ಸಾಕುನಾಯಿಯ ಮೇಲೆ ಎರಡು ವರ್ಷ ನಿರಂತರ ಅತ್ಯಾಚಾರಗೈದ ಭೂಪ:

ಕೋಲ್ಕತ್ತಾ; 60 ವರ್ಷದ ವೃದ್ದನೋರ್ವ ಸತತ ಎರಡು ವರ್ಷಗಳ ಕಾಲ ತನ್ನ ಮನೆಯ ಸಾಕು ನಾಯಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, ಸ್ಥಳೀಯರಿಂದ ವೀಡಿಯೋ ವೈರಲ್ ಆದ ನಂತರ ಪ್ರಾಣಿದಯಾಸಂಘದವರ ದೂರಿನ ಮೇರೆಗೆ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ರತಿಕಾಂತ್ ಸರ್ದಾರ್ ಎಂದು ಗುರುತಿಸಲಾಗಿದೆ. ಅತ್ಯಾಚಾರಕ್ಕೊಳಗಾಗುವ ಸಂದರ್ಭದಲ್ಲಿ ನಾಯಿ ಕೂಗುತ್ತಿದ್ದಂತೆ ಸ್ಥಳೀಯರು ಅನುಮಾನದಿಂದ ನೋಡಿದ್ದಾರೆ. ಆ ಸಂದರ್ಭದಲ್ಲಿ ಸರ್ದಾರ್ ಅಮಲೇರಿದ ಮತ್ತು ಬಟ್ಟೆಯಿಲ್ಲದ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ. ಅದಾದ ಬಳಿಕ ರತಿಕಾಂತ್ ನಾಯಿಯ ಮೇಲೆ ಅತ್ಯಾಚಾರ ನಡೆಸಿದ ಕೃತ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಈ ಬಗ್ಗೆ ಸ್ಥಳೀಯ ವ್ಯಕ್ತಿ ಮಾತನಾಡಿ, ಸರ್ದಾರ್ ಸುಮಾರು 2 ವರ್ಷಗಳಿಂದ ತನ್ನ ಸಾಕು ನಾಯಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ. ನಾಯಿಯನ್ನು ಬಿಡುಗಡೆ ಮಾಡುವಂತೆ ಮತ್ತು ಅಂತಹ ಕೃತ್ಯದಿಂದ ದೂರವಿರುವಂತೆ ಪದೇ ಪದೇ ಕೇಳಿಕೊಂಡಿದ್ದೆವು. ಆದರೆ ಆತ ಮಾತನ್ನು ಕೇಳಲು ನಿರಾಕರಿಸುತ್ತಿದ್ದ ಎಂದು ಹೇಳಿದರು.
ಘಟನೆಗೆ ಸಂಬಂಧಿಸಿದಂತೆ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಸ್ಥಳೀಯರು ಹರಿಯಬಿಟ್ಟಿದ್ದಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಪ್ರಾಣಿ ಪ್ರೇಮಿಗಳ ಸಂಘಟನೆಯ ಸದಸ್ಯರೊಬ್ಬರು ಸೋನಾರ್ಪುರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಲಿಖಿತ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ರತಿಕಾಂತ್ ಸರ್ದಾರ್ನನ್ನು ಬಂಧಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಪ್ರಾಣಿ ಸಂರಕ್ಷಣಾ ಸಂಘಟನೆಯ ಸದಸ್ಯರು, ಈ ವಿಡಿಯೋವನ್ನು ಸ್ಥಳೀಯರು ಒಂದು ವರ್ಷದ ಹಿಂದೆ ಚಿತ್ರೀಕರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆದಾಗ್ಯೂ, ಅವರಿಗೆ ಪ್ರಾಣಿ ಸಂರಕ್ಷಣಾ ಕಾಯಿದೆಗಳ ಬಗ್ಗೆ ತಿಳಿದಿರಲಿಲ್ಲ, ಹೀಗಾಗಿ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದಾರೆ ಎಂದು ತಿಳಿಸಿದರು.
ಗೋ ರಾ ಶ್ರೀನಿವಾಸ...
ಮೊ:9845846139.
Recent news in crime »

ಹುಣಸೂರು ಮೂಲದ ಕಳ್ಳನನ್ನು ಬಂಧಿಸಿ ಏಳು ದ್ವಿಚಕ್ರ ವಾಹನ ವಶಪಡಿಸಿಕೊಂಡ ಪುರ ಪೋಲಿಸರು
ಚನ್ನಪಟ್ಟಣ: ನಗರದಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ವ್ಯಕ್ತಿಯೋರ್ವನನ್ನು ವಿಚಾರಣೆ ಮಾಡಲಾಗಿ ಆತ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಪೋಲಿಸರ ಕ

ಸಾಕುನಾಯಿಯ ಮೇಲೆ ಎರಡು ವರ್ಷ ನಿರಂತರ ಅತ್ಯಾಚಾರಗೈದ ಭೂಪ:
ಕೋಲ್ಕತ್ತಾ; 60 ವರ್ಷದ ವೃದ್ದನೋರ್ವ ಸತತ ಎರಡು ವರ್ಷಗಳ ಕಾಲ ತನ್ನ ಮನೆಯ ಸಾಕು ನಾಯಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, ಸ್ಥಳೀಯರಿಂದ ವೀಡಿಯೋ ವೈರಲ್ ಆದ ನಂತರ ಪ್ರಾಣಿದಯಾಸಂಘದವರ ದೂರಿ
ಪ್ರತಿಕ್ರಿಯೆಗಳು