Tel: 7676775624 | Mail: info@yellowandred.in

Language: EN KAN

    Follow us :


ಶಿಕ್ಷಣ ವ್ಯಾಪಾರೀಕರಣವಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ: ಡಾ ಮುನಿರಾಜಪ್ಪ

Posted date: 03 Oct, 2021

Powered by:     Yellow and Red

ಶಿಕ್ಷಣ ವ್ಯಾಪಾರೀಕರಣವಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ: ಡಾ ಮುನಿರಾಜಪ್ಪ

ರಾಮನಗರ: ಜಾಗತೀಕರಣ, ಉದಾರೀಕರಣದಿಂದಾಗಿ ಪ್ರಸ್ತುತ ಶಿಕ್ಷಣ ಕ್ಷೇತ್ರವು ಹಣ ಮಾಡುವ ವ್ಯಾಪಾರವಾಗಿದೆ ಎಂದು ಹಿರಿಯ ಸಂಶೋಧಕ ಡಾ. ಮುನಿರಾಜಪ್ಪ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಜಾನಪದ ಲೋಕದ ದೊಡ್ಡಮನೆಯಲ್ಲಿ ಬೆಂಗಳೂರಿನ ಕಾವೇರಿ ಬಿ.ಇಡಿ ಕಾಲೇಜಿನ ವತಿಯಿಂದ ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಂಡಿರುವ ‘ಸಮುದಾಯ ಜೀವನ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಶಿಕ್ಷಕ ವೃತ್ತಿ ಖಂಡಿತವೂ ಹಣ ಗಳಿಸುವುದಕ್ಕೆ ದಾರಿಯಲ್ಲ. ಅದೊಂದು ಪವಿತ್ರ ಕಾರ್ಯ. ಇದು ಒಂದು ನೌಕರಿ ಮಾತ್ರ ಎಂದು ಭಾವಿಸಿದವರು ಖಂಡಿತ ಆ ಭಾವನೆಯನ್ನು ದೂರವಿರಿಸಿ, ಪುಣ್ಯ ಕಾರ್ಯ ಎಂದೇ ಭಾವಿಸಬೇಕು ಎಂದು ತಿಳಿಸಿದರು.

ಚಿಕ್ಕಮಕ್ಕಳ ಮನಃಸ್ಥಿತಿಯನ್ನು ಬದಲಾಯಿಸುವ ಶಕ್ತಿ ಕೇವಲ ಶಿಕ್ಷಕನಿಗೆ ಮಾತ್ರ ಇದೆ. ಕೇವಲ ಅಕ್ಷರ ಕಲಿಸಿವುದು, ಅಂಕಗಳನ್ನು ನೀಡುವುದು ಮಾತ್ರವಲ್ಲ, ಮಕ್ಕಳ ಮನಸ್ಸಿನಲ್ಲಿ ದುರಾಸೆಗಳು ಮೂಡದಂತೆ ತಿದ್ದಿ ತೀಡುವುದೇ ಶಿಕ್ಷಕನ ಕೆಲಸ ಎಂದು ತಿಳಿಸಿದರು.


`ಗುರುಬ್ರಹ್ಮ, ಗುರುರ್ವಿಷ್ಣು, ಗುರುದೇವೋ ಮಹೇಶ್ವರ, ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀಗುರುವೇ ನಮಃ ಎಂಬುದು ಯಾರೋ ತಿಳಿಯದವರು ಸೃಷ್ಟಿಸಿದ ಪದವಲ್ಲ. ಬದಲಿಗೆ, ಗುರುವಿನಲ್ಲಿ ಇರಬಹುದಾದ ಗುಣಗಳನ್ನು ಬಿಂಬಿಸುವ ಈ ಪದದಲ್ಲಿ ಅಪಾರ ಅರ್ಥ ಅಡಗಿದೆ. ಇದನ್ನು ಅರ್ಥ ಮಾಡಿಕೊಂಡೇ ಶಿಕ್ಷಕ `ಗುರುವಿನ ಪರಮ ಪವಿತ್ರ ಸ್ಥಾನ ಅಲಂಕರಿಸಬೇಕು. ಸಮಾಜಕ್ಕೂ, ನಿಮಗೂ ಕಲಿಸಿದ ಗುರುವಿನ ಋಣಸಂದಾಯ ಮಾಡುವತ್ತ ಶಿಕ್ಷಕರಾಗುವವರು ಆಲೋಚಿಸಬೇಕು ಎಂದು ತಿಳಿಸಿದರು.


