ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

ಬೆಂಗಳೂರು: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೂನ್ನಲ್ಲಿ ನಡೆಸಿದ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಫಲಿತಾಂಶವನ್ನು ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ಜುಲೈ 19ರ ಮಧ್ಯಾಹ್ನ 12 ಗಂಟೆಯ ನಂತರ ಎಸ್ಎಂಎಸ್ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಪರೀûಾ ಮಂಡಳಿ ತಿಳಿಸಿದೆ.
ರಾಜ್ಯದ 13,036 ಪ್ರೌಢಶಾಲೆಯ 20,8151 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 84,701 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಶೇ.40.69ರಷ್ಟು ಫಲಿತಾಂಶ ಬಂದಿದೆ. ಸರ್ಕಾರಿ ಶಾಲೆಯ 32,556 ವಿದ್ಯಾರ್ಥಿಗಳು (ಶೇ.38.40), ಅನುದಾನಿತ ಶಾಲೆಯ 26,797 ವಿದ್ಯಾರ್ಥಿಗಳು (ಶೇ.42.49) ಹಾಗೂ ಅನುದಾನ ರಹಿತ ಶಾಲೆಯ 22,648(ಶೇ.42.50) ವಿದ್ಯಾರ್ಥಿಗಳು
ಉತ್ತೀರ್ಣರಾಗಿದ್ದಾರೆ ಎಂದು ಮಂಡಳಿ ತಿಳಿಸಿದೆ.
ಫಲಿತಾಂಶವನ್ನು ಎಸ್ಎಟಿಎಸ್ ಜಾಲತಾಣ ಹಾಗೂhttp:slc.kar.nic.in ಅಥವಾ http:slc.kar.nic.in ವೆಬ್ಸೈಟ್ನಲ್ಲೂ ಪಡೆಯಬಹುದು. ಜುಲೈ 20ರ ಮಧ್ಯಾಹ್ನದ ನಂತರ ಎಲ್ಲ ಪ್ರೌಢಶಾಲೆಗಳಲ್ಲೂ ಫಲಿತಾಂಶ ಪ್ರಕಟಿಸಲಾಗುತ್ತದೆ. ವಿದ್ಯಾರ್ಥಿಗಳು ಜುಲೈ 28ವರೆಗೆ ಛಾಯಾಪ್ರತಿಗೆ ಹಾಗೂ ಜು. 21ರಿಂದ ಆಗಸ್ಟ್ 4ರವರೆಗೆ ಮರುಮೌಲ್ಯ ಮಾಪನಕ್ಕೆ ಆನ್ಲೈನ್ ಮೂಲಕ ಅರ್ಜಿಸಲ್ಲಿಸಬಹುದು. ಜೂನ್ 21ರಿಂದ 28ರ ವರೆಗೆ ರಾಜ್ಯದ 673 ಪರೀûಾ ಕೇಂದ್ರದಲ್ಲಿ ಪೂರಕ ಪರೀಕ್ಷೆ ನಡೆದಿತ್ತು. ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಜುಲೈ 8ರಿಂದ ರಾಜ್ಯದ 9 ಶೈಕ್ಷಣಿಕ ಜಿಲ್ಲೆಗಳ 50 ಕೇಂದ್ರಗಳಲ್ಲಿ 10,946 ಮೌಲ್ಯಮಾಪಕರು ನಡೆಸಿದ್ದರು.
Recent news in education »

ಉಚಿತ "ಸಿ.ಸಿ.ಟಿ.ವಿ.ಕ್ಯಾಮರಾ, ಸೆಕ್ಯೂರಿಟಿ ಅಲಾರಾಂ ಸಿಸ್ಟಮ್, ಸ್ಮೋಕ್ ಡಿಟೆಕ್ಟರ್ -ಇನ್ ಸ್ಟಾಲೆಷನ್ ಅಂಡ್ ಸರ್ವಿಸಿಂಗ್" ತರಬೇತಿಗೆ ಅರ್ಜಿ ಆಹ್ವಾನ
ರಾಮನಗರ:ಸೆ/26/20/ಶನಿವಾರ. ಬಿಡದಿ ಬಳಿಯಿರುವ ಕೆನರಾ ಬ್ಯಾಂಕ್ ನ ಎ.ಡಿ.ಪೈ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕರಿಗಾಗಿ 13 ದ

ಬಂದ್ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಿಕೆ
ರಾಮನಗರ:ಸೆ/26/20/ಶನಿವಾರ. ರೈತ ಸಂಘದ ಹಲವು ಬಣಗಳು, ದಲಿತಪರ ಸಂಘಟನೆಗಳು ಸೇರಿದಂತೆ ಅನೇಕ ಸಂಘಟನೆಗಳು ಸೇರಿದಂತೆ ಸೋಮವಾರ ಕರ್ನಾಟಕ ಬಂದ್ ಗೆ ಕ

