Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನ ಅಭಿವೃದ್ಧಿ ಬಿಟ್ಟು, ಬೇಡದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ, ಹೆಚ್ಡಿಕೆ ವಿರುದ್ಧ ಪರೋಕ್ಷವಾಗಿ ಟಾಂಗ್ ನೀಡಿದ ಡಿಕೆಸು

Posted date: 17 Dec, 2023

Powered by:     Yellow and Red

ತಾಲ್ಲೂಕಿನ ಅಭಿವೃದ್ಧಿ ಬಿಟ್ಟು, ಬೇಡದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ, ಹೆಚ್ಡಿಕೆ ವಿರುದ್ಧ ಪರೋಕ್ಷವಾಗಿ ಟಾಂಗ್ ನೀಡಿದ ಡಿಕೆಸು

ಚನ್ನಪಟ್ಟಣ: ಆಯಾಯ ಕ್ಷೇತ್ರದ ಶಾಸಕರು ಮೊದಲಿಗೆ ತಂತಮ್ಮ ಕ್ಷೇತ್ರದ ಅಭಿವೃದ್ಧಿ ಗೆ ಒತ್ತು ನೀಡಬೇಕೆ ವಿನಹ ಬೇರೆಯವರನ್ನು ತೆಗಳವುದನ್ನೇ ವೃತ್ತಿ ಮಾಡಿಕೊಂಡಿದ್ದರೆ ಅದು ಅವರಿಗೆ ಶೋಭೆ ತರುವುದಿಲ್ಲ.

ತಾಲೂಕಿನಲ್ಲಿ ನಾನು ನಡೆಸುವ ಜನಸಂಪರ್ಕಸಭೆಗೆ ಸಂಬಂಧಿಸಿದಂತೆ ಕೆಲವರು ಸಂಸದರು ಇಲ್ಲಿಗೆ ಏಕೆ ಬರಬೇಕು ಅವರಿಗೆ ಏನು ಅಧಿಕಾರ ಇದೆ ಎಂದು ಪ್ರಶ್ನಿಸುತ್ತಾರೆ. ನನಗೆ ಅಧಿಕಾರ ನೀಡಿರುವುದು ಜನ, ನೀವು ಕೊಟ್ಟ ಅಧಿಕಾರವನ್ನು ಸಂಪೂರ್ಣವಾಗಿ ನಿಮ್ಮ ಜತೆ ಹಂಚಿಕೊಳ್ಳುವುದು ನನ್ನ ಹಕ್ಕು. ಯಾರಿಗೋ ಹೆದರಿಕೊಂಡು ಸಭೆ ರದ್ದು ಮಾಡುವುದಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೆಸರೇಳದೇ ಪರೋಕ್ಷವಾಗಿ ಟಾಂಗ್ ನೀಡಿದರು.


ನಗರದ ಮಂಗಳವಾರಪೇಟೆಯ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಜನಸಂಪರ್ಕಸಭೆಯಲ್ಲಿ ಮಾತನಾಡಿದ ಅವರು, ಯಾರಿಗೋ ಹೆದರಿಕೊಂಡು ನಾನು ಜಾಗ ಖಾಲಿ ಮಾಡುತ್ತೇನೆ ಎಂಬ ಮಾತೇ ಇಲ್ಲ. ತಾಲೂಕಿನ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ ಎಂದರು.


*ಮೂರನೇ ವ್ಯಕ್ತಿ ಪ್ರಶ್ನೆ*

ಸಂಸದರು ಯಾವ ಯಾವ ಪಂಚಾಯಿತಿಗಳಿಗೆ ಎಷ್ಟು ಬಾರಿ ಹೋಗಿ ಸಭೆ ನಡೆಸಿದ್ದಾರೆ. ಅದಕ್ಕೆ ತಗಲಿರುವ ವೆಚ್ಚವೆಷ್ಟು ಎಂದು ವಿಧಾನಸಭೆಯಲ್ಲಿ ಪ್ರಶ್ನೆಯನ್ನು ಬೇರೆಯವರ ಕಡೆಯಿಂದ ಕೇಳಿಸಿದ್ದಾರೆ. ನಾನೊಬ್ಬ ಜನಪ್ರತಿನಿಧಿಯಾಗಿದ್ದು, ತಮ್ಮ ಕಷ್ಟ ಪರಿಹರಿಸಬೇಕು ಎಂದು ಜನ ನನ್ನನ್ನು ಚುನಾಯಿಸಿದ್ದಾರೆ. ಪ್ರಶ್ನೆ ಕೇಳುವುದಾದರೆ ಸಾರ್ವಜನಿಕವಾಗಿ ಕೇಳಿ ಮೂರನೇ ವ್ಯಕ್ತಿಯಿಂದ ಕೇಳಿಸುವುದಲ್ಲ ಎಂದು ಕಿಡಿಕಾರಿದರು.