ಸ್ವರ್ಗ, ನರಕಗಳ ಕಲ್ಪನೆಯೇ ಈಗ ದೂರವಾಗಿದೆ. ದೈವದ ಬಗ್ಗೆ ಭಕ್ತಿ, ಭಯವೂ ಇಲ್ಲವಾಗಿದೆ. ಭಯ ಇಲ್ಲದ್ದರಿಂದ ಏನೆಲ್ಲ ಘಟಿಸುತ್ತಿದೆ. ಜಗತ್ತು  ಬದಲಾಗಿದೆ. ಮಳೆ- ಬೆಳೆ ಕಡಿಮೆ ಯಾಗಿದೆ. ಜಾಗತಿಕ ತಾಪಮಾನವೂ ಹೆಚ್ಚುತ್ತಿದೆ. ಮನುಷ್ಯನಲ್ಲಿನ ದುರಾಸೆ ಪ್ರತಿಫಲವೇ ಈ ಅನಾಹುತಗಳಿಗೆ ಮೂಲ ಕಾರಣ. ಮುಂದಿನ ಪೀಳಿಗೆಗೆ ಇದನ್ನು ಮನವರಿಕೆ ಮಾಡುವ ತುರ್ತು ಇದೀಗ ಇದೆ ಎಂದು ಅವರು ಹೇಳಿದರು.


ಕಾವೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎಂ. ದೇವರಾಜಪ್ಪ ಮಾತನಾಡಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಹೊಂದುವ ಜತೆಗೆ ಸಮುದಾಯದ ಜತೆ ಬೆರೆಯುವ ಪ್ರಾಯೋಗಿಕ ಅನುಭವ ಅವಶ್ಯಕ. ವಿದ್ಯಾರ್ಥಿಗಳು ಅದರಲ್ಲೂ ಪ್ರಶಿಕ್ಷಣಾರ್ಥಿಗಳು ಕೇವಲ ಓದುವುದು ಮತ್ತು ಬರೆಯುವುದರಲ್ಲಿ ಎಷ್ಟೇ ಉನ್ನತ ಮಟ್ಟದಲ್ಲಿದ್ದರೂ ಅದು ಪ್ರಯೋಜನಕ್ಕೆ ಬರುವುದಿಲ್ಲ. ಜತೆಗೆ ಸಮುದಾಯದ ಜತೆ ಹೊಂದಿಕೊಳ್ಳುವ ಪ್ರಾಯೋಗಿಕ ಅನುಭವ ಬಹಳ ಮುಖ್ಯ ಎಂದು ತಿಳಿಸಿದರು.

ಸಮಯ ಮತ್ತು ಸಮುದಾಯಗಳು ಮೌಲ್ಯಾಧಾರಿತ ಚಲನ ಕ್ರಿಯೆಗಳು. ಇವುಗಳ ಜೊತೆ ನಿಕಟ ಸಂಪರ್ಕ ಬೇಕು. ವಿದ್ಯಾರ್ಥಿಗಳಿಗೆ ಕರ್ತವ್ಯ ಪ್ರಜ್ಞೆ ಅತ್ಯವಶ್ಯ. ಕರ್ತವ್ಯ ಮರೆತವರ ಜೀವನ ಮುಂದಿನ ದಿನಗಳಲ್ಲಿ ನಿರರ್ಥಕವಾಗುವುದರಲ್ಲಿ ಸಂದೇಹ ಬೇಡ. ಸಮುದಾಯದ ಸಮಸ್ಯೆಗಳ ಮನವರಿಕೆಯ ಜತೆಗೆ ಅರಿವು ಮೂಡಿಸುವ ಕೆಲಸ ನಿಮ್ಮಿಂದಾಗಬೇಕು ಎಂದು ತಿಳಿಸಿದರು.


