Tel: 7676775624 | Mail: info@yellowandred.in

Language: EN KAN

    Follow us :

ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಯಶಸ್ವಿ ಸಂಕಿರ್ಣ ಮತ್ತು ಪರಿಣಾಮಕಾರಿ ``ಟ್ರೂ ನೈಫ್ ವಿಧಾನದ ಚಿಕಿತ್ಸೆ

Posted date: 19 Dec, 2022

Powered by:     Yellow and Red

ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಯಶಸ್ವಿ ಸಂಕಿರ್ಣ ಮತ್ತು ಪರಿಣಾಮಕಾರಿ ``ಟ್ರೂ ನೈಫ್ ವಿಧಾನದ ಚಿಕಿತ್ಸೆ

ರಾಮನಗರ: ಡಿ-17; ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕರು ಯುವ ರೋಗಿಯೊಬ್ಬನಿಗೆ ಉನ್ನತ ರೆಡಿಯೋ ಥೆರಪಿ ಟ್ರೂ ನೈಫ್ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.     

 ಬೆಂಗಳೂರಿನ 34 ವರ್ಷದ ಸಾಪ್ಟ್ ವೇರ್ ಎಂಜಿನಿಯರ್ ಡ್ಯಾನಿಯಲ್ ದಿನೇಶ್ ರಾಜ್ ಅವರಿಗೆ 2014 ರಲ್ಲಿ ವಾಂತಿ, ತಲೆ ನೋವು ಮತ್ತು ದೃಷ್ಟಿ ಸಮಸ್ಯೆ ಕಾಣಿಸಿಕೊಂಡಿತ್ತು. ಎಂ.ಆರ್.ಐ ಸ್ಕ್ಯಾನ್ ನಲ್ಲಿ 2.7x2.7 ಗಾಯ ಕಂಡು ಬಂದಿದ್ದು, ಇದು ಅಪಧಮನಿಗಳು ಮತ್ತು ನರಗಳನ್ನು ಸಂಕುಚಿತಗೊಳಿಸುತ್ತಿತ್ತು. ಡ್ಯಾನಿಯಲ್‍ಗೆ ಈ ಹಿಂದೆ ಶಸ್ತ್ರಚಿಕಿತ್ಸೆ ನಡೆಸಿ ಗೆಡ್ಡೆಯ ಒಂದು ಭಾಗವನ್ನು ಸುರಕ್ಷಿತವಾಗಿ ತೆಗೆದುಹಾಕಲಾಗಿತ್ತು. ಉಳಿದಿದ್ದ ಗಾಯ ಬೆಳವಣಿಗೆಯಾಗಿ ಎಡಗಣ್ಣಿನ ನರಗಳಿಗೆ ತೊಂದರೆಯುಂಟುಮಾಡುತ್ತಿತ್ತು. ಇದು ದೃಷ್ಟಿಗೆ ಹಾನಿಯಾಗುವ ಕಾರಣದಿಂದ ರೆಡಿಯೋಥೆರಪಿಗಾಗಿ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ಆಗಮಿಸಿದ್ದರು.

ಚಿಕಿತ್ಸೆ ಕುರಿತು ಮಾಹಿತಿ ನೀಡಿದ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ಕ್ಯಾನ್ಸರ್ ರೆಡಿಯೋ ವಿಕಿರಣ ವಿಭಾಗದ ಹಿರಿಯ ಸಮಾಲೋಚಕ ಡಾ.ಮಾತಂಗಿ ಜೆ. ನೈಪುಣ್ಯ ಹೊಂದಿರುವ ನೇತ್ರಶಾಸ್ತ್ರಜ್ಞರು ಮತ್ತು ಎಂಡೋಕ್ರೈನಾಲಜಿ ತಂಡ ಈ ಬಗ್ಗೆ ವ್ಯಾಪಕ ಪರಿಶೀಲನೆ ನಡೆಸಿತು. ಪಿಟ್ಯುಟರಿ, ಮೆದುಳಿನ ಕಾಂಡ, ಕಣ್ಣಿನ ನರಗಳು, ಮೂಗಿನ ಗುಹೆ ಸೇರಿದಂತೆ ಈ ಗೆಡ್ಡೆ ಹಲವಾರು ಪ್ರಮುಖ ಅಂಗಗಳಿಗೆ ಸಮೀಪವಿರುವುದರಿಂದ ಚಿಕಿತ್ಸೆ ಸಂಕೀರ್ಣದಾಯಕವಾಗಿತ್ತು. ಈ ಗೆಡ್ಡೆಗಳು ಕ್ಯಾನ್ಸರ್ ಅಥವಾ ಮಾರಣಾಂತಿಕವಲ್ಲದ ಕಾರಣ ಇಂತಹ ಸಮಸ್ಯೆಯುಳ್ಳ ವ್ಯಕ್ತಿಗಳಲ್ಲಿ ಹೆಚ್ಚಿನವರು ಕಾಯಿಲೆಯಿಂದ ಸಾಯುವುದಿಲ್ಲ. ಬದಲಿಗೆ ದೃಷ್ಟಿ ನಷ್ಟ, ಶ್ರವಣ, ಮತ್ತಿತರ ನರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುತ್ತಾರೆ ಎಂದರು.

