Tel: 7676775624 | Mail: info@yellowandred.in

Language: EN KAN

    Follow us :


ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಸಚಿವ ಸುರೇಶ್ ಕುಮಾರ್

Posted date: 01 Jul, 2020

Powered by:     Yellow and Red

ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಸಚಿವ ಸುರೇಶ್ ಕುಮಾರ್

ರಾಮನಗರ:ಜು/೦೧/೨೦/ಬುಧವಾರ. ರಾಮನಗರ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು  ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಧೈರ್ಯ ತುಂಬುವ ಕೆಲಸವನ್ನು ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ , ಸಕಾಲ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ಮಾಡಿದರು.


ಆರಂಭಕ್ಕೆ ಹಾರೋಹಳ್ಳಿ, ಕನಕಪುರ ನಂತರ ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಹಾಗೂ ಚನ್ನಪಟ್ಟಣ ನಗರದ ಸೆಂಟ್ ಜೋಸೆಫ್ ಹೈಸ್ಕೂಲಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ನೋಡಿ ಅಲ್ಲಿನ ಮಕ್ಕಳೊಂದಿಗೆ ಮಾತನಾಡಿ, ನಿಮ್ಮ ಧೈರ್ಯ ಮೆಚ್ಚುವಂತಹದ್ದೇ, ನಾನು ಗಮನಿಸಿದ ಎಲ್ಲಾ ಜಿಲ್ಲೆಗಳಿಗಿಂತ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ಗಳು ಗೈರು ಹಾಜರಾಗದೆ ಪರೀಕ್ಷೆ ಬರೆಯುತ್ತಿದ್ದೀರಿ ನಿಮಗೆ ಅಭಿನಂದನೆಗಳು ಎಂದು ಧೈರ್ಯ ತುಂಬಿ ಅವರಿಗೆಶುಭ ಹಾರೈಸಿದರು. ಇದೇ ವೇಳೆ ಪೋಷಕರು ಸಹ ಊಹಾಪೋಹಗಳಗೆ ಕಿವಿಗೊಟ್ಟು ಮಕ್ಕಳ ಭವಿಷ್ಯ ಹಾಳು ಮಾಡದೆ ಮಕ್ಕಳಿಗೆ ಧೈರ್ಯ ಹೇಳಬೇಕು ಎಂದು ಕಿವಿಮಾತು ಹೇಳಿದರು.



ಸಂದರ್ಭದಲ್ಲಿ ಅವರು ಮಾಧ್ಯಮದವರ ಜೊತೆ ಯಲ್ಲಿ ಮಾತನಾಡಿ, ಪರೀಕ್ಷೆ ವಿಚಾರದಲ್ಲಿ ಊಹಾಪೋಹಗಳು ಮಾಮೂಲಿಯಾಗಿವೆ, ಈಗ ಮೌಲ್ಯಮಾಪನದ ವಿಚಾರದಲ್ಲಿ ಹಬ್ಬಿರುವ ಊಹಾಪೋಹ ಸುಳ್ಳು.  ವಿದ್ಯಾರ್ಥಿಗಳ ಪ್ರತಿಭೆಗೆ ಯಾವುದೇ ಸಾಟಿ ಇಲ್ಲ.

ಪರೀಕ್ಷೆ ನಡೆಸುವ ಬಗ್ಗೆ ವಿರೋಧ ಪಕ್ಷದ ನಾಯಕರ ವಿರೋಧದ ಬಗ್ಗೆ ಪ್ರಶ್ನಿಸಿದಾಗ, ನಾನು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹಾಗೂ ಎಚ್ ಡಿ ಕುಮಾರಸ್ವಾಮಿಯವರನ್ನು ನೇರವಾಗಿ ಭೇಟಿ ಮಾಡಿ ವಿವರಿಸಿದ್ದೆ. ಅದರಲ್ಲಿ ಕುಮಾರಸ್ವಾಮಿಯವರು ಮಾತ್ರ ಪರೀಕ್ಷೆ ಮಾಡುವು ದಕ್ಕೆ ಸೂಕ್ತ ವಾತಾವರಣ ಇಲ್ಲ ಎಂದಿದ್ದರು, ಆದರೆ ಅವರಿಗೆ ವಿವರಿಸಿದ ನಂತರ ಅವರೆಲ್ಲರೂ ಪರೀಕ್ಷೆಯ ಪರವಾದರು ಎಂದರು.


