊದಲಾದ ಪೌರಾಣಿಕ ಐತಿಹಾಸಿಕ ಪಾತ್ರಗಳಿಗೆ ಜೀವ ತುಂಬುತ್ತಿದ್ದರು. ರಾಜಕೀಯ ಮತ್ತು ಸಾರ್ವಜನಿಕ  ಜೀವನದಲ್ಲಿ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡ ಅಪರೂಪದ ಅಸಾಮಾನ್ಯ ವ್ಯಕ್ತಿತ್ವದ ವ್ಯಕ್ತಿಯಾಗಿದ್ದರು. ಎಲ್ಲಾ ಜನರನ್ನು ಪ್ರೀತಿಸುವ ಗುಣ ಹೊಂದಿದ್ದರು. ಗ್ರಾಮೀಣ ಭಾಗದ ವ್ಯಾಜ್ಯಗಳನ್ನು  ಪರಿಹರಿಸುವ  ನ್ಯಾಯವಾದಿಯಾಗಿದ್ದರು. ಇಂತಹ ಸಹೃದಯ ವ್ಯಕ್ತಿಯನ್ನು ಕಳೆದುಕೊಂಡಿರುವುದು ನಮ್ಮೆಲ್ಲರ ದುರ್ದೈವ  ಎಂದರು.


ಶ್ರೀ ಕೆಂಗಲ್ ಆಂಜನೇಯ  ಸಾಂಸ್ಕೃತಿಕ ಕಲಾ ಟ್ರಸ್ಟ್ ನ ಗೌರವಾಧ್ಯಕ್ಷ ಗುರುಮಾದಯ್ಯ ಮಾತನಾಡಿ ಕಾಂತರಾಜ್ ಪಟೇಲ್ ರವರು ತತ್ವ ಸಿದ್ಧಾಂತ ಮೈಗೂಡಿಸಿಕೊಂಡಿದ್ದ ಆದರ್ಶ ರಾಜಕೀಯ ಮುಖಂಡರಾಗಿದ್ದರು.

ಅಪ್ರತಿಮ ಕಲಾಪ್ರೌಢಿಮೆಯೊಂದಿಗೆ ಕಲಾರಸಿಕರನ್ನು ಮನಸೂರೆಗೊಳಿಸಿ ಅಪಾರ ಜನಮನ್ನಣೆ ಗಳಿಸಿ  ನಿರಂತರವಾಗಿ ಕಲೆ, ಸಾಹಿತ್ಯ, ಸಾಂಸ್ಕೃತಿಕ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದರು, ಪ್ರಗತಿಪರ ಸಾವಯವ ಕೃಷಿಕರಾಗಿ ನನ್ನಂತಹ ಅದೆಷ್ಟೋ ಮಂದಿ ಕೃಷಿ ಕಾಯಕದಲ್ಲಿ  ತೊಡಗಿಸಿಕೊಳ್ಳಲು ಪ್ರೇರಕರಾಗಿದ್ದರು. ಶಿಸ್ತು,  ಗಾಂಭೀರ್ಯ, ವಿವೇಕ ,ವಿವೇಚನೆಯ ವ್ಯಕ್ತಿತ್ವ ಉಳ್ಳವರಾಗಿದ್ದ ಕಾಂತರಾಜ್ ಪಟೇಲ್ ರವರು ಅಕಾಲಿಕವಾಗಿ ನಿಧನವಾಗಿರುವುದು ಜಿಲ್ಲೆಯ ರಾಜಕೀಯ ಮತ್ತು ಸಾಂಸ್ಕೃತಿಕ ವಲಯಕ್ಕೆ ಅಗಾಧವಾದ ನಷ್ಟ ಉಂಟು ಮಾಡಿದೆ ಎಂದರು.


