Tel: 7676775624 | Mail: info@yellowandred.in

Language: EN KAN

    Follow us :

ಕಾರು ಬಿಡುಗಡೆಗೆ 50 ಸಾವಿರ ರೂ.ಗೆ ಒತ್ತಾಯಿಸಿದ ಅಪರಾಧ ವಿಭಾಗದ ಪೇದೆ ನವೀನ್ ಅಮಾನತು

Posted date: 25 Oct, 2022

Powered by:     Yellow and Red

ಕಾರು ಬಿಡುಗಡೆಗೆ 50 ಸಾವಿರ ರೂ.ಗೆ ಒತ್ತಾಯಿಸಿದ ಅಪರಾಧ ವಿಭಾಗದ ಪೇದೆ ನವೀನ್ ಅಮಾನತು

ಕುಣಿಗಲ್: ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಪಡಿಸಿಕೊಂಡಿದ್ದ ಕಾರನ್ನು ಬಿಡುಗಡೆ ಮಾಡುವಂತೆ   ನ್ಯಾಯಾಲಯ ಆದೇಶ ನೀಡಿತ್ತು, ಕಾರು ಬಿಡುಗಡೆ ಮಾಡಲು ಹಣ ಕೇಳಿದ ಅಪರಾಧ ವಿಭಾಗದ ಪೇದೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್ ಶಹಪುರ್ ರನ್ನು ಸೇವೆಯಿಂದ ಅಮಾನತು ಪಡಿಸಿದ್ದಾರೆ.

ಕುಣಿಗಲ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ನವೀನ್ ಅಮಾನತುಗೊಂಡ ಪೇದೆ.*ಏನಿದು ಪ್ರಕರಣ:* ವಕೀಲರೊಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ನಡೆಸಿ, ನಗದು ಸೇರಿದಂತೆ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದ ತೃತೀಯ ಲಿಂಗಿಗಳು ಸೇರಿದಂತೆ ಐವರನ್ನು ಕುಣಿಗಲ್ ಪೊಲೀಸರು ಬಂಧಿಸಿ ಅವರಿಂದ ಕಾರು ಹಾಗೂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದರು. ಕಾರಿನ ಮಾಲೀಕರು ವಕೀಲರ ಮೂಲಕ ಕಾರು ಬಿಡುಗಡೆಗೆ ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದರು ಎನ್ನಲಾಗಿದೆ.

ಈ ನಿಟ್ಟಿನಲ್ಲಿ ನ್ಯಾಯಾಲಯವು ಕಾರು ಬಿಡುಗಡೆಗೆ ಆದೇಶ ನೀಡಿತ್ತು ಎನ್ನಲಾಗಿದೆ. ಆದರೆ ಕಾರು ಬಿಡುಗಡೆಗೆ ಪೇದೆ ನವೀನ್ 50 ಸಾವಿರ ರೂ.ಗಳನ್ನು ಕೊಡುವಂತೆ ಕಾರು ಮಾಲೀಕರಿಗೆ  ಒತ್ತಾಯಿಸಿದರು. ಈ ಸಂಬಂಧ ಕಾರು ಮಾಲೀಕರು ವಕೀಲರ ಮೂಲಕ ನ್ಯಾಯಾಧೀಶರ ಗಮನಕ್ಕೆ ತಂದಿದ್ದರು. ಈ ದಿಸೆಯಲ್ಲಿ ನ್ಯಾಯಾಧೀಶರು ಪೊಲೀಸ್ ಅಧಿಕಾರಿಗಳಿಗೆ ವರದಿ ನೀಡಿದ ಹಿನ್ನೆಲೆಯಲ್ಲಿ ನವೀನ್ ಅವರನ್ನು ಸೇವೆಯಿಂದ ಜಿಲ್ಲಾ ಎಸ್ಪಿ ಅವರು ಅಮಾನತು ಪಡಿಸಿದ್ದಾರೆ.

