ಕುವೆಂಪು ನಗರದ ಒಂದನೇ ತಿರುವಿನಲ್ಲಿ ವಾಹನಗಳ ದಟ್ಟಣೆ

ಚನ್ನಪಟ್ಟಣ: ಪಟ್ಟಣದ ಕುವೆಂಪು ನಗರದ ಒಂದನೇ ತಿರುವು ಸದಾ ಜನಜಂಗುಳಿ ಮತ್ತು ವಾಹನಗಳ ದಟ್ಟಣೆಯಿಂದ ಕೂಡಿದ್ದು ಪಾದಚಾರಿಗಳಿಗೆ ಹಾಗೂ ಆ ಭಾಗದ ನಿವಾಸಿಗಳಿಗೆ ಕಿರಿಕಿರಿಯನ್ನುಂಟು ಮಾಡಿದೆ. ಸದಾ ಜನಜಂಗುಳಿಯಿಂದ ಗಿಜಿಗುಡುವ ಕುವೆಂಪುನಗರದ ಒಂದನೇ ತಿರುವಿನಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ಸಾರ್ವಜನಿಕರಿಗೆ ಇನ್ನಿಲ್ಲದ ರೀತಿಯಲ್ಲಿ ಸಮಸ್ಯೆ ಭಾದಿಸ ತೊಡಗಿದೆ.
ನಗರದ ಪ್ರಮುಖ ಜನಸಂದಣಿ ಸ್ಥಳಗಳಲ್ಲಿ ಇದೂ ಸಹ ಒಂದಾಗಿದ್ದು, ಇಲ್ಲಿನ ರಸ್ತೆಯಲ್ಲಿ ಸಬ್ ರಿಜಿಸ್ಟಾರ್ ಕಚೇರಿ, ಕರ್ನಾಟಕ ಬ್ಯಾಂಕ್, ಬರೋಡಾ ಬ್ಯಾಂಕ್, ಉಜ್ಜೀವನ್ ಬ್ಯಾಂಕ್, ಬಿಎಸ್‍ಎನ್‍ಎಲ್ ಕಛೇರಿ, ಸೆಂಟ್ ಆನ್ಸ್ ಸ್ಕೂಲ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಕಛೇರಿ, ಶ್ರೀ ರಾಮ್ ಪೈನಾನ್ಸ್, ಮುದ್ರಣಾಲಯ, ಗ್ರಂಥಾಲಯ, ಆಸ್ಪತ್ರೆ, ಮಾಲ್ ಸೇರಿದಂತೆ ಬಹುತೇಕ ಜನಸೇರುವ ಕಚೇರಿಗಳೆ ಅಧಿಕವಾಗಿದ್ದು ಜೊತೆಗೆ ಇದೊಂದು ಲಿಂಕ್ ರಸ್ತೆ ಯಾಗಿರುವ ಕಾರಣ ಬಹುತೇಕ ವಾಹನ ಸವಾರರು ಸಂಚಾರಕ್ಕೆ ಈ ರಸ್ತೆಯನ್ನೇ ಹೆಚ್ಚು ಆಶ್ರಯಿಸಿರುವ ಕಾರಣ ಈ ರಸ್ತೆಯಲ್ಲಿ ಸಂಚಾರ ಸಹಜವಾಗೇ ಹೆಚ್ಚಾಗಿರುತ್ತದೆ.
ಪ್ರತಿನಿತ್ಯ ಸಾವಿರಾರು ಮಂದಿ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ಸಹ ಇಲ್ಲಿ ವಾಹನಗಳ ನಿಲುಗಡೆಗಾಗಲಿ, ಸಾರ್ವಜನಿಕರ ಸುಗಮ ಸಂಚಾರಕ್ಕಾಗಲಿ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಸಂಚಾರಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ.
ವಿವಿಧ ಕಚೇರಿಗಳು, ಅಂಗಡಿ ಮುಂಗಟ್ಟುಗಳ ಮಾಲೀಕರುಗಳು, ಬ್ಯಾಂಕ್ ಸಿಬ್ಬಂದಿಗಳು ವಾಹನಗಳೆ ನೂರಾರು ಸಂಖ್ಯೆಯಲ್ಲಿದ್ದು ಇವರುಗಳ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಇಲ್ಲವಾಗಿದ್ದು, ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ಮಾತು ದೂರವೇ ಸರಿ. ಬೆಳಿಗ್ಗೆ 10 ರಿಂದ ಹಿಡಿದು ಸಂಜೆ 5 ರ ವರೆಗೆ ಈ ರಸ್ತೆಯಲ್ಲಿ ಸುಗಮವಾಗಿ ನಡೆದಾಡುವುದು ಕಷ್ಟವೆನಿಸುವಷ್ಟರ ಮಟ್ಟಿಗೆ ಇಲ್ಲಿ ಸದಾ ಜನಜಂಗುಳಿ ಸೇರಿರುತ್ತದೆ.
*ಸಬ್ ರಿಜಿಸ್ಟಾರ್ ಕಚೇರಿಯಿಂದಲೇ ಸಮಸ್ಯೆ :*
ಈ ರಸ್ತೆಯಲ್ಲಿ ಇಷ್ಟೂಂದು ಸಂಚಾರ ವ್ಯತ್ಯಯ ಉಂಟಾಗಲು ಇಲ್ಲಿರುವ ಸಬ್ ರಿಜಿಸ್ಟಾರ್ ಕಚೆರಿಯೇ ಪ್ರಮುಖ ಕಾರಣವಾಗಿದ್ದು, ದಿನಿನಿತ್ಯ ಈ ಕಚೇರಿಗೆ ನೂರಾರು ಮಂದಿ ಆಗಮಿಸತ್ತಾ ಅವರೊಟ್ಟಿಗೆ ನಾಲ್ಕಾರು ವಾಹನಗಳು, ಹತ್ತಾರು ಸಂಬಂಧಿಕರು ಆಗಮಿಸುವ ಕಾರಣ ಅವರ ವಾಹನಗಳ ನಿಲುಗಡೆಯಿಂದ ಹೆಚ್ಚಿನ ತೊಂದರೆ ಉಂಟಾಗುತ್ತಿದೆ.
