Tel: 7676775624 | Mail: info@yellowandred.in

Language: EN KAN

    Follow us :


ಜಿಲ್ಲಾ ಮಟ್ಟದ ಯೋಜನಾ ಸಂಯೋಜಕರು ಹಾಗೂ ಜಿಲ್ಲಾ ಮಟ್ಟದ ಕಾರ್ಯಕ್ರಮ ಸಹಾಯಕರ ಹುದ್ದೆಗೆ ಅರ್ಜಿ

Posted date: 02 Mar, 2018

Powered by:     Yellow and Red

ರಾಮನಗರ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಧಾನಮಂತ್ರಿ ಮಾತೃವಂದನ ಯೋಜನೆಯ ಅನುಷ್ಠಾನಕ್ಕಾಗಿ ಹೊರಗುತ್ತಿಗೆ ಆಧಾರದ ಮೇಲೆ ಜಿಲ್ಲಾ ಮಟ್ಟದ ಯೋಜನಾ ಸಂಯೋಜಕರು ಹಾಗೂ ಜಿಲ್ಲಾ ಮಟ್ಟದ ಕಾರ್ಯಕ್ರಮ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾ ಮಟ್ಟದ ಯೋಜನಾ ಸಂಯೋಜಕರ ಹುದ್ದೆಗೆ ಸಮಾಜ ವಿಜ್ಞಾನ, ಜೀವವಿಜ್ಞಾನ, ಪೌಷ್ಠಿಕ, ವೈದ್ಯಕೀಯ, ಆರೋಗ್ಯ ನಿರ್ವಹಣೆ, ಸಮಾಜ ಕಾರ್ಯ ಅಥವಾ ಗ್ರಾಮೀಣ ನಿರ್ವಹಣೆ ಇವುಗಳಲ್ಲಿ ಯಾವುದಾದರೂ ಒಂದು ಸ್ನಾತಕೋತ್ತರ ಪದವಿ ಪಡೆದಿರಬೇಕು ಹಾಗೂ ಜಿಲ್ಲಾ ಮಟ್ಟದ ಕಾರ್ಯಕ್ರಮ ಸಹಾಯಕರ ಹುದ್ದೆಗೆ ಸಮಾಜ ವಿಜ್ಞಾನ, ಸಮಾಜ ಕಾರ್ಯ, ಗ್ರಾಮೀಣ ನಿರ್ವಹಣೆ ಅಥವಾ ಸಂಖ್ಯಾ ಶಾಸ್ತ್ರ  ಇವುಗಳಲ್ಲಿ ಯಾವುದಾದರೊಂದು ಪದವಿ ಪಡೆದಿರಬೇಕು. ಸರ್ಕಾರಿ ಅಥವಾ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕನಿಷ್ಠ 1 ವರ್ಷ ಅನುಭವ ಹೊಂದಿರಬೇಕು, ಡಾಟಾ ಎಂಟ್ರಿ ಹಾಗೂ ಎಂ.ಎಸ್ ಆಫೀಸ್ ಬಳಕೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಪಡೆದ ಶೇಕಡವಾರು ಅಂಕಗಳ ಮೇಲೆ ತಿಳಿಸಿದ ಸೇವಾ ಅನುಭವ ಮತ್ತು ಗಣಕಯಂತ್ರದ ಅಳಕೆಯ ಬಗ್ಗೆ ಪರಿಣಿತಿಯನ್ನಾಧರಿಸಿ ಅರ್ಜಿಯನ್ನು ಪರಿಶೀಲಿಸಿ 1:5 ರಂತೆ ಸಂದರ್ಶನ ಏರ್ಪಡಿಸಿ, ಅನುಭವ ಸಂದರ್ಶನದಲ್ಲಿ ಪಡೆದ ಅಂಕಗಳು ಹಾಗೂ ಗಣಕಯಂತ್ರ ಬಳಕೆಯಲ್ಲಿ ಪ್ರಾಯೋಗಿಕ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಹುದ್ದೆಯು ಸಂಪೂರ್ಣ ತಾತ್ಕಾಲಿಕ ಹಾಗೂ ಹೊರಗುತ್ತಿಗೆ ಆಧಾರವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ಖಾಯಂ ಹುದ್ದೆಯ ಸವಲತ್ತುಗಳಿಗೆ ಅರ್ಹವಾಗುವುದಿಲ್ಲ ಎಂಬ ಪೂರ್ಣ ಷರತ್ತಿಗೊಳಪಟ್ಟಿರುತ್ತದೆ. 
ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯತ್ ಭವನ, 2ನೇ ಮಹಡಿ ರಾಮಗನರ ಈ ಕಚೇರಿಗೆ ಎಲ್ಲಾ ಅಗತ್ಯ ದಾಖಲಾತಿಗಳನ್ನು ಹಾಗೂ ಸ್ವವಿವರವನ್ನು ಇದೇ 2018ರ ಮಾ. 16ರ ಸಂಜೆ 5.30 ಗಂಟೆಯೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ 080-27273036 ಗೆ ಸಂಪರ್ಕಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in jobs »

