Tel: 7676775624 | Mail: info@yellowandred.in

Language: EN KAN

    Follow us :


ಜಿಲ್ಲೆಯಲ್ಲಿ ಮುಂದಿನ ಎರಡು ಭಾನುವಾರ ದಿನಪೂರ್ತಿ ಸಂಪೂರ್ಣ ನಿಷೇದಾಜ್ಞೆ ಜಾರಿ ಜಿಲ್ಲಾಧಿಕಾರಿ

Posted Date: 19 May, 2020

ಜಿಲ್ಲೆಯಲ್ಲಿ ಮುಂದಿನ ಎರಡು ಭಾನುವಾರ ದಿನಪೂರ್ತಿ ಸಂಪೂರ್ಣ ನಿಷೇದಾಜ್ಞೆ ಜಾರಿ ಜಿಲ್ಲಾಧಿಕಾರಿ

ರಾಮನಗರ:ಮೇ/೧೯/೨೦/ಮಂಗಳವಾರ. ಕೊರೋನಾ (ಕೋವಿಡ್-೧೯) ವೈರಸ್ ಸೋಂಕು ಹರಡದಂತೆ ತಡೆಯುವ ಸಲುವಾಗಿ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಲಾಕ್‌ಡೌನ್ ಅವಧಿಯಲ್ಲಿನ *ಎರಡು ಭಾನುವಾರಗಳಂದು ರಾಮನಗರ ಜಿಲ್ಲೆಯಾದ್ಯಂತ ದಿನಪೂರ್ತಿ ಸಂಪೂರ್ಣ ನಿಷೇದಾಜ್ಞೆಯನ್ನು* ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಆದೇಶ ಹೊರಡಿಸಿದ್ದಾರೆ.


ರಾಮನಗರ ಜಿಲ್ಲೆಯಾದ್ಯಂತ ಸಿ.ಆರ್.ಪಿ.ಸಿ ೧೯೭೩ ಕಲಂ ೧೪೪ (೧)ರ ಅಡಿಯಲ್ಲಿ ಮೇ ೧೭ ರಿಂದ ಮೇ ೩೧ ರ ಮಧ್ಯರಾತ್ರಿಯವರೆಗೆ ಕೇಂದ್ರ ಗೃಹ ಮಂತ್ರಾಲಯ ದಿಂದ ಹೊರಡಿಸಿರುವ ಆದೇಶಗಳನ್ವಯ ಈಗಾಗಲೇ ನಿಷೇಧಾಜ್ಞೆಯನ್ನು ಜಾರಿಗೊಳಿಸಿ  ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಮೇ ೧೮ ರಂದು ಆದೇಶ ಹೊರಡಿಸಿದ್ದಾರೆ.

ಇದರ ಜೊತೆಗೆ ರಾಜ್ಯ ಸರ್ಕಾರದ ಆದೇಶದನ್ವಯ ಲಾಕ್‌ಡೌನ್ ಅವಧಿಯಲ್ಲಿ ಬರುವ ಮೇ ೨೪ ಮತ್ತು ಮೇ ೩೧ ರ ಎರಡು ಭಾನುವಾರಗಳಂದು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಜಿಲ್ಲೆಯಾದ್ಯಂತ ದಿನಪೂರ್ತಿ ಸಂಪೂರ್ಣ ನಿಷೇದಾಜ್ಞೆ ಜಾರಿಯಲ್ಲಿರಲಿದೆ.


ಎ.ಪಿ.ಎಂ.ಸಿ ಮಾರುಕಟ್ಟೆ ಮತ್ತು ರೇಷ್ಮೆ ಮಾರುಕಟ್ಟೆಗಳು ಲಾಕ್‌ಡೌನ್ ಅವಧಿಯಲ್ಲಿ ಬರುವ ಈ ಎರಡು ಭಾನುವಾರಗಳಂದು ಕಾರ್ಯನಿರ್ವಹಿಸುವುದಿಲ್ಲವೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಇನ್ನುಳಿದಂತೆ ಮೇ ೩೧ ರವರೆಗೆ ಜಾರಿಯಲ್ಲಿರುವ ನಿಷೇಧಾಜ್ಞೆಯ ಅವಧಿಯಲ್ಲಿ ರಾತ್ರಿ ೦೭:೦೦ ಗಂಟೆಯಿಂದ ಬೆಳಿಗ್ಗೆ ೦೭:೦೦ ಗಂಟೆಯವರೆಗೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಸಾರ್ವಜನಿಕರ ಅನಗತ್ಯ ಓಡಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.


*ಈ ಅವಧಿಯಲ್ಲಿ ಎ.ಪಿ.ಎಂ.ಸಿ ಮಾರುಕಟ್ಟೆ ಮತ್ತು ರೇಷ್ಮೆ ಮಾರುಕಟ್ಟೆಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ ಎರಡು ಭಾನುವಾರಗಳಂದು ಸಂಪೂರ್ಣವಾಗಿ ಸಾರ್ವಜನಿಕರ ಓಡಾಟ ನಿಷೇಧಿಸಲಾಗಿರುತ್ತದೆಯಾದರೂ ಅಗತ್ಯ ಸೇವೆಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ* ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಿದೆ.

