Tel: 7676775624 | Mail: info@yellowandred.in

Language: EN KAN

    Follow us :


ಟೊಯೋಟಾ ಕಿರ್ಲೋಸ್ಕರ್ ಮೋಟಾರ್‍ ಕರ್ನಾಟಕ ಸರ್ಕಾರಕ್ಕೆ ಆಮ್ಲಜನಕ ಸಾಂದ್ರಕಗಳನ್ನು ಒದಗಿಸುತ್ತದೆ

Posted date: 19 Jun, 2021

Powered by:     Yellow and Red

ಟೊಯೋಟಾ ಕಿರ್ಲೋಸ್ಕರ್ ಮೋಟಾರ್‍ ಕರ್ನಾಟಕ ಸರ್ಕಾರಕ್ಕೆ ಆಮ್ಲಜನಕ ಸಾಂದ್ರಕಗಳನ್ನು ಒದಗಿಸುತ್ತದೆ

ರಾಮನಗರ, 03 ಜೂನ್ 2021:  ಕೋವಿಡ್-19 ಎರಡನೇ ಅಲೆಯನ್ನು ನಿಯಂತ್ರಿಸುವ ಸಲುವಾಗಿ ಕರ್ನಾಟಕ ಸರ್ಕಾರ ಮತ್ತು ರಾಜ್ಯ ಆರೋಗ್ಯ ಇಲಾಖೆಗೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ನೀಡುತ್ತಿದ್ದ ಸಹಕಾರವನ್ನು ಮತ್ತಷ್ಟು ಹೆಚ್ಚಿಸಿದೆ. ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಡಾ. ಕೆ. ಸುಧಾಕರ್ ಅವರಿಗೆ ಟಿಕೆಎಂ ಆಮ್ಲಜನಕ ಸಾಂದ್ರಕಗಳನ್ನು ಹಸ್ತಾಂತರಿಸಿತು.



ಎರಡನೇ ಅಲೆ ಕಾಣಿಸಿಕೊಂಡಾಗಿನಿಂದ ಈವರೆಗೆ,  ಟಿಕೆಎಂ 50 ಆಮ್ಲಜನಕ ಸಾಂದ್ರಕಗಳನ್ನು ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಿಸಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಇನ್ನೂ 80 ಘಟಕಗಳನ್ನು ಒದಗಿಸಲು ಪ್ರಯತ್ನಗಳನ್ನು ಮಾಡುತ್ತಿದೆ. ರಾಮನಗರ ಜಿಲ್ಲೆಯ ಆರೋಗ್ಯ ಇಲಾಖೆಗೆ ಸಾರಿಗೆ ಸೌಲಭ್ಯವನ್ನು ಒದಗಿಸುವ ಮೂಲಕ ಲಸಿಕೆ ಅಭಿಯಾನ ಗರಿಷ್ಠ ಪ್ರಮಾಣದಲ್ಲಿ ಯಶಸ್ವಿಯಾಗುವುದಕ್ಕೆ ಕಂಪನಿಯು ತನ್ನ ಬೆಂಬಲವನ್ನು ವಿಸ್ತರಿಸುವುದಾಗಿ ಘೋಷಿಸಿತು.


ಈ ಸಂದರ್ಭದಲ್ಲಿ ಹಾಜರಿದ್ದ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಮಾತನಾಡಿ, "ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವುದರಲ್ಲಿ ಮತ್ತು ಸದಾ ಬದಲಾಗುತ್ತಿರುವ ಪರಿಸ್ಥಿತಿಗೆ ಅನುಗುಣವಾಗಿ ಕ್ರಮಗಳನ್ನು ಘೋಷಿಸುವಲ್ಲಿ ಸರ್ಕಾರ ಮತ್ತು ಸಂಬಂಧಿತ ಆರೋಗ್ಯ ಅಧಿಕಾರಿಗಳು ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ.  ಎಲ್ಲಾ ಕ್ಷೇತ್ರಗಳಿಂದ ವಿಶೇಷವಾಗಿ ಕಾರ್ಪೊರೇಟ್ ಗಳಿಂದ ನಮಗೆ ದೊರೆತ ಬೆಂಬಲವು ವ್ಯಾಪಕವಾಗಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲು ನೆರವಾಯಿತು. ಸರ್ಕಾರದ ಪ್ರಯತ್ನಗಳಿಗೆ ಬಹಳ ಪ್ರೋತ್ಸಾಹದಾಯಕವಾಗಿತ್ತು ಎಂದರು.


