ಒಬ್ಬಂಟಿಯಾಗಿ ಸಿಕ್ಕ ಯುವಕನ ಮೇಲೆ ನಾಲ್ವರು ಯುವತಿಯರಿಂದ ಸಾಮೂಹಿಕ ಅತ್ಯಾಚಾರ..!

ಜಲಂಧರ್: ಪಂಜಾಬ್16/01/2023.
ಒಬ್ಬಂಟಿಯಾಗಿ ಸಿಕ್ಕ ಯುವಕನ ಮೇಲೆ ನಾಲ್ವರು ಯುವತಿಯರು ಮೇಲೆರಗಿ ಅತ್ಯಾಚಾರ ಮಾಡಿರುವ ಘಟನೆ ದೇಶದಲ್ಲಿ ನಡೆದಿದ್ದು, ಯುವ ಸಮುದಾಯವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.
ಹೌದು! ದೇಶದಲ್ಲಿ ಈವರೆಗೂ ಮಹಿಳೆಯರು ಮತ್ತು ಯುವತಿಯರಿಗೆ ರಕ್ಷಣೆ ಇಲ್ಲ ಎಂದು ಅಲ್ಲಲ್ಲಿ ಕೇಳಿ ಬರುತ್ತಿತ್ತು. ಆದರೆ ಪ್ರಸ್ತುತ ಘಟನೆ ಗಮನಿಸಿದರೆ ಪುರುಷರಿಗೂ ರಕ್ಷಣೆ ಇಲ್ಲ ಎಂಬುವುದು ಆತಂಕಕ್ಕೆ ಕಾರಣವಾಗಿದೆ.
ಪಂಜಾಬ್ನ ಜಲಂಧರ್ನ ಅರಣ್ಯ ಪ್ರದೇಶದಲ್ಲಿ ನಾಲ್ವರು ಯುವತಿಯರು ಕಾಡಿನಲ್ಲಿ ಯುವಕನಿಗೆ ಮಾದಕ ದ್ರವ್ಯ (Narcotics) ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಕಪುರ್ತಲಾ ರಸ್ತೆಯ ಬಳಿ ಮನೆಗೆ ತೆರಳುತ್ತಿದ್ದ ನನ್ನನ್ನು ಯುವತಿಯರು ವಿಳಾಸ ಕೇಳಿದರು. ನಾನು ಹೇಳುತ್ತಿದ್ದ ವೇಳೆ ಕಣ್ಣಿಗೆ ಏನನ್ನೋ ಎರಚಿದರು. ನಾನು ಪ್ರಜ್ಞಾಹೀನನಾದ ಬಳಿಕ ತಮ್ಮ ಕಾರಿನಲ್ಲಿ ಹಾಕಿಕೊಂಡು ಅಜ್ಞಾತ ಸ್ಥಳಕ್ಕೆ ಕರೆದೊಯ್ದರು. ಬಳಿಕ ನನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದರು ಎಂದು ಸಂತ್ರಸ್ತ ಯುವಕ ಹೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಕುಡಿದ ಮತ್ತಿನಲ್ಲಿದ್ದ ನಾಲ್ವರು ಯುವತಿಯರು ಒಬ್ಬರ ಮೇಲೊಬ್ಬರಂತೆ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ನನಗೂ ಸಹ ಬಲವಂತದಿಂದ ಮದ್ಯ ಕುಡಿಸಿ ಹಲ್ಲೆ ನಡೆಸಿದ್ದಾರೆ. ಲೈಂಗಿಕ ದೌರ್ಜನ್ಯದ ಬಳಿಕ ನನ್ನನ್ನು ನಗರದ ಯಾವುದೋ ಸ್ಥಳದಲ್ಲಿ ಬಿಟ್ಟು ಆ ಯುವತಿಯರು ಪರಾರಿಯಾಗಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ಆತ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾನೆ.
ಈ ಘಟನೆ ತಿಳಿಯುತ್ತಿದ್ದಂತೆಯೇ ಪಂಜಾಬ್ ಪೊಲೀಸ್ ಗುಪ್ತಚರ ಇಲಾಖೆ ಈ ಬಗ್ಗೆ ಸ್ವಯಂಪ್ರೇರಿತ ತನಿಖೆ ಪ್ರಾರಂಭಿಸಿದೆ. ಆದರೆ ಈ ಬಗ್ಗೆ ಯಾವುದೇ ವ್ಯಕ್ತಿ ದೂರು ನೀಡಿಲ್ಲ. ತನ್ನ ಮೇಲೆ ನಡೆದಿರುವ ಅತ್ಯಾಚಾರ ದೌರ್ಜನ್ಯದ ಬಗ್ಗೆ ಆತ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾನೆ ಎಂದು ವರದಿಯಾಗಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in crime »

