ಸಮರ್ಥನಂ ಸಂಸ್ಥೆಯ ಸೇವೆ ಶ್ಲಾಘನೀಯ ಡಾ. ವೇಣುಗೋಪಾಲ್

ಚನ್ನಪಟ್ಟಣ ತಾಲ್ಲೂಕು, ಬಿ.ವಿ.ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಎಸ್.ಬಿ.ಸಿ.ಸಿ ಘಟಕ ಮತ್ತು ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ಜಾಗೃತಿ ಕಾರ್ಯಕ್ರಮ ಮತ್ತು ಆರೋಗ್ಯ ಪರಿಕರ ವಿತರಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ವೇಣುಗೋಪಾಲ್ ಮಾತನಾಡಿ ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ಅಭಿಯಾನದ ಯೋಜನೆ ವ್ಯಾಪ್ತಿಯಲ್ಲಿ ಬರುವ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಮತ್ತು ಶುಚಿತ್ವ ಕಿಟ್‌ಗಳನ್ನು ಈಗಾಗಲೇ ನೀಡಲಾಗಿದ್ದು ಕೋವಿಡ್ ಸಂದರ್ಭದಲ್ಲಿ ಲಸಿಕಾಕರಣ, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಈ ದಿನ ನಮ್ಮ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಪರಿಕರಗಳನ್ನು ಕೊಡುಗೆ ನೀಡುತ್ತಿದ್ದು ಸಮರ್ಥನಂ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಸಂಯೋಜಕರಾದ ಶಿವರಾಜು ಮಾತನಾಡುತ್ತಾ ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಎಲ್&ಟಿ ಟೆಕ್ನಾಲಜಿ ಸರ್ವಿಸಸ್ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್-19 ಲಸಿಕೆ ಬಗ್ಗೆ ಅರಿವು ಮೂಡಿಸುವ ಅಭಿಯಾನದ ಅಂಗವಾಗಿ ತಾಲ್ಲೂಕಿನ ಬಿ.ವಿ.ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯವಾದ ಆರೋಗ್ಯ ಪರಿಕರಗಳ ವಿತರಣೆ ಮಾಡಲಾಗುತ್ತಿದೆ. ಲಸಿಕಾ ಕೇಂದ್ರಕ್ಕೆ ಬರುವ ಹಿರಿಯ ನಾಗರೀಕರು, ವಿಕಲಚೇತನರು ಮತ್ತು ಸಾರ್ವಜನಿಕರಿಗೆ ಲಸಿಕೆ ಕೇಂದ್ರಕ್ಕೆ ಬರಲು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಕೋವಿಡ್ ಸಂದರ್ಭದಲ್ಲಿ ಅನೇಕ ಸೇವೆಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಇನ್ನು ಹೆಚ್ಚಿನ ಸೇವೆಯನ್ನು ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್ ಗಂಗಾಧರ್ ಮಾತನಾಡಿ, ಸಮರ್ಥನಂ ಅಂಗವಿಕಲ ಸಂಸ್ಥೆಯ ಪ್ರತಿನಿಧಿಗಳು ಸಂಚಾರಿ ವಾಹನದ ಮೂಲಕ ಸಮುದಾಯದಲ್ಲಿ ಲಸಿಕೆ ಬಗ್ಗೆ ಇರುವ ಭಯ, ಆತಂಕ ಮತ್ತು ತಪ್ಪು ಅಭಿಪ್ರಾಯಗಳನ್ನು ನಿವಾರಿಸಿ ಲಸಿಕೆಯ ಮಹತ್ವದ ಬಗ್ಗೆ ತಿಳಿಸಿ ಈಗಾಗಲೇ ಅಸ್ಥಿತ್ವದಲ್ಲಿರುವ ಸರ್ಕಾರಿ ಕರೋನಾ ಲಸಿಕಾ ಕೇಂದ್ರಗಳು ಹಾಗೂ ನಾಗರೀಕರ ನಡುವೆ ಸಮನ್ವಯ ಸಾಧಿಸಿ ಲಸಿಕೆ ಪಡೆಯಲು ಅರ್ಹ ನಾಗರೀಕರ ನೋಂದಣಿ ಮತ್ತು ಲಸಿಕೆ ಪಡೆಯುವಲ್ಲಿ ಸಹಕರಿಸಿ ಕಾರ್ಯಕ್ರಮದ ಯಶಸ್ಸಿಗೆ ನೆರವಾಗುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಡಾ. ವೇಣುಗೋಪಾಲ್, ಸಂಯೋಜಕರಾದ ಶಿವರಾಜು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ, ಬಿ.ಎಸ್ ಗಂಗಾಧರ್, ಎಸ್.ಬಿ.ಸಿ.ಸಿ ಸಂಯೋಜಕರಾದ ಸುರೇಶ್ ಬಾಬು, ಲ್ಯಾಬ್ ತಾಂತ್ರಿಕ ಅಧಿಕಾರಿ ಸೌಭಾಗ್ಯ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ದುಂಡಮ್ಮ, ಸಮರ್ಥನಂ ಅಂಗವಿಕಲರ ಸಂಸ್ಥೆಯ ನಾಗೇಂದ್ರ, ಚಂದ್ರು, ಆರೋಗ್ಯಸಿಬ್ಬಂದಿ, ಆಶಾ –ಅಂಗನವಾಡಿ ಕಾರ್ಯಕರ್ತೆಯರು, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in health »