ಈ ವ್ಯಾಪ್ತಿಯಲ್ಲಿ ವಿವಿಧ ಸಮುದಾಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಲ್ಲಿ ಟಿಕೆಎಂ ಯಾವಾಗಲೂ ಉತ್ತಮ ಬೆಂಬಲದ ಮೂಲವಾಗಿದೆ.  ಹೀಗಾಗಿ ನಮ್ಮ ಕೇಂದ್ರೀಕೃತ ಪ್ರಯತ್ನಗಳಿಗೆ ಪೂರಕವಾಗಿದ್ದು, ಪ್ರಸ್ತುತ ಕೊಡುಗೆಯು  ಸಾಂಕ್ರಾಮಿಕ ಮತ್ತು ಭವಿಷ್ಯದಲ್ಲಿ ತುರ್ತು ಚಿಕಿತ್ಸಾ ಅವಶ್ಯಕತೆಗಳನ್ನು ಪೋಷಿಸುತ್ತದೆ ಎಂದರು.


ಈ ಕುರಿತು ಮಾತನಾಡಿದ ಟಿಕೆಎಂನ ಕಾರ್ಪೊರೇಟ್ ವ್ಯವಹಾರಗಳು ಮತ್ತು ಆಡಳಿತದ ಹಿರಿಯ ಉಪಾಧ್ಯಕ್ಷ ಶ್ರೀ ವಿಕ್ರಮ್ ಗುಲಾಟಿ ಅವರು, "ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ, ಟೊಯೋಟಾ ಜನರು ಮತ್ತು ಸಮಾಜದ ಅಗತ್ಯಗಳಿಗೆ ಅನುಗುಣವಾಗಿ ಬಿಕ್ಕಟ್ಟಿಗೆ ಪೂರ್ವಭಾವಿಯಾಗಿ ಸ್ಪಂದಿಸುತ್ತಿದೆ. ಈ ಅಗತ್ಯದ ಸಮಯದಲ್ಲಿ ಬಿಕ್ಕಟ್ಟನ್ನು ಶಮನಗೊಳಿ ಮುಂದೆ ಸಾಗಲು ನಮ್ಮ ಸ್ಥಳೀಯ ಸಮುದಾಯಗಳಿಗೆ ಬೆಂಬಲ ನೀಡುವುದು ಮತ್ತು ಅಗತ್ಯ ನೆರವು ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಜವಾಬ್ದಾರಿಯುತ ಕಾರ್ಪೊರೇಟ್ ಆಗಿ, ನಾವು ಉದಯೋನ್ಮುಖ ಅಗತ್ಯಗಳನ್ನು ವಿಶ್ಲೇಷಿಸುವುದನ್ನು ಮುಂದುವರಿಸುತ್ತೇವೆ ಮತ್ತು ಸಂಬಂಧಿತ ಸರ್ಕಾರಿ ಇಲಾಖೆಗಳಿಗೆ ಸಹಾಯ ಮಾಡಲು ಅಗತ್ಯ  ಕ್ರಮಗಳನ್ನು ತರುತ್ತೇವೆ. ಸರ್ಕಾರ ಮತ್ತು ಸ್ಟೇಕ್ ಹೋಲ್ಡರ್ಸ್ ನ  ಸ್ಥಿರ ಮತ್ತು ಸಮಗ್ರ ಪ್ರಯತ್ನಗಳೊಂದಿಗೆ, ಬಿಕ್ಕಟ್ಟು ಶೀಘ್ರದಲ್ಲೇ ಶಮನವಾಗಲಿದೆ ಎಂದು ನಾವು ಆಶಿಸುತ್ತೇವೆ ಎಂದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in corona »

ಜಿಲ್ಲೆಯಲ್ಲಿ ಮೊದಲ ಕೊರೊನಾ ಪತ್ತೆ
ಜಿಲ್ಲೆಯಲ್ಲಿ ಮೊದಲ ಕೊರೊನಾ ಪತ್ತೆ

ರಾಮನಗರ ಜಿಲ್ಲೆಯಲ್ಲಿ ಕಳೆದ ಏಳು ತಿಂಗಳ ನಂತರ ಇದೇ ಮೊದಲ ಬಾರಿಗೆ ಕೊರೋನಾ ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಬಿಡದಿ ಬಳಿಯ ಬೈರಮಂಗಲ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ‌

