Tel: 7676775624 | Mail: info@yellowandred.in

Language: EN KAN

    Follow us :


ಗ್ಯಾಂಗ್ರೀನ್​ ಆಗಿದ್ದ ಪತಿಯ ಕಾಲನ್ನು ಕತ್ತರಿಸಿ ಪತ್ನಿ ಕೈ ಗಿಟ್ಟ ಮಿಮ್ಸ್ ಆಸ್ಪತ್ರೆ. ಸಾರ್ವಜನಿಕರ ಆಕ್ರೋಶ

Posted date: 07 Sep, 2022

Powered by:     Yellow and Red

ಗ್ಯಾಂಗ್ರೀನ್​ ಆಗಿದ್ದ ಪತಿಯ ಕಾಲನ್ನು ಕತ್ತರಿಸಿ ಪತ್ನಿ ಕೈ ಗಿಟ್ಟ ಮಿಮ್ಸ್ ಆಸ್ಪತ್ರೆ. ಸಾರ್ವಜನಿಕರ ಆಕ್ರೋಶ

ಮಂಡ್ಯ: ಮಂಡ್ಯ ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಗ್ಯಾಂಗ್ರೀನ್​ ಆಗಿದ್ದ ಕಾಲನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದು, ಬಳಿಕ ಆಸ್ಪತ್ರೆ ಸಿಬ್ಬಂದಿ ಕತ್ತರಿಸಿ ತೆಗೆದ ಕಾಲಿನ ಭಾಗವನ್ನು ರೋಗಿಯ ಪತ್ನಿಗೆ ಕೊಟ್ಟಿದ್ದಾರೆ. ಇದು ಆಸ್ಪತ್ರೆಯಲ್ಲಿನ ಆಡಳಿತ ಮಂಡಳಿ ನಡೆಯನ್ನು ಬಿಂಬಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಗ್ಯಾಂಗ್ರೀನ್‌ನಿಂದ ಬಳಲುತ್ತಿದ್ದ ಪತಿಯ ಕಾಲು ಕತ್ತರಿಸಿ, ಆಸ್ಪತ್ರೆಯ ಸಿಬ್ಬಂದಿ ಅದನ್ನು ಪತ್ನಿಯ ಕೈಗಿಟ್ಟ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಕತ್ತರಿಸಿ ತೆಗೆದ ಕಾಲಿನ ಭಾಗವನ್ನು ರೋಗಿಯ ಪತ್ನಿಗೆ ಕೊಟ್ಟಿದ್ದ ಸುದ್ದಿ ಎಲ್ಲೆಡೆ ವ್ಯಾಪಿಸುತ್ತಿದ್ದಂತೆ ಎಚ್ಚೆತ್ತ ಆಸ್ಪತ್ರೆ ಆಡಳಿತಾಧಿಕಾರಿಗಳು ಅದನ್ನು ವಾಪಸ್ ಪಡೆದಿದ್ದಲ್ಲದೆ, ಸ್ಪಷ್ಟನೆಯನ್ನೂ ನೀಡಿದ್ದಾರೆ.


ಮಂಡ್ಯದ ಕೀಲಾರ ಗ್ರಾಮದ ಪ್ರಕಾಶ್ ಎಂಬವರು ಗ್ಯಾಂಗ್ರೀನ್​ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಮಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ನೀಡಿದ ವೈದ್ಯರು ಗ್ಯಾಂಗ್ರೀನ್​ ಆಗಿದ್ದ ಕಾಲನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದಿದ್ದರು. ಆದರೆ ಅದಾದ ಬಳಿಕ ಆಸ್ಪತ್ರೆ ಸಿಬ್ಬಂದಿ ಕತ್ತರಿಸಲಾಗಿದ್ದ ಕಾಲಿನ ಭಾಗವನ್ನು ತಂದು ಪ್ರಕಾಶ್ ಅವರ ಪತ್ನಿ ಭಾಗ್ಯಮ್ಮ ಅವರಿಗೆ ಕೊಟ್ಟಿದ್ದರು.