ಮೆದುಳು ಜ್ವರ ನಿಯಂತ್ರಣಕ್ಕೆ ಸಹಕರಿಸಲು ಮನವಿ: ಡಾ. ಶಶಿಧರ್
ರಾಮನಗರ, ಮೇ 22: ಮೆದುಳು ಜ್ವರವು ವೈರಾಣುವಿನಿಂದ ಬರುವ ರೋಗವಾಗಿದ್ದು ಹೆಚ್ಚಾಗಿ ಮಕ್ಕಳು ಈ ರೋಗಕ್ಕೆ ತುತ್ತಾಗುತ್ತಾರೆ. ಕೆಲವರಿಗೆ ನರ ದೌರ್ಬಲ್ಯ

ಜಿಲ್ಲೆಯಲ್ಲಿ ಕ್ಷಯ ರೋಗ ನಿರ್ಮೂಲನೆ ಮಾಡಲು ಸೂಕ್ತ ಕ್ರಮ ವಹಿಸಿ: ಚಿಕ್ಕಸುಬ್ಬಯ್ಯ
ರಾಮನಗರ, ಮೇ೨೧: ಕ್ಷಯರೋಗದಿಂದ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ವಿನಾಶಕಾರಿ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕ್ಷಯ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ಪ್ರಯತ್ನಗಳು

ಮಾ.16 ರಂದು 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ
ರಾಮನಗರ ಮಾ.15: ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೋರ್ಬಿವ್ಯಾಕ್ಸ್ ಲಸಿಕಾ ಅಭಿಯಾನದಡಿಯಲ್ಲಿ ಕೋವಿ

ಸಮರ್ಥನಂ ಸಂಸ್ಥೆಯ ಸೇವೆ ಶ್ಲಾಘನೀಯ ಡಾ. ವೇಣುಗೋಪಾಲ್
ಚನ್ನಪಟ್ಟಣ ತಾಲ್ಲೂಕು, ಬಿ.ವಿ.ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಎಸ್.ಬಿ.ಸಿ.ಸಿ ಘಟಕ ಮತ್ತು ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ಜಾಗೃತಿ ಕಾರ್ಯಕ್ರಮ ಮತ್ತು ಆರೋಗ್ಯ ಪರಿಕರ ವಿತರಣ

