Tel: 7676775624 | Mail: info@yellowandred.in

Language: EN KAN

    Follow us :


ಕೆಮ್ಮು, ನೆಗಡಿ,ಜ್ವರ ಲಕ್ಷಣಗಳಿದ್ದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್

Posted date: 29 Apr, 2021

Powered by:     Yellow and Red

ಕೆಮ್ಮು, ನೆಗಡಿ,ಜ್ವರ ಲಕ್ಷಣಗಳಿದ್ದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್

ಕೆಮ್ಮು, ನೆಗಡಿ, ಜ್ವರ ಲಕ್ಷಣಗಳಿದ್ದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಗ್ರಾಮೀಣ ಪ್ರದೇಶಗಳಲ್ಲಿ ಟಾಂ ಟಾಂ  ಹಾಗೂ ನಗರ ಪ್ರದೇಶದ ಮಾರುಕಟ್ಟೆ, ಸರ್ಕಲ್ ಹಾಗೂ   ಮುಖ್ಯ ಪ್ರದೇಶಗಳಲ್ಲಿ ಆಟೋ ಪ್ರಚಾರ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು ತಿಳಿಸಿದರು.


ಅವರು ಇಂದು ಅಧಿಕಾರಿಗಳೊಂದಿಗೆ ವರ್ಚುಯಲ್ ಸಭೆ ನಡೆಸಿ ಮಾತನಾಡಿದರು. ಸಾರ್ವಜನಿಕರು ಕೋವಿಡ್ ಲಕ್ಷಣಗಳಿದ್ದರೆ ನಿರ್ಲಕ್ಷ್ಯ ತೋರಬಾರದು. ಕೋವಿಡ್ ಪರೀಕ್ಷೆಗೆ ಒಳಗಾಗಬೇಕು. ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ನೀಡಬಹುದು. ರೋಗ ಉಲ್ಬಣಗೊಂಡ ನಂತರ ಚಿಕಿತ್ಸೆ ನೀಡಲು ಹೆಚ್ಚಿನ‌ ದಿನ ಬೇಕಾಗುತ್ತದೆ ಹಾಗೂ ಕೋವಿಡ್ ನಿರ್ಲಕ್ಷಿಸಿ ನೀವೇ ಕಷ್ಟಕ್ಕೆ ಒಳಗಾಗುತ್ತೀರಿ ಎಂದು ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.


ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಹೋಮ್ ಐಸೊಲೇಷನ್ ನೀಡುವ ಮುನ್ನ ಮನೆಯಲ್ಲಿ ಪ್ರತ್ಯೇಕ ಕೊಠಡಿ ಹಾಗೂ ಶೌಚಾಲಯ ವ್ಯವಸ್ಥೆ ಇರುವ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು. ಹೋಮ್ ಐಸೊಲೇಷನ್ ನೀಡಿದ ನಂತರ ಅವರು ಮನೆಯಿಂದ ಹೊರಗೆ ಬಾರದಂತೆ ನಿಗಾ ವಹಿಸಬೇಕು.  ಅವರು ಮನೆಯಿಂದ ಹೊರಗೆ ಬಂದ ಬಗ್ಗೆ ದೂರು ಬಂದಲ್ಲಿ ತಕ್ಷಣ ಅವರನ್ನು ಕೋವಿಡ್ ಕೇರ್ ಸೆಂಟರ್ ಗೆ ಕರೆತನ್ನಿ ಎಂದರು.


ಪ್ರತಿದಿನ ಹೋಮ್ ಐಸೊಲೇಷನ್ ಪರಿಶೀಲನೆಗೆ ತೆರಳುವ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೈಜರ್ ವ್ಯವಸ್ಥೆ ಮಾಡಿ. ಬೇಕಿರುವ ಮಾಸ್ಕ್  ಹಾಗೂ ಸ್ಯಾನಿಟೈಜರ್ ಗಳಿಗೆ ಇಂಡೆಂಟ್ ನೀಡಿ ಪಡೆದುಕೊಳ್ಳಿ ಯಾವುದೇ  ಕಾರಣಕ್ಕೂ ಕೊರತೆ ಉಂಟಾಗಬಾರದು ಎಂದರು. 


ಸಭೆಯಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಜಿಲ್ಲಾ ಆರೋಗ್ಯಾಧಿಕಾರಿ ಡಾ: ನಿರಂಜನ್, ಎಲ್ಲಾ ತಾಲ್ಲೂಕು ತಹಶೀಲ್ದಾರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in corona »

ಕೋವಿಡ್ ಲಸಿಕೆ ವೈದ್ಯರ ಜೊತೆ ವಾಗ್ವಾದಕ್ಕಿಳಿದ ಜನತೆ
ಕೋವಿಡ್ ಲಸಿಕೆ ವೈದ್ಯರ ಜೊತೆ ವಾಗ್ವಾದಕ್ಕಿಳಿದ ಜನತೆ

ಚನ್ನಪಟ್ಟಣದಲ್ಲಿ ಕಳೆದ ನಾಲ್ಕಾರು ದಿನಗಳಿಂದ ಕೋವಿಡ್ ಲಸಿಕೆ ಮಿತಿಯಾಗಿಯೇ ಬರುತ್ತಿರುವುದರಿಂದ ಆಕಾಂಕ್ಷಿಗಳಿಗೆ ಲಸಿಕೆ ದೊರೆಯುತ್ತಿಲ್ಲ. ಈ ಸಂಬಂಧ ಲಸಿಕೆ ನೀಡುತ್ತಿರುವ ಕುಶಲಕರ್ಮಿ ತರಬೇತಿ ಕೇಂದ್ರದ

ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿ ಆಕ್ಸಿಜನ್ ಸಿಲಿಂಡರ್ ಹೊತ್ತೊಯ್ದ ಆರೋಪಿಗಳು. ಪ್ರಕರಣ ದಾಖಲು. ಡಾ ವಿಜಯನರಸಿಂಹ ಪಾತ್ರ ಏನು ?
ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿ ಆಕ್ಸಿಜನ್ ಸಿಲಿಂಡರ್ ಹೊತ್ತೊಯ್ದ ಆರೋಪಿಗಳು. ಪ್ರಕರಣ ದಾಖಲು. ಡಾ ವಿಜಯನರಸಿಂಹ ಪಾತ್ರ ಏನು ?

ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ನೆನ್ನೆ ರಾತ್ರಿ ಸೈಯದ್ ನವಾಜ್, ಮುದಾಸಿರ್ ಮತ್ತು 15 ರಿಂದ 20 ಮಂದಿ ಆಸ್ಪತ್ರೆಯ ಒಳಗೆ ನುಗ್ಗಿ, ಸಿಬ್ಬಂದಿಗಳ ಜೊತೆ ಜಗಳ ಮಾಡಿ ಆಕ್ಸಿಜನ್ ಸಿಲಿಂಡರ್ ಸೇರಿದಂತೆ ಮತ್

ವಾರದೊಳಗೆ ರಾಮನಗರದಲ್ಲಿ 240 ಆಕ್ಸಿಜನ್‌ ಬೆಡ್;‌ ಜಿಲ್ಲೆಯಲ್ಲಿ 62 ಕೋವಿಡ್‌ ಕೇರ್‌ ಸೆಂಟರ್‌ಗಳ ಆರಂಭ: ಡಾ.ಸಿ.ಎನ್.‌ಅಶ್ವತ್ಥನಾರಾಯಣ
ವಾರದೊಳಗೆ ರಾಮನಗರದಲ್ಲಿ 240 ಆಕ್ಸಿಜನ್‌ ಬೆಡ್;‌ ಜಿಲ್ಲೆಯಲ್ಲಿ 62 ಕೋವಿಡ್‌ ಕೇರ್‌ ಸೆಂಟರ್‌ಗಳ ಆರಂಭ: ಡಾ.ಸಿ.ಎನ್.‌ಅಶ್ವತ್ಥನಾರಾಯಣ