      ಮೆದುಳು ಭಾಗದ ಬಗ್ಗೆ ಹಲವಾರು ರೀತಿಯಲ್ಲಿ ಎಂ.ಆರ್.ಐ ಸ್ಕ್ಯಾನ್ ನಡೆಸಲಾಯಿತು. ಬಳಿಕ ಇವರ ತಲೆ ಭಾಗವನ್ನು ಸರಿಪಡಿಸಲು ಪರದೆ ಅಳವಡಿಸಲಾಯಿತು. ಮೆದುಳಿನ ಗೆಡ್ಡೆಗೆ 1000 ದಿಂದ 1200 ವಿಕಿರಣಗಳನ್ನು ವಿವಿಧ ಕೋನಗಳಲ್ಲಿ ಹರಿಸಲಾಯಿತು. ಟ್ರೂ ನೈಫ್ ಚಿಕಿತ್ಸೆಯನ್ನು ಅತ್ಯಂತ ನಿಖರವಾಗಿ ನಡೆಸಲಾಯಿತು. 10 ರಿಂದ 15 ನಿಮಿಷಗಳಲ್ಲಿ ಈ ಚಿಕಿತ್ಸೆ ನೀಡಲಾಯಿತು. ಐದು ದಿನಗಳ ಕಾಲ ಹೊರ ರೋಗಿಗಳ ವಿಭಾಗದಲ್ಲಿ ನೋವು ರಹಿತ ಚಿಕಿತ್ಸೆ ಪಡೆದುಕೊಂಡರು. ಎಂಟು ವರ್ಷಗಳ ಕಾಲ ನಿರಂತರ ತಪಾಸಣೆ ನಂತರ ಗೆಡ್ಡೆ ಇದೀಗ ಪೂರ್ಣ ಪ್ರಮಾಣದಲ್ಲಿ ತೆರವಾಗಿದೆ.

ಡ್ಯಾನಿಯಲ್ ತನ್ನ ವೃತ್ತಿ ಜೀವನವನ್ನು ಮುಂದುವರೆಸಿದ್ದಾರೆ. 5 ವರ್ಷದ ಮಗು ಹೊಂದಿರುವ ಅವರು, ತನ್ನ ಕುಟುಂಬದೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಟ್ರೂ ನೈಫ್ ನಾನಾ ಪರಿಸ್ಥಿತಿಗಳಲ್ಲಿ ಸೂಕ್ತ ಮತ್ತು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದಾಗಿದ್ದು, ಸಾಕಷ್ಟು ರೀತಿಯಲ್ಲಿ ಇದು ಅನುಕೂಲಕರವಾಗಿದೆ.

*ಏನಿದು ಚಿಕಿತ್ಸೆ:*

ಟ್ರೂ ನೈಫ್ ಚಿಕಿತ್ಸೆ ಯಂತ್ರಕ್ಕಿಂತ ಮಿಗಿಲಾದದ್ದು. ಇದು ಸಾಪ್ಟ್‍ವೇರ್ ಮತ್ತು ಹಾರ್ಡ್‌ವೇರ್ ಗಳನ್ನು ಸಂಯೋಜಿಸಿ ಸ್ಟಿರಿಯೋಟ್ಯಾಕ್ಟಿಕ್ಸ್ ರೆಡಿಯೋ ಸರ್ಜರಿಯನ್ನು ಅತ್ಯುತ್ತಮ, ತ್ವರಿತ ಮತ್ತು ದಕ್ಷತೆಯಿಂದ ನಿರ್ವಹಿಸುವ ವಿಧಾನವಾಗಿದೆ. ಟ್ರೂ ನೈಫ್ ನೋವು ರಹಿತ, ಉನ್ನತ ರೆಡಿಯೋಥೆರಪಿ ಚಿಕಿತ್ಸೆಯಾಗಿದ್ದು, ಮೆದುಳು, ಬೆನ್ನುಮೂಳೆ, ಶ್ವಾಸಕೋಶ, ಯಕೃತ್ತು ಮತ್ತು ಇತರೆ ದೇಹದಲ್ಲಿನ ಕೆಲವು ಗೆಡ್ಡೆಗಳಿಗೆ ನಿಖರವಾಗಿ ಹೆಚ್ಚಿನ ಪ್ರಮಾಣದಲ್ಲಿ ಕಿರಣಗಳನ್ನು ತಲುಪಿಸಿ ನಿವಾರಣೆ ಮಾಡುತ್ತದೆ.