ಟಿ.ವಿ.ಯವರ ಮುಂದೆ ಮಾತನಾಡಿದರೆ ಪ್ರಚಾರ ಬರಬಹುದು. ಆದರೆ, ಇಲ್ಲಿ ಬಂದು ಕೇಳಿದಾಗ ಜನರ ಸಂಕಷ್ಟದ ಅರಿವು ಉಂಟಾಗಲಿದೆ. ಚನ್ನಪಟ್ಟಣದಲ್ಲಿ ಇ-ಖಾತೆ ಆಗುತ್ತಿಲ್ಲ, ಜನರಿಗೆ ತೊಂದರೆಯಾಗುತ್ತಿದೆ ಎಂದು ವಿಧಾನಸಭೆಯಲ್ಲಿ ಪ್ರಶ್ನಿಸಬೇಕಿತ್ತು. ಸಾಗುವಳಿ ಚೀಟಿಗೆ ಸಂಬಂಧಿಸಿದಂತೆ ಪ್ರಶ್ನೆ ಕೇಳಬೇಕಿತ್ತು ಇದನ್ನು ನಾನು ಸ್ವಾಗತಿಸುತ್ತಿದ್ದೆ ಎಂದರು.


ಅವರಿಗೆ ಜನರ ಕಷ್ಟ ಕೇಳಿ ಅದನ್ನು ಅರಿತುಕೊಳ್ಳುವ ತಾಳ್ಮೆ ಇಲ್ಲ. ನಿಮಗೆ ಇಚ್ಛಾಶಕ್ತಿ ಇದ್ದಲ್ಲಿ ನೀವು ಇಂಥ ನೂರು ಸಭೆಗಳನ್ನು ಮಾಡಿ ನಾನು ನಿಮಗೆ ಬೆಂಬಲ ನೀಡುತ್ತೇನೆ. ನಿಮ್ಮ ಕೈಲಿ ಬರಲಿಕ್ಕೆ ಆಗಲ್ಲ ಎಂದರೆ, ಬೇರೆ ಯಾರೋ ಮಾಡುತ್ತಾರೆ ಎಂದು ಪ್ರಶ್ನೆ ಎತ್ತಿದ್ದರೆ ಇದು ಸರಿಯೋ ತಪ್ಪೋ ಎಂಬುದನ್ನು ತಾಲೂಕಿನ ಜನರೇ ನಿರ್ಧರಿಸಲಿದ್ದಾರೆ ಎಂದರು.


*ಗ್ಯಾರಂಟಿ ಯೋಜನೆಗಳೆಲ್ಲಾ ಜಾರಿ:*

ಕೆಲವರು ನಮ್ಮ ಗ್ಯಾರೆಂಟಿಗಳ ಕುರಿತು ಲೇವಡಿ ಮಾಡಿದರು. ಹಣ ಎಲ್ಲಿಂದ ಬರುತ್ತದೆ ಎಂದರು. ಆದರೆ, ಇಂದು ನಾವು ನಾಲ್ಕು ಗ್ಯಾರೆಂಟಿಗಳನ್ನು ಜಾರಿಗೊಳಿಸಿದ್ದೇವೆ. ನಿರುದ್ಯೋಗಿ ಪದವಿದರರಿಗೆ ನೀಡಿರುವ ಐದನೇ ಗ್ಯಾರೆಂಟಿಯನ್ನು ಶೀಘ್ರದಲ್ಲೇ ಜಾರಿಗೆ ತರಲಿದ್ದೇವೆ. ಅನ್ನಭಾಗ್ಯ ಯೋಜನೆಗೆ ಹಣ ನೀಡುತ್ತೇವೆ ಎಂದರೂ ಕೇಂದ್ರ ಸರ್ಕಾರ ಅಕ್ಕಿ ನೀಡಲಿಲ್ಲ. ಆದರೆ, ಜನರ ಖಾತೆಗೆ ನಾವು ನೇರವಾಗಿ ಹಣ ಪಾವತಿಸುವ ಮೂಲಕ ನಮ್ಮ ಮಾತು ಉಳಿಸಿಕೊಂಡಿದ್ದೇವೆ ಎಂದರು. ಈ ಯೋಜನೆಗಳನ್ನೆಲ್ಲಾ ಶಾಸಕರು ನಿಂತು ಜನರಿಗೆ ತಲುಪಿಸಬೇಕಿತ್ತು, ಅದರ ಬದಲಿಗೆ ಲೇವಡಿ ಮಾಡುತ್ತಿದ್ದಾರೆ.