ಬೆಂಗಳೂರು: ಮುಂದಿನ ಒಂದು ವಾರದೊಳಗೆ ರಾಮನಗರ ಜಿಲ್ಲಾ ಕೇಂದ್ರದಲ್ಲಿ 240 ಆಕ್ಸಿಜನ್‌ ಬೆಡ್‌ಗಳ ವ್ಯವಸ್ಥೆ ಮಾಡಲಾಗುವುದು ಹಾಗೂ ಜಿಲ್ಲೆಯ ಒಟ್ಟು 62 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ತಲಾ

ನಗರದ ಆಸ್ಪತ್ರೆಗೆ ಶಾಸಕ ಕುಮಾರಸ್ವಾಮಿ ಭೇಟಿ. ನಿಮ್ಮ ಜೊತೆಗೆ ನಾನಿರುತ್ತೇನೆ ಎಂಬ ಆಭಯ. ಅಂಬೇಡ್ಕರ್ ಭವನ ಉಪಯೋಗಿಸಿಕೊಳ್ಳಲು ಸೂಚನೆ
ನಗರದ ಆಸ್ಪತ್ರೆಗೆ ಶಾಸಕ ಕುಮಾರಸ್ವಾಮಿ ಭೇಟಿ. ನಿಮ್ಮ ಜೊತೆಗೆ ನಾನಿರುತ್ತೇನೆ ಎಂಬ ಆಭಯ. ಅಂಬೇಡ್ಕರ್ ಭವನ ಉಪಯೋಗಿಸಿಕೊಳ್ಳಲು ಸೂಚನೆ

ನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ತಾತ್ಕಾಲಿಕ ಕೋವಿಡ್ ಸೆಂಟರ್ ನಿರ್ಮಾಣಕ್ಕೆ ತಾಲೂಕು ಆಡಳಿತಕ್ಕೆ ಸೂಚಿಸಲಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.


ನಗರದ ಸಾರ

ಕೋವಿಡ್ ನಿಯಂತ್ರಿಸಲು ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು ಕೈಜೋಡಿಸಬೇಕು: ಸಿಇಓ ಇಕ್ರಂ
ಕೋವಿಡ್ ನಿಯಂತ್ರಿಸಲು ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು ಕೈಜೋಡಿಸಬೇಕು: ಸಿಇಓ ಇಕ್ರಂ

ಪ್ರತಿ ಗ್ರಾಮದಲ್ಲೂ ಕೋವಿಡ್ ನಿಯಂತ್ರಿಸಲು ಗ್ರಾಮ ಪಂಚಾಯಿತಿ ಅಧ್ಯಕ್ಷರು,  ಉಪಾಧ್ಯಕ್ಷರು, ಸದಸ್ಯರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಮನ್ವಯವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ

ಅಂಗನವಾಡಿ ಕಾರ್ಯಕರ್ತೆಯರು ಮುಂಜಾಗ್ರತೆ ವಹಿಸಿ ಕೆಲಸ ನಿರ್ವಹಿಸಿ: ನಿಮ್ಮ ಜೀವವೂ ಅಮೂಲ್ಯ. ಸಿಇಓ ಇಕ್ರಂ
ಅಂಗನವಾಡಿ ಕಾರ್ಯಕರ್ತೆಯರು ಮುಂಜಾಗ್ರತೆ ವಹಿಸಿ ಕೆಲಸ ನಿರ್ವಹಿಸಿ: ನಿಮ್ಮ ಜೀವವೂ ಅಮೂಲ್ಯ. ಸಿಇಓ ಇಕ್ರಂ

ಕೋವಿಡ್ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಹೋಮ್ ಐಸೊಲೇಷನ್ ಹಾಗೂ ಹೋಮ್ ಕ್ವಾರಂಟೈನ್ ನೀಡಲಾಗಿದೆ. ಸೋಂಕಿತರ ಆರೋಗ್ಯದ ಬಗ್ಗೆ ಪರಿಶೀಲನೆಗೆ ತೆರಳುವ ಅಂಗನವಾಡಿ ಕಾರ್ಯ

ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಇನ್ನು ಹತ್ತೇ ದಿನದಲ್ಲಿ ಆಕ್ಸಿಜನ್‌ ಟ್ಯಾಂಕ್‌ ಅಳವಡಿಕೆ
ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಇನ್ನು ಹತ್ತೇ ದಿನದಲ್ಲಿ ಆಕ್ಸಿಜನ್‌ ಟ್ಯಾಂಕ್‌ ಅಳವಡಿಕೆ

ಬೆಂಗಳೂರು: ಯಾರಾದರೂ ಕೋವಿಡ್‌ ಪರಿಸ್ಥಿತಿಯ ದುರ್ಲಾಭವನ್ನು ಪಡೆದುಕೊಂಡು ಹಣ ಸುಲಿಗೆ ಮಾಡಲೆತ್ನಿಸಿದರೆ ಮುಲಾಜಿಲ್ಲದೆ ಕ್ರಮ ಕೈಕೊಳ್ಳಲಾಗುವುದು ಹಾಗೂ ಬಂಧಿಸಿ ಜೈಲಿಗಟ್ಟಲಾಗುವುದು ಎಂದು ರಾಜ್ಯ ಕೋವಿಡ

ಎಪಿಎಂಎಸಿ ಮಾರುಕಟ್ಟೆಯ ಮಾವಿನ ಮಂಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ ತಹಶಿಲ್ದಾರ್ ನಾಗೇಶ್
ಎಪಿಎಂಎಸಿ ಮಾರುಕಟ್ಟೆಯ ಮಾವಿನ ಮಂಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ ತಹಶಿಲ್ದಾರ್ ನಾಗೇಶ್

ಚನ್ನಪಟ್ಟಣ ನಗರದಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ಹೆಚ್ಚಿನ ಜನರು ಸೇರುತ್ತಿರುವ ಕಾರಣ ತಹಶೀಲ್ದಾರ್ ನಾಗೇಶ್, ಡಿವೈಎಸ್ಪಿ ರಮೇಶ್ ಮತ್ತು ಸಿಬ್ಬಂದಿಗಳು ನೆನ್ನೆ ಭೇಟಿ ನೀಡಿ, ಮಂಡಿ ವ

ಇಂದಿನಿಂದ ಕೋವಿಶೀಲ್ಡ್ ಲಭ್ಯ. ತಾಲ್ಲೂಕು ವೈದ್ಯಾಧಿಕಾರಿ ಡಾ ಕೆ ಪಿ ರಾಜು
ಇಂದಿನಿಂದ ಕೋವಿಶೀಲ್ಡ್ ಲಭ್ಯ. ತಾಲ್ಲೂಕು ವೈದ್ಯಾಧಿಕಾರಿ ಡಾ ಕೆ ಪಿ ರಾಜು

ಕಳೆದ ನಾಲ್ಕೈದು ದಿನಗಳಿಂದ ಕೊರೊನಾ ಲಸಿಕೆ ಸಿಗದ ಕಾರಣ ಪರಿತಪಿಸುತ್ತಿದ್ದ ಸಾರ್ವಜನಿಕರಿಗೆ ಇಂದು ಲಸಿಕೆ ಬಂದಿರುವುದಾಗಿ ತಾಲ್ಲೂಕು ವೈದ್ಯಾಧಿಕಾ

ಕೋಡಂಬಳ್ಳಿ ಗ್ರಾಮದ ವ್ಯಾಪಾರಸ್ಥರಿಗೆ ಲೆಕ್ಕಕ್ಕಿಲ್ಲದ ಕೊರೊನಾ
ಕೋಡಂಬಳ್ಳಿ ಗ್ರಾಮದ ವ್ಯಾಪಾರಸ್ಥರಿಗೆ ಲೆಕ್ಕಕ್ಕಿಲ್ಲದ ಕೊರೊನಾ

ತಾಲ್ಲೂಕಿನಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದರೂ, ತಾಲ್ಲೂಕಿನ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾದ ಕೋಡಂಬಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾತ್ರ ಬೆಳಿಗ್ಗೆ 5 ಗಂಟೆಗೇ ಟೀ ಅಂಗಡಿಗಳು

Top Stories »  


Top ↑