ಎಲ್ಲರೂ ಕೋವಿಡ್-೧೯ ವೈರಾಣು ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಹಾಗೂ ಆರೋಗ್ಯ ಇಲಾಖೆಯು ಕಾಲಕಾಲಕ್ಕೆ ಹೊರಡಿಸುವ ಸಲಹೆ ಸೂಚನೆಗಳಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.


ಯಾವುದೇ ವ್ಯಕ್ತಿ ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ ರ ಕಲಂ ೫೧ ರಿಂದ ೬೦ ರ ಜೊತೆಗೆ ಭಾರತೀಯ ದಂಡ ಸಂಹಿತೆಯ ಕಲಂ ೧೮೮ ರ ರೀತ್ಯಾ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in corona »

ಕೊರೋನಾ: ಜಿಲ್ಲೆಯಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ. ಜಿಲ್ಲಾಧಿಕಾರಿ
ಕೊರೋನಾ: ಜಿಲ್ಲೆಯಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ. ಜಿಲ್ಲಾಧಿಕಾರಿ

ರಾಮನಗರ:ಮೇ/೨೭/೨೦/ಬುಧವಾರ. ರಾಮನಗರ ಜಿಲ್ಲೆಯಲ್ಲಿ ಇಂದು ಸಹ ಯಾವುದೇ ಕರೋನಾ (ಕೋವಿಡ್-೧೯) ಪ್ರಕರಣ ಹೊಸದಾಗಿ ಧೃಡಪಟ್ಟಿರುವುದಿಲ್ಲ ಎಂದು ಜಿಲ್ಲ

ಕೊರೋನಾ: ಜಿಲ್ಲೆಯಲ್ಲಿ ನಿನ್ನೆಯ ಪ್ರಕರಣ ಹೊರತುಪಡಿಸಿ ಹೊಸ ಪ್ರಕರಣ ದಾಖಲಾಗಿಲ್ಲ ಜಿಲ್ಲಾಧಿಕಾರಿ
ಕೊರೋನಾ: ಜಿಲ್ಲೆಯಲ್ಲಿ ನಿನ್ನೆಯ ಪ್ರಕರಣ ಹೊರತುಪಡಿಸಿ ಹೊಸ ಪ್ರಕರಣ ದಾಖಲಾಗಿಲ್ಲ ಜಿಲ್ಲಾಧಿಕಾರಿ

ರಾಮನಗರ:ಮೇ/೨೬/೨೦/ಮಂಗಳವಾರ. ರಾಮನಗರ ಜಿಲ್ಲೆಯಲ್ಲಿ ನಿನ್ನೆಯ ಒಂದು ಪ್ರಕರಣ ಹೊರತುಪಡಿಸಿ, ಹೊಸದಾಗಿ ಇಂದು ಯಾವುದೇ ಕೊರೋನಾ (ಕೋವಿಡ್-೧೯) ಪ್ರಕರಣ ದಾಖಲಾಗ

ಕೋವಿಡ್-19 ಸಂಚಾರಿ ತಪಾಸಣಾ ಕೇಂದ್ರಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ
ಕೋವಿಡ್-19 ಸಂಚಾರಿ ತಪಾಸಣಾ ಕೇಂದ್ರಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ

ರಾಮನಗರ:ಮೇ/೨೬/೨೦/ಮಂಗಳವಾರ.

ಕೊರೊನಾ (ಕೋವಿಡ್-೧೯) ಸೋಂಕನ್ನು ಜಿಲ್ಲೆಯಲ್ಲಿ ಪತ್ತೆ ಹಚ್ಚಲು ಹಾಗೂ ತಪಾಸಣೆಯನ್ನು ಹೆಚ್ಚಿಸಲು ಕೆ.ಎಸ್.ಆರ್.ಟಿ.ಸಿ ಸಂಚಾರಿ ಬಸ್‌ನ್ನು ಕ್ಲಿನಿಕ್ ರೂಪದ

ಕೊರೊನಾ: ಜಿಲ್ಲೆಯಲ್ಲಿ ಮೊದಲ ಪ್ರಕರಣ ಧೃಢ ಜಿಲ್ಲಾಧಿಕಾರಿ ಘೋಷಣೆ
ಕೊರೊನಾ: ಜಿಲ್ಲೆಯಲ್ಲಿ ಮೊದಲ ಪ್ರಕರಣ ಧೃಢ ಜಿಲ್ಲಾಧಿಕಾರಿ ಘೋಷಣೆ

ರಾಮನಗರ:ಮೇ/೨೫/೨೦/ಸೋಮವಾರ. ರಾಮನಗರ ಜಿಲ್ಲೆಯಲ್ಲಿ ಮೊದಲ ಕೊರೋನಾ (ಕೋವಿಡ್-೧೯) ಪ್ರಕರಣವೊಂದು ದಾಖಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲ

ಕೊರೊನಾ ಹಿನ್ನೆಲೆ; ಸರಳವಾಗಿ ಆಚರಣೆಗೊಂಡ ರಂಜಾನ್ ಹಬ್ಬ
ಕೊರೊನಾ ಹಿನ್ನೆಲೆ; ಸರಳವಾಗಿ ಆಚರಣೆಗೊಂಡ ರಂಜಾನ್ ಹಬ್ಬ

ಚನ್ನಪಟ್ಟಣ:ಮೇ/೨೫/೨೦/ಸೋಮವಾರ. ಮುಸ್ಲಿಮರ ಬಹುದೊಡ್ಡ ಭಕ್ತಿಯ ಹಾಗೂ ಸ್ನೇಹದ ಆಚರಣೆಯ ಹಬ್ಬವಾದ ರಂಜಾನ್ ಹಬ್ಬವ‌ನ್ನು ಕೊರೊನಾ ಹಿನ್ನೆಲೆಯಲ್ಲಿ ಸ

ರಾಜ್ಯದ ಮಹಾಮಾರಿ ಕೊರೊನಾ ಕಪ್ ಸೋತ ರಾಮನಗರ !?
ರಾಜ್ಯದ ಮಹಾಮಾರಿ ಕೊರೊನಾ ಕಪ್ ಸೋತ ರಾಮನಗರ !?

ರಾಮನಗರ:ಮೇ/೨೫/೨೦/ಸೋಮವಾರ. ರಾಜ್ಯದ ರಾಮನಗರ ಮತ್ತು ಚಾಮರಾಜನಗರ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿಯೂ ಕೊರೊನಾ ಎಂಬ ಮಹಾ ಮಾರಿಯು ಕಾಲಿಟ್ಟಿದ್ದ

ಇಪ್ಪತ್ನಾಲ್ಕು ಗಂಟೆಗಳ ಕಾಲ ಲಾಕ್ಡೌನ್ ಗೆ ಸ್ಪಂದಿಸಿದ ಮಂದಿ
ಇಪ್ಪತ್ನಾಲ್ಕು ಗಂಟೆಗಳ ಕಾಲ ಲಾಕ್ಡೌನ್ ಗೆ ಸ್ಪಂದಿಸಿದ ಮಂದಿ

ಚನ್ನಪಟ್ಟಣ:ಮೇ/೨೫/೨೦/ಸೋಮವಾರ. ರಾಜ್ಯಾದ್ಯಂತ ಇಪ್ಪತ್ನಾಲ್ಕು ಗಂಟೆಗಳ ಕಾಲ ವಿಧಿಸಿದ್ದ ಲಾಕ್ಡೌನ್ ಗೆ ನಗರದ ಜನರಲ್ಲದೇ ತಾಲ್ಲೂಕಿನ ಬಹುತೇಕ ಎಲ್

ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೪೨ ಸೇರಿ ೩,೩೪೧ ಮಂದಿ ನಿಗಾದಲ್ಲಿ ಜಿಲ್ಲಾಧಿಕಾರಿ
ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೪೨ ಸೇರಿ ೩,೩೪೧ ಮಂದಿ ನಿಗಾದಲ್ಲಿ ಜಿಲ್ಲಾಧಿಕಾರಿ

ರಾಮನಗರ:ಮೇ/೨೪/೨೦/ಭಾನುವಾರ. ರಾಮನಗರ ಜಿಲ್ಲೆಯ ಕೊರೊನಾ (ಕೋವಿಡ್-೧೯) ಪಿಡುಗು ತಡೆ ಕುರಿತ  ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಭಾನುವಾರ (ದಿ

ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೬೬ ಸೇರಿ ೩,೨೯೯ ಮಂದಿ ನಿಗಾದಲ್ಲಿ ಜಿಲ್ಲಾಧಿಕಾರಿ
ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೬೬ ಸೇರಿ ೩,೨೯೯ ಮಂದಿ ನಿಗಾದಲ್ಲಿ ಜಿಲ್ಲಾಧಿಕಾರಿ

ರಾಮನಗರ:ಮೇ/೨೩/೨೦/ಶನಿವಾರ. ರಾಮನಗರ ಜಿಲ್ಲೆಯ ಕೊರನಾ (ಕೋವಿಡ್-೧೯) ಪಿಡುಗು ತಡೆ ಕುರಿತ  ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಶನಿವಾರ (ದಿ. ೨

ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ವಲಸೆ ಕಾರ್ಮಿಕರಿಗೆ ಆಹಾರ ಧಾನ್ಯ ವಿತರಣೆ ಜಿಲ್ಲಾಧಿಕಾರಿ
ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ವಲಸೆ ಕಾರ್ಮಿಕರಿಗೆ ಆಹಾರ ಧಾನ್ಯ ವಿತರಣೆ ಜಿಲ್ಲಾಧಿಕಾರಿ

ರಾಮನಗರ:ಮೇ/೨೨/೨೦/ಶುಕ್ರವಾರ. ಜಿಲ್ಲೆಯಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರದಿಂದ ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ಆ

Top Stories »  


Top ↑