Tel: 7676775624 | Mail: info@yellowandred.in

Language: EN KAN

    Follow us :


ಸಿಂ ಲಿಂ ನಾಗರಾಜು ಸತ್ಯಸಂಧರು, ವಾಟಾಳ್ ನಾಗರಾಜು ಅಭಿಮತ

Posted date: 11 Nov, 2023

Powered by:     Yellow and Red

ಸಿಂ ಲಿಂ ನಾಗರಾಜು ಸತ್ಯಸಂಧರು, ವಾಟಾಳ್ ನಾಗರಾಜು ಅಭಿಮತ

ಚನ್ನಪಟ್ಟಣ; ಸಿಂ ಲಿಂ ನಾಗರಾಜು ಸತ್ಯಸಂಧರು, ಯೋಗ್ಯರು, ನಂಬಿಕಸ್ತರು, ವಿವೇಕವುಳ್ಳವರು, ವಿಚಾರವಂತರು, ಸರಳಜೀವಿ ಇಂತಹವರು ನನ್ನ ಸ್ನೇಹಿತರಾಗಿ, ಒಡನಾಡಿಯಾಗಿ, ಕನ್ನಡ ಪರ ಹೋರಾಟಗಾರರಾಗಿ ಕನ್ನಡಮ್ಮನ ಸೇವೆ ಮಾಡಿದವರು. ಇಂತಹ ಹೋರಾಟಗಾರರು ಈಗ ಇಲ್ಲ, ಮುಂದೆಯೂ ಕಷ್ಟ. ಇಂತಹ ಸರಳ, ಸತ್ಯವಂತನ್ನು ನೆನೆಯುವ ಕಾರ್ಯಕ್ರಮಕ್ಕೆ ಬರಲೇಬೇಕು ಎಂಬ ಅಭಿಲಾಷೆಯಿಂದಲೆ ಬಂದು ಭಾಗವಹಿಸಿದ್ದೇನೆ ಎಂದು ಕನ್ನಡ ಪರ ಹಿರಿಯ ಹೋರಾಟಗಾರ, ಮಾಜಿ ಶಾಸಕ ವಾಟಾಳ್ ನಾಗರಾಜು ತಿಳಿಸಿದರು. ಅವರು ಶನಿವಾರ ನಗರದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ದೇವಮ್ಮ ಚಿಕ್ಕಣ್ಣ ಸಭಾಂಗಣದಲ್ಲಿ  ಸಿಂ ಲಿಂ ನಾಗರಾಜು ಪ್ರತಿಷ್ಠಾನ ಟ್ರಸ್ಟ್ ಹಮ್ಮಿಕೊಂಡಿದ್ದ ಪ್ರತಿಭಾ  ಪುರಸ್ಕಾರ ಮತ್ತು ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.


ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ವಿ ವೆಂಕಟಪ್ಪ, ಬಿ ಜೆ ಲಿಂಗೇಗೌಡರ ಸಾಲಿನಲ್ಲಿ ನಿಲ್ಲುವಂತಹ ಸತ್ಯವಂತ ಸಿಂ ಲಿಂ ನಾಗರಾಜು, ಇವರು ಮೈಸೂರಿನಲ್ಲಿ ಆರಂಭಿಸಿದ ಕನ್ನಡ ಪರ ಹೋರಾಟದಲ್ಲಿ ನಾನು ಭಾಗವಹಿಸಿದ್ದೆ. ಅವರ ಮದುವೆಯನ್ನು ಸರಳವಾಗಿ, ಕುವೆಂಪು ಮಂತ್ರಮಾಂಗಲ್ಯದ ಮೂಲಕ ವಿಚಾರವಂತಿಕೆಯ ಮೂಲಕ ನಾನೇ ಮಾಡಿಸಿದೆ. ಇವರ ಹೆಸರು ಶಾಶ್ವತವಾಗಿ ಉಳಿಯಬೇಕಾದರೆ, ಯಾರ ಆಜ್ಞೆಗೂ ಕಾಯದೆ, ನಗರದ ಸಾತನೂರು ರಸ್ತೆಯಲ್ಲಿರುವ ಸರ್ಕಲ್ ನಿಂದ ಸಾತನೂರು ವರೆವಿಗೂ ಸಿಂ ಲಿಂ ನಾಗರಾಜು ಹೆಸರನ್ನಿಡುವ ಮೂಲಕ ಅವರ ಹೆಸರನ್ನು ಶಾಶ್ವತವಾಗಿಡಬೇಕೆಂದು ತಿಳಿಸಿದರು.


ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಅನ್ನದಾನೇಶ್ವರನಾಥ ಸ್ವಾಮೀಜಿ ಮಾತನಾಡಿ, ಸಿಂ ಲಿಂ ರವರು ನಮ್ಮೆಲ್ಲರ ನಡುವೆ ಓಡಾಡಿದ ಅಪರೂಪದ ಕನ್ನಡಿಗರು ಮತ್ತು ಕನ್ನಡ ಪರ ಹೋರಾಟಗಾರರು. ಇವರು ಕೇವಲ ರಾಜಕೀಯ ಮಾಡದೆ, ಸರಳ ರಾಜಕೀಯ ಮಾಡುವ ಮೂಲಕ ಹೆಸರುವಾಸಿಯಾದವರು. ವ್ಯವಸಾಯದ ಜೊತೆಗೆ ಸಹಕಾರ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. ಇಂದು ಈ ಕಾರ್ಯಕ್ರಮಕ್ಕೆ ಕನ್ನಡದ ಕಟ್ಟಾಳು ವಾಟಾಳ್ ನಾಗರಾಜು ರವರು ಬಂದಿರುವುದೇ ಸಾಕ್ಷಿಯಾಗಿದೆ. ಇಂತಹ ಸರಳಜೀವಿಯ ಕಾರ್ಯಕ್ರಮ ನಿಲ್ಲದೆ ನಡೆಯಬೇಕು. ಕೇವಲ ಚನ್ನಪಟ್ಟಣ ಅಷ್ಟೇ ಅಲ್ಲದೆ ಕನ್ನಡಿಗರೆಲ್ಲರೂ ಸೇರಿ ಈ ಕೆಲಸವನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.


ನಗರ ವೃತ್ತ ನಿರೀಕ್ಷಕಿ ಶೋಭಾ ಮಾತನಾಡಿ, ಸಿಂ ಲಿಂ ನಾಗರಾಜು ರವರು ಅತ್ಯಂತ ಭಾವಜೀವಿಯಾಗಿದ್ದರು. ಅವರ ಕುಟುಂಬದ ಸದಸ್ಯರು ಈ ಕಾರ್ಯಕ್ರಮದಲ್ಲಿ ಅತ್ಯಂತ ಭಾವುಕರಾಗಿದ್ಧಾರೆ. ಇಂತಹ ಮಹಾನುಭಾವ, ಸರಳಜೀವಿ ಯ ಜೊತೆಗೆ ನಾನು ಹಲವಾರು ಬಾರಿ ಮಾತನಾಡಿದ್ದೇನೆ. ಅವರ ಅಂತಿಮ ನಮನದ ಕಾರ್ಯಕ್ರಮದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು ಅವರ ಅಂತಿಮ ದರ್ಶನ ಪಡೆಯಲು ಸಹಸ್ರಾರು ಮಂದಿಗೆ ನೆರವಾಗಿದ್ದು ನನ್ನ ಜೀವನದಲ್ಲಿ ಅವೀಸ್ಮರಣೀಯವಾಗಿದೆ ಎಂದರು.


ಸಹಕಾರ ಸಂಘಗಳ ನಿಬಂಧ ಕರಾದ ಲಕ್ಷ್ಮೀಪತಯ್ಯ ನವರು ಮಾತನಾಡಿ, ಸಿಂ ಲಿಂ ನಾಗರಾಜು ರವರ ಸಹಕಾರ ತತ್ವ ಬಹಳ ವಿಶೇಷವಾಗಿತ್ತು. ಅವರು ಕನ್ನಡ ಕಟ್ಟುವಲ್ಲಿ ಬಹಳ ಹೋರಾಟ ಮಾಡಿದ್ದಾರೆ. ಇಂತಹ ಸರಳಜೀವಿ ನಮ್ಮೊಡನೆ ಮತ್ತಷ್ಟು ಕಾಲ ಇದ್ದಿದ್ದರೆ ರಾಮನಗರ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಮತ್ತಷ್ಟು ಬೆಳೆಯಲು ಅವಕಾಶವಾಗುತ್ತಿತ್ತು ಎಂದರು.


ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಹೆಚ್ ಕೆ ವಿವೇಕಾನಂದ ರವರು, ಈ ನಾಡು, ನೆಲ ಕಂಡಂತಹ ಧೀಮಂತ ನಾಯಕ ಸಿಂ ಲಿಂ ನಾಗರಾಜು ರವರು. ಅವರ ಸರಳ ಜೀವನವೇ ನಮ್ಮೆಲ್ಲರನ್ನೂ ಅವರೆಡೆಗೆ ಸೂಜಿಗಲ್ಲಿನಂತೆ ಸೆಳೆಯಿತು. ಇಂತಹ ನಾಯಕರ ಹೆಸರಿನಲ್ಲಿ ಪ್ರತಿಷ್ಠಾನ ಮಾಡಿರುವುದು ತುಂಬಾ ಉತ್ತಮವಾದ ಕೆಲಸವಾಗಿದೆ. ಈ ಪ್ರತಿಷ್ಠಾನವು ಕೇವಲ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗದೆ, ಅವರ ವಿಚಾರಗಳನ್ನು ತಿಳಿಸುವ, ಅವರ ಉದ್ದೇಶಗಳನ್ನು ಈಡೇರಿಸುವ ಮೂಲಕ ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುವ ಕೆಲಸ ಮಾಡಬೇಕು ಎಂದರು.


ಹಿರಿಯ ಸಹಕಾರಿ ಧುರೀಣರಾದ ಸುಧಾಕರ್ ರವರಿಗೆ ಸಿಂ ಲಿಂ ನಾಗರಾಜು ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಕನ್ನಡ ವಿಷಯದಲ್ಲಿ ೧೨೫/೧೨೫ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಿಂ ಲಿಂ ನಾಗರಾಜು ರವರ ಪುತ್ರ ಆದರ್ಶಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಾನಪದ ಕಲಾವಿದ ಬೇವೂರು ರಾಮಯ್ಯ ಮತ್ತು ಸಂಗಡಿಗರು ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಅಧ್ಯಕ್ಷ ಶಂಭೂಗೌಡ ಕಾರ್ಯದರ್ಶಿ ರಜನಿ ಆದರ್ಶಕುಮಾರ್ ಮತ್ತು ಪದಾಧಿಕಾರಿಗಳು. ಡಾ ಭಗತ್ ರಾಮ್, ಕೂ ಗಿ ಗಿರಿಯಪ್ಪ, ಬೆಸಗರಹಳ್ಳಿ ಎಲ್ಲೇಗೌಡ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in education »

ಅಂದು ಶಾಲೆ ಕಲಿಯಲು ಪಡಿಪಾಟಲು ಪಡಬೇಕಾಗಿತ್ತು. ಅಪ್ಪಗೆರೆ ತಿಮ್ಮರಾಜು
ಅಂದು ಶಾಲೆ ಕಲಿಯಲು ಪಡಿಪಾಟಲು ಪಡಬೇಕಾಗಿತ್ತು. ಅಪ್ಪಗೆರೆ ತಿಮ್ಮರಾಜು

ಚನ್ನಪಟ್ಟಣ: ನಾವು ನಮ್ಮ ಕಾಲದಲ್ಲಿ ಶಾಲೆಗೆ ಹೋಗಿ ವಿದ್ಯೆ ಕಲಿಯಲು ಪಡಿಪಾಟಲು ಪಡಬೇಕಾಗಿತ್ತು. ಹಲವಾರು ಸಮಸ್ಯೆಗಳು ನಮ್ಮ ಎದುರಿಗಿದ್ದವು. ಆದರೆ, ಈಗ ಅಂತಹ

ಪ್ರತಿ ವಿದ್ಯಾರ್ಥಿಗಳು ಕೌಶಲ್ಯ ರೂಢಿಸಿಕೊಳ್ಳಬೇಕು: ಶಿಕ್ಷಣಾಧಿಕಾರಿ ಮರಿಗೌಡ
ಪ್ರತಿ ವಿದ್ಯಾರ್ಥಿಗಳು ಕೌಶಲ್ಯ ರೂಢಿಸಿಕೊಳ್ಳಬೇಕು: ಶಿಕ್ಷಣಾಧಿಕಾರಿ ಮರಿಗೌಡ

ಚನ್ನಪಟ್ಟಣ: ಶಾಲಾ ವಿದ್ಯಾರ್ಥಿಗಳು ಕೇವಲ ಪಾಠ ಮತ್ತು ಆಟಕ್ಕೆ ಸೀಮಿತವಾಗದೆ ವಿವಿಧ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಕೌಶಲ್ಯ ಕಲಿತ ಮಕ್ಕಳ ಪ್ರತಿಭೆಯನ್ನ