ಆನ್ ಲೈನ್ ಶಿಕ್ಷಣದ ಬಗ್ಗೆ ಪ್ರತಿಕ್ರಿಯಿಸಿ, ಈಗಾಗಲೇ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ, ನಾವು ತಾತ್ಕಾಲಿಕವಾಗಿ ಮಾರ್ಗಸೂಚಿ ಸಿದ್ಧಪಡಿಸಿದ್ದೇವೆ, ಜೊತೆಗೆ ತಜ್ಞರ ತಂಡವೂ ರಚನೆಯಾಗಿದೆ, ಈ ವಿಚಾರದಲ್ಲಿ ಶೀಘ್ರದಲ್ಲೇ ಸೂಕ್ತ ನಿರ್ಧಾರ ಪ್ರಕಟವಾಗುತ್ತದೆ ಎಂದರು.

ಈಗ ಪರೀಕ್ಷೆಗೆ ಹಾಜರಾ ಗದ ಕೋವಿಡ್ ಸೋಂಕಿತ ವಿದ್ಯಾರ್ಥಿಗಳಿಗೆ, ಆಗಸ್ಟ್ ನಲ್ಲಿ ಪರೀಕ್ಷೆ ನಡೆಯಲಿದೆ, ಅವರನ್ನೂ ಸಹ ಫ್ರೆಷರ್ಸ್ ಎಂದು ಪರಿಗಣಿಸಲಾಗುತ್ತದೆ ಎಂದರು.


*ಖಾಸಗಿ ಶಾಲೆಯ ಶಿಕ್ಷಕರಿಗೆ ಸಂಬಳದ ಕೊರತೆ ವಿಚಾರವಾಗಿ ಹೇಳಿ,  ಈ ಬಗ್ಗೆ ಹಲವು ವಿಚಾರಗಳು ಕೇಳಿಬಂದಿವೆ, ಎಸ್‌ಎಸ್ಎಲ್‌ಸಿ ಪರೀಕ್ಷೆಯ ನಂತರ ಸೂಕ್ತ ನಿರ್ಧಾರ ಮಾಡಲಾಗುತ್ತದೆ. ಯಾವ ಖಾಸಗಿ ಶಿಕ್ಷಣ ಸಂಸ್ಥೆಯೂ ಶಾಲಾ ಶುಲ್ಕವನ್ನು ಹೆಚ್ಚಿಸಬಾರದು, ಮತ್ತು ಶಿಕ್ಷಕರನ್ನ ಕೆಲಸದಿಂದ ತೆಗೆಯಬಾರದು ಎಂದು ಸೂಚಿಸಿದರು.*


ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಪ್ರಶ್ನೆ ಇಲ್ಲ, ಆದರೆ ಕೆಲ ಕಠಿಣ ಕ್ರಮಗಳನ್ನ ಕೈ ಗೊಳ್ಳಲಾಗುವುದು. ರಾಜ್ಯದ ಜನರಿಗೆ ಕೊರೊನಾ ವಿಚಾರದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಮಾದರಿಯಾಗಿದ್ದಾರೆ ಎಂದು ಹೇಳಿದರು. ಚನ್ನಪಟ್ಟಣದಲ್ಲಿ ಬಿ.ಇ.ಓ ನಾಗರಾಜ್, ಇ.ಓ ಚಂದ್ರು ಇದ್ದರು.


*ಸಚಿವರಿಂದ ಎಸ್ ಕರಿಯಪ್ಪನವರ ಸಮಾಧಿಗೆ ನಮನ*

ಮೊದಲಿಗೆ ಅವರು ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ಪರೀಕ್ಷೆಯಲ್ಲಿ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ನಂತರ ಅವರು ಕನಕಪುರದ ಆರ್ ಹೆಚ್‌ಎಸ್ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಇವುಗ ಳಿಗೆ ಭೇಟಿ ನೀಡಿ ಅಲ್ಲಿಯ ವಿದ್ಯಾರ್ಥಿಗಳನ್ನು ಮಾತ ನಾಡಿಸಿದರು. ಕೊರೊನಾಕ್ಕೆ ಭಯ ಬೀಳುವ ಅವಶ್ಯಕತೆ ಇಲ್ಲ, ಎಲ್ಲಾ ರೀತಿಯ ಮುನ್ನೆಚ್ಚರಿಕೆಯನ್ನೂ ವಹಿಸಲಾಗಿದೆ, ನಿರಾಳವಾಗಿ ಪರೀಕ್ಷೆ ಬರೆಯಿರಿ ಎಂದರು.


