ಕೊರೊನಾ ಅಣಕಿಸಿದ ಕಾಂಗ್ರೆಸ್ ದಿನಸಿ ಕಿಟ್. ಕಿಟ್ ಗಾಗಿ ಮುಗಿಬಿದ್ದ ಜನಸಾಮಾನ್ಯರು. ಗಾಳಿಗೆ ತೂರಿಹೋದ ನಿಯಮ

ಕೊರೊನಾ ದಿಂದ ಜನಸಾಮಾನ್ಯರ ಬದುಕು ಅಧ:ಪತನಕ್ಕಿಳಿದಿರುವುದು ಸತ್ಯ. ಇದಕ್ಕಾಗಿ, ಪಕ್ಷಗಳು, ಸಂಘಸಂಸ್ಥೆಗಳು ಮತ್ತು ಉಳ್ಳವರನೇಕರು ಬಡಬಗ್ಗರಿಗೆ ದಿನಸಿ ಕಿಟ್ ನೀಡುತ್ತಿರುವುದು ಶ್ಲಾಘನೀಯವಾದರೂ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಸಹಾಯ ಹಸ್ತ ನೀಡುವ ನೆಪದಲ್ಲಿ ಮತ್ತಷ್ಟು ಕೊರೊನಾ ಹರಡುತ್ತಿರುವುದಂತು ಸತ್ಯವಾಗಿದೆ.
ಮಂಗಳವಾರ ದಿನ ಕೋಡಂಬಳ್ಳಿ ಗ್ರಾಮದಲ್ಲಿ ಸಂಸದ ಡಿಕೆ ಸುರೇಶ್ ಅವರ ನೇತೃತ್ವದಲ್ಲಿ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಡಂಬಳ್ಳಿ ಶಿವಮಾದು ರವರ ಮುಂದಾಳತ್ವದಲ್ಲಿ ಆಹಾರದ ಕಿಟ್ ವಿತರಣೆ ಮಾಡಲಾಯಿತು. ಡಿ ಕೆ ಸುರೇಶ್ ಬಂದರೂ ಸಹ ಸಂಬಂಧಿಸಿದ ಪೋಲಿಸ್ ಠಾಣೆಯ ಸಿಬ್ಬಂದಿಗಳು ಕಾಣಲಿಲ್ಲ. ಆ ಸಂದರ್ಭದಲ್ಲಿ ಸಾರ್ವಜನಿಕರು ಕಿಟ್ ಪಡೆಯಲು ನಾಮುಂದು, ತಾಮುಂದು ಎಂದು ನೂಕುನುಗ್ಗಲಿನಲ್ಲಿ ದಿನಸಿ ಕಿಟ್ ಪಡೆದರು.
ಯೋಗೇಶ್ವರ್ ಪತ್ನಿಯ ಹುಟ್ಟುಹಬ್ಬ, ಹೆಚ್ ಡಿ ಕುಮಾರಸ್ವಾಮಿ ಯವರ ನೇತೃತ್ವದಲ್ಲಿ ನಡೆದ ಬಮೂಲ್ ಕಾರ್ಯಕ್ರಮ ಕಾಂಗ್ರೆಸ್ ಕಿಟ್ ಪಡೆಯುವ ಸಂದರ್ಭದಲ್ಲಿ ಕಂಡು ಬಂದ ದೃಶ್ಯಗಳು ಕೊರೋನಾ ಇಲ್ಲವೇ ಇಲ್ಲ ಎಂಬಂತೆ ಬಿಂಬಿಸುತ್ತಿದ್ದದ್ದು ಮಾತ್ರ ವೈದ್ಯಕೀಯ ಮತ್ತು ಆಡಳಿತ ಯಂತ್ರವನ್ನು ಅಣಕಿಸುವಂತಿತ್ತು.
ಒಂದು ಕಾರಿನಲ್ಲಿ ಮತ್ತು ಬೈಕ್ ನಲ್ಲಿ ಒಬ್ಬರೇ ಹೋಗುವಾಗಲು ಮಾಸ್ಕ್ ಧರಿಸದಿದ್ದರೆ ಹಿಡಿದು ದಂಡ ಹಾಕುವ ಪೋಲೀಸರು, ಸ್ಥಳೀಯ ಆಡಳಿತಾಧಿಕಾರಿಗಳೇ ಬೀದಿಗಿಳಿದು ದಂಡ ಹಾಕುವ ಅಧಿಕಾರಿಗಳು (ಅ)ಗಣ್ಯ ನಾಯಕರಿಗೇಕೆ ದಂಡ ವಿಧಿಸುವುದಿಲ್ಲ. ಕೋರ್ಟ್ ಕಟಕಟೆ ಹತ್ತಿಸುವುದಿಲ್ಲ. ವಾಹನ ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ. ಭಾರತ ದೇಶದಲ್ಲಿ ರಾಜಕಾರಣಿಗಳಿಗೊಂದು, ಜನಸಾಮಾನ್ಯರಿಗೊಂದು ಕಾನೂನು ಇದೆಯೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in corona »

