ನಗರಸಭೆ ಗೆ ಸೇರಿದ ನಿವೇಶನದಲ್ಲಿ ಸ್ಲಂ ಬೋರ್ಡ್ ನವರಿಂದ ಅಕ್ರಮ ಕಟ್ಟಡ. ಶೀಘ್ರ ನೆಲಸಮ ಮಾಡುವಂತೆ ಪೌರಾಯುಕ್ತ ಆದೇಶ

ಚನ್ನಪಟ್ಟಣ:ಅ/13/20/ಮಂಗಳವಾರ. ನಗರದ ಸಿಎಂಸಿ ಲೇಔಟ್ ನಲ್ಲಿನ ನಗರಸಭೆಗೆ ಸೇರಿದ ನಿವೇಶನಗಳಲ್ಲಿ ಕೊಳಚೆ ನಿರ್ಮೂಲನೆ ಮಂಡಳಿ (ಸ್ಲಂ ಬೋರ್ಡ್) ಯವರು ಬಡವರಿಗೆ ಮನೆ ನಿರ್ಮಿಸಲು ರಾತ್ರೋರಾತ್ರಿ ಫಿಲ್ಲರ್ ನಿಲ್ಲಿಸಿದ್ದು, ನಗರಸಭೆಯ ಅಧಿಕಾರಿಗಳಿಗೆ ಪೀಕಲಾಟಕ್ಕಿಟ್ಟುಗೊಂಡಿದ್ದರೆ, ಇದನ್ನೆ ನೆಪವಾಗಿಟ್ಟುಕೊಂಡಿರುವ ಖಾತೆದಾರರು ನಮಗೂ ಮನೆ ನಿರ್ಮಿಸಲು ಖಾತಾ, ಇ-ಖಾತಾ ಮಾಡಿ ಮನೆ ನಿರ್ಮಿಸಿಕೊಳ್ಳಲು ಪರವಾನಗಿ ನೀಡಬೇಕೆಂದು ಆಗ್ರಹಿಸಿದ್ದಾರೆ.
ಸಿಎಂಸಿ ಲೇಔಟ್ ಗೆ ಸಂಬಂಧಿಸಿದ ದೂರು ಲೋಕಾಯುಕ್ತ ಕೋರ್ಟ್ ನಲ್ಲಿದ್ದು, ಸದ್ಯ ಯಾವುದೇ ವ್ಯಕ್ತಿಗೂ ಮನೆ ನಿರ್ಮಿಸಲು ನಗರಸಭೆಯು ಪರವಾನಗಿ ನೀಡುತ್ತಿಲ್ಲ. ಸ್ಲಂ ಬೋರ್ಡ್ ನವರು ನಿರ್ಮಿಸಲು ಹೇಗೆ ಪರವಾನಗಿ ನೀಡಿದರು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಅದರಲ್ಲೂ ನಗರಸಭೆಗೆ ಸೇರಿದ ಜಾಗದಲ್ಲಿ ಸ್ಲಂ ಬೋರ್ಡ್ ನವರು ಮನೆ ನಿರ್ಮಿಸುತ್ತಿದ್ದಾರೋ ಅಥವಾ ಬೇರೆ ಬಲಾಢ್ಯರ ಕಪಿ ಮುಷ್ಟಿಗೆ ಸಿಲುಕಿ ನಿರ್ಮಿಸುತ್ತಿದ್ದಾರೋ ಎಂಬುದನ್ನು ನಗರಸಭೆಯ ಅಧಿಕಾರಿಗಳು ಮತ್ತು ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳು ಸ್ಪಷ್ಟಪಡಿಸಬೇಕಾಗಿದೆ.
ಈ ಮೊದಲು ಸಿಎಂಸಿ ಲೇಔಟ್ ನಲ್ಲಿ ನಗರಸಭೆಗೆ ಸಂಬಂಧಿಸಿದ ಖಾತೆಗಳಲ್ಲಿ ಹಲವಾರು ದೋಷಾರೋಪಗಳಾಗಿವೆ. ಒಂದೇ ನಿವೇಶನ ನಾಲ್ಕೈದು ಮಂದಿಗೆ ನೋಂದಣಿಯಾಗಿರುವ ಉದಾಹರಣೆಗಳಿವೆ. ಎಷ್ಟೋ ಬಡವರು ನಿವೇಶನ ಇದ್ದೂ ಮನೆ ನಿರ್ಮಿಸಲಾಗದೆ ಬಳಲುತ್ತಿದ್ದಾರೆ. ಕೆಲವು