ಒಬ್ಬಂಟಿಯಾಗಿ ಸಿಕ್ಕ ಯುವಕನ ಮೇಲೆ ನಾಲ್ವರು ಯುವತಿಯರಿಂದ ಸಾಮೂಹಿಕ ಅತ್ಯಾಚಾರ..!
ಜಲಂಧರ್: ಪಂಜಾಬ್16/01/2023.
ಒಬ್ಬಂಟಿಯಾಗಿ ಸಿಕ್ಕ ಯುವಕನ ಮೇಲೆ ನಾಲ್ವರು ಯುವತಿಯರು ಮೇಲೆರಗಿ ಅತ್ಯಾಚಾರ ಮಾಡಿರುವ ಘಟನೆ ದೇಶದಲ್ಲಿ ನಡೆದಿದ್ದು, ಯುವ ಸಮುದಾಯವನ್ನೇ ಬೆಚ್ಚಿ ಬೀಳುವಂ

ಕಾರು ಬಿಡುಗಡೆಗೆ 50 ಸಾವಿರ ರೂ.ಗೆ ಒತ್ತಾಯಿಸಿದ ಅಪರಾಧ ವಿಭಾಗದ ಪೇದೆ ನವೀನ್ ಅಮಾನತು
ಕುಣಿಗಲ್: ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಪಡಿಸಿಕೊಂಡಿದ್ದ ಕಾರನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶ ನೀಡಿತ್ತು, ಕ

ಚಂದ್ರಶೇಖರ ಗುರೂಜಿ ಕೊಲೆಗೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿದ್ದ ಜಮೀನು ಕಾರಣ
ಹುಬ್ಬಳ್ಳಿ: ಸರಳವಾಸ್ತು ಚಂದ್ರಶೇಖರ ಗುರೂಜಿ ಹತ್ಯೆಗೆ ಸಂಬಂಧಪಟ್ಟಂತೆ ಪೊಲೀಸ್ ಕಮಿಷನರೇಟ್ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ

ಮಂಗಳೂರಿನಲ್ಲಿ ನಾಪತ್ತೆಯಾದ ಮೂವರು ಕಾಲೇಜು ವಿದ್ಯಾರ್ಥಿನಿಯರು ಎಲ್ಲಿ ಹೋದರು?
ಮಂಗಳೂರು: ಮಂಗಳೂರಿನ ಮೇರಿಹಿಲ್ ನಲ್ಲಿರುವ ವಿಕಾಸ್ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಹಾಸ್ಟೆಲ್ ನಿಂದ ನಿನ್ನೆ ಪರಾರಿಯಾಗಿದ್ದು, ಎಲ್ಲಿಗೆ ಹೋಗಿದ್ದಾರ

ಮಲ ತಂದೆಯಿಂದ ಚಿಕ್ಕ ವಯಸ್ಸಿನಿಂದಲೂ ಅತ್ಯಾಚಾರಕ್ಕೊಳಗಾಗಿರುವ ಮಹಿಳೆಯೋರ್ವಳು ಇದೀಗ ದೂರು ನೀಡಿದ್ದಾರೆ.
ಅಲಿಗಢ(ಉತ್ತರ ಪ್ರದೇಶ): ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತವರು ನಾಡಿನಲ್ಲಿ ಅತ್ಯಂತ ಅಮಾನವೀಯ, ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರ ಮೇಲೆ ಚಿಕ್ಕಂದಿನಿಂದಲೂ ಅತ್ಯಾಚಾರ ನಡೆದ
ಪ್ರತಿಕ್ರಿಯೆಗಳು