Tel: 7676775624 | Mail: info@yellowandred.in

Language: EN KAN

    Follow us :


ಕೊರೋನಾ: ಎರಡು ಪ್ರಕರಣ ವರದಿ

Posted date: 29 Jun, 2020

Powered by:     Yellow and Red

ಕೊರೋನಾ: ಎರಡು ಪ್ರಕರಣ ವರದಿ

ರಾಮನಗರ:ಜೂ/೨೮/೨೦/ಭಾನುವಾರ. ಜಿಲ್ಲೆಯಲ್ಲಿ ಎರಡು ಕರೋನಾ ಪಾಸಿಟಿವ್ ಪ್ರಕರಣ ಇಂದು ವರದಿಯಾಗಿದೆ. ಈ ಪೈಕಿ ಮಾಗಡಿ ತಾಲೂಕಿನಲ್ಲಿ ಓರ್ವರು ನಿಧನರಾಗಿದ್ದಾರೆ. ಇನ್ನೊಂದು ಪ್ರಕರಣ ರಾಮನಗರದಲ್ಲಿ ಪತ್ತೆಯಾಗಿದೆ. ಇವರನ್ನು ರಾಮನಗರದ ಕೋವಿಡ್-೧೯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು  ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.


ಜಿಲ್ಲೆಯಲ್ಲಿನ ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಮೊದಲನೇ ಪ್ರಕರಣ ಮಾಗಡಿಯಲ್ಲಿ ಕಂಡುಬಂದಿದ್ದು, ೪೦ ವರ್ಷದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುತ್ತಾರೆ. ಇದುವರೆಗೆ ಜಿಲ್ಲೆಯಲ್ಲಿ ಒಟ್ಟು ೫ ಮಂದಿ ಸಾವನ್ನಪ್ಪಿದ್ದಾರೆ. ರಾಮನಗರದಲ್ಲಿ ಒಬ್ಬರು ಮತ್ತು ಮಾಗಡಿಯಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ.ಮೊದಲನೇ ಪ್ರಕರಣ ಮಾಗಡಿಯಲ್ಲಿ ಕಂಡುಬಂದಿದ್ದು, ೪೦ ವರ್ಷದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದು ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಐದಕ್ಕೇ ಏರಿಕೆಯಾಗಿದೆ.


ಎರಡನೇ ಪ್ರಕರಣ ಚನ್ನಪಟ್ಟಣ ನಗರದ ಕೋಟೆ ಯ ಶ್ರೀ ವರದರಾಜ ದೇವಾಲಯದ ಬಳಿಯ ೪೨ ವರ್ಷದ ಯುವಕನಿಗೆ ಕಂಡುಬಂದಿರುತ್ತದೆ.ಇವರು ಅನಾರೋಗ್ಯ ನಿಮಿತ್ತ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಗೆ ತೆರಳಿದ್ದ ಸಂದರ್ಭದಲ್ಲಿ ಪರೀಕ್ಷೆ ನಡೆಸಲಾದ ನಂತರ ಸೋಂಕು ದೃಢಪಟ್ಟಿದೆ. ಇವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ  ದಾಖಲಿಸಿದೆ. ಇವರಿಗೆ ಸೋಂಕು ಯಾವ ಮೂಲದಿಂದ ಹರಡಿದೆ ಮತ್ತು ಇವರ ಪ್ರಥಮ ಮತ್ತು ದ್ವಿತೀಯ ಸಂಪರ್ಕ ಮಾಹಿತಿಯನ್ನು ಕಲೆಹಾಕಬೇಕಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ.


ತಾಲ್ಲೂಕಿನ ಮಂಗಳವಾರಪೇಟೆಯ ೩೪ ವರ್ಷದ ಯುವಕನೊಬ್ಬನಿಗೆ ಪ್ರಥಮ ಸಂಪರ್ಕದಿಂದ ಸೋಂಕು ತಗುಲಿದ್ದು, ಆತ ಕೆಂಗೇರಿಯಲ್ಲಿ ವಾಸವಿದ್ದು ನಗರಕ್ಕೆ ಸಂಪರ್ಕ ಇಲ್ಲ ಎಂದು ತಿಳಿದು ಬಂದಿದೆ. ಈತ ರಾಮನಗರದ ಕೋವಿಡ್ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ದಾಖಲಾಗಿದ್ದು, ಕೆಂಗೇರಿ ಯ ವಿಳಾಸ ನೀಡಿರುವುದರಿಂದ ಆ ಸೋಂಕಿತನನ್ನು ಬೆಂಗಳೂರು ಗ್ರಾಮಾಂತರ ಕೋವಿಡ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.


