ಶ್ರೀಗಿರಿಪುರ ಗ್ರಾಪಂ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆದ ಆರೋಗ್ಯ ತಪಾಸಣಾ ಶಿಬಿರ

ರಾಮನಗರ, ಜೂ. 07: ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾತ್ಮಗಾಂಧಿ ನರೇಗಾ ಉದ್ಯೋಗ ಖಾತ್ರಿ ಯೋಜನೆ ಹಾಗೂ ಕುದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಕಾರದೊಂದಿಗೆ ಶ್ರೀಗಿರಿಪುರ ಗ್ರಾಮ ಪಂಚಾಯ್ತಿಯ ಸಭಾಂಗಣದಲ್ಲಿ ಗ್ರಾಮ ಪಂಚಾಯ್ತಿ ಆರೋಗ್ಯ ಅಮೃತ ಅಭಿಯಾನ ಅಡಿಯಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಪ್ರೇಮಾ ರಮೇಶ್ ಅವರು ಶಿಬಿರಕ್ಕೆ ಚಾಲನೆ ನೀಡಿ, ಸಮುದಾಯದ ಜನರಿಗೆ ಆರೋಗ್ಯದ ಸದೃಡ ಬೆಳವಣಿಗೆಗೆ ಸಹಕಾರಿಯಾಗುವಂತಹ ಈ ಕಾರ್ಯಕ್ರಮದ ದೂರದೃಷ್ಠಿಕೋನವನ್ನು ಪ್ರತಿಯೊಬ್ಬರಿಗೂ ವ್ಯವಸ್ಥಿತವಾಗಿ ತಲುಪಿಸುವ ನಿಟ್ಟಿನಲ್ಲಿ ಪಂಚಾಯ್ತಿ ಆಡಳಿತ ವರ್ಗವು ಕಾರ್ಯ ಪ್ರವೃತ್ತರಾಗಬೇಕು ಹಾಗೂ ಪ್ರತಿಯೊಬ್ಬರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಆರೋಗ್ಯ ಸುರಕ್ಷಾಧಿಕಾರಿ ಆಶಾ ಅವರು ಮಾತನಾಡಿ, 30 ವರ್ಷ ಮೇಲ್ಪಟ್ಟವರು ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು ಜೊತೆಗೆ ಆರೋಗ್ಯದ ಕುರಿತಂತೆ ಸ್ವ ಅರಿವು ಕೂಡ ಬೆಳಸಿಕೊಳ್ಳಬೇಕು. ಆರೋಗ್ಯ ಸೇವಾ ಯೋಜನೆಗಳು ಜನ ಸಮುದಾಯಕ್ಕೆ ಪ್ರತಿನಿಧಿಗಳ ಮೂಲಕ ಮನೆ ಮನೆ ಬಾಗಿಲಿಗೆ ತಲುಪುತ್ತಿರುವುದು ಸ್ವಾಗತಾರ್ಹವಾದ್ದದ್ದು, ಇಂತಹ ಅನುಕೂಲತೆಗಳನ್ನ ನರೇಗಾ ಕೂಲಿ ಕಾರ್ಮಿಕರಿಗೆ ಹಾಗೂ ಗ್ರಾಮಸ್ಥರು ಆರೋಗ್ಯ ತಪಾಸಣೆ ಶಿಬಿರದ ಆಯೋಜನೆಯಲ್ಲಿ ಪಾಲ್ಗೊಂಡು ಮಧುಮೇಹ, ರಕ್ತದೊತ್ತಡ, ಕ್ಷಯ, ರಕ್ತಹೀನತೆ, ಅಪೌಷ್ಠಿಕತೆಯಂತಹ ಆರೋಗ್ಯ ಸಮಸ್ಯೆಗಳನ್ನು ಪ್ರಾಥಮಿಕ ಹಂತದಲ್ಲಿ ಗುರುತಿಸಿಕೊಂಡು ಸೂಕ್ತ ಚಿಕಿತ್ಸಾ ವಿಧಾನಗಳಿಂದ ನಮ್ಮ ಆರೋಗ್ಯವನ್ನು ಸುಸ್ಥಿರವಾಗಿಟ್ಟುಕೊಳ್ಳಬೇಕು. ಕೂಲಿಕಾರ್ಮಿಕರು ಸೇರಿದಂತೆ ಎಲ್ಲಾ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಶಿಬಿರದಲ್ಲಿ ತಾಲ್ಲೂಕು ಸಂಯೋಜಕರರಾದ ಉಮೇಶ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಬಸವರಾಜು, ಉಪಾಧ್ಯಕ್ಷೆ ಸುಮಾ ಚಂದ್ರಶೇಖರ್, ಕಾರ್ಯದರ್ಶಿ ಯಶೋಧ, ಸದಸ್ಯರುಗಳಾದ ಮಂಜನಾಥ್, ಪ್ರಕಾಶ್, ಜಯಮ್ಮ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಲೋಕೇಶ್, ಆರೋಗ್ಯ ಸುರಕ್ಷಾತಾಧಿಕಾರಿ ಅನಿತಾ ಲಕ್ಷ್ಮೀ, ಬಿಲ್ ಕಲೆಕ್ಟರ್ ಸರಸ್ವತಮ್ಮ, ಯಶೋಧ ಸೇರಿದಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in jobs »