*ಶಾಲಾ ಮಕ್ಕಳಿಗೆ ಸಾಕಷ್ಟು ತೊಂದರೆ:*
ಈ ರಸ್ತೆಯ ಕೊನೆಯಲ್ಲಿ ಸೆಂಟ್ ಆನ್ಸ್ ಶಾಲೆಯಿದ್ದು ಸಾವಿರಾರು ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುತ್ತಿದ್ದು, ಶಾಲಾ ವಾಹನಗಳು, ಪೋಷಕರುಗಳು ತಮ್ಮ ಮಕ್ಕಳನ್ನು ಕರೆತರಲು ಹಾಗೂ ಶಾಲೆಗೆ ಬಿಡಲು ಇದೇ ರಸ್ತೆಯನ್ನು ಬಳಸಿಕೊಳ್ಳುತ್ತಾರೆ. ಆದರೆ ಇಲ್ಲಿನ ವಿಪರೀತ ವಾಹನದಟ್ಟನೆಯಿಂದ ಮಕ್ಕಳು ಮತ್ತು ಪೋಷಕರುಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
*ಪೊಲೀಸ್ ಇಲಾಖೆ ಗಮನಹರಿಸಿಲಿ:*
ಕಳೆದ ಹಲವಾರು ವರ್ಷಗಳಿಂದಲೂ ಈ ರಸ್ತೆಯಲ್ಲಿ ಸಂಚಾರಿ ಸಮಸ್ಯೆ ಇದ್ದು ಇದನ್ನು ಬಗೆಹರಿಸುವಂತೆ ಸಾಕಷ್ಟು ಬಾರಿ ಪೊಲೀಸ್ ಇಲಾಖೆಗೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಮನವಿ ಮಾಡಿಕೊಂಡಿದ್ದು, ಒಂದರೆಡು ದಿನ ಈ ಬಗ್ಗೆ ಚಿತ್ತ ಹರಿಸುವ ಇಲಾಖೆ ಸಹ ನಂತರ ಅದರತ್ತ ನಿರ್ಲಕ್ಷ್ಯ ವಹಿಸಿ ಸುಮ್ಮನಾಗುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆ ಹಾಗೇ ಉಳಿದಿದ್ದು, ಇನ್ನಾದರೂ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಇದಕ್ಕೆ ಹಿತಶ್ರೀ ಹಾಡುವರೆ ಕಾದು ನೋಡಬೇಕಿದೆ.
ಕುವೆಂಪು ನಗರದ ರಸ್ತೆಯ ಸಂಚಾರದಟ್ಟಣೆ ಸಮಸ್ಯೆಯು ಗಮನಕ್ಕೆ ಬಂದಿದ್ದು, ಇಲ್ಲಿನ ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ಅಡ್ಡಾದಿಡ್ಡಿ ವಾಹನಗಳ ನಿಲುಗಡೆಗೆ ಬ್ರೇಕ್ ಹಾಕಲಾಗುವುದು ಹಾಗೂ ಸೂಚನಾಫಲಕಗಳನ್ನು ಅಳವಡಿಸುವ ಮುಖಾಂತರ ಜಾಗೃತಿ ಮೂಡಿಸಿ, ಬಿಲ್ಡಿಂಗ್ ಮಾಲೀಕರುಗಳಿಗೂ ಎಚ್ಚರಿಕೆ ಕೊಡುವ ಕೆಲಸ ಮಾಡಲಾಗುವುದು.
ನಾಳೆಯಿಂದಲೆ ರಸ್ತೆಯ ಒಂದು ಕಡೆ ಮಾತ್ರ ವಾಹನ ನಿಲ್ಲಿಸಲು ಸೂಚನೆ ನೀಡಿ ಸಿಬ್ಬಂದಿಯನ್ನು ನೇಮಿಸಲಾಗುವುದು.
*ಶುಭಾಂಬಿಕಾ ಪಿಎಸ್‍ಐ ಸಂಚಾರಿ ಪೊಲೀಸ್ ಠಾಣೆ.*
ನಗರದ ಪ್ರಮುಖ ರಸ್ತೆಯಾದ ಇದು ಲಿಂಕ್ ರಸ್ತೆಯಾಗಿದ್ದು, ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಕಾರಣ ಬಹುತೇಕರು ಈ ರಸ್ತೆಯನ್ನೇ ಹೆಚ್ಚು ಬಳಕೆ ಮಾಡುತ್ತಾರೆ, ಆದರೆ ಇಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದ್ದು, ಪಾದಾಚಾರಿಗಳು ನಡೆದಾಡಲು ಇಲ್ಲಿ ಕಷ್ಟಸಾಧ್ಯವಾಗಿದೆ, ಕೆಲವಾರು ಬಾರಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಗಳು ಸಹ ನಡೆದಿದ್ದು, ಸಂಚಾರಿ ಪೊಲೀಸರು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕಾಗಿದೆ.
*ಶಿವರಾಮ್(ಕೆಂಪ), ಮಾ.ಗ್ರಾ.ಪಂ.ಸದಸ್ಯರು.*
ಗೋ ರಾ ಶ್ರೀನಿವಾಸ...
ಮೊ:9845856139.
Recent news in education »