ಏಕಾಏಕಿ ಹೀಗೆ ಕತ್ತರಿಸಿದ್ದ ಕಾಲನ್ನು ತಂದು ಕೈಗಿಟ್ಟಿದ್ದರಿಂದ ತಬ್ಬಿಬ್ಬಾದ ಭಾಗ್ಯಮ್ಮ ಏನು ಮಾಡಬೇಕು ಎಂದು ತೋಚದೆ ಅಳುತ್ತಿದ್ದರು. ಅಲ್ಲದೆ ಆ ಕಾಲನ್ನು ನೀವೇ ಎಲ್ಲಾದರೂ ಮಣ್ಣು ಮಾಡಿ, ನಾವೇ ಮಾಡಬೇಕೆಂದರೆ ಸಾವಿರಾರು ರೂ. ಖರ್ಚಾಗುತ್ತದೆ ಎಂದು ಆಸ್ಪತ್ರೆಯ ಆ ಸಿಬ್ಬಂದಿ ಭಾಗ್ಯಮ್ಮಗೆ ಹೇಳಿ ಉದ್ದಟತನ ತೋರಿಸಿದ್ದರು.


ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಮಂಡ್ಯದ ಮಿಮ್ಸ್​ ನಿರ್ದೇಶಕ ಡಾ.ಮಹೇಂದ್ರ ಸ್ಪಷ್ಟನೆ ನೀಡಿದ್ದು, ರೋಗಿಯ ಮೊಣಕಾಲಿನ ಕೆಳಭಾಗವನ್ನು ತೆಗೆಯಲಾಗಿತ್ತು. ವೈದ್ಯಕೀಯ ನಿಯಮಗಳ ಪ್ರಕಾರ ಅದನ್ನು ಸಂಬಂಧಿತ ಏಜೆನ್ಸಿಯವರ ಮೂಲಕವೇ ವಿಲೇವಾರಿ ಮಾಡಿಸಬೇಕು. ಆದರೆ ಕತ್ತರಿಸಿದ ಕಾಲಿನ ಭಾಗವನ್ನು ದುರದೃಷ್ಟವಶಾತ್​ ಡಿ ಗ್ರೂಪ್ ಸಿಬ್ಬಂದಿ ರೋಗಿಯ ಪತ್ನಿಗೆ ನೀಡಿದ್ದಾರೆ. ಆಕೆ ಗಾಬರಿಯಾಗಿ ಕಣ್ಣೀರು ಹಾಕಿದ್ದಾರೆ. ಅದು ನನ್ನ ಗಮನಕ್ಕೆ ಬರುತ್ತಿದ್ದಂತೆ ವಾಪಸ್ ಪಡೆಯಲಾಗಿದೆ. ಅದನ್ನು ನಿಯಮ ಪ್ರಕಾರ ವಿಲೇ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.


ಇನ್ನು ಈ ಪ್ರಕರಣ ಸಂಬಂಧ 24 ಗಂಟೆಯೊಳಗೆ ವರದಿ ನೀಡುವಂತೆ ಸರ್ಜರಿ ಮುಖ್ಯಸ್ಥರಿಗೆ ಸೂಚನೆ ನೀಡಿದ್ದೇನೆ. ಅಲ್ಲದೆ ಆಸ್ಪತ್ರೆಯ ಯಾವುದೇ ತ್ಯಾಜ್ಯವನ್ನು ರೂಲ್ಸ್ ಪ್ರಕಾರವೇ ವಿಲೇವಾರಿ ಮಾಡುವಂತೆ ಸುತ್ತೋಲೆ ಹೊರಡಿಸಿದ್ದೇನೆ ಎಂದು ಹೇಳಿದರು.


ಕಾನೂನು ಬಾಹಿರವಾಗಿ ವಿಲೇವಾರಿ ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇನೆ. ರೋಗಿಯ ಪತ್ನಿ ಬಳಿ ಸಿಬ್ಬಂದಿ ಹಣ ಕೇಳಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ವಿಚಾರಣೆ ವೇಳೆ ಅದು ಸಾಬೀತಾದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿಯೂ ಅವರು ಹೇಳಿದ್ದಾರೆ.


