Tel: 7676775624 | Mail: info@yellowandred.in

Language: EN KAN

    Follow us :


ಇಂದು ವಿಶ್ವ ದಾದಿಯರ ದಿನಾಚರಣೆ. ದಾದಿಯರನ್ನೂ ಬಿಡದ ಕೋವಿಡ್. ಅವರಿಗೊಂದು ಸಲಾಮ್

Posted date: 12 May, 2021

Powered by:     Yellow and Red

ಇಂದು ವಿಶ್ವ ದಾದಿಯರ ದಿನಾಚರಣೆ. ದಾದಿಯರನ್ನೂ ಬಿಡದ ಕೋವಿಡ್. ಅವರಿಗೊಂದು ಸಲಾಮ್

ಇಂದು ವಿಶ್ವ ದಾದಿಯರ ದಿನ. ಮೊದಲಿಗೆ ಅವರಿಗೊಂದು ಸಲಾಮು ಹೇಳಿಬಿಡೋಣಾ. ಹೆಂಗಸರನ್ನು ಸಿಸ್ಟರ್ ಎಂದು ಗಂಡಸರನ್ನು ಬ್ರದರ್ ಎಂದು ಸಂಬೋಧಿಸುವ ಮೂಲಕ ಒಟ್ಟಾರೆ ದಾದಿಯರೆಂದು ಕರೆಯುತ್ತಾರೆ. ಈ ದಾದಿಯರನ್ನೂ ಸಹ ಇಂದಿನ ಕೊರೊನಾ ಎಡೆಬಿಡದೆ ಕಾಡುತ್ತಿದ್ದು, ಅವರೂ ಸಹ ಜೀವ ಕೈಲಿಡಿದು ಕೆಲಸ ನಿರ್ವಹಿಸುತ್ತಿದ್ದಾರೆ.


ಇಂದು ಕೊರೊನಾ ಗೆ ಸಂಬಂಧಿಸಿದಂತೆ ಅವರ ಕೆಲಸದ ಬಗ್ಗೆ ಮಾಹಿತಿ ಪಡೆಯಲೋಸುಗ ನಾಲ್ಕಾರು ದಾದಿಯರನ್ನು ಹುಡುಕಿಕೊಂಡು ಹೋದೆ. ಅವರೆಲ್ಲಾ ಸಿಕ್ಕಿದರಾದರೂ ಕ್ಷಣವೂ ಪುರುಷೊತ್ತಿಲ್ಲದೆ ಕೆಲಸ ನಿರ್ವಹಿಸುತ್ತಿಸುತ್ತಿದುದರಿಂದ ಅವರನ್ನು ಮಾತನಾಡಿಸಲು ನಾನು ಹಿಂಜರಿದೆ. ಇದಕ್ಕೆ ಕಾರಣ ಅವರ ಕರ್ತವ್ಯ ನಿಷ್ಠೆ.


ಇಂದು ಸಹಸ್ರಾರು ಮಂದಿ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಕನಿಷ್ಠ 50 ರಿಂದ 100 ಮಂದಿಗೆ ಇಬ್ಬರೋ, ಮೂವರೋ ದಾದಿಯರು ಲಸಿಕೆ ನೀಡುತ್ತಾರೆ. ಅವರಲ್ಲಿ ಎಷ್ಟು ಮಂದಿಗೆ ಆ ಕ್ಷಣದಲ್ಲಿ ಸೋಂಕು ಇರುತ್ತೋ ಎನ್ನುವುದು ಗೊತ್ತಿರುವುದಿಲ್ಲ. ಈ ಲಸಿಕೆ ಹಾಕಿಸಿಕೊಳ್ಳುವ ಮಂದಿಯೂ ಸಹ ತುಂಬಾ ತರಾತುರಿಯಲ್ಲಿದ್ದು, ಒಬ್ಬರ ಮೇಲೊಬ್ಬರು ಮುಗಿಬಿದ್ದು ಹಾಕಿಸಿಕೊಳ್ಳಲು ಪ್ರಯತ್ನಿಸುತ್ತಾರೆ.