ಕಾಲೇಜಿನ ಪ್ರಾಚಾರ್ಯ ಡಾ.ಇ.ಬಿ. ರಾಜೇಶ್ ಮಾತನಾಡಿ ಶಿಕ್ಷಕರು ಉತ್ತಮ ಸಮಾಜವನ್ನು ನಿರ್ಮಾಣ ಮಾಡುವ ಎಲ್ಲಾ ಅರ್ಹತೆಯನ್ನು ಹೊಂದಿದ್ದಾರೆ. ಶಿಕ್ಷಕರ ವೃತ್ತಿಗಾಗಿ ತರಬೇತಿ ಪಡೆಯುತ್ತಿರುವ ನೀವು ಯಾವುದೇ ಭ್ರಮೆಗಳಲ್ಲಿ ಮುಳುಗದೆ ಅಧ್ಯಯನ ಶೀಲರಾಗಿ ಮಕ್ಕಳಿಗೆ ಉತ್ತಮವಾಗಿ ಬೋಧಿಸಬೇಕು. ಶಿಸ್ತು ಸಂಯಮವನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಪರಿಣಾಮಕಾರಿಯಾಗಿ ಬೋಧನೆಯನ್ನು ಮಾಡಬೇಕು. ನಿಗದಿಪಡಿಸಿದ ಪಠ್ಯವನ್ನು ಬೋದಿಸುವ ಜತೆಗೆ ಮಕ್ಕಳನ್ನು ಪಠ್ಯೇತರ ಚಟುವಟಿಗಳಲ್ಲಿಯೂ ತೊಡಗಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಬೇಕು ಎಂದು ಅವರು ಹೇಳಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in education »

ಅಂದು ಶಾಲೆ ಕಲಿಯಲು ಪಡಿಪಾಟಲು ಪಡಬೇಕಾಗಿತ್ತು. ಅಪ್ಪಗೆರೆ ತಿಮ್ಮರಾಜು
ಅಂದು ಶಾಲೆ ಕಲಿಯಲು ಪಡಿಪಾಟಲು ಪಡಬೇಕಾಗಿತ್ತು. ಅಪ್ಪಗೆರೆ ತಿಮ್ಮರಾಜು

ಚನ್ನಪಟ್ಟಣ: ನಾವು ನಮ್ಮ ಕಾಲದಲ್ಲಿ ಶಾಲೆಗೆ ಹೋಗಿ ವಿದ್ಯೆ ಕಲಿಯಲು ಪಡಿಪಾಟಲು ಪಡಬೇಕಾಗಿತ್ತು. ಹಲವಾರು ಸಮಸ್ಯೆಗಳು ನಮ್ಮ ಎದುರಿಗಿದ್ದವು. ಆದರೆ, ಈಗ ಅಂತಹ

ಪ್ರತಿ ವಿದ್ಯಾರ್ಥಿಗಳು ಕೌಶಲ್ಯ ರೂಢಿಸಿಕೊಳ್ಳಬೇಕು: ಶಿಕ್ಷಣಾಧಿಕಾರಿ ಮರಿಗೌಡ
ಪ್ರತಿ ವಿದ್ಯಾರ್ಥಿಗಳು ಕೌಶಲ್ಯ ರೂಢಿಸಿಕೊಳ್ಳಬೇಕು: ಶಿಕ್ಷಣಾಧಿಕಾರಿ ಮರಿಗೌಡ

ಚನ್ನಪಟ್ಟಣ: ಶಾಲಾ ವಿದ್ಯಾರ್ಥಿಗಳು ಕೇವಲ ಪಾಠ ಮತ್ತು ಆಟಕ್ಕೆ ಸೀಮಿತವಾಗದೆ ವಿವಿಧ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಕೌಶಲ್ಯ ಕಲಿತ ಮಕ್ಕಳ ಪ್ರತಿಭೆಯನ್ನ

ಪ್ರತಿ ಸರ್ಕಾರಗಳು ಪದವೀಧರರ ಜೊತೆ ಚೆಲ್ಲಾಟವಾಡುತ್ತಿವೆ, ಉದಯ್ ಸಿಂಗ್
ಪ್ರತಿ ಸರ್ಕಾರಗಳು ಪದವೀಧರರ ಜೊತೆ ಚೆಲ್ಲಾಟವಾಡುತ್ತಿವೆ, ಉದಯ್ ಸಿಂಗ್

