Tel: 7676775624 | Mail: info@yellowandred.in

Language: EN KAN

    Follow us :


ಆರು ಕೋಟಿ ಬೆಲೆಯ ಗೋಮಾಳ ಜಮೀನು ಕಬಳಿಸಲು ನಕಲಿ ಪಹಣಿ ಸೃಷ್ಟಿಸಿದ ನಗರಸಭಾ ಉಪಾಧ್ಯಕ್ಷ ಸೇರಿ ಹನ್ನೆರಡು ಮಂದಿಯ ಬಂಧನ

Posted date: 15 Sep, 2022

Powered by:     Yellow and Red

ಆರು ಕೋಟಿ ಬೆಲೆಯ ಗೋಮಾಳ ಜಮೀನು ಕಬಳಿಸಲು ನಕಲಿ ಪಹಣಿ ಸೃಷ್ಟಿಸಿದ ನಗರಸಭಾ ಉಪಾಧ್ಯಕ್ಷ ಸೇರಿ ಹನ್ನೆರಡು ಮಂದಿಯ ಬಂಧನ

ರಾಮನಗರ: ಕನಕಪುರ:

ಕನಕಪುರ ತಾಲ್ಲೂಕಿನ ಆರು ಕೋಟಿ ಮೌಲ್ಯದ ಗೋಮಾಳ ಜಮೀನು ಕಬಳಿಸಲು, ನಕಲಿ ಪಹಣಿ, ಮ್ಯುಟೇಷನ್ ಸೇರಿ ಹಲವು ದಾಖಲೆ ಸೃಷ್ಟಿಸಿ, ಪೋಡಿ ಗೆ ಅರ್ಜಿ ಹಾಕಿದ ಕನಕಪುರ ನಗರಸಭಾ ಹಾಲಿ ಉಪಾಧ್ಯಕ್ಷ ಸೇರಿದಂತೆ ಹನ್ನೆರಡು ಮಂದಿಯ ಮೇಲೆ ರಾಮನಗರ ಉಪ ವಿಭಾಗಾಧಿಕಾರಿ ಮಂಜುನಾಥ್ ದೂರಿನ ಮೇರೆಗೆಎಫ್ಐಆರ್ ದಾಖಲಿಸಿ, ತನಿಖೆ ನಡೆಸಿ,ವಿಚಾರಣೆ ಕೈಗೊಂಡು ಆರೋಪ ಸಾಬೀತಾಗಿರುವುದರಿಂದ ಹನ್ನೆರಡು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ರವರು ಗುರುವಾರ ತಮ್ಮ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ದಿನಾಂಕ:14.09.2022 ರಂದು, ರಾಮನಗರ ಉಪ ವಿಭಾಗಾಧಿಕಾರಿಯಾದ ಮಂಜುನಾಥ್ ಸಿ, ರವರು ರಾಮನಗರ ಸಿಇಎನ್ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ 2019-20ನೇ ಸಾಲಿನಲ್ಲಿ ಕನಕಪುರ ತಾಲ್ಲೂಕು ಹಾರೋಹಳ್ಳಿ ಹೋಬಳಿ ಬನ್ನಿಕುಪ್ಪೆ ಗ್ರಾಮದ ಸರ್ವೇ ನಂ-170 ರಲ್ಲಿ ಒಂದು ಎಕರೆ/ಗುಂಟೆ, ಒಂದು-ಮೂವತ್ತು ಎ/ಗುಂ, ಒಂದು-ಇಪ್ಪತ್ತೆಂಟು ಎ/ಗುಂಟೆ ಮತ್ತು ಕಸಬಾ ಹೋಬಳಿ ತುಂಗಣಿ ಗ್ರಾಮದ ಸರ್ವೇ ನಂ-174 ರಲ್ಲಿ ಒಂದು-ಎಂಟು ಎ/ಗುಂಟೆ, ಹಾಗೂ ಕಸಬಾ ಹೋಬಳಿ ರಾಂಪುರ ಗ್ರಾಮದ ಸರ್ವೆ ನಂ: 148 ರಲ್ಲಿ ಒಂದು- ಎ/ಗುಂಟೆ ಒಟ್ಟು ಆರು ಕೋಟಿ ಬೆಲೆಬಾಳುವ 06.26 ಎ/ಗುಂ ಜಮೀನಿಗೆ ಸಂಬಂಧಿಸಿದ ನಕಲಿ ಪಹಣಿ ಸೃಷ್ಟಿಸಿದ್ದಾರೆ.