ಇನ್ನು ಆಸ್ಪತ್ರೆಗೆ ಮೂಳೆ ಮುರಿತ, ಗ್ಯಾಂಗ್ರೀನ್​ನಿಂದ ಬಳಲುತ್ತಿರುವವರು ಬಂದರೆ ಬಹುತೇಕವಾಗಿ ಈ ವಿಭಾಗದ ವೈದ್ಯರು ಕೂಡ ನಿರ್ಲಕ್ಷ್ಯ ಮಾಡುತ್ತಿರುವುದು ಕಂಡು ಬರುತ್ತಿದೆ. ಅಲ್ಲದೆ ವೈದ್ಯರು ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡುವಲ್ಲಿಯೂ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪ ಕೂಡ ಇದೆ. ಈ ವಿಭಾಗಕ್ಕೆ ಬರುವ ರೋಗಿಗಳು ನರಳುತ್ತಿದ್ದರು, ನರ್ಸ್‌ ಇತರ ಸಿಬ್ಬಂದಿ ಸ್ಪಂದಿಸುವುದಿಲ್ಲ. ಈ ಬಗ್ಗೆ ವೈದ್ಯರಿಗೆ ತಿಳಿಸಿದರೆ ಸರಿಯಾದ ವೈದ್ಯಕೀಯ ಉಪಕರಣಗಳು ಇಲ್ಲ. ಅವುಗಳ ಕೊರತೆ ಇದೆ ಎಂದು ಹೇಳಿಕೆ ನೀಡುತ್ತಿರುತ್ತಾರೆ ಎಂಬ ಆರೋಪ ಕೇಳಿ ಬರುತ್ತಿದೆ.


ಅಂಗಾಂಗಗಳು ಮನುಷ್ಯನಿಗೆ ಬಹಳ ಮುಖ್ಯ. ಯಾವುದಾದರೂ ಒಂದು ಭಾಗ ಊನವಾದರೂ ಆತನ ಭವಿಷ್ಯವೇ ಬಹುತೇಕ ಮುಗಿದು ಹೋಗಿ ಬಿಡುತ್ತದೆ. ಹೀಗಾಗಿ ಗ್ಯಾಂಗ್ರೀನ್​ನಿಂದ ಅಥವಾ ಮೂಳೆ ಮುರಿತಕ್ಕೊಳಗಾಗಿ ಬರುವ ರೋಗಿಗಳನ್ನು ಸರಿಯಾದ ಸಮಯಕ್ಕೆ ಚಿಕಿತ್ಸೆ ಒಳಪಡಿಸಿ ಕಿಚಿತ್ಸೆ ನೀಡಬೇಕು. ಇನ್ನಾದರೂ ಮಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸಬೇಕು ಎಂದು ನೊಂದ ರೋಗಿಗಳು ಒತ್ತಾಯ ಮಾಡಿದ್ದಾರೆ.


ಅಲ್ಲದೆ ಈ ವಿಭಾಗದ ವೈದಯರ ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಅಸೆಷ್ಟೋ ಜೀವಗಳು ನೋವು ತಾಳಲಾರದೆ ಪ್ರಾಣಕಳೆದುಕೊಂಡಿವೆ. ಆದರೆ ಆ ಬಗ್ಗೆ ಇದುವರೆಗೂ ಯಾರು ದೂರು ದಾಖಲಿಸಿಲ್ಲ. ಕಾರಣ ಸರ್ಕಾರಿ ಆಸ್ಪತ್ರೆಗೆ ಬರುವವರು ಬಹುತೇಕ ಬಡವರು, ಅವರು ಅವರು ಆರ್ಥಿಕವಾಗಿ ಸಬಲರಲ್ಲ ಕಾರಣ ಜೀವ ಹೋದ ಮೇಲೆ ನೋವಿನಲ್ಲೇ ಮಣ್ಣು ಸುಮ್ಮನಾಗುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಈ ವಿಭಾಗದ ಮುಖ್ಯಸ್ಥರೂ ಸರಿದಾರಿಗೆ ತರುವತ್ತ ಕ್ರಮ ಜರುಗಿಸಬೇಕಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in health »

ಗ್ಯಾಂಗ್ರೀನ್​ ಆಗಿದ್ದ ಪತಿಯ ಕಾಲನ್ನು ಕತ್ತರಿಸಿ ಪತ್ನಿ ಕೈ ಗಿಟ್ಟ ಮಿಮ್ಸ್ ಆಸ್ಪತ್ರೆ. ಸಾರ್ವಜನಿಕರ ಆಕ್ರೋಶ
ಗ್ಯಾಂಗ್ರೀನ್​ ಆಗಿದ್ದ ಪತಿಯ ಕಾಲನ್ನು ಕತ್ತರಿಸಿ ಪತ್ನಿ ಕೈ ಗಿಟ್ಟ ಮಿಮ್ಸ್ ಆಸ್ಪತ್ರೆ. ಸಾರ್ವಜನಿಕರ ಆಕ್ರೋಶ