ಲಸಿಕೆ ಅಷ್ಟೇ ಅಲ್ಲಾ, ಯಾವುದೇ ರೋಗಿ ನಾಮುಂದು ತಾಮುಂದು ಎಂದೇ ಚಿಕಿತ್ಸೆ ಪಡೆಯಲು ಮುಂದಾಗುತ್ತಾನೆ. ಅವನ ಅವಸರಕ್ಕೆ ಇವರು ಬಲಿಪಶುಗಳಾಗುತ್ತಾರೆ. ಅದರಲ್ಲೂ ಅಪಘಾತ, ಆತ್ಮಹತ್ಯೆ ಯತ್ನದಂತಹ ಕೇಸುಗಳಲ್ಲಿ ಪೋಷಕರ ಗಲಾಟೆ ಹೆಚ್ಚಾಗಿರುತ್ತದೆ. ವೈದ್ಯರು ಸೇರಿದಂತೆ ಎಲ್ಲಾ ನರ್ಸ್ ಗಳು ಇಲ್ಲಿ ಬಲಿಪಶುವೇ. ಇದಕ್ಕೆ ಕೆಲ ವೈದ್ಯರು ಸರಳೋಪಾಯ ಕಂಡುಕೊಂಡಿದ್ದು, ಪೋಷಕರ ದಂಡನ್ನು ನೋಡಿದಾಗ ಇಲ್ಲಿ ಸೌಲಭ್ಯಗಳಿಲ್ಲ. ನೀವು ದೊಡ್ಡಾಸ್ಪತ್ರೆಗೆ ಹೋಗಿ ಎಂದು ಹೇಳಿ ಕೈತೊಳೆದುಕೊಳ್ಳುತ್ತಾರೆ.


ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಹಗಲಿರುಳೆನ್ನದೆ, ರೋಗರುಜಿನಗಳು ನಮಗೆ ಅಂಟುತ್ತವೆ ಎಂಬುದರ ಪರಿವೆಯಿಲ್ಲದೆ, ಕೋವಿಡ್ ಸಮಯದಲ್ಲಿ ಕೊರೊನಾ ಸೋಂಕಿತರಿಗೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಚಿಕಿತ್ಸೆ ನೀಡುತ್ತಿರುವ ನಮ್ಮ ದಾದಿಯರಿಗೆ ಸರ್ವ ರೋಗಿಗಳ  ಧನ್ಯವಾದಗಳನ್ನು ನಮ್ಮ ಪತ್ರಿಕಾ ಬಳಗದಿಂದ ಅರ್ಪಿಸುತ್ತೇವೆ.


ಇದೇ ಸಮಯದಲ್ಲಿ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾದಿಯವರ ಮೇಲ್ವಿಚಾರಕಿ ಸರಸ್ವತಿ ರವರ ನೇತೃತ್ವದಲ್ಲಿ ವಿಶ್ವ ದಾದಿಯರ ದಿನಾಚರಣೆಯನ್ನು ಕೇಕ್ ಕಟ್ ಮಾಡುವ ಮೂಲಕ ಆಚರಿಸಿದರು.


*ನಾವು ಸೇವೆಗಾಗಿಯೇ ಬಂದವರು. ಇಲ್ಲಿ ಯಾವುದೇ ರೀತಿಯ ರೋಗಿಗಳಿರಲಿ, ಮೈಯ್ಯೆಲ್ಲಾ ಹುಣ್ಣಾಗಿರುವವರಿರಲಿ, ಬಲಿ ಪಡೆಯುವ ಕೊರೋನಾ ಇರಲಿ ಅವರಿಗೆಲ್ಲಾ ಬದುಕುವ ಭರವಸೆ ನೀಡಿ, ವೈದ್ಯರ ಆದೇಶದ ಮೇರೆಗೆ ಸೂಕ್ತ ಚಿಕಿತ್ಸೆ ನೀಡುವುದು ನಮ್ಮ ಕರ್ತವ್ಯ. ರೋಗಿಗಳು ಮತ್ತು ಪೋಷಕರು ನಮಗೆ ಮೆಚ್ಚುಗೆ ನೀಡದಿದ್ದರೂ ಪರವಾಗಿಲ್ಲ, ಸಹಕರಿಸಿದರೆ ನಾವು ಧನ್ಯ ಎನ್ನುತ್ತಾರೆ. ಸದಾ ಲಸಿಕಾ ಕೇಂದ್ರದಲ್ಲೇ ಕೆಲಸ ನಿರ್ವಹಿಸುತ್ತಿರುವ ಸಾರ್ವಜನಿಕ ಆಸ್ಪತ್ರೆಯ ದಾದಿ ಶಾಂತಾ ಕೆ ರವರು*


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in health »

ಕೊರೊನಾ ಸಮಯದಲ್ಲಿ ರಕ್ತದ ಕೊರತೆಯಾಗಬಾರದು. ವ್ಯಾಕ್ಸಿನೇಷನ್‌ ಗೆ ಮೊದಲು ರಕ್ತದಾನ ಮಾಡಿ ಸಚಿವ ಸಿ ಪಿ ಯೋಗೇಶ್ವರ್
ಕೊರೊನಾ ಸಮಯದಲ್ಲಿ ರಕ್ತದ ಕೊರತೆಯಾಗಬಾರದು. ವ್ಯಾಕ್ಸಿನೇಷನ್‌ ಗೆ ಮೊದಲು ರಕ್ತದಾನ ಮಾಡಿ ಸಚಿವ ಸಿ ಪಿ ಯೋಗೇಶ್ವರ್