*ಆರೋಪಿತರ ವಿವರ:*

1) ನಾಗರಾಜು ಬಿನ್ ಮುದ್ದೇಗೌಡ, ಹುಳಿಸಿದ್ದೇಗೌಡನದೊಡ್ಡಿ ಗ್ರಾಮ,

2) ಮಹದೇವಯ್ಯ ಅ ಬೇಕರಿ ಮಹದೇವಯ್ಯ ಬಿನ್ ಚಿಕ್ಕಮರಿಯಪ್ಪ, ಬನ್ನಿಕುಪ್ಪೆ ಗ್ರಾಮ.

3) ಮಾದಯ್ಯ ಈ ಪುಟ್ಟಯ್ಯ ಅ ಚಡ್ಡಿತಾತ ಬಿನ್ ಲೇ:ಸಿದ್ದಯ್ಯ, ಬನ್ನಿಕುಪ್ಪೆ ಗ್ರಾಮ.

4) ದುಂಡಮ್ಮ ಕೋಂ ದುರ್ಗೇಗೌಡ, ತುಂಗಣಿ ಗ್ರಾಮ.

5) ಜಯಮ್ಮ ಕೋಂ ಪುಟ್ಟಮಾದೇಗೌಡ ರಾಂಪುರ ಗ್ರಾಮ ಹಾಲಿ ಬೆಂಗಳೂರು ವಾಸ.

6) ಟಿ.ಡಿ.ಶಿವರಾಜು ಬಿನ್ ದುರ್ಗೇಗೌಡ, ತುಂಗಣಿ ಗ್ರಾಮ.


7) ರಾಮದುರ್ಗಯ್ಯ ಅ ರಾಮು ಅ ಸೈಬರ್ ರಾಮು ಬಿನ್ ಲೇ: ದುರ್ಗಯ್ಯ. ನಗರಸಭೆ ಉಪಾಧ್ಯಕ್ಷರು ವಾಸ:- ಮಹದೇವಶ್ವರ ಬಡಾವಣೆ, ಕನಕಪುರ ಟೌನ್.

8) ಅರುಣ್ ಕುಮಾರ್ ಡಿ ಅ ಅರುಣ್ ಬಿನ್ ದಾಸಪ್ಪ ಚನ್ನಮಾನಹಳ್ಳಿ ಗ್ರಾಮ ರಾಮನಗರ ಟೌನ್.

9) ನಂದೀಶ್ ಎಸ್ ಪಿ ಬಿನ್ ಲೇ: ಪ್ರಸಾದ್. ಮಹದೇವಶ್ವರ ಬಡಾವಣೆ, ಕನಕಪುರ ಟೌನ್.

10)ರಾಘವಮೂರ್ತಿ ಆರ್ ಅ ರಾಘವ್ ಬಿನ್ ಲೇ: ರಾಮಯ್ಯ. ಡಿಸಿ ಕಛೇರಿಯಲ್ಲಿ ಜಿಲ್ಲಾ ಹಾರ್ಡವೇರ್ ಇಂಜಿನಿಯರ್ (ಭೂಮಿ ಮತ್ತು ನಾಡಕಛೇರಿ ಸಮಾಲೋಚಕರು) ಜಿಲ್ಲಾಧಿಕರಿಗಳ ಕಛೇರಿ ರಾಮನಗರ ಜಿಲ್ಲೆ. ವಾಸ:- ನಂ-375, ಔಟ್‌ಶೈನಿ ಗಾರ‍್ಮೆಂಟ್ಸ್ ಮುಂಭಾಗ ರಸ್ತೆ, ನರಸಿಂಹಯ್ಯ ಲೇಔಟ್, ರಾಯರದೊಡ್ಡಿ ರಾಮನಗರ.