ಎಸ್ ಎಸ್ ಎಲ್ ಸಿ ಯಲ್ಲಿ ರಾಮನಗರ ಎಂಟನೇ ಸ್ಥಾನ, ಚನ್ನಪಟ್ಟಣ ಮೊದಲನೇ ಸ್ಥಾನ
ರಾಮನಗರ:ಆ/10/20/ಸೋಮವರ. ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ನೆನ್ನೆ ಪ್ರಕಟವಾಗಿದ್ದು, ಪ್ರತಿ ಬಾರಿಯಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿ

ರಾಜ್ಯ ಮತ್ತು ತಾಲೂಕಿಗೆ ಟಾಪರ್ ಚನ್ನಪಟ್ಟಣ ತಾಲ್ಲೂಕಿನ ವಿದ್ಯಾರ್ಥಿನಿಯರು
ಚನ್ನಪಟ್ಟಣ:ಜು/೧೫/೨೦/ಬುಧವಾರ. ನಿನ್ನೆ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದ್ದು, ತಾಲೂಕಿನ ವಿದ್ಯಾರ್ಥಿನಿ ಬೃಂದಾ.ಜೆ.ಎನ್ ವಾಣಿಜ್ಯ

ಪಿಯುಸಿ ಫಲಿತಾಂಶ; ಉಕ ಜಿಲ್ಲೆ ಪ್ರಥಮ, ವಿಜಯಪುರ ಕೊನೆಯ ಸ್ಥಾನ. ೨೫ ನೇ ಸ್ಥಾನಕ್ಕೆ ಕುಸಿದ ರಾಮನಗರ
ಬೆಂಗಳೂರು:ಜು/೧೪/೨೦/ಮಂಗಳವಾರ. ಬಹುನಿರೀಕ್ಷಿತ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶೇ.೬೧.೮೦ ಫಲಿತಾಂಶ ಬಂದಿದೆ. ಇಂದು ಬೆಳಗ್ಗೆ ೧೧.

ಖಾಸಗಿ ಶಾಲಾ ಶಿಕ್ಷಕರಿಂದ ಎಸ್ಎಸ್ಎಲ್ ಸಿ ಮೌಲ್ಯಮಾಪನ ಕಡ್ಡಾಯಗೊಳಿಸದಿರಲು ಜಿಲ್ಲಾಧಿಕಾರಿ ಗೆ ಮನವಿ
ರಾಮನಗರ:ಜು/೦೮/೨೦/ಬುಧವಾರ. ಇಂದು ರಾಮನಗರ ಜಿಲ್ಲಾ ಖಾಸಗಿ ಶಾಲಾ ಶಿಕ್ಷಕರ ಒಕ್ಕೂಟದಿಂದ ಖಾಸಗಿ ಶಾಲಾ ಶಿಕ್ಷಕರಿಗೆ ಎಸ್ ಎಸ್ ಎಲ್ ಸಿ ಪರೀಕ್ಷಾ ಮ

ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಸಚಿವ ಸುರೇಶ್ ಕುಮಾರ್
ರಾಮನಗರ:ಜು/೦೧/೨೦/ಬುಧವಾರ. ರಾಮನಗರ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು

ಕೊರೊನಾ ಎಫೆಕ್ಟ್; ಮಾಹೆ ಶುಲ್ಕ ಹೊರತುಪಡಿಸಿ ಬೇರೆ ಶುಲ್ಕ ಪಡೆಯಲ್ಲ. ಬಾಲು ಶಾಲೆಯ ವೆಂಕಟ ಸುಬ್ಬಯ್ಯ ಚೆಟ್ಟಿ
ಚನ್ನಪಟ್ಟಣ:ಮೇ/೨೩/೨೦/ಶನಿವಾರ. ನನಗೆ ನಾಳೆ (ಮೇ ೨೪ ಭಾನುವಾರ) ಅರವತ್ತು ವರ್ಷ ತುಂಬುತ್ತದೆ. ನನಗೆ ಇಷ್ಟು ವಯಸ್ಸಾಯಿತು, ಆದರೆ ಹಿಂದುರಿಗಿ ನೋಡಿದಾಗ ಸಾಧನ

ಪದವಿ ಪ್ರವೇಶಾತಿಗೆ ಅರ್ಜಿ ಆಹ್ವಾನ
ರಾಮನಗರ:ಮೇ/೨೨/೨೦/ಶುಕ್ರವಾರ. ಸ್ನಾತಕೋತ್ತರ (ವಾರ್ಷಿಕ/ಸೆಮಿಸ್ಟರ್) ಪದವಿಗಳಾದ ಎಂ.ಎ., ಎಂ.ಕಾಂ., ಎಂ.ಬಿ.ಎ., ಎಂ.ಎಡ್, ಎಂ.ಲಿಬ್.ಐ.ಎಸ್ಸಿ, ಎಂ.ಎಸ್ಸಿ,

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬಹುಮಾನಕ್ಕೆ ಅರ್ಜಿ ಆಹ್ವಾನ
ರಾಮನಗರ:ಮೇ/೧೧/೨೦/ಸೋಮವಾರ.ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಜನವರಿ ೨೦೧೯ ರಿಂದ ಡಿಸೆಂಬರ್ ೨೦೧೯ ರವರೆಗೆ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ
ಪ್ರತಿಕ್ರಿಯೆಗಳು