ರಾಜ್ಯ ಮತ್ತು ತಾಲೂಕಿಗೆ ಟಾಪರ್ ಚನ್ನಪಟ್ಟಣ ತಾಲ್ಲೂಕಿನ ವಿದ್ಯಾರ್ಥಿನಿಯರು

ಚನ್ನಪಟ್ಟಣ:ಜು/೧೫/೨೦/ಬುಧವಾರ. ನಿನ್ನೆ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದ್ದು, ತಾಲೂಕಿನ ವಿದ್ಯಾರ್ಥಿನಿ ಬೃಂದಾ.ಜೆ.ಎನ್ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಗಳಿಸುವ ಮೂಲಕ ತಾಲ್ಲೂಕಿಗೆ ಗೌರವ ತಂದಿದ್ದಾಳೆ.
ಈಕೆ ಜಗದಾಪುರ ಗ್ರಾಮದ ನಿವಾಸಿಯಾಗಿದ್ದು, ಮೈಸೂರಿನ ಬಿಜಿಎಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಪ್ರಾಥಮಿಕ ಶಿಕ್ಷಣವನ್ನು ಜಗದಾಪುರ ಗ್ರಾಮದಲ್ಲಿ ಓದಿದ್ದ ಈಕೆ, ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ದೊಡ್ಡಬಳ್ಳಾಪುರದಲ್ಲಿನ ನವೋದಯ ಶಾಲೆಯಲ್ಲಿ ೫ ರಿಂದ ೧೦ ನೇ ತರಗತಿ ವರಗೆ ವ್ಯಾಸಂಗ ಮಾಡಿದ್ದಳು. ಪಿಯುಸಿಗೆ ಮೈಸೂರಿನ ಬಿಜಿಎಸ್ ಕಾಲೇಜಿಗೆ ಸೇರ್ಪಡೆಯಾಗಿ ಈ ಸಾಧನೆ ಮಾಡಿದ್ದಾಳೆ.
ತಂದೆ ನಾಗೇಶ್, ತಾಯಿ ಕಮಲಾ ವ್ಯವಸಾಯ ಮಾಡಿಕೊಂಡು ಮಗಳನ್ನು ಓದಿಸುತ್ತಿದ್ದಾರೆ. ಬೃಂದಾಗೆ ಓರ್ವ ಸಹೋದರ, ಓರ್ವ ಸಹೋದರಿಯೂ ಇದ್ದಾರೆ. ಈ ಬಾರಿಯ ಪಿಯುಸಿಯಲ್ಲಿ ಬೃಂದಾ ಇಂಗ್ಲಿಷ್‌ನಲ್ಲಿ- ೯೬, ಕನ್ನಡ - ೧೦೦, ಎಕಾ ನಾಮಿಕ್ಸ್ - ೧೦೦, ಬ್ಯುಸಿ ನೆಸ್ ಸ್ಟಡೀಸ್ - ೧೦೦, ಅಕೌಂಟ್ಸ್ - ೧೦೦, ಕಂಪ್ಯೂ ಟರ್ ಸೈನ್ಸ್ - ೧೦೦ ಅಂಕ ಗಳಿಸುವ ಮೂಲಕ ೬೦೦ ಕ್ಕೆ ೫೯೬ ಅಂಕಗಳಿಸಿ ಶೇ.೯೯. ೦೩ ಪಡೆದು ಕಾಮರ್ಸ್ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾಳೆ.
ಚನ್ನಪಟ್ಟಣ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೯೭.೨೦ ಫಲಿತಾಂಶ ದಾಖಲಿಸುವ ಮೂಲಕ ಜ್ಞಾನ ಸರೋವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎಂ.ವಿ ಧನುಪ್ರಿಯ ಚನ್ನಪಟ್ಟಣ ತಾಲ್ಲೂಕು ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ವಾಣಿಜ್ಯ ವಿಭಾಗ ವಿದ್ಯಾರ್ಥಿಯಾಗಿರುವ ಇವರು ೬೦೦ಕ್ಕೆ ೫೮೪ ಅಂಕಗಳನ್ನು ಗಳಿಸಿದ್ದಾರೆ. ಅಲ್ಲದೆ ವ್ಯವಹಾರ ಅಧ್ಯಯನ, ಗಣಕವಿಜ್ಞಾನ ಹಾಗೂ ಅರ್ಥಶಾಸ್ತ್ರ ವಿಷಯದಲ್ಲಿ ೧೦೦ಕ್ಕೆ ೧೦೦ ಅಂಕ ಪಡೆದು, ಗಮನ ಸೆಳೆದಿದ್ದಾರೆ.
ಜ್ಞಾನ ಸರೋವರ ಪದವಿ ಪೂರ್ವ ಕಾಲೇಜಿಗೆ ಶೇ.೯೬.೧೫ ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ ೭೮ ವಿದ್ಯಾರ್ಥಿಗಳ ಪೈಕಿ ೭೫ ಮಂದಿ ಉತ್ತೀರ್ಣರಾಗಿದ್ದಾರೆ. ೧೮ ಮಂದಿ ಅತ್ಯುನ್ನತ ಶ್ರೇಣಿ ಹಾಗೂ ೪೩ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡಿದ್ದಾರೆ. ತಾಲ್ಲೂಕು ಟಾಪರ್ ಆಗಿರುವ ವಿದ್ಯಾರ್ಥಿಗೆ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಎಂ.ಬಿ ರಾಹುಲ್ ರಾಜೇ ಅರಸ್, ಕಾರ್ಯದರ್ಶಿ ಆರ್. ಆರ್ದಶ ಕುಮಾರ್, ಖಜಾಂಜಿ ಬಿ.ಎಸ್.ಹೇಮಲತಾ, ಪ್ರಾಂಶುಪಾಲ ಜಯರಾಮೇಗೌಡ ಸೇರಿದಂತೆ ಭೋದಕ ಮತ್ತು ಭೋದಕೇತರ ವರ್ಗದ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in education »