ಉಚಿತ ಪೋಟೋಗ್ರಫಿ, ವೀಡೀಯೋಗ್ರಫಿ ತರಬೇತಿಗೆ ಅರ್ಜಿ ಆಹ್ವಾನ
ಉಚಿತ ಪೋಟೋಗ್ರಫಿ, ವೀಡೀಯೋಗ್ರಫಿ ತರಬೇತಿಗೆ ಅರ್ಜಿ ಆಹ್ವಾನ

ನಿರುದ್ಯೋಗಿಗಳಿಗೆ ಯಾವಾಗಲೂ ಸುವರ್ಣ ಅವಕಾಶವನ್ನು ಕಲ್ಪಿಸುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯೂ ಈ ಬಾರಿಯೂ ಸಹ ಉಚಿತವಾಗಿ ತರಬೇತಿ ನೀಡಲು ಮುಂದಾಗಿದೆ. ರಾಮನಗರ ಜಿಲ್ಲೆಯ ಹಾರೋಹಳ

ಅತಿಥಿ ಶಿಕ್ಷಕರ ಹಾಗೂ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
ಅತಿಥಿ ಶಿಕ್ಷಕರ ಹಾಗೂ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ರಾಮನಗರ, ಜೂ. 09:   ರಾಮನಗರ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ, ಕಾಲೇಜು ಹಾಗೂ ಮೌಲಾನಾ ಆಜಾ಼ದ

ವಿಕಲಚೇತನರಿಂದ ಅರ್ಜಿ ಆಹ್ವಾನ
ವಿಕಲಚೇತನರಿಂದ ಅರ್ಜಿ ಆಹ್ವಾನ

ರಾಮನಗರ, ಜೂ. 03:      ಕನಕಪುರ, ರಾಮನಗರ, ಚನ್ನಪಟ್ಟಣ ಹಾಗೂ ಮಾಗಡಿ ತಾಲ್ಲೂಕುಗಳ ಗ್ರಾಮ ಪಂಚಾಯಿತಿ/ ನಗರಸಭೆ/ ಪುರಸಭೆಗಳಲ್ಲಿ ಗ್ರಾಮೀಣ ಪುನರ್ವಸತಿ ಯೋಜನ

ಅಂಗನವಾಡಿ ಕಾರ್ಯಕರ್ತೆ/ಸಹಾಯಕಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ
ಅಂಗನವಾಡಿ ಕಾರ್ಯಕರ್ತೆ/ಸಹಾಯಕಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ

ಚನ್ನಪಟ್ಟಣ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಚನ್ನಪಟ್ಟಣ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಇರುವ ಮುದುಗೆರೆ ಅರಣ್ಯ, ರಾಂಪುರ-, ಗೊಲ್ಲರದೊಡ್ಡಿ(ಮಿನ

ಉಚಿತ ಸೆಲ್ ಫೋನ್ ರಿಪೇರಿ ಮತ್ತು ಸರ್ವಿಸಿಂಗ್ ತರಬೇತಿಗೆ ಅರ್ಜಿ ಆಹ್ವಾನ
ಉಚಿತ ಸೆಲ್ ಫೋನ್ ರಿಪೇರಿ ಮತ್ತು ಸರ್ವಿಸಿಂಗ್ ತರಬೇತಿಗೆ ಅರ್ಜಿ ಆಹ್ವಾನ

ರಾಮನಗರ:ಅ/31/20/ಶನಿವಾರ.


