ಜಿಲ್ಲೆಯಲ್ಲಿ ಕ್ಷಯ ರೋಗ ನಿರ್ಮೂಲನೆ ಮಾಡಲು ಸೂಕ್ತ ಕ್ರಮ ವಹಿಸಿ: ಚಿಕ್ಕಸುಬ್ಬಯ್ಯ

ರಾಮನಗರ, ಮೇ೨೧: ಕ್ಷಯರೋಗದಿಂದ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ವಿನಾಶಕಾರಿ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕ್ಷಯ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ಪ್ರಯತ್ನಗಳು ಜರುಗಬೇಕು ಎಂದು ಮುಖ್ಯ ಯೋಜನಾಧಿಕಾರಿ ಚಿಕ್ಕ ಸುಬ್ಬಯ್ಯ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾ ಕ್ಷಯ ನಿರ್ಮೂಲನಾಧಿಕಾರಿಗಳ ಕಚೇರಿ ವತಿಯಿಂದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ಷಯ ವೇದಿಕೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ಷಯರೋಗ ಪತ್ತೆ ಹಾಗೂ ಕ್ಷಯ ರೋಗ ಲಕ್ಷಣ ಕಂಡು ಬಂದವರಿಗೆ ಆರಂಭಿಕ ಸೂಕ್ತ ಚಿಕಿತ್ಸೆ ನೀಡುವುದರ ಮೂಲಕ ಕ್ಷಯರೋಗದ ನಿರ್ಮೂಲನೆ ಮಾಡಬಹುದು ಎಂದರು.
ಜಿಲ್ಲಾ ಅರೋಗ್ಯಧಿಕಾರಿ ಡಾ ನಿರಂಜನ್ ಅವರು ಮಾತನಾಡಿ ಕ್ಷಯರೋಗದ ಆರಂಭಿಕ ತಪಾಸಣೆ, ಪರೀಕ್ಷೆಗೆ ಒಳಗಾದರೆ ಶೀಘ್ರವೇ ಗುಣಮುಖರಾಗಬಹುದು. ಕ್ಷಯ ರೋಗ ಮತ್ತೊಬ್ಬರಿಗೆ ಹರಡುವುದನ್ನು ತಪ್ಪಿಸಬಹುದು. ಈ ಬಗ್ಗೆ ಶಾಲಾ-ಕಾಲೇಜು ಸೇರಿದಂತೆ ಸಾರ್ವಜನಿಕವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು. ಜಿಲ್ಲೆಯಲ್ಲಿ ಕ್ಷಯ ರೋಗಿಗಳಿಗೆ ಪ್ರತ್ಯೇಕ ಬೆಡ್ ವ್ಯವಸ್ಥೆ ಕಲ್ಪಿಸಿಬೇಕು ಎಂದರು.
ಕ್ಷಯರೋಗ ಪ್ರತಿನಿಧಿಯಾದ ಸ್ಪೂರ್ತಿ ಅವರು ಮಾತನಾಡಿ ಮಕ್ಕಳಲ್ಲಿ ಕ್ಷಯರೋಗ ಪತ್ತೆಗೆ ಸ್ಯಾಂಪಲ್ ಸಂಗ್ರಹಿಸುವುದು ಕಷ್ಟಕರವಾಗಿದೆ. ಮಕ್ಕಳ ತಜ್ಞರು ವಿಶೇಷ ಕಾಳಜಿಯಿಂದ ಈ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಹೆಚ್ ಐ ವಿ ಸೋಂಕು ಹೊಂದಿರುವ ಗರ್ಭಿಣಿಯರಿಗೆ ಹೆರಿಗೆ ಸೌಲಭ್ಯವನ್ನು ಒದಗಿಸುವಂತೆ ಮಾಡಬೇಕು ಎಂದರು. ಜಿಲ್ಲೆಯಲ್ಲಿ ಪ್ರತ್ಯೇಕ ರಕ್ತ ನಿಧಿ ಸ್ಥಾಪಿಸಿಕೊಡಬೇಕು ಎಂದು ಡಿ. ಟಿ. ಓ ಕುಮಾರ್ ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸರ್ವೇಕ್ಷಣಾಧಿಕಾರಿ ಡಾ ಕಿರಣ್, ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಬಿ. ಎಸ್ ಗಂಗಾಧರ್, ತಾಲ್ಲೂಕು ಅರೋಗ್ಯಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ತಾಲ್ಲೂಕು ಆಸ್ಪತ್ರೆ ವೈದ್ಯಧಿಕಾರಿಗಳು, ನೋಡಲ್ ಅಧಿಕಾರಿಗಳು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in health »

ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಯಶಸ್ವಿ ಸಂಕಿರ್ಣ ಮತ್ತು ಪರಿಣಾಮಕಾರಿ ``ಟ್ರೂ ನೈಫ್ ವಿಧಾನದ ಚಿಕಿತ್ಸೆ
ರಾಮನಗರ: ಡಿ-17; ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕರು ಯುವ ರೋಗಿಯೊಬ್ಬನಿಗೆ ಉನ್ನತ ರೆಡಿಯೋ ಥೆರಪಿ ಟ್

ಗ್ಯಾಂಗ್ರೀನ್ ಆಗಿದ್ದ ಪತಿಯ ಕಾಲನ್ನು ಕತ್ತರಿಸಿ ಪತ್ನಿ ಕೈ ಗಿಟ್ಟ ಮಿಮ್ಸ್ ಆಸ್ಪತ್ರೆ. ಸಾರ್ವಜನಿಕರ ಆಕ್ರೋಶ
ಮಂಡ್ಯ: ಮಂಡ್ಯ ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಗ್ಯಾಂಗ್ರೀನ್ ಆಗಿದ್ದ ಕಾಲನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದು, ಬಳಿಕ ಆಸ್ಪತ