ಸೆ.17 ರಂದು ತಪ್ಪದೇ  ಕೋವಿಡ್ ಲಸಿಕೆ ಪಡೆದುಕೊಳ್ಳಿ : ಡಾ: ರಾಕೇಶ್ ಕುಮಾರ್ ಕೆ
ಸೆ.17 ರಂದು ತಪ್ಪದೇ ಕೋವಿಡ್ ಲಸಿಕೆ ಪಡೆದುಕೊಳ್ಳಿ : ಡಾ: ರಾಕೇಶ್ ಕುಮಾರ್ ಕೆ

ರಾಮನಗರ.ಸೆ 17: ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರಂದು ಕೋವಿಡ್ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, 318 ಲಸಿಕಾ ತಂಡವನ್ನು ರಚಿಸಲಾಗಿದೆ. ತಂಡಗಳು

ಸೆ.17 ರಂದು ಜಿಲ್ಲೆಯಲ್ಲಿ 50,000 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ: ಡಾ: ರಾಕೇಶ್ ಕುಮಾರ್ ಕೆ
ಸೆ.17 ರಂದು ಜಿಲ್ಲೆಯಲ್ಲಿ 50,000 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ: ಡಾ: ರಾಕೇಶ್ ಕುಮಾರ್ ಕೆ

ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರಂದು ಕೋವಿಡ್ ಲಸಿಕಾ ಮೇಳವನ್ನು ಹಮ್ನಿಕೊಳ್ಳಲಾಗಿದ್ದು, 50,000 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರ

ಸೆಪ್ಟೆಂಬರ್ 8  ರಂದು ಜಿಲ್ಲಾದ್ಯಂತ ಕೋವಿಡ್ ಲಸಿಕಾ ಮೇಳ
ಸೆಪ್ಟೆಂಬರ್ 8 ರಂದು ಜಿಲ್ಲಾದ್ಯಂತ ಕೋವಿಡ್ ಲಸಿಕಾ ಮೇಳ

ರಾಮನಗರ ,ಸೆ.7; ಕೋವಿಡ್-19 ಲಸಿಕಾಕರಣದ ಪ್ರಗತಿ ವೃದ್ದಿಯ ಉಪಕ್ರಮವಾಗಿ ಸೆಪ್ಟೆಂಬರ್ 8 ರಂದು  ಜಿಲ್ಲೆಯಾದ್ಯಂತ  ಕೋವಿಡ್-19 ಲಸಿಕಾ

ಕೋವಿಡ್ ಮೂರನೇ ಅಲೆ ಎದುರಿಸಲು ಸಿದ್ದತೆ ಮಾಡಿಕೊಳ್ಳಿ ಡಾ ಅಶ್ವಥ್ ನಾರಾಯಣ
ಕೋವಿಡ್ ಮೂರನೇ ಅಲೆ ಎದುರಿಸಲು ಸಿದ್ದತೆ ಮಾಡಿಕೊಳ್ಳಿ ಡಾ ಅಶ್ವಥ್ ನಾರಾಯಣ

ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು  ಆಸ್ಪತ್ರೆಗಳಲ್ಲಿ ಕೋವಿಡ್ ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆ  ಮಾಡಿಕೊಳ್ಳಿ ಎಂದು ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋ

ಕಾರ್ಮಿಕ ಇಲಾಖೆಯ ಕಿಟ್ ನೀಡಿದ ಜೆಡಿಎಸ್. ಕೊರೊನಾ ಲೆಕ್ಕಿಸದೆ ಮುಗಿಬಿದ್ದ ಸಹಸ್ರಾರು ಮಂದಿ
ಕಾರ್ಮಿಕ ಇಲಾಖೆಯ ಕಿಟ್ ನೀಡಿದ ಜೆಡಿಎಸ್. ಕೊರೊನಾ ಲೆಕ್ಕಿಸದೆ ಮುಗಿಬಿದ್ದ ಸಹಸ್ರಾರು ಮಂದಿ

ಚನ್ನಪಟ್ಟಣ.ಜು.12: ತಾಲ್ಲೂಕಿನಾದ್ಯಂತ ಇರುವ ಸಂಘಟಿತ ಮತ್ತು ಅಸಂಘಟಿತ  ಕಟ್ಟಡ ಕಾರ್ಮಿಕರಿಗೆ ಇಲಾಖೆ ವತಿಯಿಂದ ದಿನಸಿ ಕಿಟ್ ನೀಡಲಾಗುತ್ತಿದ್ದು, ತಾಲ್ಲೂಕಿನಲ್ಲಿ ಮಂತ್ರಿ ಮತ್ತು ಶಾಸಕರ ನೇತೃತ್