ಕಾವೇರಿ ಕಿಚ್ಚು, ರಾಮನಗರ ಜಿಲ್ಲೆ ಬಂದ್, ಶಾಲಾ-ಕಾಲೇಜಿಗೆ ರಜೆ, ಸರ್ಕಾರಿ ಕಛೇರಿ ರಜೆಗಾಗಿ ಕಾಯುತ್ತಿರುವ ನೌಕರರು
ರಾಮನಗರ: ನಮ್ಮ ರಾಜ್ಯದ ಕೆಲ ಭಾಗಗಳಿಗೆ ಕುಡಿಯುವ ನೀರಿಗೆ ತತ್ವಾರವಾಗಿದೆ, ಮಂಡ್ಯ, ಮೈಸೂರು ಭಾಗದ ರೈತರಿಗೆ ಬೆಳೆ ಬೆಳೆಯಲು ನೀರಿಲ್ಲಾ, ಇಂತಹ ಸಂ

ಜವಾಹರ್ ನವೋದಯ ವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಹಾಕುವಂತೆ ಬಿಇಓ ಮರಿಗೌಡ ಮನವಿ
ಚನ್ನಪಟ್ಟಣ : ಕನಕಪುರ ತಾಲೂಕಿನ ಶಿವನಹಳ್ಳಿ ಬಳಿ ಇರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ 2024-25ನೇ ಸಾಲಿಗೆ 6ನೇ ತರಗತಿ ಪ್ರವೇಶಕ್ಕೆ, ನವೋದಯ ವಿದ್ಯಾಲಯ ಸ
ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನ
ರಾಮನಗರ: ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ರಾಮನಗರ ಜಿಲ್ಲೆಯ ವಸತಿ ಶಾಲೆ, ಕಾಲೇಜು ಹಾಗೂ ಮೌಲಾನಾ ಆಜ

ಅನಧಿಕೃತ ಶಾಲೆಗಳಿಗೆ ದಾಖಲಾತಿ ಮಾಡಿಸಬೇಡಿ: ಕ್ಷೇತ್ರ ಶಿಕ್ಷಣಾಧಿಕಾರಿ
ರಾಮನಗರ, ಜೂ. 28: ಅನುದಾನ ರಹಿತ ಶಾಲೆಗಳು 2023-24ನೇ ಸಾಲಿನಲ್ಲಿ ಆಡಳಿತ ಮಂಡಳಿಯವರು ಇಲಾಖೆಯ ಅನುಮತಿ ಪಡೆಯದೇ ಶಾಲೆಗಳನ್ನು ನಡೆಸುತ್ತ
ಪಜಾ ಮತ್ತು ಪಪಂ ದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ರಾಮನಗರ, ಜೂ. 17: ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2023-24ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರ

ಸಿಂ.ಲಿಂ.ನಾಗರಾಜು ಪ್ರತಿಷ್ಠಾನ ವತಿಯಿಂದ ಇರುಳಿಗರದೊಡ್ಡಿ ಶಾಲಾ ಮಕ್ಕಳಿಗೆ ಬ್ಯಾಗ್, ಪಠ್ಯ ಸಾಮಗ್ರಿ ವಿತರಣೆ
ಚನ್ನಪಟ್ಟಣ: ದಾನಿಗಳು ನೀಡುವ ಪಠ್ಯ ಸಾಮಗ್ರಿಗಳನ್ನು ಸದ್ಬಳಕೆ ಮಾಡಿಕೊಂಡು ಶಾಲಾ ಮಕ್ಕಳು ವಿಶೇಷವಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಉನ್ನತ

ಜವಳಿ ಮತ್ತು ಕೈಮಗ್ಗ ಡಿಪ್ಲೊಮಾ ಗೆ ಅರ್ಜಿ ಆಹ್ವಾನ
ರಾಮನಗರ, ಜೂ. 09: ರಾಮನಗರ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ 2023-24ನೇ ಸಾಲಿನ ಶೈಕ್ಷಣಿಕ ಅವಧಿಗೆ ಕೈಮಗ್ಗ ಮತ್ತು

ಎಂಬಿಬಿಎಸ್ ನಲ್ಲಿ ಗೋಲ್ಡ್ ಮೆಡಲ್, ಪಿಜಿ ಯಲ್ಲಿ ದೇಶಕ್ಕೆ ಎರಡು ಸಾವಿರ ರ್ಯಾಂಕ್ ಪಡೆದ ಅಪ್ಪಟ ಗ್ರಾಮೀಣ ಪ್ರತಿಭೆ ಚಕ್ಕಲೂರು ಗ್ರಾಮದ ಡಾ ಅನುಶ್ರೀ
ಚನ್ನಪಟ್ಟಣ: ತಾಲ್ಲೂಕಿನ ಚಕ್ಕಲೂರು ಗ್ರಾಮದಿಂದ ಚನ್ನಪಟ್ಟಣ ನಗರಕ್ಕೆ ಪ್ರತಿದಿನ ಅಂದರೆ ಹದಿನಾಲ್ಕು ವರ್ಷಗಳ ಕಾಲ ಇಪ್ಪತ್ನಾಲ್ಕು ಕಿಲೋಮೀಟರ್ ಪ್ರಯಾಣ

ಎನ್.ಎಸ್.ಎಸ್. ಶಿಬಿರಾರ್ಥಿಗಳಿಗೆ ಸಮೀಕ್ಷೆವೇಳೆ ಅಪೌಷ್ಠಿಕತೆ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲು ಸಲಹೆ - ಡಾ. ಶಶಿಕಲಾ
ರಾಮನಗರ, ಮೇ 2: ಅಪೌಷ್ಠಿಕತೆ ಮುಖ್ಯವಾದ ಆರೋಗ್ಯ ಸಮಸ್ಯೆಯಾಗಿದ್ದು. ಅಪೌಷ್ಠಿಕತೆ ಎಲ್ಲಾ ವಯಸ್ಸಿನಲ್ಲಿಯೂ ಕಂಡು ಬರುತ್ತದೆ. ಅಪೌಷ್ಠಿಕತೆ ನಿವಾರಿಸಲು ತಾಯಿ

ಶಿಸ್ತು ಮತ್ತು ಶ್ರದ್ಧೆ ಇದ್ದರೆ ಅಸಾಧ್ಯವಾದುದನ್ನು ಸಾಧಿಸಬಹುದು. ಸಾಹಿತಿ ವಿಜಯ್ ರಾಂಪುರ
ಚನ್ನಪಟ್ಟಣ :ಪ್ರತಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಅವಧಿಯಲ್ಲಿ ಶಿಸ್ತು ಮತ್ತು ಶ್ರದ್ಧೆಯ ಜೊತೆಗೆ ಸಮಯ ಪಾಲನೆ ರೂಢಿಸಿಕೊಂಡಲ್ಲಿ, ವಿದ್ಯಾರ್ಥಿಗಳು ತಮ್ಮ
ಪ್ರತಿಕ್ರಿಯೆಗಳು