ಸೆ.17 ರಂದು ತಪ್ಪದೇ ಕೋವಿಡ್ ಲಸಿಕೆ ಪಡೆದುಕೊಳ್ಳಿ : ಡಾ: ರಾಕೇಶ್ ಕುಮಾರ್ ಕೆ
ರಾಮನಗರ.ಸೆ 17: ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರಂದು ಕೋವಿಡ್ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, 318 ಲಸಿಕಾ ತಂಡವನ್ನು ರಚಿಸಲಾಗಿದೆ. ತಂಡಗಳು

ಸೆ.17 ರಂದು ಜಿಲ್ಲೆಯಲ್ಲಿ 50,000 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ: ಡಾ: ರಾಕೇಶ್ ಕುಮಾರ್ ಕೆ
ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರಂದು ಕೋವಿಡ್ ಲಸಿಕಾ ಮೇಳವನ್ನು ಹಮ್ನಿಕೊಳ್ಳಲಾಗಿದ್ದು, 50,000 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರ

ಸೆಪ್ಟೆಂಬರ್ 8 ರಂದು ಜಿಲ್ಲಾದ್ಯಂತ ಕೋವಿಡ್ ಲಸಿಕಾ ಮೇಳ
ರಾಮನಗರ ,ಸೆ.7; ಕೋವಿಡ್-19 ಲಸಿಕಾಕರಣದ ಪ್ರಗತಿ ವೃದ್ದಿಯ ಉಪಕ್ರಮವಾಗಿ ಸೆಪ್ಟೆಂಬರ್ 8 ರಂದು ಜಿಲ್ಲೆಯಾದ್ಯಂತ ಕೋವಿಡ್-19 ಲಸಿಕಾ

ಕೋವಿಡ್ ಮೂರನೇ ಅಲೆ ಎದುರಿಸಲು ಸಿದ್ದತೆ ಮಾಡಿಕೊಳ್ಳಿ ಡಾ ಅಶ್ವಥ್ ನಾರಾಯಣ
ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಿ ಎಂದು ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋ

ಕಾರ್ಮಿಕ ಇಲಾಖೆಯ ಕಿಟ್ ನೀಡಿದ ಜೆಡಿಎಸ್. ಕೊರೊನಾ ಲೆಕ್ಕಿಸದೆ ಮುಗಿಬಿದ್ದ ಸಹಸ್ರಾರು ಮಂದಿ
ಚನ್ನಪಟ್ಟಣ.ಜು.12: ತಾಲ್ಲೂಕಿನಾದ್ಯಂತ ಇರುವ ಸಂಘಟಿತ ಮತ್ತು ಅಸಂಘಟಿತ ಕಟ್ಟಡ ಕಾರ್ಮಿಕರಿಗೆ ಇಲಾಖೆ ವತಿಯಿಂದ ದಿನಸಿ ಕಿಟ್ ನೀಡಲಾಗುತ್ತಿದ್ದು, ತಾಲ್ಲೂಕಿನಲ್ಲಿ ಮಂತ್ರಿ ಮತ್ತು ಶಾಸಕರ ನೇತೃತ್