ಜನವರಿ 10 ರಿಂದ 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಬೂಸ್ಟರ್ ಡೋಸ್
ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಸಹ ಅಸ್ವಸ್ಥತೆ ಹೊಂದಿರುವ ಫಲಾನುಭವಿಗಳಿಗೆ ಜನವರಿ 10 ರಿಂದ ಹಂತ ಹಂತವಾಗಿ ಕೋವಿಡ್-19 ಮುನ್ನೆಚ್ಚ

ವಿದ್ಯಾರ್ಥಿಗಳಿಗೆ ಏಡ್ಸ್ ಮುಕ್ತ ಸಮಾಜ ನಿರ್ಮಿಸಲು ಸಲಹೆ - ಡಾ. ಕುಮಾರ್
ರಾಮನಗರ, ಡಿ:22/21. ಜಿಲ್ಲಾಡಳಿತ ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ

ವಿದ್ಯಾರ್ಥಿಗಳಿಗೆ ಏಡ್ಸ್ ಮುಕ್ತ ಸಮಾಜ ನಿರ್ಮಿಸಲು ಸಲಹೆ - ಡಾ. ಕುಮಾರ್
ರಾಮನಗರ, ಡಿ:22/21. ಜಿಲ್ಲಾಡಳಿತ ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ

ಪರಿಸರ ಉಳಿದರೆ ಮನು ಸಂಕುಲ ಉಳಿಯಲು ಸಾಧ್ಯ. ಸಚಿವ ಸಿ ಪಿ ಯೋಗೇಶ್ವರ್
ನಮ್ಮ ಪೂರ್ವಜರು ಪರಿಸರಕ್ಕೆ ಬಹಳ ಒತ್ತು ನೀಡಿದ್ದರು. ಅವರ ಜಮೀನಿನ ಜೊತೆಗೆ ರಸ್ತೆ ಬದಿಯಲ್ಲಿಯೂ ಸಹ ಗಿಡಗಳನ್ನು ನೆಟ್ಟು ಪೋಷಿಸಿತ್ತಿದ್ದರು. ಎಲ್ಲಿ ಒಂದು ಆಲದ ಮರ ಕಡಿದರೂ ಸಹ, ಅದೇ ಆಲದ ಮರದ ಹತ್ತಾರ

ವಾರದಲ್ಲಿ ಎರಡು ದಿನ ವಿಶೇಷ ಲಸಿಕೆ ಅಭಿಯಾನ:ಜಿಲ್ಲೆಯಲ್ಲಿ ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಎಚ್ಚರಿಕೆ ವಹಿಸಿ : ಡಾ.ರಾಕೇಶ್ ಕುಮಾರ್
ರಾಮನಗರ, ಜುಲೈ.01. ಮಕ್ಕಳಿಗೆ ನೀಡಲಾಗುವ ಬಿ.ಸಿ.ಜಿ, ಪೆಂಟಾವೆಲೆಂಟ್ ದಡಾರಾ ರುಬೆಲ್ಲಾ, ಡಿ.ಟಿ.ಪಿ ವರ್ಧಕ ಮುಂತಾದ ಲಸಿಕೆಯನ್ನು ನೀಡಲು ವಾರದಲ್ಲಿ ಎರಡು ದಿನ, ಮಂಗಳವಾರ ಮತ್ತು ಬುಧವಾರ

ದೊಡ್ಡಮರಳವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇ.ಸಿ.ಜಿ. ಸೇವೆ ಸಿಇಓ ಇಕ್ರಂ
- ಗ್ರಾಮೀಣ ಪ್ರದೇಶದ ಜನರಿಗೆ ಎಲ್ಲಾ ರೀತಿಯ ಆರೋಗ್ಯ ಸೇವೆಗಳು ದೊರೆಯಬೇಕು ಎಂಬ ದೃಷ್ಟಿಯಿಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಅವರು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆರೋಗ್ಯ ಸೇವೆಗೆ ಬೇಕಿರುವ
ಪ್ರತಿಕ್ರಿಯೆಗಳು