Tel: 7676775624 | Mail: info@yellowandred.in

Language: EN KAN

    Follow us :


ಡಾ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಗುರುಕೋರಣ್ಯ

Posted date: 01 Sep, 2022

Powered by:     Yellow and Red

ಡಾ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಗುರುಕೋರಣ್ಯ

ಕನಕಪುರ: ನಗರದಲ್ಲಿ ಎರಡು ದಿನಗಳ ಕಾಲ ದೇಗುಲಮಠದ  ಕಿರಿಯ ಪರಮಪೂಜ್ಯ ಶ್ರೀ ಚನ್ನಬಸವ ಮಹಾಸ್ವಾಮೀಜಿ, ಬಿಲ್ವಪತ್ರೆ ಮಠದ ಪೂಜ್ಯ ಶ್ರೀ ಶಿವಲಿಂಗ ಮಹಾಸ್ವಾಮೀಜಿ, ಮರಳವಾಡಿ ಮಠದ ಕಿರಿಯ ಪೂಜ್ಯ ಶ್ರೀ ಪ್ರಭು ಕಿರೀಟ ಮಹಾಸ್ವಾಮೀಜಿಗಳು ಒಗ್ಗೂಡಿ ಕನಕಪುರ ನಗರದಲ್ಲಿ ಗುರು ಕೋರಣ್ಯವನ್ನು ನಡೆಸಿದರು.


ಶ್ರೀ ದೇಗುಲಮಠದಿಂದ ಗುರು ಕೋರಣ್ಯ

ಭಾದ್ರಪದ ಮಾಸದ ವಾರ್ಷಿಕ ಗುರುಕೋರಣ್ಯ ಕಾಯಕ ಹಿಂದಿನಿದಲೂ ನಡೆದು ಬಂದ ಶ್ರೀ ದೇಗುಲಮಠದ ಸಂಪ್ರದಾಯ. ಯಾವುದೇ ಮಠವು ತನ್ನದೇ ಆದ ಆಸ್ತಿಯನ್ನು ಹೊಂದಿದ್ದರೂ ಅಲ್ಲಿ ನಡೆಯುವ ಅನ್ನದಾಸೋಹ, ವಿದ್ಯಾ ದಾಸೋಹ ಮತ್ತು ಜ್ಞಾನದಾಸೋಹಗಳನ್ನು ನಿರ್ವಹಿಸಲು 

ಗುರುಕೋರಣ್ಯ ಪದ್ಧತಿ ನಡೆದುಕೊಂಡು ಬಂದಿದ್ದು, ಈ ಪದ್ಧತಿಯನ್ನು ಬಹಳ ಹಿಂದಿನಿದಲೂ ಶ್ರೀ ದೇಗುಲಮಠದ ಗುರು ಪರಂಪರೆ ಅನೂಚಾನವಾಗಿ ನಡೆಸಿಕೊಂಡು ಬರುತ್ತಿದೆ. ಕನಕಪುರ  ನಗರದಲ್ಲಿ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಎರಡು ದಿವಸಗಳ ಕಾಲ ಗುರುಕೋರಣ್ಯ ಕಾಯಕವನ್ನು ಪ್ರತಿವರ್ಷವೂ ನಡೆಸಿಕೊಂಡು ಬರಲಾಗುತ್ತಿದೆ. ಅದೇ ರೀತಿ ಈ ವರ್ಷವೂ ಸಹ ಶ್ರೀ ದೇಗುಲ ಮಠಾಧ್ಯಕ್ಷರಾದ ಡಾ|| ಶ್ರೀಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳವರ ನೇತೃತ್ವದಲ್ಲಿ ನಡೆದ ಈ ಸಾಂಪ್ರದಾಯಿಕ ಗುರುಕೋರಣ್ಯ ಕಾಯಕವನ್ನು ಕೈಗೊಂಡು ಕನಕಪುರ ನಗರದ ವಿವಿಧ 

ಬಡಾವಣೆಗಳಾದ ಕೋಟೆ, ಕೆಂಕೆರಮ್ಮ ರಸ್ತೆ, ಹೌಸಿಂಗ್ ಬೋರ್ಡ್, ಪೈಪ್ ಲೈನ್ ರಸ್ತೆ ಮಹದೇಶ್ವರ ಬಡಾವಣೆ ಎಂ ಜಿ ರಸ್ತೆ ಮುನಿಸಿಪಲ್ ಹೈಸ್ಕೂಲ್ ರಸ್ತೆ,  ಹೀಗೆ ಅನೇಕ ಬಡಾವಣೆಗಳಲ್ಲಿ ಸಂಚರಿಸಿ ಕೋರಣ್ಯ ಮಾಡಿದರು.


