ಕೋವಿಡ್ ಸಮಯದಲ್ಲಿ ರಕ್ತದಾನ ಸರ್ವದಾನಕ್ಕಿಂತಲೂ ಮಿಗಿಲು ಡಾ ಮೋಹನ್

ಚನ್ನಪಟ್ಟಣ:ಜೂ/೨೮/೨೦/ಭಾನುವಾರ. ರಕ್ತದಾನ ಮಹಾದಾನ ಎಂಬುದು ವೈದ್ಯೋಕ್ತಿ. ಅದರಲ್ಲೂ ಈ ಕೋವಿಡ್ ಸಮಯದಲ್ಲಿ ರಕ್ತ ದಾನ ಮಾಡುವುದು ಸರ್ವದಾನಗಳಿಗೂ ಮಿಗಿಲಾದದ್ದು. ಈ ದಿನ ರಕ್ತದಾನ ಮಾಡುವ ಎಲ್ಲರಿಗೂ ನಾವುಗಳು ನಮನಗಳನ್ನು ಸಲ್ಲಿಸಬೇಕು ಎಂದು ಗಂಗಪ್ಪ ಕ್ಲಿನಿಕ್ ನ ಡಾ ಮೋಹನ್ ಹೇಳಿದರು.
ಅವರು ಇಂದು ನಗರದ ಮಾತೃಶ್ರೀ ಆರ್ಥೋಫೆಡಿಕ್ ಆಸ್ಪತ್ರೆ, ಜೀವಾಮೃತ ರಕ್ತನಿಧಿ ಕೇಂದ್ರ ಹಾಗೂ ಮಾತೃಭೂಮಿ ಸೇವಾ ಫೌಂಡೇಶನ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದರು.
ಮೂಳೆ ತಜ್ಞ ಡಾ ಮಲವೇಗೌಡರು ಮಾತನಾಡಿ ಕಳೆದ ಏಳು ವರ್ಷಗಳಿಂದ, ಪ್ರತಿ ವರ್ಷವೂ ನಾವು ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡು ಬರುತ್ತಿದ್ದೇವೆ. ಇಷ್ಟು ವರ್ಷಗಳು ರೆಡ್ ಕ್ರಾಸ್ ಸಂಸ್ಥೆಗೆ ಸರಬರಾಜು ಆಗುತ್ತಿತ್ತು. ನಗರದಲ್ಲಿಯೇ ಬ್ಲಡ್ ಬ್ಯಾಂಕ್ ತಲೆ ಎತ್ತಿರುವುದರಿಂದ ಅವರಿಗೆ ಇಂದು ರಕ್ತ ನೀಡಲಾಗುವುದು. ಈ ರಕ್ತವು ಅವಶ್ಯವಿರುವ ನಮ್ಮ ತಾಲ್ಲೂಕಿನ ರೋಗಿಗಳಿಗೆ ಉಪಯೋಗವಾಗುವಂತಾಗಲಿ ಎಂದು ಆಶಿಸಿದರು.
ಕೋವಿಡ್ ಸಮಯವಾದ್ದರಿಂದ, ಜನರು ಭಯದಿಂದ ಹೊರಗೆ ಬಾರದಿರುವುದರಿಂದ ಹತ್ತೊಂಬತ್ತು (೧೯) ಮಂದಿ ಮಾತ್ರ ರಕ್ತದಾನ ಮಾಡಿದರು.
ಜೀವಾಮೃತ ರಕ್ತನಿಧಿ ಕೇಂದ್ರದ ಚಂದ್ರೇಗೌಡ ಮತ್ತು ಸಿಬ್ಬಂದಿಗಳು, ಮಾತೃಶ್ರೀ ಆರ್ಥೋಫೆಡಿಕ್ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಮಾತೃಭೂಮಿ ಸೇವಾ ಫೌಂಡೇಶನ್ ಮಹೇಶ್ ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in health »

ವಿಸ್ತರಿತ ಆಸ್ಪತ್ರೆಯಾಗಿ ಕಂದಾಯ ಭವನ ಮುಂದುವರಿಕೆ: ಡಿಸಿಎಂ ಅಶ್ವಥ್ ನಾರಾಯಣ
ರಾಮನಗರ:ಜು/೧೬/೨೦/ಗುರುವಾರ. ಕೋವಿಡ್-೧೯ ರೆಫೆರೆಲ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿರುವ ಕಂದಾಯ ಭವನವನ್ನು ಮುಂದಿನ ದಿನಗಳಲ್ಲಿ ವಿಸ್ತರಿತ ಆಸ್ಪ

ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿಗೆ ಉಪಮುಖ್ಯಮಂತ್ರಿಗಳಿಂದ ಎಚ್ಚರಿಕೆ
ಬೆಂಗಳೂರು/ರಾಮನಗರ:ಜು/೧೦/೨೦/ಶುಕ್ರವಾರ. ರಾಮನಗರ ಜಿಲ್ಲೆಯ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ವಿಳಂಬ ಮಾಡುತ್ತಿರುವ ರಾಜರಾಜೇಶ್ವರಿ ವೈದ್ಯಕ