ಕೊರೊನಾ ಅಣಕಿಸಿದ ಕಾಂಗ್ರೆಸ್ ದಿನಸಿ ಕಿಟ್. ಕಿಟ್ ಗಾಗಿ ಮುಗಿಬಿದ್ದ ಜನಸಾಮಾನ್ಯರು. ಗಾಳಿಗೆ ತೂರಿಹೋದ ನಿಯಮ
ಕೊರೊನಾ ಅಣಕಿಸಿದ ಕಾಂಗ್ರೆಸ್ ದಿನಸಿ ಕಿಟ್. ಕಿಟ್ ಗಾಗಿ ಮುಗಿಬಿದ್ದ ಜನಸಾಮಾನ್ಯರು. ಗಾಳಿಗೆ ತೂರಿಹೋದ ನಿಯಮ

ಕೊರೊನಾ ದಿಂದ ಜನಸಾಮಾನ್ಯರ ಬದುಕು ಅಧ:ಪತನಕ್ಕಿಳಿದಿರುವುದು ಸತ್ಯ. ಇದಕ್ಕಾಗಿ, ಪಕ್ಷಗಳು, ಸಂಘಸಂಸ್ಥೆಗಳು ಮತ್ತು ಉಳ್ಳವರನೇಕರು ಬಡಬಗ್ಗರಿಗೆ ದಿನಸಿ ಕಿಟ್ ನೀಡುತ್ತಿರುವುದು ಶ್ಲಾಘನೀಯವಾದರೂ ಕೋವಿಡ್

ವಾರಾಂತ್ಯ ಕರ್ಫ್ಯೂ, 6 ರಿಂದ 2. ಅಗತ್ಯ ವಸ್ತುಗಳ ಅಂಗಡಿಗಳಿಗೆ ಮಾತ್ರ ಅವಕಾಶ. ಜಿಲ್ಲಾಧಿಕಾರಿ
ವಾರಾಂತ್ಯ ಕರ್ಫ್ಯೂ, 6 ರಿಂದ 2. ಅಗತ್ಯ ವಸ್ತುಗಳ ಅಂಗಡಿಗಳಿಗೆ ಮಾತ್ರ ಅವಕಾಶ. ಜಿಲ್ಲಾಧಿಕಾರಿ

ರಾಮನಗರ: ವಾರಾಂತ್ಯದ ಕರ್ಫ್ಯೂ ಗೆ ಕಳೆದ ವಾರದಂತೆ ಈ ವಾರವೂ ಸಹ ಬದಲಾವಣೆಗಳೊಂದಿಗೆ ಮಾರ್ಪಡಿಸಿದ್ದು, ಶನಿವಾರ ಮತ್ತು ಭಾನುವಾರ ಎರಡೂ ದಿನಗಳಲ್ಲಿ

ಸಂಭವನೀಯ ಕೋವಿಡ್ 3 ನೇ ಅಲೆ-ಮಕ್ಕಳ ರಕ್ಷಣೆಗೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ
ಸಂಭವನೀಯ ಕೋವಿಡ್ 3 ನೇ ಅಲೆ-ಮಕ್ಕಳ ರಕ್ಷಣೆಗೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ

ಸಂಭವನೀಯ ಕೋವಿಡ್ 3 ನೇ ಅಲೆಯ ಸಂದರ್ಭದಲ್ಲಿ ಯಾವುದೇ ಮಕ್ಕಳಿಗೆ ತೊಂದರೆಯಾಗದಂತೆ ಹಾಗೂ ತುರ್ತು ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು  ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ

115 ನೇ ದಿನಕ್ಕೆ ಕಾಲಿಟ್ಟ  ಇರುಳಿಗರ ಪ್ರತಿಭಟನೆ
115 ನೇ ದಿನಕ್ಕೆ ಕಾಲಿಟ್ಟ ಇರುಳಿಗರ ಪ್ರತಿಭಟನೆ

ರಾಮನಗರ: ಕೈಲಾಂಚ ಹೋಬಳಿಯ ವಡ್ಡರಹಳ್ಳಿ ಗೊಲ್ಲರದೊಡ್ಡಿ ಗ್ರಾಮದ ಇರುಳಿಗ ಜನಾಂಗದವರು ಹಂದಿಗೊಂದಿ ಅರಣ್ಯ 

ಪ್ರದೇಶದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಕೋವಿಡ್ ಎರಡನೇ ಅಲೆ ಹೆ

Top Stories »  


Top ↑