ಜೂ. 17ರಂದು ವಿದ್ಯುತ್ ಅದಾಲತ್ ಸಭೆ

ರಾಮನಗರ, ಜೂ. 15: ಕನಕಪುರ ತಾಲ್ಲೂಕಿನ ಕನಕಪುರ ವಿಭಾಗದ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಜೂ. 17 ರಂದು ಬೆಳಿಗ್ಗೆ 11 ಗಂಟೆಗೆ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಲು ವಿದ್ಯುತ್ ಅದಾಲತ್ ಸಭೆಯನ್ನು ಕನಕಪುರ ತಾಲ್ಲೂಕಿನ ಸಾತನೂರು ಹೋಬಳಿಯ ಕಂಸಾಗರ ಗ್ರಾಮದ ಸಾತನೂರು ಉಪವಿಭಾಗ ಕಚೇರಿ, ಮರಳವಾಡಿ ಹೋಬಳಿಯ ಪಡುವನಗೆರೆ ಗ್ರಾಮದ ಹಾರೋಹಳ್ಳಿ ಉಪವಿಭಾಗ ಕಚೇರಿ, ಕಸಬಾ ಹೋಬಳಿಯ ಚಿಕ್ಕಮುದುವಾಡಿ ಗ್ರಾಮದ ನಗರ ಉಪವಿಭಾಗ ಕಚೇರಿ ಹಾಗೂ ಕೋಡಿಹಳ್ಳಿ ಹೋಬಳಿಯ ಬೊಮ್ಮಸಂದ್ರ ಕಿರಿಯ ಪ್ರಾಥಮಿಕ ಪಾಠಶಾಲೆ ಗ್ರಾಮದ ಗ್ರಾಮೀಣ ಉಪವಿಭಾಗ ಕಚೇರಿಯಲ್ಲಿ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಲು ವಿದ್ಯುತ್ ಅದಾಲತ್ ಸಭೆ ಏರ್ಪಡಿಸಲಾಗಿದೆ.
ಕನಕಪುರ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಹಕರು ಅದಾಲತ್ ಸಭೆಗೆ ಆಗಮಿಸಿ ವಿದ್ಯುತ್ ಸರಬರಾಜಿನ ಬಗ್ಗೆ ಕುಂದು ಕೊರತೆಗಳಿದ್ದಲ್ಲಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಕನಕಪುರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in kanakapura »

ಡಾ. ಶ್ರೀ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ಗುರು ಕೋರಣ್ಯ
ಕನಕಪುರ: ಪರಮಪೂಜ್ಯ ಶ್ರೀಡಾ. ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವ

ಜೂ. 17ರಂದು ವಿದ್ಯುತ್ ಅದಾಲತ್ ಸಭೆ
ರಾಮನಗರ, ಜೂ. 15: ಕನಕಪುರ ತಾಲ್ಲೂಕಿನ ಕನಕಪುರ ವಿಭಾಗದ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಜೂ. 17 ರಂದು ಬೆಳಿಗ್ಗೆ 11 ಗಂಟೆಗೆ ವಿದ್
ಪ್ರತಿಕ್ರಿಯೆಗಳು