*ನಾವು ಜನಪರ, ಅಂಬಾನಿ ಅದಾನಿಗೆ ಪರ ಅಲ್ಲ:*

ನಾವು ನಿಮ್ಮಂತೆ ಕೈಗಾರಿಕೋದ್ಯಮಿಗಳಿಗೆ ಸಹಕಾರ ನೀಡುತ್ತಿಲ್ಲ. ನಿಮ್ಮ ಪಾಲಿಸಿಗಳು ಅದಾನಿ, ಅಂಬಾನಿ ಅಂಥವರಿಗೆ ಅನುಕೂಲವಾಗಿರುತ್ತದೆ. ಆದರೆ, ನಮ್ಮ ಪಾಲಿಸಿಗಳು ಬಡವರಿಗೆ ಅನುಕೂಲ ಕಲ್ಪಿಸುವುದಾಗಿದೆ. ನಿಮ್ಮಂತೆ ಉಳ್ಳವರಿಗೆ ಅನುಕೂಲ ಕಲ್ಪಿಸುವ ಕಾರ್ಯಗಳನ್ನು ನಾವು ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರವನ್ನು ಕಟುವಾಗಿ ಟೀಕಿಸಿದರು.


*ಜನರ ಸಮಸ್ಯೆ ಪರಿಹರಿಸಿ:* ಇಂದಿನ ಜನಸಂಪರ್ಕ ಸಭೆಯಲ್ಲಿ ರಸ್ತೆ, ಚರಂಡಿ, ಸೈಟು, ಮನೆ, ಇ-ಖಾತೆಗೆ ಸಂಬಂಧಿಸಿದಂತೆ, ಸಾರ್ವಜನಿಕ ಹಾಗೂ ವೈಯಕ್ತಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜನ ಅರ್ಜಿ ಸಲ್ಲಿಸಿದ್ದಾರೆ. ಕೆಲವು ಸಮಸ್ಯೆಗಳಿಗೆ ಅಧಿಕಾರಿಗಳ ಬೇಜವಬ್ದಾರಿ ಕಾರಣವಾಗಿದೆ. ಅಧಿಕಾರಿಗಳು ನ್ಯಾಯಬದ್ಧವಾಗಿ ನಡೆದುಕೊಂಡು ಜನರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.


ಇ-ಖಾತೆಗೆ ಸಂಬಂಧಿಸಿದಂತೆ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ. ಚನ್ನಪಟ್ಟಣ ವ್ಯಾಪ್ತಿಯಲ್ಲಿ 9.5ಸಾವಿರ ನಿವೇಶನಗಳಿಗೆ ಮಾತ್ರ ಇ-ಖಾತೆ ನೀಡಲಾಗಿದೆ. ಹಣ ಕೊಟ್ಟವರಿಗೆ ಮಾತ್ರ ಇ-ಖಾತೆ ಮಾಡಿಕೊಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಅಕ್ಕಪಕ್ಕದಲ್ಲೇ ಎ ಹಾಗೂ ಬಿ ಖಾತೆ ನೀಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಖಾತೆಗೆ ಸಂಬಂದಿಸಿದಂತೆ ಚನ್ನಪಟ್ಟಣ ನಗರ ವ್ಯಾಪ್ತಿಯಲ್ಲಿ ಎಷ್ಟು ಗ್ರಾಮ ಠಾಣಾ ಇದೆ ಸರ್ವೇ ಮಾಡಿಸಿ ಎಂದರು.