ಉಚಿತ "ಸಿ.ಸಿ.ಟಿ.ವಿ.ಕ್ಯಾಮರಾ, ಸೆಕ್ಯೂರಿಟಿ ಅಲಾರಾಂ ಸಿಸ್ಟಮ್, ಸ್ಮೋಕ್ ಡಿಟೆಕ್ಟರ್ -ಇನ್ ಸ್ಟಾಲೆಷನ್ ಅಂಡ್ ಸರ್ವಿಸಿಂಗ್" ತರಬೇತಿಗೆ ಅರ್ಜಿ ಆಹ್ವಾನ
ರಾಮನಗರ:ಸೆ/26/20/ಶನಿವಾರ. ಬಿಡದಿ ಬಳಿಯಿರುವ ಕೆನರಾ ಬ್ಯಾಂಕ್ ನ ಎ.ಡಿ.ಪೈ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕರಿಗಾಗಿ 13 ದ

ಬಂದ್ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಿಕೆ
ರಾಮನಗರ:ಸೆ/26/20/ಶನಿವಾರ. ರೈತ ಸಂಘದ ಹಲವು ಬಣಗಳು, ದಲಿತಪರ ಸಂಘಟನೆಗಳು ಸೇರಿದಂತೆ ಅನೇಕ ಸಂಘಟನೆಗಳು ಸೇರಿದಂತೆ ಸೋಮವಾರ ಕರ್ನಾಟಕ ಬಂದ್ ಗೆ ಕ

ಎಸ್ ಎಸ್ ಎಲ್ ಸಿ ಯಲ್ಲಿ ರಾಮನಗರ ಎಂಟನೇ ಸ್ಥಾನ, ಚನ್ನಪಟ್ಟಣ ಮೊದಲನೇ ಸ್ಥಾನ
ರಾಮನಗರ:ಆ/10/20/ಸೋಮವರ. ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ನೆನ್ನೆ ಪ್ರಕಟವಾಗಿದ್ದು, ಪ್ರತಿ ಬಾರಿಯಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿ

ರಾಜ್ಯ ಮತ್ತು ತಾಲೂಕಿಗೆ ಟಾಪರ್ ಚನ್ನಪಟ್ಟಣ ತಾಲ್ಲೂಕಿನ ವಿದ್ಯಾರ್ಥಿನಿಯರು
ಚನ್ನಪಟ್ಟಣ:ಜು/೧೫/೨೦/ಬುಧವಾರ. ನಿನ್ನೆ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದ್ದು, ತಾಲೂಕಿನ ವಿದ್ಯಾರ್ಥಿನಿ ಬೃಂದಾ.ಜೆ.ಎನ್ ವಾಣಿಜ್ಯ