ಮಂಡ್ಯ: ಮಂಡ್ಯ ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಗ್ಯಾಂಗ್ರೀನ್​ ಆಗಿದ್ದ ಕಾಲನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದು, ಬಳಿಕ ಆಸ್ಪತ

ಬಾಲು ಆಸ್ಪತ್ರೆಯಲ್ಲಿನ ಸ್ಕ್ಯಾನಿಂಗ್ ಕೊಠಡಿಗೆ ಬೀಗ ಜಡಿದ ಭ್ರೂಣ ಹತ್ಯೆ ಜಾಗೃತ ದಳ
ಬಾಲು ಆಸ್ಪತ್ರೆಯಲ್ಲಿನ ಸ್ಕ್ಯಾನಿಂಗ್ ಕೊಠಡಿಗೆ ಬೀಗ ಜಡಿದ ಭ್ರೂಣ ಹತ್ಯೆ ಜಾಗೃತ ದಳ

ಚನ್ನಪಟ್ಟಣ: ನಗರದ ಪ್ರತಿಷ್ಠಿತ ಬಾಲು ಆಸ್ಪತ್ರೆಗೆ ಕರ್ನಾಟಕ ಸರ್ಕಾರದ ಭ್ರೂಣ ಹತ್ಯೆ ಮತ್ತು ಭ್ರೂಣ ಲಿಂಗ ಪತ್ತೆ ಜಾಗೃತ ದಳದ ಅಧಿಕಾರಿಗಳು ದಿಢೀ

ಸ್ತನ್ಯಪಾನ ತಾಯಿ-ಮಗುವಿನ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುತ್ತದೆ: ಡಾ. ಚಂದ್ರಶೇಖರಯ್ಯ
ಸ್ತನ್ಯಪಾನ ತಾಯಿ-ಮಗುವಿನ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುತ್ತದೆ: ಡಾ. ಚಂದ್ರಶೇಖರಯ್ಯ

ರಾಮನಗರ, ಆ.04: ಎದೆ ಹಾಲಿನ ಮಹತ್ವ, ಹಾಲುಣಿಸುವಿಕೆ ಮತ್ತು ಮಕ್ಕಳ ಆರೈಕೆ ಕುರಿತು ಜಾಗೃತಿಯನ್ನು ಮೂಡಿಸುತ್ತಿದ್ದು, ತಾವೆಲ್ಲರೂ ಮಾಹಿತಿಯನ್ನು

ಚಂದ್ರು ಡಯಾಗ್ನೋಷಟಿಕ್ ನಿಂದ ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ ನೂತನ ತಂತ್ರಜ್ಞಾನದ ಎಂಆರ್‌ಐ ಸ್ಯ್ಕಾನಿಂಗ್
ಚಂದ್ರು ಡಯಾಗ್ನೋಷಟಿಕ್ ನಿಂದ ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ ನೂತನ ತಂತ್ರಜ್ಞಾನದ ಎಂಆರ್‌ಐ ಸ್ಯ್ಕಾನಿಂಗ್

ಚನ್ನಪಟ್ಟಣ.ಆ.೦೨: ಜಿಲ್ಲೆಯಲ್ಲಿ ಕಳೆದ ೨೫ ವರ್ಷಗಳಿಂದ ಗುಣಮಟ್ಟದ ಪ್ರಯೋಗಲಾಯ ಸೇವೆ ನೀಡುತ್ತಿರುವ ಚಂದ್ರ ಡಯಾಗ್ನೋಷ್ಟಿಕ್ ಸೆಂಟರ್‌ ವತಿಯಿಂದ ಜ

ಹೆಂಗಸರಲ್ಲೇ ವಿಶೇಷವಾಗಿ ಯುವತಿಯರಲ್ಲೇ ಸ್ಥೂಲಕಾಯ ಹೆಚ್ಚು ಡಾ ಪುನೀತ್
ಹೆಂಗಸರಲ್ಲೇ ವಿಶೇಷವಾಗಿ ಯುವತಿಯರಲ್ಲೇ ಸ್ಥೂಲಕಾಯ ಹೆಚ್ಚು ಡಾ ಪುನೀತ್