ನಂತರ ಅವರು ಆರ್‌ಇಎಸ್ ಕಾಲೇಜಿನ ಆವರಣದಲ್ಲಿರುವ ಶಿಕ್ಷಣ ಪ್ರೇಮಿ ಎಸ್ ಕರಿಯಪ್ಪ ನವರ ಸಮಾಧಿ ಬಳಿ ಬಂದು, ಪುಷ್ಪ ಗುಚ್ಛವಿರಿಸಿ, ನಮಸ್ಕರಿಸಿದರು. ಸಂದರ್ಭದಲ್ಲಿ ಆರ್‌ಇಎಸ್‌ನ ಉಪಾಧ್ಯಕ್ಷರಾದ ಎಂ.ಎಲ್ ಶಿವಕುಮಾರ್ ಅವರು ಅವರನ್ನು ಸೇರಿಕೊಂಡರು.

ಸಚಿವರು ಶಾಲೆಗಳಿಗೆ ಭೇಟಿ ಕೊಡುವಾಗ ಅವರ ಜೊತೆಯಲ್ಲಿ ಸಿಇಓ ಇಕ್ರಂ ಉಲ್ಲಾ ಷರೀಫ್, ಡಿಡಿಪಿಐ ಅವರ ಪ್ರತಿನಿಧಿ ಶಿವಕುಮಾರ್, ಕನಕಪುರ ಬಿಇಓ ಜಯಲಕ್ಷ್ಮ ಸೇರಿದಂತೆ ಹಲವು ಅಧಿಕಾರಿಗಳು ಅವರಿಗೆ ಸಾಥ್ ನೀಡಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in education »

ಅಂದು ಶಾಲೆ ಕಲಿಯಲು ಪಡಿಪಾಟಲು ಪಡಬೇಕಾಗಿತ್ತು. ಅಪ್ಪಗೆರೆ ತಿಮ್ಮರಾಜು
ಅಂದು ಶಾಲೆ ಕಲಿಯಲು ಪಡಿಪಾಟಲು ಪಡಬೇಕಾಗಿತ್ತು. ಅಪ್ಪಗೆರೆ ತಿಮ್ಮರಾಜು

ಚನ್ನಪಟ್ಟಣ: ನಾವು ನಮ್ಮ ಕಾಲದಲ್ಲಿ ಶಾಲೆಗೆ ಹೋಗಿ ವಿದ್ಯೆ ಕಲಿಯಲು ಪಡಿಪಾಟಲು ಪಡಬೇಕಾಗಿತ್ತು. ಹಲವಾರು ಸಮಸ್ಯೆಗಳು ನಮ್ಮ ಎದುರಿಗಿದ್ದವು. ಆದರೆ, ಈಗ ಅಂತಹ

ಪ್ರತಿ ವಿದ್ಯಾರ್ಥಿಗಳು ಕೌಶಲ್ಯ ರೂಢಿಸಿಕೊಳ್ಳಬೇಕು: ಶಿಕ್ಷಣಾಧಿಕಾರಿ ಮರಿಗೌಡ
ಪ್ರತಿ ವಿದ್ಯಾರ್ಥಿಗಳು ಕೌಶಲ್ಯ ರೂಢಿಸಿಕೊಳ್ಳಬೇಕು: ಶಿಕ್ಷಣಾಧಿಕಾರಿ ಮರಿಗೌಡ

ಚನ್ನಪಟ್ಟಣ: ಶಾಲಾ ವಿದ್ಯಾರ್ಥಿಗಳು ಕೇವಲ ಪಾಠ ಮತ್ತು ಆಟಕ್ಕೆ ಸೀಮಿತವಾಗದೆ ವಿವಿಧ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಕೌಶಲ್ಯ ಕಲಿತ ಮಕ್ಕಳ ಪ್ರತಿಭೆಯನ್ನ

ಪ್ರತಿ ಸರ್ಕಾರಗಳು ಪದವೀಧರರ ಜೊತೆ ಚೆಲ್ಲಾಟವಾಡುತ್ತಿವೆ, ಉದಯ್ ಸಿಂಗ್
ಪ್ರತಿ ಸರ್ಕಾರಗಳು ಪದವೀಧರರ ಜೊತೆ ಚೆಲ್ಲಾಟವಾಡುತ್ತಿವೆ, ಉದಯ್ ಸಿಂಗ್