ಇದುವರೆಗೆ ಜಿಲ್ಲೆಯಲ್ಲಿ ೧೫೦ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕನಕಪುರ ೫೫, ಮಾಗಡಿ ೩೯, ಚನ್ನಪಟ್ಟಣ ೩೦ ಮತ್ತು ರಾಮನಗರದ ೨೬ ಪ್ರಕರಣಗಳು ಸೇರಿವೆ. 


ಇಂದು ೨೩ ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತಾರೆ. ಈ ಪೈಕಿ ಕನಕಪುರದ ೨, ಚನ್ನಪಟ್ಟಣದ ೧೦, ರಾಮನಗರದ ೩ ಮತ್ತು ಮಾಗಡಿಯ ೮ ಜನರು ಸೇರಿದ್ದಾರೆ.


ಇದುವರೆಗೆ ಚನ್ನಪಟ್ಟಣದ ೧೯, ಮಾಗಡಿಯ ೧೦, ರಾಮನಗರದ ೯, ಕನಕಪುರದ ೬ ಮಂದಿ ಸೇರಿದಂತೆ ಒಟ್ಟು ೪೪ ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.


ರಾಮನಗರದ ಕೋವಿಡ್ ಆಸ್ಪತ್ರೆ ಸೇರಿದಂತೆ ಬೆಂಗಳೂರು ಆಸ್ಪತ್ರೆಯಲ್ಲಿ ಕನಕಪುರದ ೪೯ ಮಂದಿ, ಮಾಗಡಿ ೨೫, ಚನ್ನಪಟ್ಟಣ ೧೧ ಹಾಗೂ ರಾಮನಗರದ ೧೬ ಮಂದಿ ಸೇರಿ ಒಟ್ಟು ೧೦೧ ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.


*ಜಿಲ್ಲಾ ಆರೋಗ್ಯ ಇಲಾಖೆ ವರದಿ:*

ಕೋವಿಡ್ ನಿಯಂತ್ರಣಕ್ಕೆಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಬಿಡುಗಡೆ ಮಾಡಿರುವ ಭಾನುವಾರ (ಜೂನ್ ೨೮) ವರದಿಯಲ್ಲಿ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೮,೫೨೦ (ಹೊಸದಾಗಿ ಇಂದಿನ ೮೯ ಸೇರಿ). ೬೫ ಜನರು ಇಂದು ಹೋಂ ಕ್ವಾರಂಟೈನ್ ಅವಧಿಯನ್ನು ಪೂರೈಸಿದ್ದು, ಇವರ ಒಟ್ಟಾರೆ ಸಂಖ್ಯೆ ೨,೩೮೦ ಕ್ಕೆ ಏರಿಕೆಗೊಂಡಿದೆ.


ಜ್ವರ ತಪಾಸಣಾ ಕೇಂದ್ರದಲ್ಲಿ ಇಂದು ೨೩ ಜನರು ತಪಾಸಣೆಗೆ ಒಳಗಾಗಿದ್ದಾರೆ, ಒಟ್ಟಾರೆಯಾಗಿ ೨,೭೮೩ ಮಂದಿ ತಪಾಸಣೆ ಮಾಡಿಸಿ ಕೊಂಡಿದ್ದಾರೆ. ಒಟ್ಟು ೩ ಜನರು ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿದ್ದಾರೆ. ಇನ್ಸಟ್ಯೂಷನಲ್ ಕ್ವಾರಂಟೈನ್ ಗೆ ಇಂದು ೨೩ ಜನ ಸೇರ್ಪಡೆಯಾಗುವುದರೊಂದಿಗೆ ಒಟ್ಟಾರೆ ಸಂಖ್ಯೆ ೪೦೩ ಕ್ಕೆ ಏರಿಕೆಯಾಗಿದೆ.