11) ನರಸಿಂಹಮೂರ್ತಿ ಬಿನ್ ನರಸಿಂಹಯ್ಯ. ನಂ28, ಕಗ್ಗಲಹಳ್ಳಿ, ಕಸಬಾ ಹೋ: ಹಾಗಲಹಳ್ಳಿ ಪೋಸ್ಟ್, ರಾಮನಗರ ತಾ: / ಜಿಲ್ಲೆ. ಹಾಲಿ ವಾಸ:ಚಾಮುಂಡಿಪುರ ಲೇಔಟ್, ಬಿಳಗುಂಬ ರಸ್ತೆ, ರಾಮನಗರ ಟೌನ್

12)ಚಿಕ್ಕಮರಿಗೌಡ ಬಿನ್ ಲೇ: ತಮ್ಮಯ್ಯ. ವಾಸ:- ಚಿಕ್ಕಮುದವಾಡಿ ಗ್ರಾಮ, ಕಸಬಾ ಹೋ: ಕನಕಪುರ ತಾ:


ಮತ್ತು ಇತರರು ಸೇರಿ ಭೂಮಿ ತಂತ್ರಾಂಶದಲ್ಲಿ ಭೂಮಿಯ ಖಾತೆಗಳನ್ನು ಕ್ರಮಬದ್ದವಾಗಿ ಕಂದಾಯ ಇಲಾಖೆಯಲ್ಲಿ ಮಾಡಿಸದೆ ತಂತ್ರಾಂಶದಲ್ಲಿ ನೈಜವಾಗಿರುವಂತೆ ಅನಧಿಕೃತವಾಗಿ ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಕಬಳಿಸುವ ಉದ್ದೇಶದಿಂದ ಮೋಸ ಮಾಡಿ ಪಹಣಿಯನ್ನು ಸೃಜನೆ ಮಾಡಿ ಸರ್ಕಾರಕ್ಕೆ ವಂಚಿಸಿರುತ್ತಾರೆ ಮತ್ತು ಮೌಲ್ಯವುಳ್ಳ ಸರ್ಕಾರ ಪಹಣಿ ದಸ್ತಾವೇಜನ್ನು ನಕಲಿ ಮಾಡಿರುತ್ತಾರೆ. ಹಾಗೂ ಸದರಿ ಮೌಲ್ಯವುಳ್ಳ ಪಹಣಿಯಾದ ತುಂಗಣಿ ಗ್ರಾಮದ ರ‍್ವೆ ನಂ-174 ರಲ್ಲಿ 01-08-00 ಎ/ಗುಂ, ಜಮೀನನ್ನು ಇತ್ತೀಚೆಗೆ ಕಾನೂನಿಂದ ತಪ್ಪಿಸಿಕೊಳ್ಳುವ ಸಲುವಾಗಿ ತಂತ್ರಾಂಶದಲ್ಲಿ ಸದರಿ ಮೌಲ್ಯವುಳ್ಳ ಪಹಣಿಯನ್ನು ರದ್ದು ಮಾಡಿರುವುದು ಕಂಡು ಬಂದಿರುತ್ತದೆ.