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in crime »

ಕಾರು ಬಿಡುಗಡೆಗೆ 50 ಸಾವಿರ ರೂ.ಗೆ ಒತ್ತಾಯಿಸಿದ ಅಪರಾಧ ವಿಭಾಗದ ಪೇದೆ ನವೀನ್ ಅಮಾನತು
ಕಾರು ಬಿಡುಗಡೆಗೆ 50 ಸಾವಿರ ರೂ.ಗೆ ಒತ್ತಾಯಿಸಿದ ಅಪರಾಧ ವಿಭಾಗದ ಪೇದೆ ನವೀನ್ ಅಮಾನತು

ಕುಣಿಗಲ್: ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಪಡಿಸಿಕೊಂಡಿದ್ದ ಕಾರನ್ನು ಬಿಡುಗಡೆ ಮಾಡುವಂತೆ   ನ್ಯಾಯಾಲಯ ಆದೇಶ ನೀಡಿತ್ತು, ಕ

ಚಂದ್ರಶೇಖರ ಗುರೂಜಿ ಕೊಲೆಗೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿದ್ದ ಜಮೀನು ಕಾರಣ
ಚಂದ್ರಶೇಖರ ಗುರೂಜಿ ಕೊಲೆಗೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿದ್ದ ಜಮೀನು ಕಾರಣ

ಹುಬ್ಬಳ್ಳಿ: ಸರಳವಾಸ್ತು ಚಂದ್ರಶೇಖರ ಗುರೂಜಿ ಹತ್ಯೆಗೆ ಸಂಬಂಧಪಟ್ಟಂತೆ ಪೊಲೀಸ್‌ ಕಮಿಷನರೇಟ್‌ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ

ಮಂಗಳೂರಿನಲ್ಲಿ ನಾಪತ್ತೆಯಾದ ಮೂವರು ಕಾಲೇಜು ವಿದ್ಯಾರ್ಥಿನಿಯರು ಎಲ್ಲಿ ಹೋದರು?
ಮಂಗಳೂರಿನಲ್ಲಿ ನಾಪತ್ತೆಯಾದ ಮೂವರು ಕಾಲೇಜು ವಿದ್ಯಾರ್ಥಿನಿಯರು ಎಲ್ಲಿ ಹೋದರು?

ಮಂಗಳೂರು: ಮಂಗಳೂರಿನ ಮೇರಿಹಿಲ್ ನಲ್ಲಿರುವ ವಿಕಾಸ್ ಕಾಲೇಜಿನ  ಮೂವರು ವಿದ್ಯಾರ್ಥಿನಿಯರು ಹಾಸ್ಟೆಲ್ ನಿಂದ ನಿನ್ನೆ  ಪರಾರಿಯಾಗಿದ್ದು, ಎಲ್ಲಿಗೆ ಹೋಗಿದ್ದಾರ

ಮಲ ತಂದೆಯಿಂದ ಚಿಕ್ಕ ವಯಸ್ಸಿನಿಂದಲೂ ಅತ್ಯಾಚಾರಕ್ಕೊಳಗಾಗಿರುವ ಮಹಿಳೆಯೋರ್ವಳು ಇದೀಗ ದೂರು ನೀಡಿದ್ದಾರೆ.
ಮಲ ತಂದೆಯಿಂದ ಚಿಕ್ಕ ವಯಸ್ಸಿನಿಂದಲೂ ಅತ್ಯಾಚಾರಕ್ಕೊಳಗಾಗಿರುವ ಮಹಿಳೆಯೋರ್ವಳು ಇದೀಗ ದೂರು ನೀಡಿದ್ದಾರೆ.

ಅಲಿಗಢ(ಉತ್ತರ ಪ್ರದೇಶ): ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ತವರು ನಾಡಿನಲ್ಲಿ ಅತ್ಯಂತ ಅಮಾನವೀಯ, ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರ ಮೇಲೆ ಚಿಕ್ಕಂದಿನಿಂದಲೂ ಅತ್ಯಾಚಾರ ನಡೆದ

Top Stories »  

Top ↑