ಚನ್ನಪಟ್ಟಣ: ಪ್ರತಿ ವರ್ಷವೂ ಲಕ್ಷಾಂತರ ಯುವಕ ಯುವತಿಯರು ಪದವಿಯೊಂದಿಗೆ ಹೊರಬರುತ್ತಾರೆ. ವಿಶ್ವ ವಿದ್ಯಾಲಯಗಳಿಂದ ಪದವಿಯೊಂದಿಗೆ ಬರುವವರಿಗೆ ಸೂಕ್ತ  ಉದ್ಯೋಗ

ದಿವ್ಯಚೇತನ ಇಂಗ್ಲಿಷ್ ಶಾಲೆಯಲ್ಲಿ ಮೇಳೈಸಿದ ಮಿನಿ ವಿಜ್ಞಾನ ಮೇಳ
ದಿವ್ಯಚೇತನ ಇಂಗ್ಲಿಷ್ ಶಾಲೆಯಲ್ಲಿ ಮೇಳೈಸಿದ ಮಿನಿ ವಿಜ್ಞಾನ ಮೇಳ

ಚನ್ನಪಟ್ಟಣ: ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಬ್ರಾಡ್ಕಾಂ ವಿಜ್ಞಾನ ಕೇಂದ್ರ ಚನ್ನಪಟ್ಟಣ ಇವರ ವತಿಯಿಂದ ನಗರದ ದಿವ್ಯ ಚೇತನ ಇಂಗ್ಲಿಷ್ ಪ್ರೌಢಶಾಲೆಯಲ್ಲ

ಪಾಠದ ಜೊತೆಗೆ ಆಟದಲ್ಲಿಯೂ ಮುಂಚೂಣಿಗೆ ಬರಬೇಕು. ವಿ ಬಾಲಸುಬ್ರಹ್ಮಣ್ಯಂ
ಪಾಠದ ಜೊತೆಗೆ ಆಟದಲ್ಲಿಯೂ ಮುಂಚೂಣಿಗೆ ಬರಬೇಕು. ವಿ ಬಾಲಸುಬ್ರಹ್ಮಣ್ಯಂ

ಚನ್ನಪಟ್ಟಣ,: ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಣದ ಜೊತೆಯಲ್ಲಿ ಕ್ರೀಡಾಮನೋಭಾವನೆ ಬೆಳಸಿಕೊಳ್ಳಬೇಕು. ಮನಸ್ಸು ಉಲ್ಲಸಿತವಾಗಲು ಕ್ರೀಡೆ ಸಹಕಾರಿ ಎಂದು ಬಾಲು

ಉಪನ್ಯಾಸಕರ ಧರಣಿ, ಕಲಿಕೆಗೆ ತೊಂದರೆ, ಎಬಿವಿಪಿ ಯಿಂದ ಪ್ರತಿಭಟನೆ
ಉಪನ್ಯಾಸಕರ ಧರಣಿ, ಕಲಿಕೆಗೆ ತೊಂದರೆ, ಎಬಿವಿಪಿ ಯಿಂದ ಪ್ರತಿಭಟನೆ

ಚನ್ನಪಟ್ಟಣ: ಸರ್ಕಾರಿ ಕಾಲೇಜುಗಳ ಉಪನ್ಯಾಸಕರು ಧರಣಿ ನಿರತರಾಗಿರುವುದರಿಂದ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಿದೆ. ಇದರಿಂದ ಶೈಕ್ಷಣಿಕ ವರ್ಷದ ಕಲಿಕೆಗೆ ತೊ

ಆರೋಗ್ಯ, ಆಯಸ್ಸು ಹೆಚ್ಚಿಸುವ ವೈದ್ಯರು ಆರೋಗ್ಯ ಕಾಪಾಡಿಕೊಳ್ಳಬೇಕು. ಚಾಮುಂಡೇಶ್ವರಿ ಆಸ್ಪತ್ರೆ ಉದ್ಘಾಟನೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ
ಆರೋಗ್ಯ, ಆಯಸ್ಸು ಹೆಚ್ಚಿಸುವ ವೈದ್ಯರು ಆರೋಗ್ಯ ಕಾಪಾಡಿಕೊಳ್ಳಬೇಕು. ಚಾಮುಂಡೇಶ್ವರಿ ಆಸ್ಪತ್ರೆ ಉದ್ಘಾಟನೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ

ಚನ್ನಪಟ್ಟಣ:bಆಸ್ಪತ್ರೆಗೆ ಬರುವ ರೋಗಿಗಳ ಅರೋಗ್ಯ ತಪಾಸಿಸಿ, ರೋಗ ವಾಸಿ ಮಾಡಿ, ಅವರ ಆರೋಗ್ಯ ದ ಜೊತೆಗೆ ಆಯಸ್ಸನ್ನು ಹೆಚ್ಚಿಸುವಲ್ಲಿ ನಿಷ್ಣಾತರಾದ ವೈದ್ಯರು

ಪೆಟ್ಟಾ ಸರ್ಕಾರಿ ಶಾಲಾ ಆವರಣದಲ್ಲಿ ನಗರಸಭೆಯ ಕಸದ ರಾಶಿ, ಅಲ್ಲಗಳೆದ ಪೌರಾಯುಕ್ತ
ಪೆಟ್ಟಾ ಸರ್ಕಾರಿ ಶಾಲಾ ಆವರಣದಲ್ಲಿ ನಗರಸಭೆಯ ಕಸದ ರಾಶಿ, ಅಲ್ಲಗಳೆದ ಪೌರಾಯುಕ್ತ

ಚನ್ನಪಟ್ಟಣ: ನಗರದ ಡೂಂ ಲೈಟ್ ವೃತ್ತದಲ್ಲಿರುವ ಏಳು ದಶಕದಷ್ಟು ಹಳೆಯಾದಾದ ಪೆಟ್ಟಾ ಹೆಸರಿನ ಸರ್ಕಾರಿ ಶಾಲಾ ಆವರಣದಲ್ಲಿ ಹತ್ತಾರು ಟನ್ ಕಸದ ರಾಶಿಯನ್ನು ರಾ

ಆರ್ಥಿಕವಾಗಿ ಬೆಳೆದವರೆಲ್ಲರೂ ವಿದ್ಯಾರ್ಜನೆಗೆ ಮುಂದಡಿಯಿಡಬೇಕು, ಸಚಿವ ಮಧುಬಂಗಾರಪ್ಪ
ಆರ್ಥಿಕವಾಗಿ ಬೆಳೆದವರೆಲ್ಲರೂ ವಿದ್ಯಾರ್ಜನೆಗೆ ಮುಂದಡಿಯಿಡಬೇಕು, ಸಚಿವ ಮಧುಬಂಗಾರಪ್ಪ

ಚನ್ನಪಟ್ಟಣ: ಬಡತನದ ಬೇಗೆಯಲ್ಲಿ ಬೆಂದು, ಉನ್ನತ ಶಿಕ್ಷಣ ಪಡೆದು, ಉತ್ತಮ ಸ್ಥಾನಮಾನದ ಜೊತೆಗೆ ಆರ್ಥಿಕವಾಗಿ ಸದೃಢವಾದ ನಂತರ ತನ್ನ ಜನ್ಮದಾತರಿಗೆ, ಹುಟ್ಡಿದೂರ

ಕಾವೇರಿ ಕಿಚ್ಚು, ರಾಮನಗರ ಜಿಲ್ಲೆ ಬಂದ್, ಶಾಲಾ-ಕಾಲೇಜಿಗೆ ರಜೆ, ಸರ್ಕಾರಿ ಕಛೇರಿ ರಜೆಗಾಗಿ ಕಾಯುತ್ತಿರುವ ನೌಕರರು
ಕಾವೇರಿ ಕಿಚ್ಚು, ರಾಮನಗರ ಜಿಲ್ಲೆ ಬಂದ್, ಶಾಲಾ-ಕಾಲೇಜಿಗೆ ರಜೆ, ಸರ್ಕಾರಿ ಕಛೇರಿ ರಜೆಗಾಗಿ ಕಾಯುತ್ತಿರುವ ನೌಕರರು

ರಾಮನಗರ: ನಮ್ಮ ರಾಜ್ಯದ ಕೆಲ ಭಾಗಗಳಿಗೆ ಕುಡಿಯುವ ನೀರಿಗೆ ತತ್ವಾರವಾಗಿದೆ, ಮಂಡ್ಯ, ಮೈಸೂರು ಭಾಗದ ರೈತರಿಗೆ ಬೆಳೆ ಬೆಳೆಯಲು ನೀರಿಲ್ಲಾ, ಇಂತಹ ಸಂಕಷ್ಟದ ಸಮಯ

Top Stories »  


Top ↑