ಪ್ರತಿ ಸರ್ಕಾರಗಳು ಪದವೀಧರರ ಜೊತೆ ಚೆಲ್ಲಾಟವಾಡುತ್ತಿವೆ, ಉದಯ್ ಸಿಂಗ್
ಪ್ರತಿ ಸರ್ಕಾರಗಳು ಪದವೀಧರರ ಜೊತೆ ಚೆಲ್ಲಾಟವಾಡುತ್ತಿವೆ, ಉದಯ್ ಸಿಂಗ್

ಚನ್ನಪಟ್ಟಣ: ಪ್ರತಿ ವರ್ಷವೂ ಲಕ್ಷಾಂತರ ಯುವಕ ಯುವತಿಯರು ಪದವಿಯೊಂದಿಗೆ ಹೊರಬರುತ್ತಾರೆ. ವಿಶ್ವ ವಿದ್ಯಾಲಯಗಳಿಂದ ಪದವಿಯೊಂದಿಗೆ ಬರುವವರಿಗೆ ಸೂಕ್ತ  ಉದ್ಯೋಗ

ದಿವ್ಯಚೇತನ ಇಂಗ್ಲಿಷ್ ಶಾಲೆಯಲ್ಲಿ ಮೇಳೈಸಿದ ಮಿನಿ ವಿಜ್ಞಾನ ಮೇಳ
ದಿವ್ಯಚೇತನ ಇಂಗ್ಲಿಷ್ ಶಾಲೆಯಲ್ಲಿ ಮೇಳೈಸಿದ ಮಿನಿ ವಿಜ್ಞಾನ ಮೇಳ

ಚನ್ನಪಟ್ಟಣ: ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಬ್ರಾಡ್ಕಾಂ ವಿಜ್ಞಾನ ಕೇಂದ್ರ ಚನ್ನಪಟ್ಟಣ ಇವರ ವತಿಯಿಂದ ನಗರದ ದಿವ್ಯ ಚೇತನ ಇಂಗ್ಲಿಷ್ ಪ್ರೌಢಶಾಲೆಯಲ್ಲ

ಪಾಠದ ಜೊತೆಗೆ ಆಟದಲ್ಲಿಯೂ ಮುಂಚೂಣಿಗೆ ಬರಬೇಕು. ವಿ ಬಾಲಸುಬ್ರಹ್ಮಣ್ಯಂ
ಪಾಠದ ಜೊತೆಗೆ ಆಟದಲ್ಲಿಯೂ ಮುಂಚೂಣಿಗೆ ಬರಬೇಕು. ವಿ ಬಾಲಸುಬ್ರಹ್ಮಣ್ಯಂ

ಚನ್ನಪಟ್ಟಣ,: ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಣದ ಜೊತೆಯಲ್ಲಿ ಕ್ರೀಡಾಮನೋಭಾವನೆ ಬೆಳಸಿಕೊಳ್ಳಬೇಕು. ಮನಸ್ಸು ಉಲ್ಲಸಿತವಾಗಲು ಕ್ರೀಡೆ ಸಹಕಾರಿ ಎಂದು ಬಾಲು

ಉಪನ್ಯಾಸಕರ ಧರಣಿ, ಕಲಿಕೆಗೆ ತೊಂದರೆ, ಎಬಿವಿಪಿ ಯಿಂದ ಪ್ರತಿಭಟನೆ
ಉಪನ್ಯಾಸಕರ ಧರಣಿ, ಕಲಿಕೆಗೆ ತೊಂದರೆ, ಎಬಿವಿಪಿ ಯಿಂದ ಪ್ರತಿಭಟನೆ

ಚನ್ನಪಟ್ಟಣ: ಸರ್ಕಾರಿ ಕಾಲೇಜುಗಳ ಉಪನ್ಯಾಸಕರು ಧರಣಿ ನಿರತರಾಗಿರುವುದರಿಂದ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಿದೆ. ಇದರಿಂದ ಶೈಕ್ಷಣಿಕ ವರ್ಷದ ಕಲಿಕೆಗೆ ತೊ

ಆರೋಗ್ಯ, ಆಯಸ್ಸು ಹೆಚ್ಚಿಸುವ ವೈದ್ಯರು ಆರೋಗ್ಯ ಕಾಪಾಡಿಕೊಳ್ಳಬೇಕು. ಚಾಮುಂಡೇಶ್ವರಿ ಆಸ್ಪತ್ರೆ ಉದ್ಘಾಟನೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ
ಆರೋಗ್ಯ, ಆಯಸ್ಸು ಹೆಚ್ಚಿಸುವ ವೈದ್ಯರು ಆರೋಗ್ಯ ಕಾಪಾಡಿಕೊಳ್ಳಬೇಕು. ಚಾಮುಂಡೇಶ್ವರಿ ಆಸ್ಪತ್ರೆ ಉದ್ಘಾಟನೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ

ಚನ್ನಪಟ್ಟಣ:bಆಸ್ಪತ್ರೆಗೆ ಬರುವ ರೋಗಿಗಳ ಅರೋಗ್ಯ ತಪಾಸಿಸಿ, ರೋಗ ವಾಸಿ ಮಾಡಿ, ಅವರ ಆರೋಗ್ಯ ದ ಜೊತೆಗೆ ಆಯಸ್ಸನ್ನು ಹೆಚ್ಚಿಸುವಲ್ಲಿ ನಿಷ್ಣಾತರಾದ ವೈದ್ಯರು

ಪೆಟ್ಟಾ ಸರ್ಕಾರಿ ಶಾಲಾ ಆವರಣದಲ್ಲಿ ನಗರಸಭೆಯ ಕಸದ ರಾಶಿ, ಅಲ್ಲಗಳೆದ ಪೌರಾಯುಕ್ತ
ಪೆಟ್ಟಾ ಸರ್ಕಾರಿ ಶಾಲಾ ಆವರಣದಲ್ಲಿ ನಗರಸಭೆಯ ಕಸದ ರಾಶಿ, ಅಲ್ಲಗಳೆದ ಪೌರಾಯುಕ್ತ

ಚನ್ನಪಟ್ಟಣ: ನಗರದ ಡೂಂ ಲೈಟ್ ವೃತ್ತದಲ್ಲಿರುವ ಏಳು ದಶಕದಷ್ಟು ಹಳೆಯಾದಾದ ಪೆಟ್ಟಾ ಹೆಸರಿನ ಸರ್ಕಾರಿ ಶಾಲಾ ಆವರಣದಲ್ಲಿ ಹತ್ತಾರು ಟನ್ ಕಸದ ರಾಶಿಯನ್ನು ರಾ

ಆರ್ಥಿಕವಾಗಿ ಬೆಳೆದವರೆಲ್ಲರೂ ವಿದ್ಯಾರ್ಜನೆಗೆ ಮುಂದಡಿಯಿಡಬೇಕು, ಸಚಿವ ಮಧುಬಂಗಾರಪ್ಪ
ಆರ್ಥಿಕವಾಗಿ ಬೆಳೆದವರೆಲ್ಲರೂ ವಿದ್ಯಾರ್ಜನೆಗೆ ಮುಂದಡಿಯಿಡಬೇಕು, ಸಚಿವ ಮಧುಬಂಗಾರಪ್ಪ

ಚನ್ನಪಟ್ಟಣ: ಬಡತನದ ಬೇಗೆಯಲ್ಲಿ ಬೆಂದು, ಉನ್ನತ ಶಿಕ್ಷಣ ಪಡೆದು, ಉತ್ತಮ ಸ್ಥಾನಮಾನದ ಜೊತೆಗೆ ಆರ್ಥಿಕವಾಗಿ ಸದೃಢವಾದ ನಂತರ ತನ್ನ ಜನ್ಮದಾತರಿಗೆ, ಹುಟ್ಡಿದೂರ

ಕಾವೇರಿ ಕಿಚ್ಚು, ರಾಮನಗರ ಜಿಲ್ಲೆ ಬಂದ್, ಶಾಲಾ-ಕಾಲೇಜಿಗೆ ರಜೆ, ಸರ್ಕಾರಿ ಕಛೇರಿ ರಜೆಗಾಗಿ ಕಾಯುತ್ತಿರುವ ನೌಕರರು
ಕಾವೇರಿ ಕಿಚ್ಚು, ರಾಮನಗರ ಜಿಲ್ಲೆ ಬಂದ್, ಶಾಲಾ-ಕಾಲೇಜಿಗೆ ರಜೆ, ಸರ್ಕಾರಿ ಕಛೇರಿ ರಜೆಗಾಗಿ ಕಾಯುತ್ತಿರುವ ನೌಕರರು

ರಾಮನಗರ: ನಮ್ಮ ರಾಜ್ಯದ ಕೆಲ ಭಾಗಗಳಿಗೆ ಕುಡಿಯುವ ನೀರಿಗೆ ತತ್ವಾರವಾಗಿದೆ, ಮಂಡ್ಯ, ಮೈಸೂರು ಭಾಗದ ರೈತರಿಗೆ ಬೆಳೆ ಬೆಳೆಯಲು ನೀರಿಲ್ಲಾ, ಇಂತಹ ಸಂಕಷ್ಟದ ಸಮಯ

Top Stories »  


Top ↑