ಕೊರೊನಾ ಸಮಯದಲ್ಲಿ ಯೋಧರು ಸೇರಿದಂತೆ ಅಗತ್ಯವಿರುವ ರೋಗಿಗಳಿಗೆ ರಕ್ತದ ಕೊರತೆಯಾಗಬಾರದು. ಈ ನಿಟ್ಟಿನಲ್ಲಿ ಸರ್ವರೂ ಪಾಲ್ಗೊಂಡು ರಕ್ತದಾನ ಮಾಡಬೇಕು ಎಂದು ಪ್ರವಾಸೋದ್ಯಮ ಮತ್ತು ಜೀವಿಶಾಸ್ತ್ರ ಸಚಿವ ಸಿ ಪ

ಇಂದು ವಿಶ್ವ ದಾದಿಯರ ದಿನಾಚರಣೆ. ದಾದಿಯರನ್ನೂ ಬಿಡದ ಕೋವಿಡ್. ಅವರಿಗೊಂದು ಸಲಾಮ್
ಇಂದು ವಿಶ್ವ ದಾದಿಯರ ದಿನಾಚರಣೆ. ದಾದಿಯರನ್ನೂ ಬಿಡದ ಕೋವಿಡ್. ಅವರಿಗೊಂದು ಸಲಾಮ್

ಇಂದು ವಿಶ್ವ ದಾದಿಯರ ದಿನ. ಮೊದಲಿಗೆ ಅವರಿಗೊಂದು ಸಲಾಮು ಹೇಳಿಬಿಡೋಣಾ. ಹೆಂಗಸರನ್ನು ಸಿಸ್ಟರ್ ಎಂದು ಗಂಡಸರನ್ನು ಬ್ರದರ್ ಎಂದು ಸಂಬೋಧಿಸುವ ಮೂಲಕ ಒಟ್ಟಾರೆ ದಾದಿಯರೆಂದು ಕರೆಯುತ್ತಾರೆ. ಈ ದಾದಿಯರನ್ನೂ

ಹೋಟೆಲ್ ಗ್ರಾಹಕರಿಗೆ ವಿಶೇಷ ರೀತಿಯಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಕೈಗೊಂಡ ಗೋಕುಲ ಹೋಟೆಲ್ ಮಾಲೀಕ
ಹೋಟೆಲ್ ಗ್ರಾಹಕರಿಗೆ ವಿಶೇಷ ರೀತಿಯಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಕೈಗೊಂಡ ಗೋಕುಲ ಹೋಟೆಲ್ ಮಾಲೀಕ

ಕಳೆದ ವರ್ಷದಿಂದ ದಿನೇದಿನೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇತ್ತೀಚಿಗೆ ಚನ್ನಪಟ್ಟಣ ತಾಲ್ಲೂಕಿನಲ್ಲಿ ಶೂನ್ಯಕ್ಕೆ ಇಳಿದಿತ್ತು. ಈಗ ಮತ್ತೆ ಕೋವಿಡ್ ಎರಡನೆಯ ಅಲೆ ಶುರುವಾಗಿದ್ದು, ಕೇವಲ ಒಂದು

ವಿಸ್ತರಿತ ಆಸ್ಪತ್ರೆಯಾಗಿ ಕಂದಾಯ ಭವನ ಮುಂದುವರಿಕೆ: ಡಿಸಿಎಂ ಅಶ್ವಥ್ ನಾರಾಯಣ
ವಿಸ್ತರಿತ ಆಸ್ಪತ್ರೆಯಾಗಿ ಕಂದಾಯ ಭವನ ಮುಂದುವರಿಕೆ: ಡಿಸಿಎಂ ಅಶ್ವಥ್ ನಾರಾಯಣ

ರಾಮನಗರ:ಜು/೧೬/೨೦/ಗುರುವಾರ. ಕೋವಿಡ್-೧೯ ರೆಫೆರೆಲ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿರುವ ಕಂದಾಯ ಭವನವನ್ನು ಮುಂದಿನ ದಿನಗಳಲ್ಲಿ ವಿಸ್ತರಿತ ಆಸ್ಪ

ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿಗೆ ಉಪಮುಖ್ಯಮಂತ್ರಿಗಳಿಂದ ಎಚ್ಚರಿಕೆ
ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿಗೆ ಉಪಮುಖ್ಯಮಂತ್ರಿಗಳಿಂದ ಎಚ್ಚರಿಕೆ