ಬಿಡದಿ ಬಳಿಯ ಕೆನರಾ ಬ್ಯಾಂಕ್ ನ ಎ.ಡಿ.ಪೈ ಗ್ರಾಮೀಣ ಸ್ವ ಉದ್ಯೋಗ  ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕರಿಗಾಗಿ 30 ದಿನಗಳ ಉಚಿತ ಸೆಲ್ ಫೋನ್ ರಿಪೇರಿ ಮತ್ತು ಸರ್ವಿಸಿಂಗ್. ತರಬೇತಿಯನ್ನು

ಉಚಿತ ಎಲೆಕ್ಟ್ರಿಕಲ್ ಮೋಟರ್ ರೀವೈಂಡಿಗ್ ಅಂಡ್ ಪಂಪ್ ಸೆಟ್ ರಿಪೇರಿ ತರಬೇತಿಗೆ ಅರ್ಜಿ  ಆಹ್ವಾನ
ಉಚಿತ ಎಲೆಕ್ಟ್ರಿಕಲ್ ಮೋಟರ್ ರೀವೈಂಡಿಗ್ ಅಂಡ್ ಪಂಪ್ ಸೆಟ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

ರಾಮನಗರ:ಅ/11/20/ಭಾನುವಾರ. ಬಿಡದಿ ಬಳಿಯ ಕೆನರಾ ಬ್ಯಾಂಕ್ ನ ಎ.ಡಿ.ಪೈ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕರಿಗಾಗಿ

ನರೇಗಾ ಅಕೌಂಟ್ಸ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ
ನರೇಗಾ ಅಕೌಂಟ್ಸ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

ರಾಮನಗರ:ಆ/08/20/ಶನಿವಾರ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೇಗಾ) ಸಮರ್ಪಕ ಅನುಷ್ಠಾನಕ್ಕಾಗಿ ರಾಮನಗರ ಜಿಲ್ಲಾ ಪಂಚಾಯತಿ ವ್

ಅಗ್ನಿಶಾಮಕ ಇಲಾಖೆಯಿಂದ ೧೫೬೭ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅಗ್ನಿಶಾಮಕ ಇಲಾಖೆಯಿಂದ ೧೫೬೭ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಜೂ:೨೦/೨೦/ಶನಿವಾರ. ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಅಗ್ನಿಶಾಮಕ ಸಿಬ್ಬಂದಿಯ ೧೫೬೭ ವಿವಿಧ ವೃಂದಗಳ ಹು

ಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಸಂದರ್ಶನ
ಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಸಂದರ್ಶನ

ರಾಮನಗರ:ಏ/೦೩/೨೦/ಶುಕ್ರವಾರ. ರಾಜ್ಯಾದ್ಯಂತ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖ

ಸೇನೆ ಹುದ್ದೆಗೆ ಅರ್ಜಿ ಹಾಕಿ

ಹೊಸದಿಲ್ಲಿ: ಭಾರತೀಯ ಸೇನೆಯ ವಿವಿಧ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸಶಸ್ತ್ರ ಪಡೆಯ ತಳಮಟ್ಟದಲ್ಲಿ ಹೋರಾಟ ನಡೆಸುವ ಘಟಕದ 175 ವಿವಿಧ ಶ್ರೇಣಿಯ ಹುದ್ದೆಗಳನ್ನು ತುಂಬಲಾಗುತ್ತದೆ. ಮಹ

Top Stories »  


Top ↑