ಗೋ ರಾ ಶ್ರೀನಿವಾಸ...

ಮೊ:9845856139.

----------------------------------------------------------------------------

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in health »

ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಯಶಸ್ವಿ ಸಂಕಿರ್ಣ ಮತ್ತು ಪರಿಣಾಮಕಾರಿ ``ಟ್ರೂ ನೈಫ್ ವಿಧಾನದ ಚಿಕಿತ್ಸೆ
ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಯಶಸ್ವಿ ಸಂಕಿರ್ಣ ಮತ್ತು ಪರಿಣಾಮಕಾರಿ ``ಟ್ರೂ ನೈಫ್ ವಿಧಾನದ ಚಿಕಿತ್ಸೆ

ರಾಮನಗರ: ಡಿ-17; ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕರು ಯುವ ರೋಗಿಯೊಬ್ಬನಿಗೆ ಉನ್ನತ ರೆಡಿಯೋ ಥೆರಪಿ ಟ್

ಗ್ಯಾಂಗ್ರೀನ್​ ಆಗಿದ್ದ ಪತಿಯ ಕಾಲನ್ನು ಕತ್ತರಿಸಿ ಪತ್ನಿ ಕೈ ಗಿಟ್ಟ ಮಿಮ್ಸ್ ಆಸ್ಪತ್ರೆ. ಸಾರ್ವಜನಿಕರ ಆಕ್ರೋಶ
ಗ್ಯಾಂಗ್ರೀನ್​ ಆಗಿದ್ದ ಪತಿಯ ಕಾಲನ್ನು ಕತ್ತರಿಸಿ ಪತ್ನಿ ಕೈ ಗಿಟ್ಟ ಮಿಮ್ಸ್ ಆಸ್ಪತ್ರೆ. ಸಾರ್ವಜನಿಕರ ಆಕ್ರೋಶ

ಮಂಡ್ಯ: ಮಂಡ್ಯ ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಗ್ಯಾಂಗ್ರೀನ್​ ಆಗಿದ್ದ ಕಾಲನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದು, ಬಳಿಕ ಆಸ್ಪತ

ಬಾಲು ಆಸ್ಪತ್ರೆಯಲ್ಲಿನ ಸ್ಕ್ಯಾನಿಂಗ್ ಕೊಠಡಿಗೆ ಬೀಗ ಜಡಿದ ಭ್ರೂಣ ಹತ್ಯೆ ಜಾಗೃತ ದಳ
ಬಾಲು ಆಸ್ಪತ್ರೆಯಲ್ಲಿನ ಸ್ಕ್ಯಾನಿಂಗ್ ಕೊಠಡಿಗೆ ಬೀಗ ಜಡಿದ ಭ್ರೂಣ ಹತ್ಯೆ ಜಾಗೃತ ದಳ

ಚನ್ನಪಟ್ಟಣ: ನಗರದ ಪ್ರತಿಷ್ಠಿತ ಬಾಲು ಆಸ್ಪತ್ರೆಗೆ ಕರ್ನಾಟಕ ಸರ್ಕಾರದ ಭ್ರೂಣ ಹತ್ಯೆ ಮತ್ತು ಭ್ರೂಣ ಲಿಂಗ ಪತ್ತೆ ಜಾಗೃತ ದಳದ ಅಧಿಕಾರಿಗಳು ದಿಢೀ

ಸ್ತನ್ಯಪಾನ ತಾಯಿ-ಮಗುವಿನ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುತ್ತದೆ: ಡಾ. ಚಂದ್ರಶೇಖರಯ್ಯ
ಸ್ತನ್ಯಪಾನ ತಾಯಿ-ಮಗುವಿನ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುತ್ತದೆ: ಡಾ. ಚಂದ್ರಶೇಖರಯ್ಯ

ರಾಮನಗರ, ಆ.04: ಎದೆ ಹಾಲಿನ ಮಹತ್ವ, ಹಾಲುಣಿಸುವಿಕೆ ಮತ್ತು ಮಕ್ಕಳ ಆರೈಕೆ ಕುರಿತು ಜಾಗೃತಿಯನ್ನು ಮೂಡಿಸುತ್ತಿದ್ದು, ತಾವೆಲ್ಲರೂ ಮಾಹಿತಿಯನ್ನು