ಪಿಯುಸಿ ಫಲಿತಾಂಶ; ಉಕ ಜಿಲ್ಲೆ ಪ್ರಥಮ, ವಿಜಯಪುರ ಕೊನೆಯ ಸ್ಥಾನ. ೨೫ ನೇ ಸ್ಥಾನಕ್ಕೆ ಕುಸಿದ ರಾಮನಗರ
ಬೆಂಗಳೂರು:ಜು/೧೪/೨೦/ಮಂಗಳವಾರ. ಬಹುನಿರೀಕ್ಷಿತ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶೇ.೬೧.೮೦ ಫಲಿತಾಂಶ ಬಂದಿದೆ. ಇಂದು ಬೆಳಗ್ಗೆ ೧೧.

ಖಾಸಗಿ ಶಾಲಾ ಶಿಕ್ಷಕರಿಂದ ಎಸ್ಎಸ್ಎಲ್ ಸಿ ಮೌಲ್ಯಮಾಪನ ಕಡ್ಡಾಯಗೊಳಿಸದಿರಲು ಜಿಲ್ಲಾಧಿಕಾರಿ ಗೆ ಮನವಿ
ರಾಮನಗರ:ಜು/೦೮/೨೦/ಬುಧವಾರ. ಇಂದು ರಾಮನಗರ ಜಿಲ್ಲಾ ಖಾಸಗಿ ಶಾಲಾ ಶಿಕ್ಷಕರ ಒಕ್ಕೂಟದಿಂದ ಖಾಸಗಿ ಶಾಲಾ ಶಿಕ್ಷಕರಿಗೆ ಎಸ್ ಎಸ್ ಎಲ್ ಸಿ ಪರೀಕ್ಷಾ ಮ

ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಸಚಿವ ಸುರೇಶ್ ಕುಮಾರ್
ರಾಮನಗರ:ಜು/೦೧/೨೦/ಬುಧವಾರ. ರಾಮನಗರ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು

ಕೊರೊನಾ ಎಫೆಕ್ಟ್; ಮಾಹೆ ಶುಲ್ಕ ಹೊರತುಪಡಿಸಿ ಬೇರೆ ಶುಲ್ಕ ಪಡೆಯಲ್ಲ. ಬಾಲು ಶಾಲೆಯ ವೆಂಕಟ ಸುಬ್ಬಯ್ಯ ಚೆಟ್ಟಿ
ಚನ್ನಪಟ್ಟಣ:ಮೇ/೨೩/೨೦/ಶನಿವಾರ. ನನಗೆ ನಾಳೆ (ಮೇ ೨೪ ಭಾನುವಾರ) ಅರವತ್ತು ವರ್ಷ ತುಂಬುತ್ತದೆ. ನನಗೆ ಇಷ್ಟು ವಯಸ್ಸಾಯಿತು, ಆದರೆ ಹಿಂದುರಿಗಿ ನೋಡಿದಾಗ ಸಾಧನ

ಪದವಿ ಪ್ರವೇಶಾತಿಗೆ ಅರ್ಜಿ ಆಹ್ವಾನ
ರಾಮನಗರ:ಮೇ/೨೨/೨೦/ಶುಕ್ರವಾರ. ಸ್ನಾತಕೋತ್ತರ (ವಾರ್ಷಿಕ/ಸೆಮಿಸ್ಟರ್) ಪದವಿಗಳಾದ ಎಂ.ಎ., ಎಂ.ಕಾಂ., ಎಂ.ಬಿ.ಎ., ಎಂ.ಎಡ್, ಎಂ.ಲಿಬ್.ಐ.ಎಸ್ಸಿ, ಎಂ.ಎಸ್ಸಿ,

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬಹುಮಾನಕ್ಕೆ ಅರ್ಜಿ ಆಹ್ವಾನ
ರಾಮನಗರ:ಮೇ/೧೧/೨೦/ಸೋಮವಾರ.ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಜನವರಿ ೨೦೧೯ ರಿಂದ ಡಿಸೆಂಬರ್ ೨೦೧೯ ರವರೆಗೆ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ
ಪ್ರತಿಕ್ರಿಯೆಗಳು