ಉಚಿತ ಪೋಟೋಗ್ರಫಿ, ವೀಡೀಯೋಗ್ರಫಿ ತರಬೇತಿಗೆ ಅರ್ಜಿ ಆಹ್ವಾನ
ನಿರುದ್ಯೋಗಿಗಳಿಗೆ ಯಾವಾಗಲೂ ಸುವರ್ಣ ಅವಕಾಶವನ್ನು ಕಲ್ಪಿಸುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯೂ ಈ ಬಾರಿಯೂ ಸಹ ಉಚಿತವಾಗಿ ತರಬೇತಿ ನೀಡಲು ಮುಂದಾಗಿದೆ. ರಾಮನಗರ ಜಿಲ್ಲೆಯ ಹಾರೋಹಳ

ಅತಿಥಿ ಶಿಕ್ಷಕರ ಹಾಗೂ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
ರಾಮನಗರ, ಜೂ. 09: ರಾಮನಗರ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ, ಕಾಲೇಜು ಹಾಗೂ ಮೌಲಾನಾ ಆಜಾ಼ದ

ವಿಕಲಚೇತನರಿಂದ ಅರ್ಜಿ ಆಹ್ವಾನ
ರಾಮನಗರ, ಜೂ. 03: ಕನಕಪುರ, ರಾಮನಗರ, ಚನ್ನಪಟ್ಟಣ ಹಾಗೂ ಮಾಗಡಿ ತಾಲ್ಲೂಕುಗಳ ಗ್ರಾಮ ಪಂಚಾಯಿತಿ/ ನಗರಸಭೆ/ ಪುರಸಭೆಗಳಲ್ಲಿ ಗ್ರಾಮೀಣ ಪುನರ್ವಸತಿ ಯೋಜನ

ಅಂಗನವಾಡಿ ಕಾರ್ಯಕರ್ತೆ/ಸಹಾಯಕಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ
ಚನ್ನಪಟ್ಟಣ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಚನ್ನಪಟ್ಟಣ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಇರುವ ಮುದುಗೆರೆ ಅರಣ್ಯ, ರಾಂಪುರ-, ಗೊಲ್ಲರದೊಡ್ಡಿ(ಮಿನ

ಉಚಿತ ಸೆಲ್ ಫೋನ್ ರಿಪೇರಿ ಮತ್ತು ಸರ್ವಿಸಿಂಗ್ ತರಬೇತಿಗೆ ಅರ್ಜಿ ಆಹ್ವಾನ
ರಾಮನಗರ:ಅ/31/20/ಶನಿವಾರ.
ಬಿಡದಿ ಬಳಿಯ ಕೆನರಾ ಬ್ಯಾಂಕ್ ನ ಎ.ಡಿ.ಪೈ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕರಿಗಾಗಿ 30 ದಿನಗಳ ಉಚಿತ ಸೆಲ್ ಫೋನ್ ರಿಪೇರಿ ಮತ್ತು ಸರ್ವಿಸಿಂಗ್. ತರಬೇತಿಯನ್ನು

ಉಚಿತ ಎಲೆಕ್ಟ್ರಿಕಲ್ ಮೋಟರ್ ರೀವೈಂಡಿಗ್ ಅಂಡ್ ಪಂಪ್ ಸೆಟ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ
ರಾಮನಗರ:ಅ/11/20/ಭಾನುವಾರ. ಬಿಡದಿ ಬಳಿಯ ಕೆನರಾ ಬ್ಯಾಂಕ್ ನ ಎ.ಡಿ.ಪೈ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕರಿಗಾಗಿ

ನರೇಗಾ ಅಕೌಂಟ್ಸ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ
ರಾಮನಗರ:ಆ/08/20/ಶನಿವಾರ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೇಗಾ) ಸಮರ್ಪಕ ಅನುಷ್ಠಾನಕ್ಕಾಗಿ ರಾಮನಗರ ಜಿಲ್ಲಾ ಪಂಚಾಯತಿ ವ್

ಅಗ್ನಿಶಾಮಕ ಇಲಾಖೆಯಿಂದ ೧೫೬೭ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು: ಜೂ:೨೦/೨೦/ಶನಿವಾರ. ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಅಗ್ನಿಶಾಮಕ ಸಿಬ್ಬಂದಿಯ ೧೫೬೭ ವಿವಿಧ ವೃಂದಗಳ ಹು

ಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಸಂದರ್ಶನ
ರಾಮನಗರ:ಏ/೦೩/೨೦/ಶುಕ್ರವಾರ. ರಾಜ್ಯಾದ್ಯಂತ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖ
ಸೇನೆ ಹುದ್ದೆಗೆ ಅರ್ಜಿ ಹಾಕಿ
ಹೊಸದಿಲ್ಲಿ: ಭಾರತೀಯ ಸೇನೆಯ ವಿವಿಧ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸಶಸ್ತ್ರ ಪಡೆಯ ತಳಮಟ್ಟದಲ್ಲಿ ಹೋರಾಟ ನಡೆಸುವ ಘಟಕದ 175 ವಿವಿಧ ಶ್ರೇಣಿಯ ಹುದ್ದೆಗಳನ್ನು ತುಂಬಲಾಗುತ್ತದೆ. ಮಹ
ಪ್ರತಿಕ್ರಿಯೆಗಳು