ಚನ್ನಪಟ್ಟಣ: ದೇಶದಲ್ಲಿ ಪುರುಷರಿಗಿಂತ ಮಹಿಳೆಯರಲ್ಲೇ ಸ್ಥೂಲಕಾಯ ಹೆಚ್ಚಾಗಿದ್ದು, ವಿಶೇಷವಾಗಿ ಯುವತಿಯರಲ್ಲಿ ಹೆಚ್ಚಾಗುತ್ತಿದೆ ಎಂದು ನಗರದ ಸಾರ್ವ

ಜಿಲ್ಲೆಯಲ್ಲಿ ಕ್ಷಯ ರೋಗ ನಿರ್ಮೂಲನೆ ಮಾಡಲು ಸೂಕ್ತ  ಕ್ರಮ ವಹಿಸಿ: ಚಿಕ್ಕಸುಬ್ಬಯ್ಯ
ಜಿಲ್ಲೆಯಲ್ಲಿ ಕ್ಷಯ ರೋಗ ನಿರ್ಮೂಲನೆ ಮಾಡಲು ಸೂಕ್ತ ಕ್ರಮ ವಹಿಸಿ: ಚಿಕ್ಕಸುಬ್ಬಯ್ಯ

ರಾಮನಗರ, ಮೇ೨೧: ಕ್ಷಯರೋಗದಿಂದ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ವಿನಾಶಕಾರಿ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕ್ಷಯ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ಪ್ರಯತ್ನಗಳು

ಮಾ.16 ರಂದು 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ
ಮಾ.16 ರಂದು 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ

ರಾಮನಗರ ಮಾ.15:  ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೋರ್ಬಿವ್ಯಾಕ್ಸ್ ಲಸಿಕಾ ಅಭಿಯಾನದಡಿಯಲ್ಲಿ ಕೋವಿ

ಸಮರ್ಥನಂ ಸಂಸ್ಥೆಯ ಸೇವೆ ಶ್ಲಾಘನೀಯ ಡಾ. ವೇಣುಗೋಪಾಲ್
ಸಮರ್ಥನಂ ಸಂಸ್ಥೆಯ ಸೇವೆ ಶ್ಲಾಘನೀಯ ಡಾ. ವೇಣುಗೋಪಾಲ್

ಚನ್ನಪಟ್ಟಣ ತಾಲ್ಲೂಕು, ಬಿ.ವಿ.ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಎಸ್.ಬಿ.ಸಿ.ಸಿ ಘಟಕ ಮತ್ತು ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ಜಾಗೃತಿ ಕಾರ್ಯಕ್ರಮ ಮತ್ತು ಆರೋಗ್ಯ ಪರಿಕರ ವಿತರಣ

ಜನವರಿ 10 ರಿಂದ 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್   ಬೂಸ್ಟರ್ ಡೋಸ್
ಜನವರಿ 10 ರಿಂದ 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಬೂಸ್ಟರ್ ಡೋಸ್

ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಸಹ ಅಸ್ವಸ್ಥತೆ ಹೊಂದಿರುವ ಫಲಾನುಭವಿಗಳಿಗೆ ಜನವರಿ 10 ರಿಂದ ಹಂತ ಹಂತವಾಗಿ ಕೋವಿಡ್-19 ಮುನ್ನೆಚ್ಚ

ವಿದ್ಯಾರ್ಥಿಗಳಿಗೆ ಏಡ್ಸ್ ಮುಕ್ತ ಸಮಾಜ ನಿರ್ಮಿಸಲು ಸಲಹೆ  - ಡಾ. ಕುಮಾರ್
ವಿದ್ಯಾರ್ಥಿಗಳಿಗೆ ಏಡ್ಸ್ ಮುಕ್ತ ಸಮಾಜ ನಿರ್ಮಿಸಲು ಸಲಹೆ - ಡಾ. ಕುಮಾರ್

ರಾಮನಗರ, ಡಿ:22/21. ಜಿಲ್ಲಾಡಳಿತ ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ

Top Stories »  


Top ↑