ಇಂದು ಹೊಸದಾಗಿ ೮೯ ಮಾದರಿಗಳನ್ನು ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇದುವರೆಗೆ ಒಟ್ಟು ೮,೮೨೯ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದಿನ ಎಲ್ಲಾ ಪರೀಕ್ಷಾ ವರದಿಯ ಫಲಿತಾಂಶ ನಕಾರಾತ್ಮಕವಾಗಿರುತ್ತದೆ. ಇಂದಿನ ೮೯ ಬಾಕಿ ವರದಿ ಸೇರಿ ಒಟ್ಟು ೧,೩೫೨ ಪ್ರಕರಣಗಳ ವರದಿಯನ್ನು ನಿರೀಕ್ಷಿಸಲಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in corona »

ಕೊರೊನಾ: ಚನ್ನಪಟ್ಟಣ ತಾಲ್ಲೂಕಿನ 04 ಮಂದಿ ಸೇರಿ ಇಂದು ಜಿಲ್ಲಾದ್ಯಂತ 27 ಪ್ರಕರಣ ದೃಢ
ಕೊರೊನಾ: ಚನ್ನಪಟ್ಟಣ ತಾಲ್ಲೂಕಿನ 04 ಮಂದಿ ಸೇರಿ ಇಂದು ಜಿಲ್ಲಾದ್ಯಂತ 27 ಪ್ರಕರಣ ದೃಢ

ರಾಮನಗರ:ಸೆ/27/20/ಭಾನುವಾರ.


ಜಿಲ್ಲೆಯಲ್ಲಿ ಚನ್ನಪಟ್ಟಣ 4, ಕನಕಪುರ 3, ಮಾಗಡಿ 5 ಮತ್ತು ರಾಮನಗರ 15 ಪ್ರಕರಣಗಳು ಸೇರಿ ಇಂದು ಒಟ್ಟು 27 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ

ಇಂದು 79 ಕೊರೊನಾ ಪ್ರಕರಣ ದೃಢ: ಒಂದು ಸಾವು
ಇಂದು 79 ಕೊರೊನಾ ಪ್ರಕರಣ ದೃಢ: ಒಂದು ಸಾವು

ರಾಮನಗರ:ಸೆ/26/20/ಶನಿವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 21, ಕನಕಪುರ 16, ಮಾಗಡಿ 12 ಮತ್ತು ರಾಮನಗರ 30 ಪ್ರಕರಣಗಳು ಸೇರಿ ಇಂದು ಒಟ್ಟು 79 ಕರೋನ

ಕೊರೊನಾ: ಇಂದು 25 ಪ್ರಕರಣ ದೃಢ
ಕೊರೊನಾ: ಇಂದು 25 ಪ್ರಕರಣ ದೃಢ

ರಾಮನಗರ:ಸೆ/25/20/ಶುಕ್ರವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 6, ಕನಕಪುರ 3, ಮಾಗಡಿ 4 ಮತ್ತು ರಾಮನಗರ 12 ಪ್ರಕರಣಗಳು ಸೇರಿ ಇಂದು ಒಟ್ಟು 25 ಕರೋನಾ

ಕೊರೊನಾ: ಇಂದು 47 ಪ್ರಕರಣ ದೃಢ
ಕೊರೊನಾ: ಇಂದು 47 ಪ್ರಕರಣ ದೃಢ

ರಾಮನಗರ:ಸೆ/24/20/ಗುರುವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 14, ಕನಕಪುರ 19, ಮಾಗಡಿ 6 ಮತ್ತು ರಾಮನಗರ 8 ಪ್ರಕರಣಗಳು ಸೇರಿ ಇಂದು ಒಟ್ಟು 47 ಕರೋನಾ ಪಾಸಿಟಿವ್

ಕೊರೊನಾ: ಇಂದು 78 ಪ್ರಕರಣ ದೃಢ
ಕೊರೊನಾ: ಇಂದು 78 ಪ್ರಕರಣ ದೃಢ

ರಾಮನಗರ:ಸೆ/21/20/ಸೋಮವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 13, ಕನಕಪುರ 39, ಮಾಗಡಿ 10 ಮತ್ತು ರಾಮನಗರ 16 ಪ್ರಕರಣಗಳು ಸೇರಿ ಇಂದು ಒಟ್ಟು 78 ಕರೋನ