ನಗರದಲ್ಲಿನ ಭಕ್ತಾಧಿಗಳು ಮೂವರು ಪೂಜ್ಯರನ್ನೂ ಅನನ್ಯ ಭಕ್ತಿಭಾವದಿಂದ ಬರಮಾಡಿಕೊಂಡು, ಅವರವರ ಶಕ್ತಿಯನುಸಾರ ದವಸ ಧಾನ್ಯಗಳು, ಎಣ್ಣೆ, ತರಕಾರಿ ಇತ್ಯಾದಿ ದಾಸೋಹ ಪರಿಕರಗಳನ್ನು ಹಾಗೂ ಯಥಾಶಕ್ತಿ 

ಕಾಣಿಕೆಗಳನ್ನೂ ಸಮರ್ಪಿಸಿ ಶ್ರಿಗಳವರನ್ನು ¸ ಸತ್ಕರಿಸಿದರು. ಕೋರಣ್ಯ ಸಂದರ್ಭದಲ್ಲಿ ಭಜನೆ, ತಂಡಗಳು ಮುಂಚೂಣಯಲ್ಲಿದ್ದು ಕಾರ್ಯಕ್ರಮಕ್ಕೆ ಮೆರಗು ನೀಡಿದವು. ಈ ಕಾರ್ಯದಲ್ಲಿ ಕನಕಪುರದ ನಗರದ ಭಕ್ತರು ಹಳೆಯ ವಿದ್ಯಾರ್ಥಿಗಳು, ಹಿರಿಯರು, ತರುಣರು, ಕಾರ್ಯಕರ್ತರಾದ ಕರಶಿವನಪ್ಪ, ಗಣೇಶ, ನಟರಾಜ್ ಗುರುಪಾದಸ್ವಾಮಿ, ಹರೀಶ್ ಶಿವಮೂರ್ತಿ  ಮಹೇಶ್  ಹೆಚ್ಎಸ್ ಶಿವಮೂರ್ತಿ ನಾಗೇಂದ್ರ ಮಾದಪ್ಪ ನಟರಾಜ್ ಮಾಸ್ಟರ್ ವಸಂತ ಶಿವರುದ್ರಯ್ಯ ನಟರಾಜ್ ಭೈರಣ್ಣ ಲೋಕೇಶ್ ಮಹಾದೇವಸ್ವಾಮಿ ರಾಜೇಶ್ ಇನ್ನು ಮುಂತಾದ ಭಕ್ತವೃಂದ ಹಾಗೂ ನೌಕರ ವರ್ಗದವರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in kanakapura »

ಭಕ್ತರ ಕಣ್ಮನ ಸೆಳೆದ ದೇಗುಲಮಠದ ಲಕ್ಷದೀಪೋತ್ಸವ
ಭಕ್ತರ ಕಣ್ಮನ ಸೆಳೆದ ದೇಗುಲಮಠದ ಲಕ್ಷದೀಪೋತ್ಸವ

ಕನಕಪುರ ): ನಗರದ ಶ್ರೀ ದೇಗುಲಮಠದಲ್ಲಿ ಕಡೆ ಕಾರ್ತಿಕ ಮಾಸ ಅಮಾವಾಸ್ಯೆ ಪ್ರಯುಕ್ತ ಲಕ್ಷದೀಪೋತ್ಸದ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲ

ನರೇಗಾ ದಲ್ಲಿ ವೈಯುಕ್ತಿಕ ಕಾಮಗಾರಿಗಳಿಗೆ ಒತ್ತು ನೀಡಿ ಜಿಪಂ ಸಿಇಓ
ನರೇಗಾ ದಲ್ಲಿ ವೈಯುಕ್ತಿಕ ಕಾಮಗಾರಿಗಳಿಗೆ ಒತ್ತು ನೀಡಿ ಜಿಪಂ ಸಿಇಓ

ಕನಕಪುರ: ನರೇಗಾ ಯೋಜನೆಯಡಿ ನಿಗದಿಪಡಿಸಿರುವ ಮಾನವ ದಿನಗಳ ಗುರಿ ಸಾದಿಸಿ, \"ನಮ್ಮ ಹೊಲ ನಮ್ಮ ದಾರಿಗೆ\" ಹೆಚ್ಚಿನ ಒತ್ತು ನೀಡಿ, ಹೆಚ್ಚು-ಹೆಚ್ಚು

ಕೇರಳದಲ್ಲಿ ನಡೆಯುವ ಅನುಭಾವ ಸಂಗಮದಲ್ಲಿ ಪ್ರಭುಕಿರೀಟ ಸ್ವಾಮೀಜಿ ಭಾಗಿ
ಕೇರಳದಲ್ಲಿ ನಡೆಯುವ ಅನುಭಾವ ಸಂಗಮದಲ್ಲಿ ಪ್ರಭುಕಿರೀಟ ಸ್ವಾಮೀಜಿ ಭಾಗಿ

ಕನಕಪುರ: ತಾಲೂಕಿನ ದೊಡ್ಡ ಮರಳವಾಡಿ ಶಿವಮಠದ ಕಿರಿಯ  ಪರಮಪೂಜ್ಯ ಶ್ರೀ ಶ್ರೀ ಪ್ರಭು ಕಿರೀಟ ಮಹಾಸ್ವಾಮಿಗಳವರು ಕೇರಳ ರಾಜ್ಯದ ತಿರುವಂತನಪುರದ