 ಅನಿಕೇತನ  ಕನ್ನಡ ಸಾಂಸ್ಕೃತಿಕ ಬಳಗದ ಅಧ್ಯಕ್ಷ ಯೋಗೇಶ್ ಚಕ್ಕೆರೆ ಮಾತನಾಡಿ ರಕ್ತದ  ಕೊರತೆಯನ್ನು ನೀಗಿಸಲು ವಿನೂತನ ಸೇವೆ ಮಾಡುತ್ತಾ ಬಂದಿದ್ದ ಕಾಂತರಾಜ್  

ಪಟೇಲ್ ರವರು ಸುಮಾರು  ನೂರಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡುವ ಮೂಲಕ ಶತಕವೀರ ರಕ್ತದಾನಿ  ಎನಿಸಿದ್ದರು. ಸಂಕಷ್ಟದಲ್ಲಿದ್ದವರಿಗೆ ನೆರವಾಗುವ ಹೃದಯವಂತಿಕೆ ಹೊಂದಿದ್ದ ಮಾನವೀಯ ಮೌಲ್ಯಗಳುಳ್ಳ ಸಹೃದಯಿ  ವ್ಯಕ್ತಿಯಾಗಿದ್ದರು, ಇಂತಹ ಗತ್ತು ಗೈರುತ್ತಿನ ಭಾವದ, ವೈಶಿಷ್ಟ ಪೂರ್ಣ ಆದರ್ಶ ವ್ಯಕ್ತಿತ್ವದ ವ್ಯಕ್ತಿಯ ಬದುಕು, ನಡೆದ ಹಾದಿ, ಅವರ ಜೀವನ ಎಂದೆಂದಿಗೂ ಯುವಜನಾಂಗಕ್ಕೆ  ಆದರ್ಶಪ್ರಾಯ ಮತ್ತು ಮಾರ್ಗದರ್ಶಕವಾಗಿತ್ತು ಎಂದರು.


ಈ ಸಂದರ್ಭದಲ್ಲಿ ಶ್ರೀ ಕೆಂಗಲ್ ಆಂಜನೇಯ ಸಾಂಸ್ಕೃತಿಕ ಕಲಾ ಟ್ರಸ್ಟ್ ಅಧ್ಯಕ್ಷ  ಚಕ್ಕೆರೆ ವಿಜೇಂದ್ರ, ಭಾರತ ವಿಕಾಸ ಪರಿಷತ್ ಅಧ್ಯಕ್ಷ ವಸಂತಕುಮಾರ್, ರಂಗಭೂಮಿ ಕಲಾವಿದರಾದ ನಾಗವಾರ ಶಂಭುಗೌಡ, ಮಹೇಶ್ ಕುಮಾರ್, ಲಾಳಘಟ್ಟ ಶಾಲೆಯ ಶಿಕ್ಷಕ  ರಾಜಶೇಖರ್, ಕುಂತೂರುದೊಡ್ಡಿ ಪುಟ್ಟರಾಜು, ಕೆಂಚಪ್ಪ , ಬೈ.ಪು. ಪ್ರಭುಸ್ವಾಮಿ, ಕೃಷ್ಣಮೂರ್ತಿ, ಚಿಕ್ಕೇನಳ್ಳಿ ಹನುಮಂತಪ್ಪ, ನಾಗವಾರ ಮೈಕ್ ಸೆಟ್ ಕುಮಾರ, ಹಾರೋಕೊಪ್ಪ  ಶಂಕರೇಗೌಡ, ವಿಜೇಂದ್ರ, ಕೃಷ್ಣಪ್ಪ, ಚಂದ್ರಮೋಹನ್, ಮಾದೇಗೌಡ, ಸಿದ್ದರಾಜು ಬಿ.ಎಸ್, ಬೇವೂರು ಯೋಗೇಶ್ ಗೌಡ, ಎ ಟಿ. ವೆಂಕಟೇಶ್ ಮೊದಲಾದವರು ಉಪಸ್ಥಿತರಿದ್ದರು. ಒಂದು ನಿಮಿಷ ಮೌನಾಚರಣೆ ಮಾಡಿ, ಕಾಂತರಾಜ್ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ದಾಂಜಲಿ ಸಲ್ಲಿಸಲಾಯಿತು .