ಬೆಂಗಳೂರು/ರಾಮನಗರ:ಜು/೧೦/೨೦/ಶುಕ್ರವಾರ. ರಾಮನಗರ ಜಿಲ್ಲೆಯ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ವಿಳಂಬ ಮಾಡುತ್ತಿರುವ ರಾಜರಾಜೇಶ್ವರಿ ವೈದ್ಯಕ

ಕೋವಿಡ್ ಸಮಯದಲ್ಲಿ ರಕ್ತದಾನ ಸರ್ವದಾನಕ್ಕಿಂತಲೂ ಮಿಗಿಲು ಡಾ ಮೋಹನ್
ಕೋವಿಡ್ ಸಮಯದಲ್ಲಿ ರಕ್ತದಾನ ಸರ್ವದಾನಕ್ಕಿಂತಲೂ ಮಿಗಿಲು ಡಾ ಮೋಹನ್

ಚನ್ನಪಟ್ಟಣ:ಜೂ/೨೮/೨೦/ಭಾನುವಾರ. ರಕ್ತದಾನ ಮಹಾದಾನ ಎಂಬುದು ವೈದ್ಯೋಕ್ತಿ. ಅದರಲ್ಲೂ ಈ ಕೋವಿಡ್ ಸಮಯದಲ್ಲಿ ರಕ್ತ ದಾನ ಮಾಡುವುದು ಸರ್ವದಾನಗಳಿಗೂ

ಮಾನಸಿಕ ಖಾಯಿಲೆ ಮಾರಕವಲ್ಲ; ಮಾನಸಿಕ ತಜ್ಞ ಡಾ ಆದರ್ಶ
ಮಾನಸಿಕ ಖಾಯಿಲೆ ಮಾರಕವಲ್ಲ; ಮಾನಸಿಕ ತಜ್ಞ ಡಾ ಆದರ್ಶ

ಚನ್ನಪಟ್ಟಣ:ಜೂ/೧೦/೨೦/ಬುಧವಾರ. ಮಾನಸಿಕ ಖಾಯಿಲೆಯು ವಾಸಿಯಾಗುವ ಖಾಯಿಲೆಯಾಗಿದ್ದು ಆತಂಕ ಪಡಬೇಕಾಗಿಲ್ಲ. ಶೇಕಡಾ ೧೦ ರಷ್ಟು ಮಾನಸಿಕ ರೋಗಿಗಳು ನಮ್

ಕರ್ನಾಟಕ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧಿಸಲು ಸ್ವರಾಜ್ ಸಂಘಟನೆ ಮನವಿ
ಕರ್ನಾಟಕ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧಿಸಲು ಸ್ವರಾಜ್ ಸಂಘಟನೆ ಮನವಿ

ಚನ್ನಪಟ್ಟಣ:ಮೇ/೧೬/೨೦/ಶನಿವಾರ. ಬಡ ಜನರು, ಕೂಲಿಕಾರ್ಮಿಕರು ನೆಮ್ಮದಿಯಿಂದ ಬದುಕಬೇಕಾದರೆ, ಹೆಂಡತಿ ಮಕ್ಕಳ ಮೇಲೆ ಕುಡಿದು ಬಂದವರು ದೌರ್ಜನ್ಯ ನಡೆ

ನಾಳೆ (ಮೇ ೧೬) ರಂದು ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ
ನಾಳೆ (ಮೇ ೧೬) ರಂದು ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ

ರಾಮನಗರ:ಮೇ/೧೫/೨೦/ಶುಕ್ರವಾರ. ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅನ್ವಯ ಡೆಂಗ್ಯೂ ನಿಯಂತ್ರಣದಲ್ಲಿ ರೋಗ ಪ್ರಸರಣ ಅವಧ

ರಾಮನಗರದಲ್ಲಿ ಟೆಲಿ ಐಸಿಯು ಸೇವೆ: ಡಾ. ಅಶ್ವತ್ಥನಾರಾಯಣ
ರಾಮನಗರದಲ್ಲಿ ಟೆಲಿ ಐಸಿಯು ಸೇವೆ: ಡಾ. ಅಶ್ವತ್ಥನಾರಾಯಣ

ರಾಮನಗರ:ಮೇ/೧೧/೨೦/ಸೋಮವಾರ. ತುರ್ತು ನಿರ್ವಹಣಾ (ಐಸಿಯು) ಘಟಕ ನಿರ್ವಹಣೆಗೆ ಅಗತ್ಯ ಇರುವ ತಜ್ಞ ವೈದ್ಯರ ಕೊರತೆ ನೀಗಿಸಲು ಜಿಲ್ಲೆಯ ಕೊವಿಡ್-೧೯ ಆ

Top Stories »  


Top ↑