ಚಂದ್ರಶೇಖರ ಗುರೂಜಿ ಕೊಲೆಗೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿದ್ದ ಜಮೀನು ಕಾರಣ

ಹುಬ್ಬಳ್ಳಿ: ಸರಳವಾಸ್ತು ಚಂದ್ರಶೇಖರ ಗುರೂಜಿ ಹತ್ಯೆಗೆ ಸಂಬಂಧಪಟ್ಟಂತೆ ಪೊಲೀಸ್ ಕಮಿಷನರೇಟ್ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ
ಜೆಎಂಎಫ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಬರೋಬ್ಬರಿ 800 ಪುಟಗಳ ಚಾಜ್೯ಶೀಟ್ನಲ್ಲಿ ಕೊಲೆಗೆ ಏನು ಕಾರಣ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಜಾರ್ಜ್ ಶೀಟ್ನಲ್ಲಿ ಪ್ರಕರಣದ ಮಹತ್ವದ ಅಂಶಗಳು ಉಲ್ಲೇಖವಾಗಿದ್ದು, ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿದ್ದ ಸರ್ವೆ ನಂಬರ್ 166/1, ರ 5 ಎಕರೆ 11 ಗುಂಟೆ ಜಮೀನು ವಿಚಾರ ಚಂದ್ರಶೇಖರ ಗುರೂಜಿ ಕೊಲೆಗೆ ಮುಖ್ಯ ಕಾರಣ ಎಂದು ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಜಮೀನು ಬಸವರೆಡ್ಡಿ ಎಂಬುವರ ಹೆಸರಿನಲ್ಲಿದ್ದು ಈತ ಸಹ ಸರಳವಾಸ್ತು ಕಂಪನಿಯ ಹಳೇ ಉದ್ಯೋಗಿಯಾಗಿದ್ದನು. ಗುರೂಜಿ ಕಂಪನಿ ಬಿಟ್ಟ ಬಳಿಕ ಮಹಾಂತೇಶ್, ಮಂಜುನಾಥ ಮತ್ತು ಬಸವರೆಡ್ಡಿ ಗುರೂಜಿ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದರು.
ಹೀಗಾಗಿ ಬಸವರೆಡ್ಡಿ ಹತ್ತಿರ ಇದ್ದ ಜಮೀನನ್ನು ಮಹಾಂತೇಶ್ ಹೆಸರಿಗೆ ವರ್ಗಾಯಿಸಿ ಮಾರಾಟ ಮಾಡಲು ಯೋಜನೆ ಮಾಡಿದ್ದರು ಎಂದು ಹೇಳಲಾಗಿದೆ. ಇನ್ನೂ ಈ ಕೊಲೆಯಲ್ಲಿ ಬಸವರೆಡ್ಡಿ ಪಾತ್ರವಿಲ್ಲ ಎನ್ನುವ ಅಂಶವೂ ಕೂಡ ಚಾರ್ಜ್ ಶೀಟ್ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in crime »

ಒಬ್ಬಂಟಿಯಾಗಿ ಸಿಕ್ಕ ಯುವಕನ ಮೇಲೆ ನಾಲ್ವರು ಯುವತಿಯರಿಂದ ಸಾಮೂಹಿಕ ಅತ್ಯಾಚಾರ..!
ಜಲಂಧರ್: ಪಂಜಾಬ್16/01/2023.
ಒಬ್ಬಂಟಿಯಾಗಿ ಸಿಕ್ಕ ಯುವಕನ ಮೇಲೆ ನಾಲ್ವರು ಯುವತಿಯರು ಮೇಲೆರಗಿ ಅತ್ಯಾಚಾರ ಮಾಡಿರುವ ಘಟನೆ ದೇಶದಲ್ಲಿ ನಡೆದಿದ್ದು, ಯುವ ಸಮುದಾಯವನ್ನೇ ಬೆಚ್ಚಿ ಬೀಳುವಂ

ಕಾರು ಬಿಡುಗಡೆಗೆ 50 ಸಾವಿರ ರೂ.ಗೆ ಒತ್ತಾಯಿಸಿದ ಅಪರಾಧ ವಿಭಾಗದ ಪೇದೆ ನವೀನ್ ಅಮಾನತು
ಕುಣಿಗಲ್: ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಪಡಿಸಿಕೊಂಡಿದ್ದ ಕಾರನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶ ನೀಡಿತ್ತು, ಕ

ಚಂದ್ರಶೇಖರ ಗುರೂಜಿ ಕೊಲೆಗೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿದ್ದ ಜಮೀನು ಕಾರಣ
ಹುಬ್ಬಳ್ಳಿ: ಸರಳವಾಸ್ತು ಚಂದ್ರಶೇಖರ ಗುರೂಜಿ ಹತ್ಯೆಗೆ ಸಂಬಂಧಪಟ್ಟಂತೆ ಪೊಲೀಸ್ ಕಮಿಷನರೇಟ್ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ

ಮಂಗಳೂರಿನಲ್ಲಿ ನಾಪತ್ತೆಯಾದ ಮೂವರು ಕಾಲೇಜು ವಿದ್ಯಾರ್ಥಿನಿಯರು ಎಲ್ಲಿ ಹೋದರು?
ಮಂಗಳೂರು: ಮಂಗಳೂರಿನ ಮೇರಿಹಿಲ್ ನಲ್ಲಿರುವ ವಿಕಾಸ್ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಹಾಸ್ಟೆಲ್ ನಿಂದ ನಿನ್ನೆ ಪರಾರಿಯಾಗಿದ್ದು, ಎಲ್ಲಿಗೆ ಹೋಗಿದ್ದಾರ

ಮಲ ತಂದೆಯಿಂದ ಚಿಕ್ಕ ವಯಸ್ಸಿನಿಂದಲೂ ಅತ್ಯಾಚಾರಕ್ಕೊಳಗಾಗಿರುವ ಮಹಿಳೆಯೋರ್ವಳು ಇದೀಗ ದೂರು ನೀಡಿದ್ದಾರೆ.
ಅಲಿಗಢ(ಉತ್ತರ ಪ್ರದೇಶ): ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತವರು ನಾಡಿನಲ್ಲಿ ಅತ್ಯಂತ ಅಮಾನವೀಯ, ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರ ಮೇಲೆ ಚಿಕ್ಕಂದಿನಿಂದಲೂ ಅತ್ಯಾಚಾರ ನಡೆದ
ಪ್ರತಿಕ್ರಿಯೆಗಳು