       

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in channapatna »

ಅಮೃತ ಸರೋವರಗಳ ಬಳಿ ಹಾರಾಡಿದ ತ್ರಿವರ್ಣ ಧ್ವಜ

ಚನ್ನಪಟ್ಟಣ: ಸ್ವಾತಂತ್ರ್ಯದ ಅಮೃತ  ಮಹೋತ್ಸವ ದ ಸಲುವಾಗಿ   ಕೇಂದ್ರ ಸರ್ಕಾರದ  ಮಹತ್ವಾಕಾಂಕ್ಷಿ ಯೋಜನೆಯಾದ ಮಿಷನ್ ಅಮೃತ

ಇದೇ ತಿಂಗಳು ವಿಜಯಸಂಕಲ್ಪ ಅಭಿಯಾನ: ಜಿಲ್ಲಾ ಸಂಚಾಲಕ ರವೀಶ್
ಇದೇ ತಿಂಗಳು ವಿಜಯಸಂಕಲ್ಪ ಅಭಿಯಾನ: ಜಿಲ್ಲಾ ಸಂಚಾಲಕ ರವೀಶ್

ಚನ್ನಪಟ್ಟಣ,ಜ:19. ಮನೆ-ಮನಗಳಿಗೆ ಬಿಜೆಪಿ ನೇತೃತ್ವದ ಸರ್ಕಾರದ ಜನಪರ ಕೆಲಸಗಳನ್ನು ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕ

ನರೇಗಾ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ
ನರೇಗಾ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ

ಚನ್ನಪಟ್ಟಣ:16/01/2023:ರಂತಾಲ್ಲೂಕಿನ ಎಲೆತೋಟದಹಳ್ಳಿ  ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಕನಹಳ್ಳಿ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಪ್ರಗತಿಯಲ್ಲಿದ್ದ ಮುದ್ದೆಗೌಡನಕಟ್ಟೆ ಹೂಳೆತ್ತುವ  ಕ

ಕಾಂತರಾಜ್ ಪಟೇಲ್ ನಿಧನದಿಂದ ಜಿಲ್ಲೆಯ ಸಾಂಸ್ಕೃತಿಕ ಕ್ಷೇತ್ರಕ್ಕೆ  ತುಂಬಲಾರದ ನಷ್ಟವಾಗಿದೆ; ಎಂ.ಟಿ. ತಿಮ್ಮರಾಜು
ಕಾಂತರಾಜ್ ಪಟೇಲ್ ನಿಧನದಿಂದ ಜಿಲ್ಲೆಯ ಸಾಂಸ್ಕೃತಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ; ಎಂ.ಟಿ. ತಿಮ್ಮರಾಜು

ಚನ್ನಪಟ್ಟಣ: ನೇರ ನಡೆ-ನುಡಿಯ ಆದರ್ಶ  ವ್ಯಕ್ತಿತ್ವದೊಂದಿಗೆ ಅಜಾತಶತ್ರುವಾಗಿ ಬದುಕಿ ಬಾಳಿದ ಹೃದಯವಂತ ವ್ಯಕ್ತಿ ಕಾಂತರಾಜ್ ಪಟೇಲ್ ಅವರ ನಿಧ

ಶಿಕ್ಷಣ ಪ್ರೇಮಿ ಮಳೂರು ದಿ.ಪುಟ್ಟಸ್ವಾಮಿಗೌಡರ ಸ್ಮರಣಾರ್ಥ ಅನ್ನವಿತ್ತ ಕುಟುಂಬಕ್ಕೆ ಗೌರವ ನಮನ
ಶಿಕ್ಷಣ ಪ್ರೇಮಿ ಮಳೂರು ದಿ.ಪುಟ್ಟಸ್ವಾಮಿಗೌಡರ ಸ್ಮರಣಾರ್ಥ ಅನ್ನವಿತ್ತ ಕುಟುಂಬಕ್ಕೆ ಗೌರವ ನಮನ

