Tel: 7676775624 | Mail: info@yellowandred.in

Language: EN KAN

    Follow us :


ಹುಣಸೂರು ಮೂಲದ ಕಳ್ಳನನ್ನು ಬಂಧಿಸಿ ಏಳು ದ್ವಿಚಕ್ರ ವಾಹನ ವಶಪಡಿಸಿಕೊಂಡ ಪುರ ಪೋಲಿಸರು

Posted date: 24 Jul, 2023

Powered by:     Yellow and Red

ಹುಣಸೂರು ಮೂಲದ ಕಳ್ಳನನ್ನು ಬಂಧಿಸಿ ಏಳು ದ್ವಿಚಕ್ರ ವಾಹನ ವಶಪಡಿಸಿಕೊಂಡ ಪುರ ಪೋಲಿಸರು

ಚನ್ನಪಟ್ಟಣ: ನಗರದಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ವ್ಯಕ್ತಿಯೋರ್ವನನ್ನು ವಿಚಾರಣೆ ಮಾಡಲಾಗಿ ಆತ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಪೋಲಿಸರ ಕಣ್ತಪ್ಪಿಸಿ ತಿರುಗಾಡಿಕೊಂಡಿದ್ದ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಆತನ ಬಳಿ ಇದ್ದ ದ್ವಿಚಕ್ರ ವಾಹನಗಳು ಮತ್ತು ಹಣವನ್ನು ವಶಪಡಿಸಿಕೊಂಡು ಜೈಲಿಗಟ್ಟಿದ್ದಾರೆ.


ಕಳ್ಳನನ್ನು ಬಂಧಿಸುವ ಮೂಲಕ ಆತನಿಂದ 7 ದ್ವಿಚಕ್ರ ವಾಹನಗಳನ್ನು ಹಾಗೂ ನಂಜನಗೂಡಿನ ದೇವಾಲಯವೊದರಲ್ಲಿ ಕದ್ದಿದ್ದ ಹಣವನ್ನು ವಶಪಡಿಸಿಕೊಳ್ಳುವ ಮುಖಾಂತರ ಭರ್ಜರಿ ಭೇಟೆಯಾಡಿದ್ದಾರೆ.


ಕಿರಣ್ ಆಲಿಯಾಸ್ ಸುಧಿ ಬಂಧಿತ ಆರೋಪಿಯಾಗಿದ್ದು, ಮೈಸೂರು ಜಿಲ್ಲೆಯ ಹುಣಸೂರು ನಗರ ವಾಸಿಯಾದ ಈತ ನಗರದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿ ಹಲವು ಕಡೆ ವಾಹನಗಳನ್ನು ಕದ್ದಿರುವುದಾಗಿ ತಿಳಿಸಿ ಪೊಲೀಸರ ಅತಿಥಿಯಾಗಿದ್ದಾನೆ.

ಕೆಲ ದಿನಗಳ ಹಿಂದಷ್ಟೆ ಕೂರಣಗೆರೆ ಗ್ರಾಮದ ವ್ಯಕ್ತಿಯೊಬ್ಬರ ದ್ವಿಚಕ್ರ ವಾಹನ ತಾಲೂಕು ಕಚೇರಿ ಮುಂಭಾಗ ಕಳುವಾಗಿತ್ತು, ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿ ತನಿಖೆ ನಡೆಸುತ್ತಿದ್ದು, ಇದೇ ವೇಳೆ ಪೊಲೀಸರಿಗೆ ಈ ವಾಹನ ಕಂಡು ಬಂದಿದ್ದು, ಇದರ ಜಾಡು ಹಿಡಿದು ಹೊರಟಾಗ ಹಲವೆಡೆ ದ್ವಿಚಕ್ರ ವಾಃನಗಳನ್ನು ಕಳ್ಳತನ ಮಾಡುತ್ತಿದ್ದ ಈತ ಸಿಕ್ಕಿ ಹಾಕಿಕೊಂಡಿದ್ದಾನೆ.

ಪ್ರೋಬೇಷನರಿ ಡಿವೈಎಸ್‍ಪಿ ಸ್ನೇಹಾರಾಜ್ ರವರ ನೇತೃತ್ವದಲ್ಲಿ ನಗರ ವೃತ್ತ ನಿರೀಕ್ಷಕಿ ಶೋಭಾ, ಉಪ ನಿರೀಕ್ಷಕರಾಧ ಹರೀಶ್ ಹಾಗೂ ಎಎಸ್‍ಐ ಗಳಾದ ಅಫ್ಜಲ್ ಖಾನ್, ರಾಮಕೃಷ್ಣ, ಶ್ರೀನಿವಾಸ, ಮಹದೇವಯ್ಯ, ನರಸಿಂಹಯ್ಯ, ಸಿದ್ದರಾಜು, ಹೆಡ್ ಕಾನ್‍ಸ್ಟೇಬಲ್ ಗಳಾದ ನಾಗರಾಜು, ಸುಭಾಷ್, ಸಿಬ್ಬಂದಿಗಳಾದ ಸುನೀಲ್ ಕುಮಾರ್, ಪವನ್ ಕುಮಾರ್, ಚಂದ್ರಶೇಖರ್, ಅವಿನಾಶ್, ಆನಂದ, ರವಿಕುಮಾರ್, ರವಿ ಕಾರ್ಯಾಚರಣೆಯಲ್ಲಿ ಪಾಲ್ಗೂಂಡಿದ್ದು, ಇವರೆಲ್ಲರಿಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in crime »

ಹುಣಸೂರು ಮೂಲದ ಕಳ್ಳನನ್ನು ಬಂಧಿಸಿ ಏಳು ದ್ವಿಚಕ್ರ ವಾಹನ ವಶಪಡಿಸಿಕೊಂಡ ಪುರ ಪೋಲಿಸರು
ಹುಣಸೂರು ಮೂಲದ ಕಳ್ಳನನ್ನು ಬಂಧಿಸಿ ಏಳು ದ್ವಿಚಕ್ರ ವಾಹನ ವಶಪಡಿಸಿಕೊಂಡ ಪುರ ಪೋಲಿಸರು

ಚನ್ನಪಟ್ಟಣ: ನಗರದಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ವ್ಯಕ್ತಿಯೋರ್ವನನ್ನು ವಿಚಾರಣೆ ಮಾಡಲಾಗಿ ಆತ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಪೋಲಿಸರ ಕ

ಸಾಕುನಾಯಿಯ ಮೇಲೆ ಎರಡು ವರ್ಷ ನಿರಂತರ ಅತ್ಯಾಚಾರಗೈದ ಭೂಪ:
ಸಾಕುನಾಯಿಯ ಮೇಲೆ ಎರಡು ವರ್ಷ ನಿರಂತರ ಅತ್ಯಾಚಾರಗೈದ ಭೂಪ:


ಕೋಲ್ಕತ್ತಾ; 60 ವರ್ಷದ ವೃದ್ದನೋರ್ವ ಸತತ ಎರಡು ವರ್ಷಗಳ ಕಾಲ ತನ್ನ ಮನೆಯ ಸಾಕು ನಾಯಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, ಸ್ಥಳೀಯರಿಂದ ವೀಡಿಯೋ ವೈರಲ್ ಆದ ನಂತರ ಪ್ರಾಣಿದಯಾಸಂಘದವರ ದೂರಿ

Top Stories »  


Top ↑