ಶಮಿವೃಕ್ಷ ಪೂಜಿಸುವ ಮೂಲಕ ವಿಜಯದಶಮಿ ಆಚರಿಸಿದ ದೇಗುಲ ಮಠದ ಶ್ರೀಗಳು
ಶಮಿವೃಕ್ಷ ಪೂಜಿಸುವ ಮೂಲಕ ವಿಜಯದಶಮಿ ಆಚರಿಸಿದ ದೇಗುಲ ಮಠದ ಶ್ರೀಗಳು

ಕನಕಪುರ: ಈ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯದಂತೆ ವಿಜಯ ದಶಮಿಯಂದು ದೇಗುಲಮಠದ ಕಿರಿಯ ಪರಮಪೂಜ್ಯ ಶ್ರೀ ಚನ್ನಬಸವಮಹಾಸ್ವಾಮಿಗಳು ಶಮೀವೃಕ

ವಿದ್ಯಾರ್ಥಿ ಮತ್ತು ನೌಕರರ ಸಹಕಾರಿ ಸಂಸ್ಥೆಯ ವಾರ್ಷಿಕ ಸಭೆ ಉದ್ಘಾಟಿಸಿದ ಸ್ವಾಮೀಜಿ
ವಿದ್ಯಾರ್ಥಿ ಮತ್ತು ನೌಕರರ ಸಹಕಾರಿ ಸಂಸ್ಥೆಯ ವಾರ್ಷಿಕ ಸಭೆ ಉದ್ಘಾಟಿಸಿದ ಸ್ವಾಮೀಜಿ

ಕನಕಪುರ: ಶ್ರೀ ದೇಗುಲಮಠದ ಶ್ರೀ  ನಿರ್ವಾಣೇಶ್ವರ ಹಿರಿಯ ವಿದ್ಯಾರ್ಥಿಗಳ ಮತ್ತು ನೌಕರರ ಸೌಹಾರ್ದ ಸಹಕಾರಿ ಸಂಘ ನಿಯಮಿತ ದ 16ನೇ ವರ್ಷದ ವಾರ್ಷಿಕ

ಸಾರಿಗೆ ಬಸ್​ಗೆ ಅಡ್ಡಬಂದ ಆನೆ. ಭಯಗೊಂಡು ಕಿರುಚಾಡಿದ ಪ್ರಯಾಣಿಕರು
ಸಾರಿಗೆ ಬಸ್​ಗೆ ಅಡ್ಡಬಂದ ಆನೆ. ಭಯಗೊಂಡು ಕಿರುಚಾಡಿದ ಪ್ರಯಾಣಿಕರು

ರಾಮನಗರ: ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಇದುವರೆಗೂ ರೈತರ ಜಮೀನಿಗೆ ದಾಳಿ ಇಡುತ್ತಿದ್ದ ಒಂಟಿ ಸಲಗವೊಂದು ಶಿವನಹಳ್ಳಿ ಗ್ರ

ಆರು ಕೋಟಿ ಬೆಲೆಯ ಗೋಮಾಳ ಜಮೀನು ಕಬಳಿಸಲು ನಕಲಿ ಪಹಣಿ ಸೃಷ್ಟಿಸಿದ ನಗರಸಭಾ ಉಪಾಧ್ಯಕ್ಷ ಸೇರಿ ಹನ್ನೆರಡು ಮಂದಿಯ ಬಂಧನ
ಆರು ಕೋಟಿ ಬೆಲೆಯ ಗೋಮಾಳ ಜಮೀನು ಕಬಳಿಸಲು ನಕಲಿ ಪಹಣಿ ಸೃಷ್ಟಿಸಿದ ನಗರಸಭಾ ಉಪಾಧ್ಯಕ್ಷ ಸೇರಿ ಹನ್ನೆರಡು ಮಂದಿಯ ಬಂಧನ

ರಾಮನಗರ: ಕನಕಪುರ:

ಕನಕಪುರ ತಾಲ್ಲೂಕಿನ ಆರು ಕೋಟಿ ಮೌಲ್ಯದ ಗೋಮಾಳ ಜಮೀನು ಕಬಳಿಸಲು, ನಕಲಿ ಪಹಣಿ, ಮ್ಯುಟೇಷನ್ ಸೇರಿ ಹಲವು ದಾಖಲೆ ಸೃಷ್ಟಿಸಿ, ಪೋಡಿ ಗೆ ಅರ್ಜಿ ಹಾಕಿದ ಕನಕಪುರ ನಗರಸಭಾ

ಡಾ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಗುರುಕೋರಣ್ಯ
ಡಾ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಗುರುಕೋರಣ್ಯ

ಕನಕಪುರ: ನಗರದಲ್ಲಿ ಎರಡು ದಿನಗಳ ಕಾಲ ದೇಗುಲಮಠದ  ಕಿರಿಯ ಪರಮಪೂಜ್ಯ ಶ್ರೀ ಚನ್ನಬಸವ

Top Stories »  


Top ↑