ಚಂದ್ರು ಡಯಾಗ್ನೋಷಟಿಕ್ ನಿಂದ ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ ನೂತನ ತಂತ್ರಜ್ಞಾನದ ಎಂಆರ್‌ಐ ಸ್ಯ್ಕಾನಿಂಗ್
ಚಂದ್ರು ಡಯಾಗ್ನೋಷಟಿಕ್ ನಿಂದ ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ ನೂತನ ತಂತ್ರಜ್ಞಾನದ ಎಂಆರ್‌ಐ ಸ್ಯ್ಕಾನಿಂಗ್

ಚನ್ನಪಟ್ಟಣ.ಆ.೦೨: ಜಿಲ್ಲೆಯಲ್ಲಿ ಕಳೆದ ೨೫ ವರ್ಷಗಳಿಂದ ಗುಣಮಟ್ಟದ ಪ್ರಯೋಗಲಾಯ ಸೇವೆ ನೀಡುತ್ತಿರುವ ಚಂದ್ರ ಡಯಾಗ್ನೋಷ್ಟಿಕ್ ಸೆಂಟರ್‌ ವತಿಯಿಂದ ಜ

ಹೆಂಗಸರಲ್ಲೇ ವಿಶೇಷವಾಗಿ ಯುವತಿಯರಲ್ಲೇ ಸ್ಥೂಲಕಾಯ ಹೆಚ್ಚು ಡಾ ಪುನೀತ್
ಹೆಂಗಸರಲ್ಲೇ ವಿಶೇಷವಾಗಿ ಯುವತಿಯರಲ್ಲೇ ಸ್ಥೂಲಕಾಯ ಹೆಚ್ಚು ಡಾ ಪುನೀತ್

ಚನ್ನಪಟ್ಟಣ: ದೇಶದಲ್ಲಿ ಪುರುಷರಿಗಿಂತ ಮಹಿಳೆಯರಲ್ಲೇ ಸ್ಥೂಲಕಾಯ ಹೆಚ್ಚಾಗಿದ್ದು, ವಿಶೇಷವಾಗಿ ಯುವತಿಯರಲ್ಲಿ ಹೆಚ್ಚಾಗುತ್ತಿದೆ ಎಂದು ನಗರದ ಸಾರ್ವ

ಜಿಲ್ಲೆಯಲ್ಲಿ ಕ್ಷಯ ರೋಗ ನಿರ್ಮೂಲನೆ ಮಾಡಲು ಸೂಕ್ತ  ಕ್ರಮ ವಹಿಸಿ: ಚಿಕ್ಕಸುಬ್ಬಯ್ಯ
ಜಿಲ್ಲೆಯಲ್ಲಿ ಕ್ಷಯ ರೋಗ ನಿರ್ಮೂಲನೆ ಮಾಡಲು ಸೂಕ್ತ ಕ್ರಮ ವಹಿಸಿ: ಚಿಕ್ಕಸುಬ್ಬಯ್ಯ

ರಾಮನಗರ, ಮೇ೨೧: ಕ್ಷಯರೋಗದಿಂದ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ವಿನಾಶಕಾರಿ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕ್ಷಯ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ಪ್ರಯತ್ನಗಳು

ಮಾ.16 ರಂದು 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ
ಮಾ.16 ರಂದು 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ

ರಾಮನಗರ ಮಾ.15:  ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೋರ್ಬಿವ್ಯಾಕ್ಸ್ ಲಸಿಕಾ ಅಭಿಯಾನದಡಿಯಲ್ಲಿ ಕೋವಿ

ಸಮರ್ಥನಂ ಸಂಸ್ಥೆಯ ಸೇವೆ ಶ್ಲಾಘನೀಯ ಡಾ. ವೇಣುಗೋಪಾಲ್
ಸಮರ್ಥನಂ ಸಂಸ್ಥೆಯ ಸೇವೆ ಶ್ಲಾಘನೀಯ ಡಾ. ವೇಣುಗೋಪಾಲ್

ಚನ್ನಪಟ್ಟಣ ತಾಲ್ಲೂಕು, ಬಿ.ವಿ.ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಎಸ್.ಬಿ.ಸಿ.ಸಿ ಘಟಕ ಮತ್ತು ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ಜಾಗೃತಿ ಕಾರ್ಯಕ್ರಮ ಮತ್ತು ಆರೋಗ್ಯ ಪರಿಕರ ವಿತರಣ

ಜನವರಿ 10 ರಿಂದ 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್   ಬೂಸ್ಟರ್ ಡೋಸ್
ಜನವರಿ 10 ರಿಂದ 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಬೂಸ್ಟರ್ ಡೋಸ್

ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಸಹ ಅಸ್ವಸ್ಥತೆ ಹೊಂದಿರುವ ಫಲಾನುಭವಿಗಳಿಗೆ ಜನವರಿ 10 ರಿಂದ ಹಂತ ಹಂತವಾಗಿ ಕೋವಿಡ್-19 ಮುನ್ನೆಚ್ಚ

Top Stories »  

Top ↑