Tel: 7676775624 | Mail: info@yellowandred.in

Language: EN KAN

    Follow us :


ನರೇಗಾ ದಲ್ಲಿ ವೈಯುಕ್ತಿಕ ಕಾಮಗಾರಿಗಳಿಗೆ ಒತ್ತು ನೀಡಿ ಜಿಪಂ ಸಿಇಓ

Posted date: 13 Oct, 2022

Powered by:     Yellow and Red

ನರೇಗಾ ದಲ್ಲಿ ವೈಯುಕ್ತಿಕ ಕಾಮಗಾರಿಗಳಿಗೆ ಒತ್ತು ನೀಡಿ ಜಿಪಂ ಸಿಇಓ

ಕನಕಪುರ: ನರೇಗಾ ಯೋಜನೆಯಡಿ ನಿಗದಿಪಡಿಸಿರುವ ಮಾನವ ದಿನಗಳ ಗುರಿ ಸಾದಿಸಿ, "ನಮ್ಮ ಹೊಲ ನಮ್ಮ ದಾರಿಗೆ" ಹೆಚ್ಚಿನ ಒತ್ತು ನೀಡಿ, ಹೆಚ್ಚು-ಹೆಚ್ಚು ವೈಯಕ್ತಿಕ ಕಾಮಗಾರಿಗಳನ್ನು  ಪ್ರಾರಂಭಿಸಿ ಎಂದು ರಾಮನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬುಧವಾರ ಕನಕಪುರ ತಾಲ್ಲೂಕು ಪಂಚಾಯತಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.


ನರೇಗಾ ಯೋಜನೆಯ ಪ್ರಗತಿ ಬಗ್ಗೆ ಸಮಾಲೋಚಿಸಿದ ಸಿಇಓ ಅವರು, ಸಮುದಾಯ ಕಾಮಗಾರಿಗಳು, ವೈಯಕ್ತಿಕ ಕಾಮಗಾರಿಗಳು, ಕೈತೋಟ, ಮಾನವದಿನಗಳ ಸೃಜನೆ ಸಂಬಂಧ ಅಧಿಗಾರಿಗಳಿಗೆ ಇಂತಿಷ್ಟು ಗುರಿ ನೀಡಿ, ಮುಂದಿನ ಸಭೆ ಹೊತ್ತಿಗೆ ಪ್ರಗತಿ ಸಾಧಿಸಲು ಹೇಳಿದರು. ಜೊತೆಗೆ 

ಕನಕಪುರ ತಾಲ್ಲೂಕಿನಲ್ಲಿ ಸಮುದಾಯ ಶೌಚಾಲಯ ಕಾಮಗಾರಿ  ಹಾಗೂ  ಅನುಷ್ಟಾನ ಇಲಾಖೆಗಳ ಕಾಮಗಾರಿಗಳನ್ನು ಪ್ರಾರಂಭಿಸಿ ಗುರಿ ಸಾಧಿಸುವಂತೆ  ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಿದರು.


ಗ್ರಾಮ ಪಂಚಾಯತಿ ಮಟ್ಟದಲ್ಲಿ 20 ರಿಂದ 25 ಜನರನ್ನು ಸೇರಿಸಿ ಸಭೆ ನಡೆಸಿ ಎನ್. ಎಲ್. ಅರ್. ಎಂ (ಸಂಜೀವಿನಿ) ಯೋಜನೆ ಜಾರಿ ಮಾಡಲು ಕ್ರಮವಹಿಸಿ, ಮಹಿಳೆಯರು ಹಾಗೂ ದುರ್ಬಲ ವರ್ಗದವರಿಗೆ ಈ ಯೋಜನೆಯನ್ನು ತಲುಪಿಸಿ  ಎಂದು ಅಧಿಕಾರಿಗಳಿಗೆ ಸೂಚಿಸಿದರು.


ಸಮುದಾಯ ಶೌಚಾಲಯಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಯಲ್ಲಿ ಕ್ರಿಯಾಯೋಜನೆ ರೂಪಿಸಿ ಮುಂದಿನ ಕ್ರಮ ಕೈಗೊಳ್ಳುವ ಕುರಿತು ಮಾಹಿತಿ ಪಡೆದು ಪರಿಶೀಲಿಸಿದರು. 