ಕೊರೊನಾ ಅಣಕಿಸಿದ ಕಾಂಗ್ರೆಸ್ ದಿನಸಿ ಕಿಟ್. ಕಿಟ್ ಗಾಗಿ ಮುಗಿಬಿದ್ದ ಜನಸಾಮಾನ್ಯರು. ಗಾಳಿಗೆ ತೂರಿಹೋದ ನಿಯಮ
ಕೊರೊನಾ ದಿಂದ ಜನಸಾಮಾನ್ಯರ ಬದುಕು ಅಧ:ಪತನಕ್ಕಿಳಿದಿರುವುದು ಸತ್ಯ. ಇದಕ್ಕಾಗಿ, ಪಕ್ಷಗಳು, ಸಂಘಸಂಸ್ಥೆಗಳು ಮತ್ತು ಉಳ್ಳವರನೇಕರು ಬಡಬಗ್ಗರಿಗೆ ದಿನಸಿ ಕಿಟ್ ನೀಡುತ್ತಿರುವುದು ಶ್ಲಾಘನೀಯವಾದರೂ ಕೋವಿಡ್

ವಾರಾಂತ್ಯ ಕರ್ಫ್ಯೂ, 6 ರಿಂದ 2. ಅಗತ್ಯ ವಸ್ತುಗಳ ಅಂಗಡಿಗಳಿಗೆ ಮಾತ್ರ ಅವಕಾಶ. ಜಿಲ್ಲಾಧಿಕಾರಿ
ರಾಮನಗರ: ವಾರಾಂತ್ಯದ ಕರ್ಫ್ಯೂ ಗೆ ಕಳೆದ ವಾರದಂತೆ ಈ ವಾರವೂ ಸಹ ಬದಲಾವಣೆಗಳೊಂದಿಗೆ ಮಾರ್ಪಡಿಸಿದ್ದು, ಶನಿವಾರ ಮತ್ತು ಭಾನುವಾರ ಎರಡೂ ದಿನಗಳಲ್ಲಿ

ಸಂಭವನೀಯ ಕೋವಿಡ್ 3 ನೇ ಅಲೆ-ಮಕ್ಕಳ ರಕ್ಷಣೆಗೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ
ಸಂಭವನೀಯ ಕೋವಿಡ್ 3 ನೇ ಅಲೆಯ ಸಂದರ್ಭದಲ್ಲಿ ಯಾವುದೇ ಮಕ್ಕಳಿಗೆ ತೊಂದರೆಯಾಗದಂತೆ ಹಾಗೂ ತುರ್ತು ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ

115 ನೇ ದಿನಕ್ಕೆ ಕಾಲಿಟ್ಟ ಇರುಳಿಗರ ಪ್ರತಿಭಟನೆ
ರಾಮನಗರ: ಕೈಲಾಂಚ ಹೋಬಳಿಯ ವಡ್ಡರಹಳ್ಳಿ ಗೊಲ್ಲರದೊಡ್ಡಿ ಗ್ರಾಮದ ಇರುಳಿಗ ಜನಾಂಗದವರು ಹಂದಿಗೊಂದಿ ಅರಣ್ಯ
ಪ್ರದೇಶದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಕೋವಿಡ್ ಎರಡನೇ ಅಲೆ ಹೆ

ಗೊಂದಲದ ಗೂಡಾದ ವೀಕೆಂಡ್ ಕರ್ಫ್ಯೂ, ತಾಲ್ಲೂಕು ಆಡಳಿತಕ್ಕಿಲ್ಲಾ ಮಾಹಿತಿ !? ಅನಗತ್ಯ ಓಡಾಟ ಬಿಟ್ಟು ಎಲ್ಲವೂ ಯಥಾಸ್ಥಿತಿ ಡಿ ಸಿ ಹೇಳಿಕೆ
ತಾಲ್ಲೂಕಿನ ನಾಲ್ಕು ಸ್ಥಂಭಗಳೆನಿಸಿಕೊಂಡ ತಹಶಿಲ್ದಾರ್, ಉಪ ಪೋಲಿಸ್ ಅಧೀಕ್ಷಕ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ನಗರಸಭೆ ಪೌರಾಯುಕ್ತ ಯಾರಿಗೂ ಸಹ ರಾತ್ರಿ ಒಂಭತ್ತು ಗಂಟೆಯಾದರೂ ವಾ
ಪ್ರತಿಕ್ರಿಯೆಗಳು