ಕೊರೊನಾ: ಇಂದು 46 ಪ್ರಕರಣ ದೃಢ
ಕೊರೊನಾ: ಇಂದು 46 ಪ್ರಕರಣ ದೃಢ

ರಾಮನಗರ:ಸೆ/20/20/ಭಾನುವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 10, ಕನಕಪುರ 6, ಮಾಗಡಿ 4 ಮತ್ತು ರಾಮನಗರ 26 ಪ್ರಕರಣಗಳು ಸೇರಿ ಇಂದು ಒಟ್ಟು 46 ಕರೋನಾ

ಕೊರೊನಾ: ಇಂದು ಜಿಲ್ಲಾದ್ಯಂತ 59 ಪ್ರಕರಣ ದೃಢ, ಒಂದು ಸಾವು
ಕೊರೊನಾ: ಇಂದು ಜಿಲ್ಲಾದ್ಯಂತ 59 ಪ್ರಕರಣ ದೃಢ, ಒಂದು ಸಾವು

ರಾಮನಗರ:ಸೆ.19/20/ಶನಿವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 17, ಕನಕಪುರ 6, ಮಾಗಡಿ 8 ಮತ್ತು ರಾಮನಗರ 28 ಪ್ರಕರಣಗಳು ಸೇರಿ ಇಂದು ಒಟ್ಟು 59 ಕರೋನಾ

ಕೊರೊನಾ: ಇಂದು ಜಿಲ್ಲಾದ್ಯಂತ 47 ಪ್ರಕರಣ ದೃಢ*
ಕೊರೊನಾ: ಇಂದು ಜಿಲ್ಲಾದ್ಯಂತ 47 ಪ್ರಕರಣ ದೃಢ*

ರಾಮನಗರ:ಸೆ/17/20/ಗುರುವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 15, ಮಾಗಡಿ 6 ಮತ್ತು ರಾಮನಗರ 26 ಪ್ರಕರಣಗಳು ಸೇರಿ ಇಂದು ಒಟ್ಟು 47 ಕರೋನಾ ಪಾಸಿಟಿವ್

ಕೊರೊನಾ: ಜಿಲ್ಲಾದ್ಯಂತ ಇಂದು 24 ಪ್ರಕರಣ ದೃಢ
ಕೊರೊನಾ: ಜಿಲ್ಲಾದ್ಯಂತ ಇಂದು 24 ಪ್ರಕರಣ ದೃಢ

ರಾಮನಗರ:ಸೆ/16/20/ಬುಧವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 6, ಮಾಗಡಿ 6 ಮತ್ತು ರಾಮನಗರ 12 ಪ್ರಕರಣಗಳು ಸೇರಿ ಇಂದು ಒಟ್ಟು 24 ಕರೋನಾ ಪಾಸಿಟಿವ್ ಪ್

ಕೊರೊನಾ: ಚನ್ನಪಟ್ಟಣದ 20 ಮಂದಿ ಸೇರಿದಂತೆ ಜಿಲ್ಲಾದ್ಯಂತ ಇಂದು 77 ಪ್ರಕರಣ ದೃಢ ಜಿಲ್ಲಾಧಿಕಾರಿ
ಕೊರೊನಾ: ಚನ್ನಪಟ್ಟಣದ 20 ಮಂದಿ ಸೇರಿದಂತೆ ಜಿಲ್ಲಾದ್ಯಂತ ಇಂದು 77 ಪ್ರಕರಣ ದೃಢ ಜಿಲ್ಲಾಧಿಕಾರಿ

ರಾಮನಗರ:ಸೆ/15/20/ಮಂಗಳವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 20, ಕನಕಪುರ 17, ಮಾಗಡಿ 6 ಮತ್ತು ರಾಮನಗರ 34 ಪ್ರಕರಣಗಳು ಸೇರಿ ಇಂದು ಒಟ್ಟು 77 ಕರೋನ

Top Stories »  


Top ↑