ಈ ಸಂದರ್ಭದಲ್ಲಿ ಯೋಜನಾ ನಿರ್ದೇಶಕರು/ ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ, ತಾಲ್ಲೂಕು ಪಂಚಾಯತ್  ಕಾರ್ಯ ನಿರ್ವಾಹಕ ಅಧಿಕಾರಿ ಮಧು, ಸಹಾಯಕ ನಿರ್ದೇಶಕರು (ಗ್ರಾ. ಉ) , ಅನುಷ್ಟಾನ ಇಲಾಖೆಯ ಅಧಿಕಾರಿಗಳು, ಎನ್. ಎಲ್. ಅರ್. ಎಂ (ಸಂಜೀವಿನಿ) ವಿಭಾಗದ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯತ್ ಸಿಬ್ಬಂದಿ ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in kanakapura »

ಭಕ್ತರ ಕಣ್ಮನ ಸೆಳೆದ ದೇಗುಲಮಠದ ಲಕ್ಷದೀಪೋತ್ಸವ
ಭಕ್ತರ ಕಣ್ಮನ ಸೆಳೆದ ದೇಗುಲಮಠದ ಲಕ್ಷದೀಪೋತ್ಸವ

ಕನಕಪುರ ): ನಗರದ ಶ್ರೀ ದೇಗುಲಮಠದಲ್ಲಿ ಕಡೆ ಕಾರ್ತಿಕ ಮಾಸ ಅಮಾವಾಸ್ಯೆ ಪ್ರಯುಕ್ತ ಲಕ್ಷದೀಪೋತ್ಸದ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲ

ನರೇಗಾ ದಲ್ಲಿ ವೈಯುಕ್ತಿಕ ಕಾಮಗಾರಿಗಳಿಗೆ ಒತ್ತು ನೀಡಿ ಜಿಪಂ ಸಿಇಓ
ನರೇಗಾ ದಲ್ಲಿ ವೈಯುಕ್ತಿಕ ಕಾಮಗಾರಿಗಳಿಗೆ ಒತ್ತು ನೀಡಿ ಜಿಪಂ ಸಿಇಓ

ಕನಕಪುರ: ನರೇಗಾ ಯೋಜನೆಯಡಿ ನಿಗದಿಪಡಿಸಿರುವ ಮಾನವ ದಿನಗಳ ಗುರಿ ಸಾದಿಸಿ, \"ನಮ್ಮ ಹೊಲ ನಮ್ಮ ದಾರಿಗೆ\" ಹೆಚ್ಚಿನ ಒತ್ತು ನೀಡಿ, ಹೆಚ್ಚು-ಹೆಚ್ಚು

ಕೇರಳದಲ್ಲಿ ನಡೆಯುವ ಅನುಭಾವ ಸಂಗಮದಲ್ಲಿ ಪ್ರಭುಕಿರೀಟ ಸ್ವಾಮೀಜಿ ಭಾಗಿ
ಕೇರಳದಲ್ಲಿ ನಡೆಯುವ ಅನುಭಾವ ಸಂಗಮದಲ್ಲಿ ಪ್ರಭುಕಿರೀಟ ಸ್ವಾಮೀಜಿ ಭಾಗಿ

ಕನಕಪುರ: ತಾಲೂಕಿನ ದೊಡ್ಡ ಮರಳವಾಡಿ ಶಿವಮಠದ ಕಿರಿಯ  ಪರಮಪೂಜ್ಯ ಶ್ರೀ ಶ್ರೀ ಪ್ರಭು ಕಿರೀಟ ಮಹಾಸ್ವಾಮಿಗಳವರು ಕೇರಳ ರಾಜ್ಯದ ತಿರುವಂತನಪುರದ

ಶಮಿವೃಕ್ಷ ಪೂಜಿಸುವ ಮೂಲಕ ವಿಜಯದಶಮಿ ಆಚರಿಸಿದ ದೇಗುಲ ಮಠದ ಶ್ರೀಗಳು
ಶಮಿವೃಕ್ಷ ಪೂಜಿಸುವ ಮೂಲಕ ವಿಜಯದಶಮಿ ಆಚರಿಸಿದ ದೇಗುಲ ಮಠದ ಶ್ರೀಗಳು