ಮಂದಿ ಈ ನಿವೇಶನ ನಮ್ಮದೋ ಅಥವಾ ಬೇರೆಯವರದೋ ಎಂದು ಖರೆ ಮಾಡಿಕೊಳ್ಳು ಹೆಣಗುತ್ತಿದ್ದಾರೆ. ಇಂತಹ ಸಿಎಂಸಿ ಲೇಔಟ್ ನಲ್ಲಿ ನಗರಸಭೆಯವರಿಗೆ ಗೊತ್ತಿಲ್ಲದೆ, ಬಲಾಢ್ಯರ ಒತ್ತಡದಿಂದ ನಗರಸಭೆಯ ಅಧಿಕಾರಿಗಳಿಗೂ ಗೊತ್ತಾಗದೆ, ಸ್ಲಂ ಬೋರ್ಡ್ ನವರು ಮನೆ ನಿರ್ಮಿಸಲು ಹೊರಟಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸ್ಲಂ ಬೋರ್ಡ್ ನವರು ನಮ್ಮ ಬಳಿ ಯಾವುದೇ ಪರವಾನಗಿ ಪಡೆದಿಲ್ಲ. ಇದನ್ನು ಪ್ರಶ್ನಿಸಿ ಈಗಾಗಲೇ ಪತ್ರ ಬರೆದಿದ್ದೇವೆ. ಈಗ ಫಿಲ್ಲರ್ ಹಾಕಿ ಮನೆ ನಿರ್ಮಿಸಲು ಹೊರಟಿರುವುದು ನಗರಸಭೆಯ ಜಾಗವಾಗಿದ್ದು, ಶೀಘ್ರವಾಗಿ ತೆರವುಗೊಳಿಸಿ ಸಮತಟ್ಟು ಮಾಡಬೇಕೆಂದು ಸ್ಲಂ ಬೋರ್ಡ್ ನ ಇಂಜಿನಿಯರ್ ಗಳಿಗೆ ತಿಳಿಸಿದ್ದೇನೆ.
*ಶಿವನಂಕಾರಿಗೌಡ, ಪೌರಾಯುಕ್ತರು, ಚನ್ನಪಟ್ಟಣ ನಗರಸಭೆ*
ಸ್ಲಂ ಬೋರ್ಡ್ ಹಲವಾರು ದಾಖಲೆಗಳನ್ನು ಕಲೆಹಾಕಿ ಮನೆಗಳನ್ನು ನಿರ್ಮಿಸಿ ಮುಂದಿನ ಅಭಿವೃದ್ಧಿಗಾಗಿ ನಗರಸಭೆಗೆ ವಹಿಸಿಕೊಡುತ್ತದೆ. ಈಗ ನಿರ್ಮಿಸುತ್ತಿರುವ ಎಲ್ಲಾ ಮನೆಗಳ ದಾಖಲೆಗಳು ಸರಿಯಾಗಿವೆ. ಶೆಟ್ಟಿಹಳ್ಳಿ ಕೆರೆಯ ಬದಿಯಲ್ಲಿನ 13 ಮನೆಗಳ ಕಾಮಗಾರಿಯನ್ನು ನಿಲ್ಲಿಸಿದ್ದೇವೆ. ನಗರಸಭೆಯ ಜಾಗದಲ್ಲಿ ನಿರ್ಮಿಸಲೊರಟಿರುವ ಮೂರು ಮನೆಗಳನ್ನು ಗುತ್ತಿಗೆದಾರರಿಗೆ ದಿಕ್ಕು ತಪ್ಪಿಸಿ ನಿರ್ಮಾಣ ಮಾಡಲು ಯಾರು ಹೇಳಿದ್ದಾರೋ ಗೊತ್ತಿಲ್ಲ. ಈ ವಿಷಯ ಗೊತ್ತಾದ ತಕ್ಷಣ ಕೆಲಸವನ್ನು ನಿಲ್ಲಿಸಲಾಗಿದೆ. ಶೀಘ್ರವಾಗಿ ತೆರವುಗೊಳಿಸಿ ನಗರಸಭೆಯ ಜಾಗವನ್ನು ಯಥಾಸ್ಥಿತಿಯಲ್ಲಿ ನಗರಸಭೆಗೆ ನೀಡುತ್ತೇವೆ.
*ಶಶಿಕುಮಾರ್ ಎಇ ಸ್ಲಂ ಬೋರ್ಡ್*
ಗೋ ರಾ ಶ್ರೀನಿವಾಸ...
ಮೊ:9845856139.
Recent news in corona »