ಕೋವಿಡ್ ಸಮಯದಲ್ಲಿ ರಕ್ತದಾನ ಸರ್ವದಾನಕ್ಕಿಂತಲೂ ಮಿಗಿಲು ಡಾ ಮೋಹನ್
ಚನ್ನಪಟ್ಟಣ:ಜೂ/೨೮/೨೦/ಭಾನುವಾರ. ರಕ್ತದಾನ ಮಹಾದಾನ ಎಂಬುದು ವೈದ್ಯೋಕ್ತಿ. ಅದರಲ್ಲೂ ಈ ಕೋವಿಡ್ ಸಮಯದಲ್ಲಿ ರಕ್ತ ದಾನ ಮಾಡುವುದು ಸರ್ವದಾನಗಳಿಗೂ

ಮಾನಸಿಕ ಖಾಯಿಲೆ ಮಾರಕವಲ್ಲ; ಮಾನಸಿಕ ತಜ್ಞ ಡಾ ಆದರ್ಶ
ಚನ್ನಪಟ್ಟಣ:ಜೂ/೧೦/೨೦/ಬುಧವಾರ. ಮಾನಸಿಕ ಖಾಯಿಲೆಯು ವಾಸಿಯಾಗುವ ಖಾಯಿಲೆಯಾಗಿದ್ದು ಆತಂಕ ಪಡಬೇಕಾಗಿಲ್ಲ. ಶೇಕಡಾ ೧೦ ರಷ್ಟು ಮಾನಸಿಕ ರೋಗಿಗಳು ನಮ್

ಕರ್ನಾಟಕ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧಿಸಲು ಸ್ವರಾಜ್ ಸಂಘಟನೆ ಮನವಿ
ಚನ್ನಪಟ್ಟಣ:ಮೇ/೧೬/೨೦/ಶನಿವಾರ. ಬಡ ಜನರು, ಕೂಲಿಕಾರ್ಮಿಕರು ನೆಮ್ಮದಿಯಿಂದ ಬದುಕಬೇಕಾದರೆ, ಹೆಂಡತಿ ಮಕ್ಕಳ ಮೇಲೆ ಕುಡಿದು ಬಂದವರು ದೌರ್ಜನ್ಯ ನಡೆ

ನಾಳೆ (ಮೇ ೧೬) ರಂದು ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ
ರಾಮನಗರ:ಮೇ/೧೫/೨೦/ಶುಕ್ರವಾರ. ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅನ್ವಯ ಡೆಂಗ್ಯೂ ನಿಯಂತ್ರಣದಲ್ಲಿ ರೋಗ ಪ್ರಸರಣ ಅವಧ

ರಾಮನಗರದಲ್ಲಿ ಟೆಲಿ ಐಸಿಯು ಸೇವೆ: ಡಾ. ಅಶ್ವತ್ಥನಾರಾಯಣ
ರಾಮನಗರ:ಮೇ/೧೧/೨೦/ಸೋಮವಾರ. ತುರ್ತು ನಿರ್ವಹಣಾ (ಐಸಿಯು) ಘಟಕ ನಿರ್ವಹಣೆಗೆ ಅಗತ್ಯ ಇರುವ ತಜ್ಞ ವೈದ್ಯರ ಕೊರತೆ ನೀಗಿಸಲು ಜಿಲ್ಲೆಯ ಕೊವಿಡ್-೧೯ ಆ

ಮಾನಸಿಕ ಆರೋಗ್ಯ ಸಮಸ್ಯೆ: ಶುಲ್ಕ ರಹಿತ ಸಹಾಯವಾಣಿ ಪ್ರಾರಂಭ
ರಾಮನಗರ:ಮೇ/೦೬/೨೦/ಬುಧವಾರ. ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ನಿಮ್ಹಾನ್ಸ್ ಸಂಸ್ಥೆ ವತಿಯಿಂದ ಕೊವಿಡ್-೧೯ ಸಾಂಕ್ರಾಮಿ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಜನಜಾಗೃತಿ ಅಭಿಯಾನ
ರಾಮನಗರ : ಕೊರೊನಾ ಸೋಂಕಿನಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ಈ ಸೋಂಕು ಹರಡುವಿಕೆ ತಡೆಗೆ ಸಾಮಾಜಿಕ ಅಂತರವೇ ಮದ್ದು ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ತಿಳಿಸಿದರು

ಹೆಚ್ಚಿನ ಬೆಲೆಯಲ್ಲಿ ಮಾಸ್ಕ್ ಮಾರಾಟ: ಶ್ರೀ ಲಕ್ಷ್ಮಿ ಮೆಡಿಕಲ್ಸ್ ಅಂಡ್ ಜನರಲ್ ಸ್ಟೋರ್ ಗೆ ೫ ಸಾವಿರ ರೂ.ಗಳ ದಂಡ
ರಾಮನಗರ:ಏ/೦೩/೨೦/ಶುಕ್ರವಾರ. ರಾಮನಗರದ ಐಜೂರಿನ ಪಿ.ಎಲ್.ಡಿ. ಬ್ಯಾಂಕ್ ಬಳಿಯಿರುವ ಶ್ರೀ ಲಕ್ಷ್ಮಿ ಮೆಡಿಕಲ್ಸ್ ಅಂಡ್ ಜನರಲ್ ಸ್ಟೋರ್ ಅವರು ಹೆಚ್ಚ
??????????????