ಕನಕಪುರ: ಈ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯದಂತೆ ವಿಜಯ ದಶಮಿಯಂದು ದೇಗುಲಮಠದ ಕಿರಿಯ ಪರಮಪೂಜ್ಯ ಶ್ರೀ ಚನ್ನಬಸವಮಹಾಸ್ವಾಮಿಗಳು ಶಮೀವೃಕ

ವಿದ್ಯಾರ್ಥಿ ಮತ್ತು ನೌಕರರ ಸಹಕಾರಿ ಸಂಸ್ಥೆಯ ವಾರ್ಷಿಕ ಸಭೆ ಉದ್ಘಾಟಿಸಿದ ಸ್ವಾಮೀಜಿ
ವಿದ್ಯಾರ್ಥಿ ಮತ್ತು ನೌಕರರ ಸಹಕಾರಿ ಸಂಸ್ಥೆಯ ವಾರ್ಷಿಕ ಸಭೆ ಉದ್ಘಾಟಿಸಿದ ಸ್ವಾಮೀಜಿ

ಕನಕಪುರ: ಶ್ರೀ ದೇಗುಲಮಠದ ಶ್ರೀ  ನಿರ್ವಾಣೇಶ್ವರ ಹಿರಿಯ ವಿದ್ಯಾರ್ಥಿಗಳ ಮತ್ತು ನೌಕರರ ಸೌಹಾರ್ದ ಸಹಕಾರಿ ಸಂಘ ನಿಯಮಿತ ದ 16ನೇ ವರ್ಷದ ವಾರ್ಷಿಕ

ಸಾರಿಗೆ ಬಸ್​ಗೆ ಅಡ್ಡಬಂದ ಆನೆ. ಭಯಗೊಂಡು ಕಿರುಚಾಡಿದ ಪ್ರಯಾಣಿಕರು
ಸಾರಿಗೆ ಬಸ್​ಗೆ ಅಡ್ಡಬಂದ ಆನೆ. ಭಯಗೊಂಡು ಕಿರುಚಾಡಿದ ಪ್ರಯಾಣಿಕರು

ರಾಮನಗರ: ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಇದುವರೆಗೂ ರೈತರ ಜಮೀನಿಗೆ ದಾಳಿ ಇಡುತ್ತಿದ್ದ ಒಂಟಿ ಸಲಗವೊಂದು ಶಿವನಹಳ್ಳಿ ಗ್ರ

ಆರು ಕೋಟಿ ಬೆಲೆಯ ಗೋಮಾಳ ಜಮೀನು ಕಬಳಿಸಲು ನಕಲಿ ಪಹಣಿ ಸೃಷ್ಟಿಸಿದ ನಗರಸಭಾ ಉಪಾಧ್ಯಕ್ಷ ಸೇರಿ ಹನ್ನೆರಡು ಮಂದಿಯ ಬಂಧನ
ಆರು ಕೋಟಿ ಬೆಲೆಯ ಗೋಮಾಳ ಜಮೀನು ಕಬಳಿಸಲು ನಕಲಿ ಪಹಣಿ ಸೃಷ್ಟಿಸಿದ ನಗರಸಭಾ ಉಪಾಧ್ಯಕ್ಷ ಸೇರಿ ಹನ್ನೆರಡು ಮಂದಿಯ ಬಂಧನ

ರಾಮನಗರ: ಕನಕಪುರ:

ಕನಕಪುರ ತಾಲ್ಲೂಕಿನ ಆರು ಕೋಟಿ ಮೌಲ್ಯದ ಗೋಮಾಳ ಜಮೀನು ಕಬಳಿಸಲು, ನಕಲಿ ಪಹಣಿ, ಮ್ಯುಟೇಷನ್ ಸೇರಿ ಹಲವು ದಾಖಲೆ ಸೃಷ್ಟಿಸಿ, ಪೋಡಿ ಗೆ ಅರ್ಜಿ ಹಾಕಿದ ಕನಕಪುರ ನಗರಸಭಾ

ಡಾ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಗುರುಕೋರಣ್ಯ
ಡಾ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಗುರುಕೋರಣ್ಯ

ಕನಕಪುರ: ನಗರದಲ್ಲಿ ಎರಡು ದಿನಗಳ ಕಾಲ ದೇಗುಲಮಠದ  ಕಿರಿಯ ಪರಮಪೂಜ್ಯ ಶ್ರೀ ಚನ್ನಬಸವ

Top Stories »  


Top ↑