ಕೆಲವರು ಕಂದಾಯ ಭೂಮಿಯಲ್ಲಿ ಮನೆ ಕಟ್ಟಿಕೊಂಡಿದ್ದು, ಇದರಿಂದ ಸಮಸ್ಯೆಯಾಗಿದೆ. ಇಲ್ಲಿ ಮಾತ್ರವಲ್ಲದೇ ಎಲ್ಲ ಕಡೆಯೂ ಇದೇ ಸಮಸ್ಯೆ ಇದೆ. ಅಕ್ರಮ ಸಕ್ರಮದ ವ್ಯಾಪ್ತಿಯಲ್ಲಿ ಇದನ್ನು ತರುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ. ಇನ್ನೊಂದು ನಾಲ್ಕೈದು ತಿಂಗಳಿನಲ್ಲಿ ಇದಕ್ಕೆ ಪರಿಹಾರ ಪರಿಹಾರ ಕಲ್ಪಿಸಲಾಗುವುದು ಎಂದರು.


ನಗರ ಪ್ರದೇಶದ ೫೦ರಿಂದ ೬೦ರಷ್ಟು ಮನೆಗಳನ್ನು ಗುರುತು ಮಾಡಿಕೊಂಡು ಸರ್ವೇ ನಡೆಸಿ. ಅಧಿಕೃತ ಬಡಾವಣೆಗಳು ಸೇರಿದಂತೆ ದಾಖಲೆ ಸರಿ ಇರುವ ನಿವೇಶಗಳಿಗೆ ಇ-ಖಾತೆ ನೀಡಲು ಕ್ರಮ ಕೈಗೊಳ್ಳಿ. ಎಷ್ಟು ಸಾಧ್ಯವೋ ಅಷ್ಟು ಜನರಿಗೆ ಖಾತೆ ನೀಡಲು ಕ್ರಮಕೈಗೊಳ್ಳಿ ಎಂದು ಪೌರಾಯುಕ್ತರಿಗೆ ಸೂಚಿಸಿದರು.


ನಿವೇಶನ ರಹಿತರಿಗೆ ನಿವೇಶನ ನೀಡುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಎಲ್ಲೆಲ್ಲಿ ಸರ್ಕಾರಿ ಭೂಮಿ ಇದೆಯೋ ಅಲ್ಲಿ ಭೂಮಿ ಗುರುತಿಸಿ ನಿವೇಶನ ನೀಡಲು ಸೂಚಿಸಲಾಗಿದೆ. ಸರ್ವೇ ಕಾರ್ಯ ಸಹ ಆರಂಭಗೊಂಡಿದೆ. ಇಲ್ಲಿ ಯಾವ ಶಾಸಕರು ಇದ್ದಾರೆ ಎನ್ನುವುದನ್ನು ನಾವು ನೋಡುವುದಿಲ್ಲ. ಜನರಿಗೆ ಅನುಕೂಲ ಕಲ್ಪಿಸುತ್ತೇವೆ ಎಂದರು.


ಮಾಜಿ ಶಾಸಕ ಎಂ.ಸಿ.ಅಶ್ವತ್ಥ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್,  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್. ಪ್ರಮೋದ್, ಸುನೀಲ್, ರಾಜ್ಯ ಕುಕ್ಕುಟ ಮಹಾಮಂಡಳದ ಅಧ್ಯಕ್ಷ ಡಿ.ಕೆ.ಕಾಂತರಾಜು,  ಮುಖಂಡರಾದ ದುಂತೂರು ವಿಶ್ವನಾಥ್, ಎಂ.ಸಿ.ಕರಿಯಪ್ಪ, ಎ.ಸಿ.ವೀರೇಗೌಡ, ತಹಸೀಲ್ದಾರ್ ಮಹೇಂದ್ರ,  ಪೌರಾಯುಕ್ತ ಪುಟ್ಟಸ್ವಾಮಿ ಇತರರು ಇದ್ದರು


 ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in kanakapura »

ಡಾ. ಶ್ರೀ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ಗುರು ಕೋರಣ್ಯ
ಡಾ. ಶ್ರೀ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ಗುರು ಕೋರಣ್ಯ

ಕನಕಪುರ: ಪರಮಪೂಜ್ಯ ಶ್ರೀಡಾ. ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವ

ಜೂ. 17ರಂದು ವಿದ್ಯುತ್ ಅದಾಲತ್ ಸಭೆ
ಜೂ. 17ರಂದು ವಿದ್ಯುತ್ ಅದಾಲತ್ ಸಭೆ

ರಾಮನಗರ, ಜೂ. 15:   ಕನಕಪುರ ತಾಲ್ಲೂಕಿನ ಕನಕಪುರ ವಿಭಾಗದ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಜೂ. 17 ರಂದು ಬೆಳಿಗ್ಗೆ 11 ಗಂಟೆಗೆ ವಿದ್

Top Stories »  


Top ↑