*ನಕಲಿ ಸೃಷ್ಟಿ ಹೇಗೆ !?*

ಸದರಿ ಆರೋಪಿಗಳು ಆರ್.ಟಿ.ಸಿ ಸೃಷ್ಥಿಮಾಡಲು ಮದ್ಯವರ್ತಿಗಳಾದ  ನರಸಿಂಹಮೂರ್ತಿ, ಚಿಕ್ಕಮರಿಗೌಡ ಹಾಗೂ ಕುಮಾರ್ ಎಂಬುವರು  ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಲು ಹಾಗೂ ಅಕ್ರಮವಾಗಿ ಹಣ ಸಂಪಾದಿಸಲು ಆರ್.ಟಿ.ಸಿ ಸೃಷ್ಥಿಮಾಡುವ ಸಲುವಾಗಿ, ರಾಮದುರ್ಗಯ್ಯ ಅ ರಾಮು ಅ ಸೈಬರ್ ರಾಮು, ಡಿಸಿ ಕಛೇರಿಯಲ್ಲಿ ಜಿಲ್ಲಾ ಹಾರ್ಡ್‌ವೇರ್ ಇಂಜಿನಿಯರ್ ರಾಘವಮೂರ್ತಿ ಆರ್ ಅ ರಾಘವ್ ಮತ್ತು  ಅರುಣ್ ಕುಮಾರ್ ಡಿ ಅ ಅರುಣ್ ಬಿನ್ ದಾಸಪ್ಪ ರವರನ್ನು ಸಂಪರ್ಕಿಸಿದ್ದು, ಆರ್.ಟಿ.ಸಿ ಸೃಷ್ಥಿಮಾಡಲು ಅಗತ್ಯವಿರುವ ಡೇಟಾ ಬೇಸ್ ಪೈಲ್ ಅನ್ನು ರಾಘವಮೂರ್ತಿ ರವರು ಡೌನ್ ಲೋಡ್ ಮಾಡಿ ಅದನ್ನು ಎಡಿಟ್ ಮಾಡಲು ರಾಮದುರ್ಗಯ್ಯ ಅ ರಾಮು ಅ ಸೈಬರ್ ರಾಮು ರವರಿಗೆ ಅರುಣ್ ಕುಮಾರ್ ಮೂಲಕ ನೀಡಿದ್ದು,  ಸದರಿ ರಾಮದುರ್ಗಯ್ಯ ರವರು ಡೇಟಾ ಬೇಸ್ ಪೈಲ್ ಅನ್ನು ಫಲಾನುಭವಿಗಳಿಗೆ ಅನುಕೂಲವಾಗುವಂತೆ ಎಡಿಟ್ ಮಾಡಿ ಫಲಾನುಭವಿಗಳ ಹೆಸರನ್ನು ಸೇರಿಸಿ  XML ಡೇಟಾ ಪೈಲ್ ಗಳನ್ನು ರಚಿಸಿ, ಸದರಿ ಡೇಟಾ ಪೈಲ್ ಅನ್ನು ಅರುಣ್ ಕುಮಾರ್ & ರಾಘವಮೂರ್ತಿ ನೀಡಿದ್ದು ಇವರು ಕನಕಪುರ ತಾಲ್ಲೂ ಸರ್ವರ್ ಗೆ ಸದರಿ ಡೇಟಾ ಪೈಲ್ ಅನ್ನು ಸೇರಿಸಿ ಆರ್.ಟಿ.ಸಿ ಸೃಷ್ಥಿಮಾಡಿಕೊಟ್ಟು ಸರ್ಕಾರಕ್ಕೆ ವಂಚಿಸಿರುತ್ತಾರೆ.


ಆದ್ದರಿಂದ ಮೇಲ್ಕಂಡ ಆಸಾಮಿಗಳು ಮತ್ತು ಇತರರು ಅಪರಾಧಿಕ ಒಳಸಂಚು ನಡೆಸಿ ಪಹಣಿ ಸೃಷ್ಟಿಸಿರುವುದಾಗಿ ನೀಡಿದ ದೂರಿನ ಮೇರೆಗೆ ರಾಮನಗರ ಸಿ.ಇ.ಎನ್ ಪೊಲೀಸ್ ಠಾಣೆ ಮೊ.ನಂ. 144/2022 ಕಲಂ 66, 66(ಸಿ) 66(ಡಿ) ಐಟಿ ಆಕ್ಟ್ & ಕಲಂ 420, 465, 467, 468, 471, 477, 120(ಬಿ) ರೆ/ವಿ 34 ಐಪಿಸಿ ಹಾಗೂ

102 (ಎ) ಕರ್ನಾಟಕ ಲ್ಯಾಂಡ್ ರೆವಿನ್ಯೂ ಆಪ್ 1964ರ ಅಡಿಯಲ್ಲಿ ಪಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.