ಬಾಲು ಆಸ್ಪತ್ರೆಯಲ್ಲಿನ ಸ್ಕ್ಯಾನಿಂಗ್ ಕೊಠಡಿಗೆ ಬೀಗ ಜಡಿದ ಭ್ರೂಣ ಹತ್ಯೆ ಜಾಗೃತ ದಳ
ಚನ್ನಪಟ್ಟಣ: ನಗರದ ಪ್ರತಿಷ್ಠಿತ ಬಾಲು ಆಸ್ಪತ್ರೆಗೆ ಕರ್ನಾಟಕ ಸರ್ಕಾರದ ಭ್ರೂಣ ಹತ್ಯೆ ಮತ್ತು ಭ್ರೂಣ ಲಿಂಗ ಪತ್ತೆ ಜಾಗೃತ ದಳದ ಅಧಿಕಾರಿಗಳು ದಿಢೀ

ಸ್ತನ್ಯಪಾನ ತಾಯಿ-ಮಗುವಿನ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುತ್ತದೆ: ಡಾ. ಚಂದ್ರಶೇಖರಯ್ಯ
ರಾಮನಗರ, ಆ.04: ಎದೆ ಹಾಲಿನ ಮಹತ್ವ, ಹಾಲುಣಿಸುವಿಕೆ ಮತ್ತು ಮಕ್ಕಳ ಆರೈಕೆ ಕುರಿತು ಜಾಗೃತಿಯನ್ನು ಮೂಡಿಸುತ್ತಿದ್ದು, ತಾವೆಲ್ಲರೂ ಮಾಹಿತಿಯನ್ನು

ಚಂದ್ರು ಡಯಾಗ್ನೋಷಟಿಕ್ ನಿಂದ ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ ನೂತನ ತಂತ್ರಜ್ಞಾನದ ಎಂಆರ್ಐ ಸ್ಯ್ಕಾನಿಂಗ್
ಚನ್ನಪಟ್ಟಣ.ಆ.೦೨: ಜಿಲ್ಲೆಯಲ್ಲಿ ಕಳೆದ ೨೫ ವರ್ಷಗಳಿಂದ ಗುಣಮಟ್ಟದ ಪ್ರಯೋಗಲಾಯ ಸೇವೆ ನೀಡುತ್ತಿರುವ ಚಂದ್ರ ಡಯಾಗ್ನೋಷ್ಟಿಕ್ ಸೆಂಟರ್ ವತಿಯಿಂದ ಜ

ಹೆಂಗಸರಲ್ಲೇ ವಿಶೇಷವಾಗಿ ಯುವತಿಯರಲ್ಲೇ ಸ್ಥೂಲಕಾಯ ಹೆಚ್ಚು ಡಾ ಪುನೀತ್
ಚನ್ನಪಟ್ಟಣ: ದೇಶದಲ್ಲಿ ಪುರುಷರಿಗಿಂತ ಮಹಿಳೆಯರಲ್ಲೇ ಸ್ಥೂಲಕಾಯ ಹೆಚ್ಚಾಗಿದ್ದು, ವಿಶೇಷವಾಗಿ ಯುವತಿಯರಲ್ಲಿ ಹೆಚ್ಚಾಗುತ್ತಿದೆ ಎಂದು ನಗರದ ಸಾರ್ವ

ಜಿಲ್ಲೆಯಲ್ಲಿ ಕ್ಷಯ ರೋಗ ನಿರ್ಮೂಲನೆ ಮಾಡಲು ಸೂಕ್ತ ಕ್ರಮ ವಹಿಸಿ: ಚಿಕ್ಕಸುಬ್ಬಯ್ಯ
ರಾಮನಗರ, ಮೇ೨೧: ಕ್ಷಯರೋಗದಿಂದ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ವಿನಾಶಕಾರಿ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕ್ಷಯ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ಪ್ರಯತ್ನಗಳು

ಮಾ.16 ರಂದು 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ
ರಾಮನಗರ ಮಾ.15: ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೋರ್ಬಿವ್ಯಾಕ್ಸ್ ಲಸಿಕಾ ಅಭಿಯಾನದಡಿಯಲ್ಲಿ ಕೋವಿ

ಸಮರ್ಥನಂ ಸಂಸ್ಥೆಯ ಸೇವೆ ಶ್ಲಾಘನೀಯ ಡಾ. ವೇಣುಗೋಪಾಲ್
ಚನ್ನಪಟ್ಟಣ ತಾಲ್ಲೂಕು, ಬಿ.ವಿ.ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಎಸ್.ಬಿ.ಸಿ.ಸಿ ಘಟಕ ಮತ್ತು ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ಜಾಗೃತಿ ಕಾರ್ಯಕ್ರಮ ಮತ್ತು ಆರೋಗ್ಯ ಪರಿಕರ ವಿತರಣ

ಜನವರಿ 10 ರಿಂದ 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಬೂಸ್ಟರ್ ಡೋಸ್
ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಸಹ ಅಸ್ವಸ್ಥತೆ ಹೊಂದಿರುವ ಫಲಾನುಭವಿಗಳಿಗೆ ಜನವರಿ 10 ರಿಂದ ಹಂತ ಹಂತವಾಗಿ ಕೋವಿಡ್-19 ಮುನ್ನೆಚ್ಚ
ಪ್ರತಿಕ್ರಿಯೆಗಳು