ಚನ್ನಪಟ್ಟಣ: ಪ್ರತಿ ವರ್ಷವೂ ಲಕ್ಷಾಂತರ ಯುವಕ ಯುವತಿಯರು ಪದವಿಯೊಂದಿಗೆ ಹೊರಬರುತ್ತಾರೆ. ವಿಶ್ವ ವಿದ್ಯಾಲಯಗಳಿಂದ ಪದವಿಯೊಂದಿಗೆ ಬರುವವರಿಗೆ ಸೂಕ್ತ  ಉದ್ಯೋಗ

ದಿವ್ಯಚೇತನ ಇಂಗ್ಲಿಷ್ ಶಾಲೆಯಲ್ಲಿ ಮೇಳೈಸಿದ ಮಿನಿ ವಿಜ್ಞಾನ ಮೇಳ
ದಿವ್ಯಚೇತನ ಇಂಗ್ಲಿಷ್ ಶಾಲೆಯಲ್ಲಿ ಮೇಳೈಸಿದ ಮಿನಿ ವಿಜ್ಞಾನ ಮೇಳ

ಚನ್ನಪಟ್ಟಣ: ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಬ್ರಾಡ್ಕಾಂ ವಿಜ್ಞಾನ ಕೇಂದ್ರ ಚನ್ನಪಟ್ಟಣ ಇವರ ವತಿಯಿಂದ ನಗರದ ದಿವ್ಯ ಚೇತನ ಇಂಗ್ಲಿಷ್ ಪ್ರೌಢಶಾಲೆಯಲ್ಲ

ಪಾಠದ ಜೊತೆಗೆ ಆಟದಲ್ಲಿಯೂ ಮುಂಚೂಣಿಗೆ ಬರಬೇಕು. ವಿ ಬಾಲಸುಬ್ರಹ್ಮಣ್ಯಂ
ಪಾಠದ ಜೊತೆಗೆ ಆಟದಲ್ಲಿಯೂ ಮುಂಚೂಣಿಗೆ ಬರಬೇಕು. ವಿ ಬಾಲಸುಬ್ರಹ್ಮಣ್ಯಂ

ಚನ್ನಪಟ್ಟಣ,: ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಣದ ಜೊತೆಯಲ್ಲಿ ಕ್ರೀಡಾಮನೋಭಾವನೆ ಬೆಳಸಿಕೊಳ್ಳಬೇಕು. ಮನಸ್ಸು ಉಲ್ಲಸಿತವಾಗಲು ಕ್ರೀಡೆ ಸಹಕಾರಿ ಎಂದು ಬಾಲು

ಉಪನ್ಯಾಸಕರ ಧರಣಿ, ಕಲಿಕೆಗೆ ತೊಂದರೆ, ಎಬಿವಿಪಿ ಯಿಂದ ಪ್ರತಿಭಟನೆ
ಉಪನ್ಯಾಸಕರ ಧರಣಿ, ಕಲಿಕೆಗೆ ತೊಂದರೆ, ಎಬಿವಿಪಿ ಯಿಂದ ಪ್ರತಿಭಟನೆ

ಚನ್ನಪಟ್ಟಣ: ಸರ್ಕಾರಿ ಕಾಲೇಜುಗಳ ಉಪನ್ಯಾಸಕರು ಧರಣಿ ನಿರತರಾಗಿರುವುದರಿಂದ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಿದೆ. ಇದರಿಂದ ಶೈಕ್ಷಣಿಕ ವರ್ಷದ ಕಲಿಕೆಗೆ ತೊ

ಆರೋಗ್ಯ, ಆಯಸ್ಸು ಹೆಚ್ಚಿಸುವ ವೈದ್ಯರು ಆರೋಗ್ಯ ಕಾಪಾಡಿಕೊಳ್ಳಬೇಕು. ಚಾಮುಂಡೇಶ್ವರಿ ಆಸ್ಪತ್ರೆ ಉದ್ಘಾಟನೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ
ಆರೋಗ್ಯ, ಆಯಸ್ಸು ಹೆಚ್ಚಿಸುವ ವೈದ್ಯರು ಆರೋಗ್ಯ ಕಾಪಾಡಿಕೊಳ್ಳಬೇಕು. ಚಾಮುಂಡೇಶ್ವರಿ ಆಸ್ಪತ್ರೆ ಉದ್ಘಾಟನೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ

ಚನ್ನಪಟ್ಟಣ:bಆಸ್ಪತ್ರೆಗೆ ಬರುವ ರೋಗಿಗಳ ಅರೋಗ್ಯ ತಪಾಸಿಸಿ, ರೋಗ ವಾಸಿ ಮಾಡಿ, ಅವರ ಆರೋಗ್ಯ ದ ಜೊತೆಗೆ ಆಯಸ್ಸನ್ನು ಹೆಚ್ಚಿಸುವಲ್ಲಿ ನಿಷ್ಣಾತರಾದ ವೈದ್ಯರು

ಪೆಟ್ಟಾ ಸರ್ಕಾರಿ ಶಾಲಾ ಆವರಣದಲ್ಲಿ ನಗರಸಭೆಯ ಕಸದ ರಾಶಿ, ಅಲ್ಲಗಳೆದ ಪೌರಾಯುಕ್ತ
ಪೆಟ್ಟಾ ಸರ್ಕಾರಿ ಶಾಲಾ ಆವರಣದಲ್ಲಿ ನಗರಸಭೆಯ ಕಸದ ರಾಶಿ, ಅಲ್ಲಗಳೆದ ಪೌರಾಯುಕ್ತ

ಚನ್ನಪಟ್ಟಣ: ನಗರದ ಡೂಂ ಲೈಟ್ ವೃತ್ತದಲ್ಲಿರುವ ಏಳು ದಶಕದಷ್ಟು ಹಳೆಯಾದಾದ ಪೆಟ್ಟಾ ಹೆಸರಿನ ಸರ್ಕಾರಿ ಶಾಲಾ ಆವರಣದಲ್ಲಿ ಹತ್ತಾರು ಟನ್ ಕಸದ ರಾಶಿಯನ್ನು ರಾ

ಆರ್ಥಿಕವಾಗಿ ಬೆಳೆದವರೆಲ್ಲರೂ ವಿದ್ಯಾರ್ಜನೆಗೆ ಮುಂದಡಿಯಿಡಬೇಕು, ಸಚಿವ ಮಧುಬಂಗಾರಪ್ಪ
ಆರ್ಥಿಕವಾಗಿ ಬೆಳೆದವರೆಲ್ಲರೂ ವಿದ್ಯಾರ್ಜನೆಗೆ ಮುಂದಡಿಯಿಡಬೇಕು, ಸಚಿವ ಮಧುಬಂಗಾರಪ್ಪ

ಚನ್ನಪಟ್ಟಣ: ಬಡತನದ ಬೇಗೆಯಲ್ಲಿ ಬೆಂದು, ಉನ್ನತ ಶಿಕ್ಷಣ ಪಡೆದು, ಉತ್ತಮ ಸ್ಥಾನಮಾನದ ಜೊತೆಗೆ ಆರ್ಥಿಕವಾಗಿ ಸದೃಢವಾದ ನಂತರ ತನ್ನ ಜನ್ಮದಾತರಿಗೆ, ಹುಟ್ಡಿದೂರ

ಕಾವೇರಿ ಕಿಚ್ಚು, ರಾಮನಗರ ಜಿಲ್ಲೆ ಬಂದ್, ಶಾಲಾ-ಕಾಲೇಜಿಗೆ ರಜೆ, ಸರ್ಕಾರಿ ಕಛೇರಿ ರಜೆಗಾಗಿ ಕಾಯುತ್ತಿರುವ ನೌಕರರು
ಕಾವೇರಿ ಕಿಚ್ಚು, ರಾಮನಗರ ಜಿಲ್ಲೆ ಬಂದ್, ಶಾಲಾ-ಕಾಲೇಜಿಗೆ ರಜೆ, ಸರ್ಕಾರಿ ಕಛೇರಿ ರಜೆಗಾಗಿ ಕಾಯುತ್ತಿರುವ ನೌಕರರು

ರಾಮನಗರ: ನಮ್ಮ ರಾಜ್ಯದ ಕೆಲ ಭಾಗಗಳಿಗೆ ಕುಡಿಯುವ ನೀರಿಗೆ ತತ್ವಾರವಾಗಿದೆ, ಮಂಡ್ಯ, ಮೈಸೂರು ಭಾಗದ ರೈತರಿಗೆ ಬೆಳೆ ಬೆಳೆಯಲು ನೀರಿಲ್ಲಾ, ಇಂತಹ ಸಂಕಷ್ಟದ ಸಮಯ

Top Stories »  


Top ↑