ನಗರಸಭೆ ಗೆ ಸೇರಿದ ನಿವೇಶನದಲ್ಲಿ ಸ್ಲಂ ಬೋರ್ಡ್ ನವರಿಂದ ಅಕ್ರಮ ಕಟ್ಟಡ. ಶೀಘ್ರ ನೆಲಸಮ ಮಾಡುವಂತೆ ಪೌರಾಯುಕ್ತ ಆದೇಶ
ಚನ್ನಪಟ್ಟಣ:ಅ/13/20/ಮಂಗಳವಾರ. ನಗರದ ಸಿಎಂಸಿ ಲೇಔಟ್ ನಲ್ಲಿನ ನಗರಸಭೆಗೆ ಸೇರಿದ ನಿವೇಶನಗಳಲ್ಲಿ ಕೊಳಚೆ ನಿರ್ಮೂಲನೆ ಮಂಡಳಿ (ಸ್ಲಂ ಬೋರ್ಡ್) ಯವರ

ಸಾರ್ವಜನಿಕ ಆಸ್ಪತ್ರೆಯಲ್ಲಿಲ್ಲ ಕೊರೊನಾ ಮುಂಜಾಗ್ರತಾ ಕ್ರಮ. ಗುಂಪುಗುಂಪಾಗಿ ನಿಂತ ರೋಗಿಗಳು
ಚನ್ನಪಟ್ಟಣ:ಅ/12/20/ಸೋಮವಾರ. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳು ಗುಂಪುಗುಂಪಾಗಿ ಚಿಕಿತ್ಸೆಗಾಗಿ ನಿಂತಿರುವುದು ಕೊರೊನಾ ಮತ್ತಷ್ಟು ಹರ

ಇಂದು 82 ಕೊರೊನಾ ಪ್ರಕರಣ ದೃಢ: ಒಂದು ಸಾವು
ರಾಮನಗರ:ಅ/08/20/ಗುರುವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 39, ಕನಕಪುರ 13, ಮಾಗಡಿ 8 ಮತ್ತು ರಾಮನಗರ 22 ಪ್ರಕರಣಗಳು ಸೇರಿ ಇಂದು ಒಟ್ಟು 82 ಕರೋನಾ

ಇಂದು 60 ಕೊರೊನಾ ಪ್ರಕರಣ ದೃಢ: ಒಂದು ಸಾವು
ರಾಮನಗರ:ಅ/06/20/ಮಂಗಳವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 6, ಕನಕಪುರ 27, ಮಾಗಡಿ 19 ಮತ್ತು ರಾಮನಗರ 8 ಪ್ರಕರಣಗಳು ಸೇರಿ ಇಂದು ಒಟ್ಟು 60 ಕರೋನಾ

ಇಂದು 96 ಕೊರೊನಾ ಪ್ರಕರಣ ದೃಢ: ಒಂದು ಸಾವು
ರಾಮನಗರ:ಅ/05/20/ಸೋಮವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 18, ಕನಕಪುರ 34, ಮಾಗಡಿ 16 ಮತ್ತು ರಾಮನಗರ 28 ಪ್ರಕರಣಗಳು ಸೇರಿ ಇಂದು ಒಟ್ಟು 96 ಕರೋನಾ

ಕೊರೊನಾ : ಇಂದು 56 ಪ್ರಕರಣ ದೃಢ
ರಾಮನಗರ:ಅ/04/20/ಭಾನುವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 12, ಕನಕಪುರ 16, ಮಾಗಡಿ 9 ಮತ್ತು ರಾಮನಗರ 19 ಪ್ರಕರಣಗಳು ಸೇರಿ ಇಂದು ಒಟ್ಟು 56 ಕರೋನಾ

ಕೊರೊನಾ : ಇಂದು 61 ಪ್ರಕರಣ ದೃಢ
ರಾಮನಗರ:ಅ/02/20/ಶುಕ್ರವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 12, ಕನಕಪುರ 21, ಮಾಗಡಿ 10 ಮತ್ತು ರಾಮನಗರ 18 ಪ್ರಕರಣಗಳು ಸೇರಿ ಇಂದು ಒಟ್ಟು 61 ಕರೋ

ಕೊರೊನಾ : ಇಂದು 95 ಪ್ರಕರಣ ದೃಢ
ರಾಮನಗರ:ಅ/01/20/ಗುರುವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 26, ಕನಕಪುರ 19, ಮಾಗಡಿ 13 ಮತ್ತು ರಾಮನಗರ 37 ಪ್ರಕರಣಗಳು ಸೇರಿ ಇಂದು ಒಟ್ಟು 95 ಕರೋನ

ಇಂದು 67 ಕೊರೊನಾ ಪ್ರಕರಣ ದೃಢ: ಒಂದು ಸಾವು
ರಾಮನಗರ:ಸೆ/29/20/ಮಂಗಳವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 21, ಕನಕಪುರ 17, ಮಾಗಡಿ 11 ಮತ್ತು ರಾಮನಗರ 18 ಪ್ರಕರಣಗಳು ಸೇರಿ ಇಂದು ಒಟ್ಟು 67 ಕರೋ

ಮೃತಪಟ್ಟ ವೃದ್ದರಿಗೆ ನೆಗೆಟಿವ್, ಪಾಸಿಟಿವ್ ಎಂದು ಬಿಂಬಿಸಿ ಶವಸಂಸ್ಕಾರ, ಆಸ್ಪತ್ರೆಗೆ ಮುತ್ತಿಗೆ ಹಾಕಿದ ಕುಟುಂಬ
ಚನ್ನಪಟ್ಟಣ:ಸೆ/28/20/ಸೋಮವಾರ. ಮೊದಲಿಗೆ ಎಲೆತೋಟದಹಳ್ಳಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ಹೋಗಿದ್ದು ಫಲಿತಾಂ
ಪ್ರತಿಕ್ರಿಯೆಗಳು