ಸನ್ಮಿತ್ರ ಅವರಿಂದ ಸಂಬಂಧಿತ ವೀಡಿಯೊಗಳು


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in kanakapura »

ವಿದ್ಯಾರ್ಥಿ ಮತ್ತು ನೌಕರರ ಸಹಕಾರಿ ಸಂಸ್ಥೆಯ ವಾರ್ಷಿಕ ಸಭೆ ಉದ್ಘಾಟಿಸಿದ ಸ್ವಾಮೀಜಿ
ವಿದ್ಯಾರ್ಥಿ ಮತ್ತು ನೌಕರರ ಸಹಕಾರಿ ಸಂಸ್ಥೆಯ ವಾರ್ಷಿಕ ಸಭೆ ಉದ್ಘಾಟಿಸಿದ ಸ್ವಾಮೀಜಿ

ಕನಕಪುರ: ಶ್ರೀ ದೇಗುಲಮಠದ ಶ್ರೀ  ನಿರ್ವಾಣೇಶ್ವರ ಹಿರಿಯ ವಿದ್ಯಾರ್ಥಿಗಳ ಮತ್ತು ನೌಕರರ ಸೌಹಾರ್ದ ಸಹಕಾರಿ ಸಂಘ ನಿಯಮಿತ ದ 16ನೇ ವರ್ಷದ ವಾರ್ಷಿಕ

ಸಾರಿಗೆ ಬಸ್​ಗೆ ಅಡ್ಡಬಂದ ಆನೆ. ಭಯಗೊಂಡು ಕಿರುಚಾಡಿದ ಪ್ರಯಾಣಿಕರು
ಸಾರಿಗೆ ಬಸ್​ಗೆ ಅಡ್ಡಬಂದ ಆನೆ. ಭಯಗೊಂಡು ಕಿರುಚಾಡಿದ ಪ್ರಯಾಣಿಕರು

ರಾಮನಗರ: ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಇದುವರೆಗೂ ರೈತರ ಜಮೀನಿಗೆ ದಾಳಿ ಇಡುತ್ತಿದ್ದ ಒಂಟಿ ಸಲಗವೊಂದು ಶಿವನಹಳ್ಳಿ ಗ್ರ

ಆರು ಕೋಟಿ ಬೆಲೆಯ ಗೋಮಾಳ ಜಮೀನು ಕಬಳಿಸಲು ನಕಲಿ ಪಹಣಿ ಸೃಷ್ಟಿಸಿದ ನಗರಸಭಾ ಉಪಾಧ್ಯಕ್ಷ ಸೇರಿ ಹನ್ನೆರಡು ಮಂದಿಯ ಬಂಧನ
ಆರು ಕೋಟಿ ಬೆಲೆಯ ಗೋಮಾಳ ಜಮೀನು ಕಬಳಿಸಲು ನಕಲಿ ಪಹಣಿ ಸೃಷ್ಟಿಸಿದ ನಗರಸಭಾ ಉಪಾಧ್ಯಕ್ಷ ಸೇರಿ ಹನ್ನೆರಡು ಮಂದಿಯ ಬಂಧನ

ರಾಮನಗರ: ಕನಕಪುರ:

ಕನಕಪುರ ತಾಲ್ಲೂಕಿನ ಆರು ಕೋಟಿ ಮೌಲ್ಯದ ಗೋಮಾಳ ಜಮೀನು ಕಬಳಿಸಲು, ನಕಲಿ ಪಹಣಿ, ಮ್ಯುಟೇಷನ್ ಸೇರಿ ಹಲವು ದಾಖಲೆ ಸೃಷ್ಟಿಸಿ, ಪೋಡಿ ಗೆ ಅರ್ಜಿ ಹಾಕಿದ ಕನಕಪುರ ನಗರಸಭಾ

ಡಾ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಗುರುಕೋರಣ್ಯ
ಡಾ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಗುರುಕೋರಣ್ಯ

ಕನಕಪುರ: ನಗರದಲ್ಲಿ ಎರಡು ದಿನಗಳ ಕಾಲ ದೇಗುಲಮಠದ  ಕಿರಿಯ ಪರಮಪೂಜ್ಯ ಶ್ರೀ ಚನ್ನಬಸವ

Top Stories »  


Top ↑