ಚನ್ನಪಟ್ಟಣ: ತಾಲ್ಲೂಕಿನಲ್ಲಷ್ಟೇ ಅಲ್ಲದೇ ಜಿಲ್ಲಾದ್ಯಂತ ಉದಾರ ದಾನಿಗಳು ಹಾಗೂ ಶ್ರೀಮಂತ ಕುಟುಂಬ ಎಂದೇ ಪ್ರಸಿದ್ಧಿಯಾಗಿದ್ದ ದಿ ಮಳೂರು ಪುಟ್ಟಸ್ವ

ಬೂತ್ ಮಟ್ಟದ ಕಾರ್ಯಕರ್ತರನ್ನು ಸದೃಢಗೊಳಿಸುತ್ತೇನೆ. ಸಿ ಪಿ ಯೋಗೇಶ್ವರ್
ಬೂತ್ ಮಟ್ಟದ ಕಾರ್ಯಕರ್ತರನ್ನು ಸದೃಢಗೊಳಿಸುತ್ತೇನೆ. ಸಿ ಪಿ ಯೋಗೇಶ್ವರ್

ಚನ್ನಪಟ್ಟಣ: ಬೂತ್‍ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸುವ ಮುಖಾಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಕಾರ್ಯಕರ್ತ

ಮಿಸ್ ನಂದಿನಿ ಚಲನಚಿತ್ರ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ವರದಾನ ಪ್ರಿಯಾಂಕ ಉಪೇಂದ್ರ
ಮಿಸ್ ನಂದಿನಿ ಚಲನಚಿತ್ರ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ವರದಾನ ಪ್ರಿಯಾಂಕ ಉಪೇಂದ್ರ

ಚನ್ನಪಟ್ಟಣ: ಮಿಸ್ ನಂದಿನಿ ಚಲನಚಿತ್ರದಲ್ಲಿನ ನವಿರಾದ ಕಥೆಯು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಚಿತ್ರಕಥೆಯ ಮೂಲಕ ಸರ್ಕಾರಿ ಶ

ಚನ್ನಪಟ್ಟಣ ತಾಲ್ಲೂಕು ರೈತ ಸಂಘದ ಹುಟ್ಟಿಗೆ ಕಾರಣವಾಗಿತ್ತು ಸು ತ ರಾಮೇಗೌಡ
ಚನ್ನಪಟ್ಟಣ ತಾಲ್ಲೂಕು ರೈತ ಸಂಘದ ಹುಟ್ಟಿಗೆ ಕಾರಣವಾಗಿತ್ತು ಸು ತ ರಾಮೇಗೌಡ

ಚನ್ನಪಟ್ಟಣ: ಚನ್ನಪಟ್ಟಣ ತಾಲ್ಲೂಕು ರೈತಸಂಘದ ಹುಟ್ಟಿಗೆ ಕಾರಣವಾಗಿತ್ತು. ಅರಳಾಳುಸಂದ್ರ ಗ್ರಾಮ ಮೊದಲ್ಗೊಂಡು ಹಲವಾರು ಗ್ರಾಮಗಳಲ್ಲಿ ರೈತ ಚಳವಳಿ

ಮುದಗೆರೆ ಗ್ರಾಮದ ಬಳಿ ಭೀಕರ ಅಪಘಾತ. ಮೂರು ಮಂದಿ ಸಾವು
ಮುದಗೆರೆ ಗ್ರಾಮದ ಬಳಿ ಭೀಕರ ಅಪಘಾತ. ಮೂರು ಮಂದಿ ಸಾವು

ಚನ್ನಪಟ್ಟಣ: ಬೆಂಗಳೂರು–ಮೈಸೂರು ನಡುವಿನ ಮುದಗೆರೆ ಗ್ರಾಮದ ಬಳಿಯ ವೈಶಾಲಿ ಹೋಟೆಲ್ ಹತ್ತಿರ ದಶಪಥ ಹೆದ್ದಾರಿಯಲ್ಲಿ ಟೆಂಪೋ ಟ್ರಾವೆಲ್ಲರ್‌ ಒಂದು ಚ

Top Stories »  


Top ↑